ದ್ರಾಕ್ಷಿ

ಕಾಕ್‌ಚೇಫರ್

Melolontha melolontha

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಒಣಗುವುದು ಮತ್ತು ಹಳದಿಯಾಗುವುದು.
  • ಬೇರಿಗೆ ಹಾನಿ.
  • ಬೆಳೆಯಲ್ಲಿ ಕಡಿತ.

ಇವುಗಳಲ್ಲಿ ಸಹ ಕಾಣಬಹುದು


ದ್ರಾಕ್ಷಿ

ರೋಗಲಕ್ಷಣಗಳು

ಮರಿಗಳು ಸಣ್ಣಬೇರುಗಳನ್ನು ಹಾನಿಗೊಳಿಸುತ್ತವೆ. ಇದು ಸಸ್ಯಗಳ ಬಾಡುವಿಕೆ ಮತ್ತು ಮೇಲಾವರಣ ಹಳದಿಯಾಗಲು ಕಾರಣವಾಗುತ್ತದೆ. ಬೇರುಗಳು ಸಂಪೂರ್ಣವಾಗಿ ಕಳಚಿಹೋಗಿ ದ್ರಾಕ್ಷಿ ಬಳ್ಳಿಗಳ ಸಂಪೂರ್ಣ ನಾಶಕ್ಕೆ ಕಾರಣವಾಗಬಹುದು.

Recommendations

ಜೈವಿಕ ನಿಯಂತ್ರಣ

ನೈಸರ್ಗಿಕ ಶತ್ರುಗಳಾದ ಮೋಲ್, ಬಾವಲಿಗಳು, ಕೋಗಿಲೆಗಳು, ಮರಕುಟಿಗಗಳು, ಗುಬ್ಬಚ್ಚಿಗಳು, ನೆಲದ ಜೀರುಂಡೆಗಳು, ದೊಡ್ಡ ಕಣಜಗಳು ಮತ್ತು ನೈಸರ್ಗಿಕ ಪರಭಕ್ಷಕಗಳಾದ ಟಾಚಿನಿಡ್ ನೊಣಗಳನ್ನು ಸಂರಕ್ಷಿಸಿ. ಬ್ಯೂವೇರಿಯಾ ಬಾಸ್ಸಿಯಾನಾ ಅಥವಾ ಮೆಟಾರಿಜಿಯಮ್ ಅನಿಸೋಪ್ಲಿಯಾ ಮುಂತಾದ ರೋಗಕಾರಕ ಶಿಲೀಂಧ್ರಗಳನ್ನು ಬಳಸಿ. ಹೆಟೆರೊರಾಬ್ಡಿಟಿಸ್ ಮೆಗಿಡಿಸ್‌ನಂತಹ ಪರಾವಲಂಬಿ ನೆಮಟೋಡ್‌ಗಳನ್ನು ಮಣ್ಣಿನ ಮೇಲೆ ಹಾಕಿದರೆ ಗ್ರಬ್‌ಗಳನ್ನು ಕೊಲ್ಲಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ನಿಮ್ಮ ದ್ರಾಕ್ಷಿತೋಟದ ಮೇಲೆ ಎಕರೆಯೊಂದಕ್ಕೆ 600-800 ಲೀ ನೀರಿನಲ್ಲಿ 400 ಮಿಲೀ ಮ್ಯಾಲಥಿಯಾನ್ 50% ಇಸಿಯನ್ನು ಬಳಸಿ.

ಅದಕ್ಕೆ ಏನು ಕಾರಣ

ಮೆಲೊಲೊಂಥಾ ಮೆಲೊಲೊಂಥಾ ಎಂಬ ವಯಸ್ಕ ಚೇಫರ್‌ನಿಂದ ಹಾನಿ ಉಂಟಾಗುತ್ತದೆ. ಅವುಗಳು ಕಂದು ಬಣ್ಣದಲ್ಲಿದ್ದು ಕಪ್ಪು ಬಣ್ಣದ ತಲೆ ಇರುತ್ತದೆ. ಹೆಣ್ಣು ಕೀಟವು ಮಣ್ಣಿನ ಮೇಲ್ಮೈನಿಂದ 10-20 ಸೆಂ.ಮೀ ಕೆಳಗೆ ಆಳದಲ್ಲಿ ತನ್ನ ಮೊಟ್ಟೆಗಳನ್ನು ಇಡುತ್ತದೆ. ಲಾರ್ವಾಗಳು ಬಿಳಿ ಹಳದಿ ಬಣ್ಣದಲ್ಲಿದ್ದು, ಅರೆಪಾರದರ್ಶಕ ಮತ್ತು ಸುಮಾರು 5 ಮಿಮೀ ಉದ್ದವಿರುತ್ತವೆ. ಸಂಪೂರ್ಣವಾಗಿ ಬೆಳೆದ ಹುಳುಗಳು ಬಲವಾದ ದವಡೆಗಳೊಂದಿಗೆ ದೃಢವಾಗಿರುತ್ತವೆ. ಅವುಗಳ ತಲೆ ಹಳದಿ ಮತ್ತು ಬಿಳಿ ಬಣ್ಣದ ದೇಹವು ಮಾಂಸಯುಕ್ತವಾಗಿದ್ದು, 'C' ಆಕಾರದಲ್ಲಿರುತ್ತದೆ. ಲಾರ್ವಾಗಳು ಮಣ್ಣಿನಲ್ಲಿ ಗ್ರಬ್ ಗಳಾಗಿ(ಸಣ್ಣ ಮರಿಹುಳು) ಚಳಿಗಾಲವನ್ನು ಕಳೆಯುತ್ತವೆ ಮತ್ತು ಸಸ್ಯದ ಬೇರುಗಳನ್ನು ತಿನ್ನುತ್ತವೆ. ಇದರ ಜೀವನ ಚಕ್ರವು ಸುಮಾರು 3-4 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಮೂರನೇ ಹಂತದ ಇನ್ಸ್ಟಾರ್ ಲಾರ್ವಾಗಳು ಸಸ್ಯಗಳಿಗೆ ಹೆಚ್ಚಿನ ಹಾನಿಯನ್ನುಂಟುಮಾಡುವ ದೊಡ್ಡ ಹೊಟ್ಟೆಬಾಕಗಳಾಗಿವೆ. ಬೇರುಗಳನ್ನು ತಿನ್ನುತ್ತವೆ ಮತ್ತು ಅವುಗಳಲ್ಲಿ ಸುರಂಗ ಕೊರೆಯುತ್ತವೆ. ಇದರಿಂದ ಸಸ್ಯಗಳ ಮೇಲಿನ ಭಾಗಗಳು ಒಣಗುತ್ತವೆ ಮತ್ತು ಸಾಯುತ್ತವೆ. ವಯಸ್ಕ ಜೀರುಂಡೆಗಳು ಹಗಲಿನಲ್ಲಿ ವಿಶ್ರಾಂತಿ ಪಡೆಯುತ್ತವೆ ಮತ್ತು ಮುಸ್ಸಂಜೆಯಲ್ಲಿ ತಮ್ಮ ಆಹಾರದ ಸ್ಥಳಗಳ ಕಡೆಗೆ ಹಾರುತ್ತವೆ.


ಮುಂಜಾಗ್ರತಾ ಕ್ರಮಗಳು

  • ಜೀರುಂಡೆಗಳು ಮತ್ತು ಕೀಟ ತಿಂದಿರುವ ಗುರುತಿಗಾಗಿ ವಾರಕ್ಕೆ ಎರಡು ಬಾರಿ ನಿಮ್ಮ ಬೆಳೆಯನ್ನು ಪರಿಶೀಲಿಸಿ.
  • ಕಾಕ್‌ಚೇಫರ್ ಗಳ ಸಂಖ್ಯೆ ತುಲನಾತ್ಮಕವಾಗಿ ಚಿಕ್ಕದಾಗಿದ್ದರೆ, ಕೀಟವನ್ನು ಕೈಯಿಂದ ತೆಗೆದು, ಸಾಬೂನು ನೀರಿನ ಬಕೆಟ್‌ನಲ್ಲಿ ಹಾಕಿ.
  • ವಯಸ್ಕ ಜೀರುಂಡೆಗಳನ್ನು ದೂರವಿರಿಸಲು ನಿಮ್ಮ ದ್ರಾಕ್ಷಿತೋಟದ ಸುತ್ತಲೂ ಉಣ್ಣೆಯಂತಹ ಅಡೆತಡೆಗಳನ್ನು ಇರಿಸಿ.
  • ಇನ್ಸ್ಟಾರ್ ಲೈಟ್ ಬಲೆಗಳು ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುತ್ತವೆ.
  • ಮಣ್ಣನ್ನು ಉಳುಮೆ ಮಾಡುವ ಮೂಲಕ ಲಾರ್ವಾ ಅಡಗಿ ವಿಶ್ರಮಿಸುತ್ತಿರುವ ಸ್ಥಳಗಳನ್ನು ನಿವಾರಿಸಿ.
  • ಲಾರ್ವಾಗಳನ್ನು ಆಹಾರವಾಗಿ ತಿನ್ನುವ ಪರಾವಲಂಬಿಗಳು ಮತ್ತು ನೈಸರ್ಗಿಕ ಪರಭಕ್ಷಕಗಳನ್ನು ಪ್ರೋತ್ಸಾಹಿಸುವ ಪರಿಸರ ಸ್ಥಿತಿಯನ್ನು ಒದಗಿಸಿ.
  • ಕೆಲವು ಸ್ಥಳಗಳಲ್ಲಿ, ಅವುಗಳನ್ನು ಆಹಾರವಾಗಿಯೂ ಸೇವಿಸಲಾಗುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ