ಬೆಂಡೆಕಾಯಿ

ಟ್ರಾನ್ಸ್‌ವರ್ಸ್ ಪತಂಗ

Xanthodes transversa

ಕೀಟ

5 mins to read

ಸಂಕ್ಷಿಪ್ತವಾಗಿ

  • ಕೀಟ ಕಚ್ಚಿರುವ ಎಲೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬೆಂಡೆಕಾಯಿ

ರೋಗಲಕ್ಷಣಗಳು

ಮರಿಹುಳುಗಳು ಎಲೆಗಳನ್ನು ತಿನ್ನುತ್ತವೆ, ಇದರಿಂದ ಎಲೆಗಳು ಉದುರುತ್ತವೆ. ಎಲೆಗಳನ್ನು ತಿನ್ನುವುದರಿಂದ ದ್ಯುತಿಸಂಶ್ಲೇಷಣೆಗೆ ತೊಂದರೆಯಾಗುತ್ತದೆ ಮತ್ತು ಇದರ ಪರಿಣಾಮವಾಗಿ ಬೆಳೆಯ ಬೆಳವಣಿಗೆ ಮತ್ತು ಉತ್ಪಾದನೆಯ ಮೇಲೆ ಋಣಾತ್ಮಕ ಪರಿಣಾಮವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಈ ಸಣ್ಣ ಕೀಟಕ್ಕೆ ಜೈವಿಕ ನಿಯಂತ್ರಣ ಬಳಕೆಯಲ್ಲಿಲ್ಲ. ಅಗತ್ಯವಿದ್ದರೆ, ಅವುಗಳನ್ನು ಕೈಯಿಂದ ಹೆಕ್ಕಿ ತೆಗೆದುಹಾಕಿ.

ರಾಸಾಯನಿಕ ನಿಯಂತ್ರಣ

ಬೆಳವಣಿಗೆಯ ಆರಂಭಿಕ ಹಂತದಲ್ಲಿ ಬಹಳ ಮರಿಹುಳುಗಳು ಇದ್ದರೆ, ಹಾನಿಯನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯವಾಗಬಹುದು. ನೀವು ಹಾನಿಯ ಚಿಹ್ನೆಗಳನ್ನು ನೋಡಿದ ತಕ್ಷಣ ಕ್ರಮ ಕೈಗೊಳ್ಳಬೇಕು. ಬೇರೆ ದೇಶಕ್ಕೆ ಮಾರಾಟ ಮಾಡಲು ಬೆಂಡೆಕಾಯಿಯನ್ನು ಬೆಳೆಯುವ ದೊಡ್ಡ ಫಾರ್ಮ್‌ಗಳಲ್ಲಿ, ಆರಂಭಿಕ ಹಂತದಲ್ಲಿ ಬಹಳಷ್ಟು ಮರಿಹುಳುಗಳು ಆರ್ಥಿಕ ಹಾನಿಯನ್ನು ಉಂಟುಮಾಡಬಹುದು. ಯಾವ ಉತ್ಪನ್ನಗಳನ್ನು ಬಳಸಬೇಕು ಎಂಬುದರ ಕುರಿತು ಸಲಹೆಗಾಗಿ ನೀವು ಕೃಷಿ ತಜ್ಞರನ್ನು ಸಂಪರ್ಕಿಸಬೇಕು ಮತ್ತು ಕೀಟನಾಶಕಗಳನ್ನು ಬಳಸುವಾಗ ನಿಯಮಗಳನ್ನು ಅನುಸರಿಸಲು ಮರೆಯದಿರಿ.

ಅದಕ್ಕೆ ಏನು ಕಾರಣ

ಕ್ಸಾಂಥೋಡ್ಸ್ ಟ್ರಾನ್ಸ್‌ವರ್ಸಾ ಎಂಬ ಪತಂಗದಿಂದ ಈ ಹಾನಿ ಉಂಟಾಗುತ್ತದೆ. ಇದು ಆರ್ಥಿಕವಾಗಿ ಪ್ರಮುಖವಾದ ಹಲವಾರು ಬೆಳೆಗಳನ್ನು ತಿನ್ನುತ್ತದೆ, ಅವುಗಳಲ್ಲಿ ಹೆಚ್ಚಿನವು ಮಾಲ್ವೇಸಿ ಕುಟುಂಬದ ಸಸ್ಯಗಳಾಗಿವೆ. ಹೆಣ್ಣು ಕೀಟಗಳು ತಮ್ಮ ಮೊಟ್ಟೆಗಳನ್ನು ಎಲೆಗಳ ಕೆಳಭಾಗದಲ್ಲಿ ಒಂದೊಂದಾಗಿ ಇಡುತ್ತವೆ. ಒಂದು ವಾರದ ನಂತರ ಮೊಟ್ಟೆಗಳಿಂದ ಸಣ್ಣ ಮರಿಹುಳುಗಳು ಹೊರಬರುತ್ತವೆ. ಸಂಪೂರ್ಣವಾಗಿ ಬೆಳೆದ ಕ್ಯಾಟರ್ಪಿಲ್ಲರ್‌ ಕಡು ಹಸಿರು ಬಣ್ಣದ್ದಾಗಿರುತ್ತದೆ ಮತ್ತು ದೇಹದ ಉದ್ದಕ್ಕೂ ಒಂದು ವಿಶಿಷ್ಟವಾದ ಹಳದಿ ಪಟ್ಟಿ ಇರುತ್ತದೆ. ಮತ್ತು ಹಳದಿ ಪಟ್ಟಿಯ ಎರಡೂ ಬದಿಗಳಲ್ಲಿ ಕುದುರೆಲಾಳದ ಆಕಾರದ ಕಪ್ಪು ಬಣ್ಣದ ಗುರುತುಗಳಿರುತ್ತವೆ. ಕ್ಯಾಟರ್ಪಿಲ್ಲರ್ ನ ನಂತರದ ಹಂತಗಳು ಸ್ವಲ್ಪ ವಿಭಿನ್ನ ಬಣ್ಣದ ಮಾದರಿಗಳನ್ನು ಹೊಂದಿರುತ್ತವೆ. ಎಳೆಯ ಲಾರ್ವಾಗಳು ದಾರದಂತಿರುತ್ತವೆ ಮತ್ತು ತುಂಬಾ ಓಡಾಡುತ್ತವೆ. ಅವು ಎಲೆಗಳ ಕೆಳಭಾಗವನ್ನು ತಿನ್ನುತ್ತವೆ, ಅಲ್ಲಿ ಅವುಗಳನ್ನು ಸಹ ಕಾಣಬಹುದು. ಮರಿಹುಳುಗಳು ಮಣ್ಣಿನಲ್ಲಿ ಪ್ಯೂಪಾ ಆಗುತ್ತವೆ ಮತ್ತು ಪತಂಗವು ಒಂದೆರಡು ವಾರಗಳ ನಂತರ ಹೊರಬರುತ್ತದೆ. ಬೆಳೆದ ಪತಂಗಗಳು ಹಳದಿ ಬಣ್ಣದಲ್ಲಿರುತ್ತವೆ, ಮುಂಭಾಗದ ಪ್ರತಿ ರೆಕ್ಕೆಯ ಉದ್ದಕ್ಕೂ ಮೂರು ಕಂದು ಬಾಣದ ಆಕಾರದ ರೇಖೆಗಳಿರುತ್ತವೆ. ಶಾಖ, ಆರ್ದ್ರ ವಾತಾವರಣದ ಅವಧಿಗಳು ಈ ಕೀಟಕ್ಕೆ ಅನುಕೂಲಕರವಾಗಿವೆ. ಇದರಿಂದ ಹೆಚ್ಚಿನ ಹಾನಿಯಾಗದಿದ್ದರೂ, ಬೆಳೆಗಳಿಗೆ ಕೊಂಚ ಹಾನಿಯಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಮರಿಹುಳುಗಳನ್ನು ಹುಡುಕಿ ಮತ್ತು ಕೈಗವಸುಗಳನ್ನು ಬಳಸಿ ಅವುಗಳನ್ನು ತೆಗೆದುಹಾಕಿ.
  • ಅವುಗಳನ್ನು ಸುಲಭವಾಗಿ ಗುರುತಿಸಲು ಸಹಾಯವಾಗುವಂತಹ ಗುರುತುಗಳು ಅವುಗಳಿಗಿವೆ.
  • ನಿಮ್ಮ ಸಸ್ಯಗಳನ್ನು ಕಳೆಗಳಿಂದ ದೂರವಿಡಿ.
  • ಏಕೆಂದರೆ ಮರಿಹುಳುಗಳು ಅವುಗಳಲ್ಲಿ ಅಡಗಿಕೊಳ್ಳಬಹುದು ಮತ್ತು ಅಲ್ಲೇ ವಾಸಿಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ