ಸೇಬು

ಸೇಬು ಹಣ್ಣಿನ ಚಿಟ್ಟೆ

Argyresthia conjugella

ಕೀಟ

5 mins to read

ಸಂಕ್ಷಿಪ್ತವಾಗಿ

  • ಸುಕ್ಕುಗಟ್ಟಿದ ಹಣ್ಣಿನ ಸಿಪ್ಪೆ.
  • ಬಣ್ಣಗೆಡುವುದು, ಗುಳಿಬಿದ್ದ ತೇಪೆಗಳು.
  • ಸಣ್ಣ ಕೀಟ ಹೊರಹೋದ ರಂಧ್ರಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಸೇಬು

ರೋಗಲಕ್ಷಣಗಳು

ಸೇಬು ಹಣ್ಣುಗಳು ಸುರಂಗಗಳಿಂದ ತುಂಬಿರುತ್ತವೆ. ಅವುಗಳ ಸಿಪ್ಪೆಯು ಸುಕ್ಕುಗಟ್ಟುತ್ತವೆ ಮತ್ತು ಸಣ್ಣ ಬಣ್ಣ ಮಾಸಿದ, ಗುಳಿಬಿದ್ದ ಗಾಯಗಳಿರುತ್ತವೆ. ನಂತರದ ಹಂತಗಳಲ್ಲಿ ಸಿಪ್ಪೆಯು ಹಲವಾರು ಸಣ್ಣ ರಂಧ್ರಗಳು ಮತ್ತು ಕಂದು ಬಣ್ಣದ ಚುಕ್ಕೆಗಳಿಂದ ಚುಚ್ಚಲ್ಪಟ್ಟಂತೆ ಕಾಣಿಸಿಕೊಳ್ಳುತ್ತದೆ.

Recommendations

ಜೈವಿಕ ನಿಯಂತ್ರಣ

ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಗ್ಯಾಲರಿಯಾವನ್ನು ಶಿಫಾರಸು ಮಾಡಲಾಗಿದೆ. ಸೇಬಿನ ಹಣ್ಣಿನ ಪತಂಗದ ಲಾರ್ವಾಗಳ ಮೇಲೆ ದಾಳಿ ಮಾಡುವ ಹಲವಾರು ಪರಾವಲಂಬಿಗಳಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಪತಂಗಗಳು ವಲಸೆಯನ್ನು ಪ್ರಾರಂಭಿಸುವ ಮೊದಲು ಒಳಮುಖವಾಗಿರುವ ಮರಗಳನ್ನು ರಕ್ಷಿಸಲು ಎಡ್ಜ್ ಸಿಂಪಡಣೆಯನ್ನು ಅಭ್ಯಾಸ ಮಾಡಿ. ಕೀಟ ತೀವ್ರವಾಗಿ ಮುತ್ತಿಕೊಂಡಲ್ಲಿ ಇಡೀ ತೋಟಕ್ಕೆ ಸಿಂಪಡಿಸಬೇಕು. ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಅಜಿನ್‌ಫಾಸ್-ಮೀಥೈಲ್, ಡಿಫ್ಲುಬೆನ್‌ಜುರಾನ್ ಹೊಂದಿರುವ ಕೀಟನಾಶಕಗಳನ್ನು ಶಿಫಾರಸು ಮಾಡಲಾಗುತ್ತದೆ. ಮುಂದಿನ ಋತುವನ್ನು ಸೋಂಕಿನಿಂದ ರಕ್ಷಿಸಲು, ಶಿಫಾರಸು ಮಾಡಿದ ಡಸ್ಟ್ ಗಳು ಅಥವಾ ಕ್ಯಾಬೋಫ್ಯೂರಾನ್ 3ಗ್ರಾಂ (1-1.5ಕೆಜಿ/ಹೆ) ನೊಂದಿಗೆ ಮಣ್ಣನ್ನು ಸಂಸ್ಕರಿಸಬೇಕು. ಅಲ್ಲದೆ, 15 ದಿನಗಳ ಮಧ್ಯಂತರದಲ್ಲಿ ಎರಡು ಬಾರಿ ಕ್ಲೋರ್ಪಿರಿಫಾಸ್ (20ಇಸಿ) ಸಿಂಪಡಿಸಿ.

ಅದಕ್ಕೆ ಏನು ಕಾರಣ

ಆರ್ಗೈರೆಸ್ಟಿಯಾ ಕಾಂಜುಗೆಲ್ಲದ ಲಾರ್ವಾಗಳಿಂದ ಈ ಹಾನಿ ಉಂಟಾಗುತ್ತದೆ. ಅವುಗಳ ನೈಸರ್ಗಿಕ ಆಶ್ರಯದಾತ ಸಸ್ಯವೆಂದರೆ ಸೋರ್ಬಸ್ ಆಕ್ಯುಪೇರಿಯಾ (ರೋವನ್). ಆದರೆ ಮರದ ಬೆರ್ರಿ ಉತ್ಪಾದನೆಯು ಕಡಿಮೆಯಾದಾಗ ಅದು ಸೇಬು ಮರಗಳಿಗೆ ವಲಸೆ ಹೋಗುತ್ತದೆ. ಹೆಣ್ಣು ಕೀಟಗಳು ಸೇಬಿನ ಸಣ್ಣ ಹಣ್ಣಿನ ಮೇಲೆ ಮೊಟ್ಟೆ ಇಟ್ಟಾಗ, ಸಣ್ಣ ಕಂದು ಮತ್ತು ಬಿಳಿ ಬಣ್ಣದ ಬೆಳೆದ ಪತಂಗಗಳು ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತವೆ. ಲಾರ್ವಾಗಳು ನೇರವಾಗಿ ಮಾಗುತ್ತಿರುವ ಹಣ್ಣಿನೊಳಗೆ ಸುರಂಗ ಕೊರೆದು ಹೋಗಿ ಅದನ್ನು ತಿನ್ನುತ್ತವೆ. ಲಾರ್ವಾಗಳು ಸಂಪೂರ್ಣವಾಗಿ ಬೆಳೆದಾಗ ಅದು ನೆಲಕ್ಕೆ ಬೀಳುತ್ತದೆ, ನಂತರ ಪ್ಯೂಪಾ ಆಗಿ ಚಳಿಗಾಲದ ಅವಧಿಯಲ್ಲಿ ಮಣ್ಣಿನೊಳಗೆ ಹುದುಗಿಕೊಳ್ಳುತ್ತದೆ. ಅತಿಯಾದ ಮಳೆ, ಶೀತ ತಾಪಮಾನವು ಕೀಟಗಳ ಸಂಖ್ಯೆಯನ್ನು ಋಣಾತ್ಮಕವಾಗಿ ಪ್ರಭಾವಿಸುತ್ತದೆ. ತಡವಾಗಿ ಪಕ್ವವಾಗುವ ಸೇಬು ಪ್ರಭೇದಗಳ ಮೇಲೆ ಇವು ಹೆಚ್ಚು ಪರಿಣಾಮ ಬೀರುತ್ತವೆ. ಹಣ್ಣುಗಳು ಮಾರಾಟವಾಗದ ಕಾರಣ ಇಳುವರಿ ತೀವ್ರವಾಗಿ ಕಡಿಮೆಯಾಗಬಹುದು.


ಮುಂಜಾಗ್ರತಾ ಕ್ರಮಗಳು

  • ನಿಮ್ಮ ತೋಟವನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಎಕರೆಗೆ 45 ರಂತೆ 75 ಅಡಿಗಳ ಅಂತರದಲ್ಲಿ ಫೆರೋಮೋನ್ ಬಲೆಗಳನ್ನು (2-ಫೀನೈಲ್ ಎಥೆನಾಲ್ ಮತ್ತು ಅನೆಥಾಲ್) ಸ್ಥಾಪಿಸಿ.
  • 2-3 ವಾರಗಳ ಮಧ್ಯಂತರದಲ್ಲಿ ಬಲೆಗಳನ್ನು ಬದಲಾಯಿಸಿ.
  • ಉತ್ತಮ ಗಾಳಿಯ ಪ್ರಸರಣವನ್ನು ಒದಗಿಸಲು ಮರದ ಕ್ರೌನ್ ಭಾಗಗಳನ್ನು ತೆಳುಗೊಳಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ