ಮಾವು

ಮಾವಿನ ಬಿಳಿ ಸ್ಕೇಲ್

Aulacaspis tubercularis

ಕೀಟ

5 mins to read

ಸಂಕ್ಷಿಪ್ತವಾಗಿ

  • ಕ್ಲೋರೋಸಿಸ್, ಎಲೆ ಉದುರುವಿಕೆ, ಕೊಂಬೆಗಳ ಒಣಗುವಿಕೆ, ಕಳಪೆಯಾಗಿ ಹೂಬಿಡುವಿಕೆ, ಸಣ್ಣ ಮತ್ತು ವಿರೂಪ ಹಣ್ಣುಗಳು.
  • ಅಕಾಲಿಕ ಹಣ್ಣಿನ ಉದುರುವಿಕೆ.


ಮಾವು

ರೋಗಲಕ್ಷಣಗಳು

ಎಲೆಗಳು, ಕೊಂಬೆಗಳು ಮತ್ತು ಹಣ್ಣುಗಳ ಮೇಲೆ ಸಸ್ಯ ರಸವನ್ನು ಹೀರುವುದರಿಂದ ಸಸ್ಯಗಳು ಗಾಯಗೊಳ್ಳುತ್ತವೆ. ತೀವ್ರವಾದ ಮುತ್ತಿಕೊಳ್ಳುವಿಕೆಯ ಸಂದರ್ಭದಲ್ಲಿ, ಮಾವಿನ ಸಸ್ಯಗಳಲ್ಲಿ ಕ್ಲೋರೋಸಿಸ್, ಎಲೆ ಉದುರುವಿಕೆ, ಕೊಂಬೆಗಳ ಒಣಗುವಿಕೆ ಮತ್ತು ಕಳಪೆ ಹೂಬಿಡುವಿಕೆ ಕಂಡುಬರುತ್ತದೆ ಮತ್ತು ಕಳಪೆ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಕಾರಣವಾಗುತ್ತದೆ. ಕಳಿತ ಹಣ್ಣುಗಳ ಎಪಿಡರ್ಮಿಸ್‌ನಲ್ಲಿ ಗುಲಾಬಿ ಕಲೆಗಳು ಕಂಡುಬರಬಹುದು. ಅದು ಅಪೇಕ್ಷಣೀಯವಲ್ಲವಾದ್ದರಿಂದ (ಅಂದಕ್ಕೆ ಹಾನಿ) ಮಾರುಕಟ್ಟೆ ಮೌಲ್ಯದ ನಷ್ಟಕ್ಕೆ ಕಾರಣವಾಗುತ್ತದೆ. ಅದರಲ್ಲೂ ವಿಶೇಷವಾಗಿ ಅಂತರರಾಷ್ಟ್ರೀಯ ರಫ್ತು ಮಾರುಕಟ್ಟೆಗಳಲ್ಲಿ. ಕೀಟಗಳ ಸಾಂದ್ರತೆಯು ಹಣ್ಣಿನ ಇಳುವರಿ ನಷ್ಟವನ್ನು ಧನಾತ್ಮಕವಾಗಿ ಪ್ರಭಾವಿಸುತ್ತದೆ.

Recommendations

ಜೈವಿಕ ನಿಯಂತ್ರಣ

ಮಾವಿನ ಬಿಳಿ ಸ್ಕೇಲ್ ಅನೇಕ ನೈಸರ್ಗಿಕ ಶತ್ರುಗಳನ್ನು ಹೊಂದಿದೆ. ರೈತರು ಜಮೀನಿನಲ್ಲಿ ಮಾವಿನ ಬಿಳಿ ಸ್ಕೇಲ್ ನ ಪರಭಕ್ಷಕಗಳನ್ನು ಹೆಚ್ಚಿಸಲು ಆಕರ್ಷಕಗಳನ್ನು ಮತ್ತು ಪೌಷ್ಟಿಕಾಂಶದ ಪೂರಕಗಳನ್ನು ಬಳಸಬಹುದು. ಹೆಚ್ಚು ನೈಸರ್ಗಿಕ ಶತ್ರುಗಳನ್ನು ತೋಟಕ್ಕೆ ಪರಿಚಯಿಸುವುದು ಸಾಧ್ಯವಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ನಿಮ್ಮ ಪ್ರದೇಶದಲ್ಲಿ ನಿಯಂತ್ರಿಸಲಾದ ಕೀಟನಾಶಕಗಳನ್ನು ಅನ್ವಯಿಸಿ ಮತ್ತು ಅನ್ವಯಿಸಲಾದ ಸಕ್ರಿಯ ಪದಾರ್ಥಗಳನ್ನು ಬದಲಿಸುತ್ತಿರಿ. ಇದರಿಂದ ಕೀಟಗಳು ರೋಗ ನಿರೋಧಕತೆ ಬೆಳೆಸಿಕೊಳ್ಳುವುದನ್ನು ತಪ್ಪಿಸಬಹುದು. ಮಾವಿನ ಬಿಳಿ ಸ್ಕೇಲ್ ವಿರುದ್ಧ ಎಲೆಗಳ ಕೀಟನಾಶಕಗಳ ಬಳಕೆಯು ಹೆಚ್ಚು ಪ್ರಾಯೋಗಿಕವಲ್ಲ ಎಂಬುದನ್ನು ನೆನಪಿನಲ್ಲಿಡಿ. ಏಕೆಂದರೆ ಬೆಳೆಯುವ ಹೆಚ್ಚಿನ ಪ್ರಭೇದಗಳು 20 ಮೀ ಎತ್ತರ ಇರುತ್ತವೆ ಮತ್ತು ಅವುಗಳನ್ನು ಸಾಮಾನ್ಯ ಸ್ಪ್ರೇ ಉಪಕರಣದಿಂದ ತಲುಪಲು ಕಷ್ಟ.

ಅದಕ್ಕೆ ಏನು ಕಾರಣ

ಹಾನಿಯು ಮಾವಿನ ಬಿಳಿ ಸ್ಕೇಲ್ ನಿಂದ ಉಂಟಾಗುತ್ತದೆ. ಇದು ಹೆಮಿಪ್ಟೆರಾ, ಡಯಾಸ್ಪಿಡಿಡೆ ಕುಟುಂಬಕ್ಕೆ ಸೇರಿದ ಸ್ಥಿರವಲ್ಲದ, ಕವಚವುಳ್ಳ, ಸಣ್ಣ, ಚಿಪ್ಪಿನ ಕೀಟವಾಗಿದೆ. ಮೊಳಕೆಯೊಡೆಯುವುದರಿಂದ ಹಿಡಿದು ಪಕ್ವವಾಗುವವರೆಗಿನ ಎಲ್ಲಾ ಬೆಳವಣಿಗೆಯ ಹಂತಗಳಲ್ಲಿ ಕೀಟವು ಮಾವಿನ ಗಿಡವನ್ನು ಆಕ್ರಮಿಸುತ್ತದೆ. ಆಹಾರ ತಿನ್ನುವಾಗ, ಕೀಟವು ರಸವನ್ನು ಹೀರುತ್ತದೆ ಮತ್ತು ಸಸ್ಯದೊಳಗೆ ವಿಷವನ್ನು ಚುಚ್ಚಿ ಸೇರಿಸುತ್ತದೆ. ಮಳೆಗಾಲದ ಅವಧಿಗಿಂತ ಬಿಸಿ ಮತ್ತು ಶುಷ್ಕ ವಾತಾವರಣದಲ್ಲಿ, ವಿಶೇಷವಾಗಿ ಎಳೆಯ ಸಸಿ ಮತ್ತು ಮರಗಳ ಮೇಲೆ ಪರಿಣಾಮವು ಹೆಚ್ಚಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸೂಕ್ತವಾದ ಸ್ಥಳ ಮತ್ತು ಅಪೇಕ್ಷಣೀಯ ಪ್ರಬೇಧವನ್ನು ಆಯ್ಕೆಮಾಡಿ.
  • ಏಷ್ಯಾ ಮತ್ತು ಆಫ್ರಿಕಾದಲ್ಲಿನ ಸಂಶೋಧನೆಯ ಆಧಾರದ ಮೇಲೆ, ಅಲ್ಫಾನ್ಸೊ, ಕೆಂಟ್, ಟಾಮಿ ಅಟ್ಕಿನ್ಸ್ ಮತ್ತು ಡಾಡ್‌ನಂತಹ ಇತರ ತಳಿಗಳಿಗೆ ಹೋಲಿಸಿದರೆ ಅಟಾಲ್ಫೋ, ಆಪಲ್, ಹೇಡೆನ್ ಮತ್ತು ಕೀಟ್ ಮಾವಿನ ತಳಿಗಳು ಮಾವಿನ ಬಿಳಿ ಸ್ಕೇಲ್ ರೋಗಕ್ಕೆ ಹೆಚ್ಚು ಸಹಿಷ್ಣುತೆಯನ್ನು ಹೊಂದಿವೆ ಎಂದು ವರದಿಯಾಗಿದೆ.
  • ಹದಿನೈದು ದಿನಕ್ಕೊಮ್ಮೆ ಬಿಳಿ ಪೊರೆಗಾಗಿ ಪರಿಶೀಲಿಸಿ ಮತ್ತು ಸೋಂಕಿತ ಮಾವಿನ ಕೊಂಬೆಗಳನ್ನು ಕತ್ತರಿಸಿ.
  • ಸಸ್ಯಗಳು ಬೆಳವಣಿಗೆಗೆ ಅಗತ್ಯವಾದ ಅಂಶಗಳಿಗಾಗಿ ಸ್ಪರ್ಧಿಸದಂತೆ ಮರಗಳ ನಡುವೆ ಸೂಕ್ತ ಅಂತರವನ್ನು ಖಚಿತಪಡಿಸಿಕೊಳ್ಳಿ.
  • ಕೊಯ್ಲಿಗೆ ಮೊದಲು ಹಣ್ಣಿನ ಬ್ಯಾಗಿಂಗ್ ಮೂಲಕ ಭೌತಿಕ ರಕ್ಷಣೆಯ ವಿಧಾನಗಳನ್ನು ಬಳಸಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ