ಕಬ್ಬು

ಕಬ್ಬಿನ ಪೊರೆ

Melanaspis glomerata

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಮತ್ತು ಕಬ್ಬು ಒಣಗುವುದು.
  • ಕುಂಠಿತ ಬೆಳವಣಿಗೆ.
  • ವೃತ್ತಾಕಾರದ, ಗಾಢ ಬಣ್ಣದ ಪೊರೆಗಳಿಂದ ಆವೃತವಾದ ಕಾಂಡಗಳು ಮತ್ತು ಎಲೆಯ ಮಧ್ಯನಾಳಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಬ್ಬು

ರೋಗಲಕ್ಷಣಗಳು

ಕಾಂಡಗಳು ಮತ್ತು ಎಲೆ ಮಧ್ಯಭಾಗಗಳನ್ನು ವೃತ್ತಾಕಾರದ, ಕಂದು ಅಥವಾ ಬೂದು-ಕಪ್ಪು ಪೊರೆಗಳಿಂದ ಮುಚ್ಚಿರುತ್ತವೆ. ಮುತ್ತಿಕೊಂಡಿರುವ ಕಬ್ಬಿನ ಎಲೆಗಳು ತುದಿಯಲ್ಲಿ ಒಣಗುತ್ತವೆ. ಅನಾರೋಗ್ಯಕರ ಮಸುಕಾದ ಹಸಿರು ಬಣ್ಣವನ್ನು ಹೊಂದಿರುತ್ತವೆ. ಮುತ್ತುವಿಕೆ ಮುಂದುವರಿದಂತೆ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಸಾರ ನಷ್ಟವು ಎಲೆಗಳು ತೆರೆಯದಿರಲು ಕಾರಣವಾಗುತ್ತದೆ. ಎಲೆ ಅಂತಿಮವಾಗಿ ಹಳದಿ ಬಣ್ಣಕ್ಕೆ ತಿರುಗುತ್ತದೆ ಮತ್ತು ಒಣಗುತ್ತದೆ. ಅಂತಿಮವಾಗಿ, ಕಬ್ಬು ಒಣಗುತ್ತದೆ ಮತ್ತು ಸೀಳು ತೆರೆದಾಗ ಕಂದು-ಕೆಂಪು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಮುತ್ತಿಗೆ ಒಳಗಾಗಿರುವ ಕಬ್ಬುಗಳು ಚೂರುಚೂರಾಗುತ್ತವೆ ಮತ್ತು ತೀವ್ರವಾದ ಮುತ್ತಿಗೆ ಸಂದರ್ಭದಲ್ಲಿ ಕಾಂಡದ ಮೇಲೆ ಕೀಟವು ರೂಪಿಸುವ ಪೊರೆಯಿಂದ ಇಡೀ ಕಬ್ಬು ಮುಚ್ಚಿ ಹೋಗುತ್ತದೆ. ಅದರ ಜಡ ಅಭ್ಯಾಸ ಮತ್ತು ಸಣ್ಣ ಗಾತ್ರದಿಂದಾಗಿ, ಕೀಟವು ಕಬ್ಬಿನ ಬೆಳೆಗಾರರ ಗಮನಕ್ಕೆ ಬರುವುದಿಲ್ಲ. ತೀವ್ರ ಹಾನಿ ಸಂಭವಿಸಿದ ನಂತರವೇ ಇದರ ಅಸ್ತಿತ್ವವು ಬಹಿರಂಗಗೊಳ್ಳುತ್ತದೆ.

Recommendations

ಜೈವಿಕ ನಿಯಂತ್ರಣ

1% ಮೀನು ಎಣ್ಣೆ ರೋಸಿನ್ ಸೋಪ್ ಎಮಲ್ಷನ್ ನಲ್ಲಿ ಸೆಟ್ ಗಳನ್ನು ಅದ್ದಿ. ಬಿಳಿ ಎಣ್ಣೆಗಳನ್ನು ಸಿಂಪಡಿಸಿ (ಎಲೆ ಮತ್ತು ತೊಟ್ಟುಗಳಿಗೆ), ಇದು ಎಳೆಯ ಸ್ಕೇಲ್ ಗಳ ವಿರುದ್ಧ ಕೆಲಸ ಮಾಡುತ್ತವೆ. ಚಿಲೋಕೊರಸ್ ನಿಗ್ರಿಟಸ್ ಅಥವಾ ಫರಾಸ್ಸಿಮ್ನಸ್ ಹಾರ್ನಿ ಎಗ್ ಕಾರ್ಡ್ @ 5 ಸಿಸಿ / ಎಕರೆ ಬಿಡುಗಡೆ ಮಾಡಿ. ಅನಾಬ್ರೊಟೆಪಿಸ್ ಮಯೂರೈ, ಚೈಲೋನೂರಸ್ ಎಸ್ಪಿ ಯಂತಹ ಹೈಮನೊಪ್ಟೆರಾನ್ ಪರಾವಲಂಬಿಗಳನ್ನು ಪರಿಚಯಿಸಿ. ಮತ್ತು ಪರಭಕ್ಷಕ ಹುಳಗಳಾದ ಸ್ಯಾನಿಯೊಸುಲಸ್ ನುಡಸ್ ಮತ್ತು ಟೈರೋಫಾಗಸ್ ಪುಟ್ರೆಸೆಂಟಿಯಾ ಕೀಟ ಸ್ಕೇಲ್ ಗಳನ್ನು ತಿನ್ನುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ನಾಟಿ ಮಾಡುವ ಮೊದಲು ಸೆಟ್‌ಗಳನ್ನು 0.1% ಮಾಲಾಥಿಯಾನ್ ದ್ರಾವಣದಲ್ಲಿ ನೆನೆಸಿ. ಕಸ ತೆಗೆದ ನಂತರ ಡೈಮಿಥೊಯೇಟ್ @ 2 ಮಿಲಿ / ಲೀ ಅಥವಾ ಮೊನೊಕ್ರೊಟೊಫಾಸ್ @ 1.6 ಮೀ / ಲೀ ಸಿಂಪಡಿಸಿ. ಕೀಟಗಳು ಕಾಣಿಸಿಕೊಳ್ಳುವ ಮೊದಲು, ಕಸ ತೆಗೆದ ನಂತರ ಸೆಟ್‌ಗಳಿಗೆ ಎರಡು ಬಾರಿ ಅಸೆಫೇಟ್ 75 ಎಸ್‌ಪಿ @ 1 ಜಿ / ಲೀ ನೊಂದಿಗೆ ಚಿಕಿತ್ಸೆ ನೀಡಿ.

ಅದಕ್ಕೆ ಏನು ಕಾರಣ

ಕ್ರಾಲರ್ಸ್ ಪೊರೆಯಿಂದ ಹಾನಿ ಉಂಟಾಗುತ್ತದೆ. ಹೆಣ್ಣು ಓವೊವಿವಿಪಾರಸ್ - ಅಂದರೆ ಹೆಣ್ಣಿನ ದೇಹದೊಳಗೆ ಮೊಟ್ಟೆಯೊಡೆದು ಮರೆ ಉತ್ಪತ್ತಿಯಾಗುತ್ತದೆ. ಮೊಟ್ಟೆಯೊಡೆದ ನಂತರ, ಕ್ರಾಲ್ (ಎಳೆಯ, ಅಪ್ರಬುದ್ಧ ಸ್ಕೇಲ್ ಗಳು) ಆಹಾರ ತಾಣವನ್ನು ಹುಡುಕುತ್ತಾ ಅಲೆದಾಡುತ್ತವೆ. ಅವು ತಮ್ಮ ಸೂಜಿಯಂತಹ ಬಾಯಿಯ ಭಾಗಗಳನ್ನು ಜೋಡಿಸಿ, ಸಸ್ಯದ ಸಾರವನ್ನು ಹೊರತೆಗೆಯುತ್ತವೆ. ಹಾಗು ಮತ್ತೆ ಚಲಿಸುವುದಿಲ್ಲ. ಮುತ್ತುಕೊಳ್ಳುವಿಕೆಯು ಇಂಟರ್ನೋಡ್ ಗಳ ರಚನೆಯೊಂದಿಗೆ ಪ್ರಾರಂಭವಾಗುತ್ತದೆ ಮತ್ತು ಕಬ್ಬಿನ ಸಸ್ಯವು ಬೆಳೆದಂತೆ ಹೆಚ್ಚುತ್ತಲೇ ಇರುತ್ತದೆ. ಸಸ್ಯದ ಸಾರವನ್ನು ಕ್ರಾಲರ್‌ಗಳು ಹೀರಿಕೊಳ್ಳುತ್ತವೆ. ತೀವ್ರವಾದ ಮುತ್ತುವಿಕೆಯ ಸಂದರ್ಭದಲ್ಲಿ, ಎಲೆಗಳ ಕವಚ, ಲ್ಯಾಮಿನಾ ಮತ್ತು ಮಧ್ಯಭಾಗಗಳು ಸಹ ಮುತ್ತಿಗೆ ಒಳಗಾಗುತ್ತವೆ.


ಮುಂಜಾಗ್ರತಾ ಕ್ರಮಗಳು

  • CO 439, CO 443, CO 453, CO 671, CO 691 ಮತ್ತು CO 692 ನಂತಹ ನಿರೋಧಕ ಪ್ರಭೇದಗಳನ್ನು ಬಳಸಿ.
  • ಪೊರೆ ಕೀಟಗಳಿಂದ ಮುಕ್ತವಾಗಿರುವ ಸೆಟ್‌ಗಳನ್ನು ಬೆಳೆಸಿಕೊಳ್ಳಿ.
  • ಪೊರೆಯ ಸಂಖ್ಯೆ ಹೆಚ್ಚುವುದನ್ನು ವಿಳಂಬಗೊಳಿಸಲು ಸ್ವಚ್ಛವಾದ ನೆಡು ವಸ್ತುಗಳನ್ನು ಬಳಸಿ.
  • ಹೊಲಗಳು ಮತ್ತು ಬದುಗಳನ್ನು ಕಳೆಗಳಿಂದ ಮುಕ್ತವಾಗಿರಿಸಿಕೊಳ್ಳಿ.
  • ಹೊಲಗಳಿಂದ ನಿಂತ ನೀರನ್ನು ಹರಿಸಿ.
  • ಮುತ್ತಿಕೊಳ್ಳುವಿಕೆಯ ಚಿಹ್ನೆಗಳಿಗಾಗಿ ನಿಮ್ಮ ಕ್ಷೇತ್ರವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಹೆಚ್ಚು ಮುತ್ತಿಗೆ ಒಳಗಾಗಿರುವ ಕಬ್ಬಿನ ಸಸ್ಯಗಳನ್ನು ಬೇರುಸಹಿತ ಸುಟ್ಟುಹಾಕಿ.
  • ಆತಿಥೇಯವಲ್ಲದ ಬೆಳೆಯೊಂದಿಗೆ ಬೆಳೆ-ಸರದಿ ಯೋಜಿಸಿ (ಉದಾ.
  • ಗೋಧಿ).
  • ನಾಟಿ ಮಾಡಿದ 150 ಮತ್ತು 210 ನೇ ದಿನದಲ್ಲಿ ಕಸ ತೆಗೆಯಿರಿ.
  • ಪುನರಾವರ್ತಿತ ರಟೂನ್‌ಗಳನ್ನು ತಪ್ಪಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ