ತೊಗರಿ ಬೇಳೆ & ಮಸೂರ್ ಬೇಳೆ

ಸತರ್ನ್ ಗ್ರೀನ್ ಸ್ಟಿಂಕ್ ಬಗ್

Nezara viridula

ಕೀಟ

5 mins to read

ಸಂಕ್ಷಿಪ್ತವಾಗಿ

  • ಒಣಗಿದ ಮತ್ತು ಬಾಡಿದ ಚಿಗುರುಗಳು.
  • ಹಣ್ಣುಗಳು ಸರಿಯಾಗಿ ಬೆಳೆಯುವುದಿಲ್ಲ ಮತ್ತು ಉದುರಬಹುದು.
  • ಹೂವುಗಳು ಉದುರಬಹುದು.
  • ಹಣ್ಣಿನ ಮೇಲೆ ಕಪ್ಪು ಗಟ್ಟಿಯಾದ ಮಚ್ಚೆಗಳು.

ಇವುಗಳಲ್ಲಿ ಸಹ ಕಾಣಬಹುದು

11 ಬೆಳೆಗಳು
ಹುರುಳಿ
ಹಾಗಲಕಾಯಿ
ಬದನೆ
ಸೀಬೆಕಾಯಿ
ಇನ್ನಷ್ಟು

ತೊಗರಿ ಬೇಳೆ & ಮಸೂರ್ ಬೇಳೆ

ರೋಗಲಕ್ಷಣಗಳು

ಕೀಟಗಳು ಹೆಚ್ಚಾಗಿ ಹಣ್ಣುಗಳು ಮತ್ತು ಬೆಳೆಯುತ್ತಿರುವ ಚಿಗುರುಗಳನ್ನು ತಿನ್ನುತ್ತವೆ. ಬೆಳೆಯುತ್ತಿರುವ ಚಿಗುರುಗಳು ಒಣಗುತ್ತವೆ ಮತ್ತು ಮತ್ತೆ ಉದುರುತ್ತವೆ. ಹಣ್ಣುಗಳನ್ನು ತಿನ್ನುವುದರಿಂದ ಹೆಚ್ಚಿನ ಹಾನಿ ಉಂಟಾಗುತ್ತದೆ. ಹಣ್ಣುಗಳು ಪೂರ್ಣ ಗಾತ್ರಕ್ಕೆ ಬೆಳೆಯುವುದಿಲ್ಲ, ಆಕಾರವೂ ಬದಲಾಗಬಹುದು ಮತ್ತು ಉದುರಬಹುದು. ಅನೇಕ ಸಂದರ್ಭಗಳಲ್ಲಿ ಕೀಟವು ಹಣ್ಣುಗಳನ್ನು ತಿನ್ನುವುದರಿಂದ ಹಣ್ಣಿನ ಸಿಪ್ಪೆಯ ಮೇಲೆ ಕಪ್ಪು ಗಟ್ಟಿಯಾದ ಮಚ್ಚೆಗಳು ಉಂಟಾಗುತ್ತವೆ. ಹೂವಿನ ಮೊಗ್ಗುಗಳನ್ನು ತಿನ್ನುವುದರಿಂದ ಹೂವು ಉದುರುತ್ತದೆ. ಹಣ್ಣಿನ ರುಚಿಯ ಮೇಲೆ ಪರಿಣಾಮವಾಗಬಹುದು. ಕೀಟ ತಿಂದು ಬಿಟ್ಟ ಜಾಗಗಳು ರೋಗಕಾರಕಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡಲು ಹೆಚ್ಚಿನ ಅವಕಾಶ ಒದಗಿಸಬಹುದು. ಎಲೆಗಳ ಕೆಳಭಾಗದಲ್ಲಿ ಮೊಟ್ಟೆಯ ರಾಶಿಗಳನ್ನು ಕಾಣಬಹುದು.

Recommendations

ಜೈವಿಕ ನಿಯಂತ್ರಣ

ಈ ಕೀಟವನ್ನು ನಿಯಂತ್ರಿಸಲು ಮೊಟ್ಟೆಯ ಪರಾವಲಂಬಿ ಟ್ರಿಸೊಲ್ಕಸ್ ಬಸಾಲಿಸ್ ಮತ್ತು ಟ್ಯಾಚಿನಿಡ್ ಫ್ಲೈಸ್ ಟ್ಯಾಚಿನಸ್ ಪೆನ್ನಿಪ್ಸ್ ಮತ್ತು ಟ್ರೈಕೊಪೊಡಾ ಪಿಲಿಪ್ಸ್ ಅನ್ನು ಯಶಸ್ವಿಯಾಗಿ ಬಳಸಲಾಗಿದೆ.

ರಾಸಾಯನಿಕ ನಿಯಂತ್ರಣ

ಕೀಟನಾಶಕ ಬಳಕೆಗಳು ಸಾಮಾನ್ಯವಾಗಿ ಅಗತ್ಯವಿಲ್ಲ/ಅಗತ್ಯವಿರುವುದಿಲ್ಲ, ಆದಾಗ್ಯೂ ಸ್ಟಿಂಕ್ ಬಗ್ ಸಂಖ್ಯೆಯು ಅಧಿಕವಾಗಿದ್ದರೆ ಸ್ಪ್ರೇಗಳು ಬೇಕಾಗಬಹುದು. ಕಾರ್ಬಮೇಟ್ ಮತ್ತು ಆರ್ಗನೋಫಾಸ್ಫೇಟ್ ಸಂಯುಕ್ತಗಳ ಬಳಕೆಯಿಂದ ಈ ಕೀಟವನ್ನು ರಾಸಾಯನಿಕವಾಗಿ ನಿಯಂತ್ರಿಸಬಹುದು. ಆದಾಗ್ಯೂ, ಈ ಸಂಯುಕ್ತಗಳಲ್ಲಿ ಹೆಚ್ಚಿನವು ಸಂಸ್ಕರಿಸಿದ ಸಸ್ಯದ ಮೇಲೆ ಹೆಚ್ಚು ಕಾಲ ಉಳಿಯುವುದಿಲ್ಲವಾದ್ದರಿಂದ, ಹತ್ತಿರದ ಪ್ರದೇಶಗಳಿಂದಾಗಿ ಬೆಳೆ ಮತ್ತೆ ಸೋಂಕಿಗೆ ಒಳಗಾಗುವ ಅಪಾಯವಿದೆ. ಕೀಟವು ಸಕ್ರಿಯವಾಗಿರುವ ಮತ್ತು ಎಲೆಗೊಂಚಲುಗಳೊಳಗೆ ಅವಿತಿಲ್ಲದ ಸಮಯದ ಲಾಭವನ್ನು ಪಡೆದುಕೊಂಡು ಕೀಟನಾಶಕ ನಿಯಂತ್ರಣದ ಪರಿಣಾಮಕಾರಿತ್ವವನ್ನು ಸುಧಾರಿಸಬಹುದು. ಏಕೆಂದರೆ, ಈ ಸಂದರ್ಭದಲ್ಲಿ ಕೀಟಗಳು ಕೀಟನಾಶಕಗಳ ನೇರ ಸಂಪರ್ಕಕ್ಕೆ ಬರಬಹುದು. ಸ್ಟಿಂಕ್ ಬಗ್ ಮುಂಜಾನೆ ಮತ್ತು ಮಧ್ಯಾಹ್ನದ ಸಮಯದಲ್ಲಿ ಸಸ್ಯಗಳನ್ನು ತಿನ್ನುವುದು ಕಂಡುಬರುತ್ತದೆ.

ಅದಕ್ಕೆ ಏನು ಕಾರಣ

ಪ್ರಪಂಚದಾದ್ಯಂತ ವಿಶೇಷವಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುವ ನೆಜಾರಾ ವಿರಿದ್ಡುಲಾ ಎಂಬ ಕೀಟದಿಂದ ಈ ಹಾನಿ ಉಂಟಾಗುತ್ತದೆ. ಅವುಗಳನ್ನು "ಸ್ಟಿಂಕ್ ಬಗ್ಸ್" (ವಾಸನೆ ಕೀಟ) ಎಂದು ಕರೆಯಲಾಗುತ್ತದೆ. ಏಕೆಂದರೆ ಅವುಗಳಿಗೆ ಭಯವಾದಾಗ ಅವು ದುರ್ವಾಸನೆಯನ್ನು ಹೊರಹಾಕುತ್ತವೆ. ಕೀಟಗಳು ತಮ್ಮ ತೆಳುವಾದ ಚೂಪಾದ ಬಾಯಿಯ ಭಾಗಗಳಿಂದ (ಸ್ಟೈಲೆಟ್‌ಗಳು) ಬೆಳೆಯನ್ನು ಚುಚ್ಚುವ ಮೂಲಕ ತಿನ್ನುತ್ತವೆ. ಅವು ತಿಂದ ಜಾಗದಲ್ಲಿ ತೂತು ತಕ್ಷಣವೇ ಕಾಣುವುದಿಲ್ಲ. ಕೀಟವು ಬೆಳೆದೆ ಮತ್ತು ಮರಿ ಹಂತಗಳೆರಡರಲ್ಲೂ ಸಸ್ಯಗಳನ್ನು ತಿನ್ನುತ್ತವೆ. ಅವು ಸಸ್ಯದ ಸೂಕ್ಷ್ಮ ಭಾಗಗಳನ್ನು (ಬೆಳೆಯುತ್ತಿರುವ ಚಿಗುರು, ಹಣ್ಣು, ಹೂವು) ತಿನ್ನುತ್ತವೆ. ಅದು ಮೊಟ್ಟೆಯೊಡೆದಾಗ, ಕೀಟದ ಮರಿ ಹಂತವು ಮೊಟ್ಟೆಗಳ ಹತ್ತಿರ ಉಳಿಯುತ್ತದೆ. ದೊಡ್ಡವು ಹಾರಬಲ್ಲದಾದ್ದರಿಂದ ಓಡಾಡುತ್ತವೆ. ಅವು ಸಾಮಾನ್ಯವಾಗಿ ಹಸಿರು ಬಣ್ಣದ್ದಾಗಿರುತ್ತವೆ ಆದ್ದರಿಂದ ಸಸ್ಯಗಳಲ್ಲಿ ಗುರುತಿಸಲು ಕಷ್ಟ. ಕೀಟದ ಬಣ್ಣವು ಅವು ಬೆಳೆದಂತೆ ಬದಲಾಗುತ್ತದೆ, ಪ್ರತಿ ಹಂತದಲ್ಲೂ ಹೆಚ್ಚು ಹಸಿರು ಬಣ್ಣಕ್ಕೆ ತಿರುಗುತ್ತದೆ. ಸಾಮಾನ್ಯವಾಗಿ ಅವು ಮುಂಜಾನೆ ಸಸ್ಯಗಳ ಎತ್ತರದ ಭಾಗಗಳಿಗೆ ತೆರಳುತ್ತವೆ.


ಮುಂಜಾಗ್ರತಾ ಕ್ರಮಗಳು

  • ಎಲೆ ಕಸವನ್ನು ತೆಗೆದುಹಾಕಿ.
  • ನಿಮ್ಮ ಜಮೀನಿನಲ್ಲಿ ಕಳೆಗಳ ಬೆಳವಣಿಗೆಯನ್ನು ನಿಯಂತ್ರಿಸಿ.
  • ಬೆಳೆಗಳನ್ನು ಬೇಗನೆ ನೆಡಿ ಮತ್ತು ಸಾಲುಗಳ ನಡುವೆ ಅಂತರ ಹೆಚ್ಚಿರಲಿ.
  • ಈ ಬೆಳೆಗಳು ಕೀಟವನ್ನು ಆಕರ್ಷಿಸುವುದರಿಂದ ದ್ವಿದಳ ಮತ್ತು ಕ್ರೂಸಿಫೆರಸ್ ಸಸ್ಯಗಳಂತಹ ಬೇಗ ಮಾಗುವ ಬಲೆ ಬೆಳೆಗಳನ್ನು ನೆಡಬೇಕು.
  • ಸತರ್ನ್ ಗ್ರೀನ್ ಸ್ಟಿಂಕ್ ಬಗ್‌ಗಳು ದೊಡ್ಡದಾಗಿ ಮುಖ್ಯ ಬೆಳೆಗೆ ಹೋಗುವ ಮೊದಲು ಬಲೆ ಬೆಳೆಗಳನ್ನು ಉಳುಮೆ ಮಾಡಿ ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ