ದ್ರಾಕ್ಷಿ

ರೋಸ್ ಚೇಫರ್

Macrodactylus subspinosus

ಕೀಟ

5 mins to read

ಸಂಕ್ಷಿಪ್ತವಾಗಿ

  • ಹೂವುಗಳು ಮತ್ತು ಎಲೆಗಳಲ್ಲಿ ಕೀಟ ತಿಂದ ಕಾರಣದಿಂದಾದ ರಂಧ್ರಗಳು.
  • ಎಲೆಗಳು ಅಸ್ಥಿಪಂಜರಗಳಂತಾಗುತ್ತವೆ.
  • ಹಣ್ಣುಗಳು ಸಹ ಹಾನಿಗೊಳಗಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ದ್ರಾಕ್ಷಿ
ಗುಲಾಬಿ

ದ್ರಾಕ್ಷಿ

ರೋಗಲಕ್ಷಣಗಳು

ಯಾವ ಬೆಳೆಗೆ ಹಾನಿಯಾಗಿದೆ ಎಂಬುದರ ಆಧಾರದ ಮೇಲೆ ರೋಗಲಕ್ಷಣಗಳು ವಿಭಿನ್ನವಾಗಿರುತ್ತವೆ. ಗುಲಾಬಿಗಳ ಮೇಲೆ ಅರಳಿದ ಹೂವುಗಳ ಪರಿಣಾಮ ಬೀರುತ್ತವೆ. ಇದು ಹೂವಿನ ದಳಗಳಲ್ಲಿ ದೊಡ್ಡ ಅನಿಯಮಿತ ಆಕಾರದ ರಂಧ್ರಗಳನ್ನು ಉಂಟುಮಾಡುತ್ತದೆ. ಹಣ್ಣಿನ ಮರಗಳ ಮೇಲೆ, ವಿಶೇಷವಾಗಿ ದ್ರಾಕ್ಷಿಯ ಎಲೆಗಳನ್ನು ತಿನ್ನುತ್ತವೆ. ಅಂತಿಮವಾಗಿ ಎಲೆಗಳ ಅಸ್ಥಿಪಂಜರ ಮಾತ್ರ ಉಳಿಸುತ್ತವೆ. ಭಾಗಶಃ ಸಿಪ್ಪೆ ಸುಲಿದಂತಾಗಿ ಮತ್ತು ಅನಿಯಮಿತವಾದ ಆಳವಿಲ್ಲದ ತೇಪೆಗಳಲ್ಲಿ ಕತ್ತರಿಸಿಂದಂತಾಗಿ ಹಣ್ಣು ಕೂಡ ಹಾನಿಗೊಳಗಾಗಬಹುದು.

Recommendations

ಜೈವಿಕ ನಿಯಂತ್ರಣ

ಲಾರ್ವಾಗಳನ್ನು ಕೊಲ್ಲಲು ಪರಾವಲಂಬಿ ನೆಮಟೋಡ್‌ನೊಂದಿಗೆ ಮಣ್ಣನ್ನು ತೇವಗೊಳಿಸಿ. ಸೋಂಕಿನ ಮಟ್ಟವು ತೀವ್ರವಾಗಿದ್ದರೆ ಪೈರೆಥ್ರಿನ್ ಅನ್ನು ಶಿಫಾರಸು ಮಾಡಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ನಿಮ್ಮ ದ್ರಾಕ್ಷಿತೋಟದ ಪ್ರತೀ ಎಕರೆಗೆ 600-800 ಲೀ ನೀರಿನಲ್ಲಿ 400 ಮಿಲೀ ಮ್ಯಾಲಥಿಯಾನ್ 50% ಇಸಿಯನ್ನು ಬೆರೆಸಿ ಬಳಸಿ. ಅಸಿಫೇಟ್, ಕ್ಲೋರ್ಪೈರಿಫಾಸ್, ಬೈಫೆನ್ಥ್ರಿನ್, ಸೈಫ್ಲುಥ್ರಿನ್ ಅಥವಾ ಇಮಿಡಾಕ್ಲೋಪ್ರಿಡ್ ಅನ್ನು ಒಳಗೊಂಡಿರುವ ಇತರ ಕೀಟನಾಶಕಗಳನ್ನು ಶಿಫಾರಸು ಮಾಡಲಾಗುತ್ತದೆ. ಜೇನುನೊಣಗಳಿಗೆ ಹಾನಿಯಾಗದಂತೆ ಅಥವಾ ಅವುಗಳನ್ನು ಕೊಲ್ಲದಂತೆ ತಡೆಯಲು ಹೂವುಗಳ ಮೇಲೆ ಸಿಂಪಡಿಸುವುದನ್ನು ತಪ್ಪಿಸಿ.

ಅದಕ್ಕೆ ಏನು ಕಾರಣ

ಮ್ಯಾಕ್ರೋಡಾಕ್ಟಿಲಸ್ ಸಬ್‌ಸ್ಪಿನೋಸಸ್‌ನ ವಯಸ್ಕ ಚೇಫರ್‌ನಿಂದ ಹಾನಿ ಉಂಟಾಗುತ್ತದೆ. ಅವುಗಳು ಮಸುಕಾದ ಮತ್ತು ತೆಳ್ಳಗಿನ ಹಸಿರು ಬಣ್ಣದ ಜೀರುಂಡೆಗಳು. ಗಾಢವಾದ ತಲೆ ಮತ್ತು ಉದ್ದವಾದ ಕಾಲುಗಳು ca. 12 ಮಿಮೀ ಉದ್ದ ಇರುತ್ತವೆ. ಹೆಣ್ಣು ಕೀಟವು ತನ್ನ ಮೊಟ್ಟೆಗಳನ್ನು ಮಣ್ಣಿನ ಮೇಲ್ಮೈಗಿಂತ ಕೆಳಗಿರುವ ಮರಳಾದ, ಚೆನ್ನಾಗಿ ನೀರು ಬರಿದಾಗುವ ಮಣ್ಣಿನಲ್ಲಿರುವ ಹುಲ್ಲಿನಲ್ಲಿ ಇಡುತ್ತದೆ. ಒದ್ದೆಯಾದ ಮಣ್ಣಿನಲ್ಲಿ ಮೊಟ್ಟೆಗಳನ್ನು ಇಡಲು ಹೆಚ್ಚಿನ ಆದ್ಯತೆ ನೀಡುತ್ತವೆ. ಲಾರ್ವಾಗಳು ಮಣ್ಣಿನಲ್ಲಿ ಗ್ರಬ್‌ಗಳಾಗಿ ಚಳಿಗಾಲವನ್ನು ಕಳೆಯುತ್ತವೆ ಮತ್ತು ಹುಲ್ಲಿನ ಬೇರುಗಳನ್ನು ತಿನ್ನುತ್ತವೆ. ಇದು ಗುಲಾಬಿಗಳು, ಸ್ಟೋನ್ ಹಣ್ಣಿನ ಮರಗಳ ಮೇಲೆ ಪರಿಣಾಮ ಬೀರುತ್ತದೆ. ಉದಾ. ದ್ರಾಕ್ಷಿಗಳು, ಸೇಬುಗಳು, ಚೆರ್ರಿಗಳು, ಪೀಚ್, ಪೇರಳೆ ಮತ್ತು ಪ್ಲಮ್. ಮತ್ತು ಇವುಗಳು ಮರಳು ಮಣ್ಣಿಗೆ ಆದ್ಯತೆ ನೀಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ಜೀರುಂಡೆಗಳು ಮತ್ತು ಕೀಟ ತಿಂದ ಗುರುತಿಗಾಗಿ ವಾರಕ್ಕೆ ಎರಡು ಬಾರಿ ನಿಮ್ಮ ಬೆಳೆಯನ್ನು ಮೇಲ್ವಿಚಾರಣೆ ಮಾಡಿ.
  • ಗುಲಾಬಿ ಚೇಫರ್‌ಗಳ ಸಂಖ್ಯೆ ತುಲನಾತ್ಮಕವಾಗಿ ಚಿಕ್ಕದಾಗಿದ್ದರೆ, ಕೀಟವನ್ನು ಕೈಯಿಂದ ತೆಗೆದು, ಸಾಬೂನು ನೀರಿರುವ ಬಕೆಟ್‌ನಲ್ಲಿ ಹಾಕಿ.
  • ನಿಮ್ಮ ದ್ರಾಕ್ಷಿತೋಟದಲ್ಲಿ ಭೌತಿಕ ತಡೆಗೋಡೆಗಳ ಚೀಸ್ ಕ್ಲೋತ್ ಅಥವಾ ತೇಲುವ ಸಾಲು ಕವರ್ ಅನ್ನು ಇರಿಸಿ.
  • ಅದು ನಿಮ್ಮ ಬೆಳೆಯನ್ನು ವಯಸ್ಕ ಕೀಟಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಆದರೆ ಮಣ್ಣಿನಲ್ಲಿ ವಾಸಿಸುವ ಹುಳುಗಳಿಂದ ಅಲ್ಲ.
  • ದ್ರಾಕ್ಷಿತೋಟದಿಂದ ದೂರದಲ್ಲಿ ಫೆರೋಮೋನ್ ಬಲೆಗಳನ್ನು ಸ್ಥಾಪಿಸಿ.
  • ಮಣ್ಣನ್ನು ಉಳುಮೆ ಮಾಡುವ ಮೂಲಕ ಲಾರ್ವಾ ಹೈಬರ್ನೇಟ್ ಮಾಡುವ ತಾಣಗಳನ್ನು ನಿವಾರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ