ಸೇಬು

ಸೇಬು ಕಾಂಡ ಕೊರಕ

Apriona cinerea

ಕೀಟ

5 mins to read

ಸಂಕ್ಷಿಪ್ತವಾಗಿ

  • ತೊಗಟೆಯ ಮೇಲಿನ ರಂಧ್ರಗಳಿಂದ ರಾಳವು ಹೊರಸೂಸುತ್ತದೆ.
  • ಸೋಂಕಿತ ಮರಗಳ ಬುಡದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೊರಹಾಕಲ್ಪಟ್ಟ ಫ್ರಾಸ್ (ಕೀಟಗಳ ಹಿಕ್ಕೆಗಳು) ಶೇಖರಣೆ.
  • ಒಣಗಿದ ಎಲೆಗಳು.
  • ಮರದ ಡೈ ಬ್ಯಾಕ್ ( ತುದಿಯಿಂದ ಸಾಯುವುದು).

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಸೇಬು
ಪೇರು ಹಣ್ಣು/ ಮರಸೇಬು

ಸೇಬು

ರೋಗಲಕ್ಷಣಗಳು

ವಯಸ್ಕ ಜೀರುಂಡೆ, ಚಿಗುರುಗಳ ತೊಗಟೆಯನ್ನು ತಿನ್ನುತ್ತದೆ. ಸೋಂಕಿತ ಕಾಂಡದ ಮೇಲೆ, ಮೊಟ್ಟೆ-ಇಡುವುದರಿಂದ ಆದ(ಓವಿಪೊಸಿಶನ್) ಕಲೆ ಗೋಚರಿಸುತ್ತದೆ. ಸಾಮಾನ್ಯವಾಗಿ, ದೊಡ್ಡ ಮರಗಳ ಪ್ರತಿ ಕೊಂಬೆಯ ಮೇಲೆ ಅರ್ಧಚಂದ್ರಾಕಾರದ ಒಂದು ಮಚ್ಚೆಯ ಗುರುತು ಇರುತ್ತದೆ. ಲಾರ್ವಾ ಚಟುವಟಿಕೆಯು ತೊಗಟೆಯ ಅಡಿಯಲ್ಲಿ ಗ್ಯಾಲರಿಗಳು (ಅಂಕುಡೊಂಕಾದ ಬಿಲಗಳು) ಮತ್ತು ಮರದಲ್ಲಿ ಸುರಂಗಗಳ ಉಪಸ್ಥಿತಿಯಿಂದ ಗೊತ್ತಾಗುತ್ತದೆ. ಎಳೆಯ ಸಸ್ಯಗಳಲ್ಲಿ, ತೊಗಟೆಯಲ್ಲಿನ ಮೊಟ್ಟೆ ಇಟ್ಟಿರುವ ರಂಧ್ರಗಳು ಮತ್ತು ಲಾರ್ವಾ ಸುರಂಗಗಳಿಂದ ರಾಳದ ಸ್ರಾವವನ್ನು ನೋಡಬಹುದು ಮತ್ತು ಬೇರುಗಳೊಳಗೆ ಸುರಂಗಗಳನ್ನು ಗಮನಿಸಬಹುದು. ಲಾರ್ವಾ ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ, ಹಿಕ್ಕೆ ಹೊರಹಾಕುವ ರಂಧ್ರಗಳು ಒಂದಕ್ಕೊಂದು ಹತ್ತಿರದಲ್ಲಿರುತ್ತವೆ. ಆದರೆ ಅವು ಗಾತ್ರದಲ್ಲಿ ಬೆಳೆದಂತೆ ಮತ್ತು ಬಲಿತಂತೆ, ಮತ್ತಷ್ಟು ದೂರದಲ್ಲಿರುವ ದೊಡ್ಡ ಹಿಕ್ಕೆ ಹೊರಹಾಕುವ ರಂಧ್ರಗಳು ರೂಪುಗೊಳ್ಳುತ್ತವೆ.

Recommendations

ಜೈವಿಕ ನಿಯಂತ್ರಣ

ಪರಾವಲಂಬಿ ನೆಮಟೋಡ್‌ಗಳಾದ ಸ್ಟಿಯೆನೆರ್ನೆಮಾ ಪ್ರವಾಸೋಸ್ ಮತ್ತು ಹೆಟೆರೊರಾಬ್ಡಿಟಿಸ್ ಎಸ್‌ಪಿಪಿ., ಮತ್ತು ನೈಸರ್ಗಿಕ ಶತ್ರುಗಳಾದ ನಿಯೋಪ್ಲೆಕ್ಟಾನಾ ನೆಮಟೋಡ್‌ಗಳು ಮತ್ತು ಎಲಾಟ್ರಿಡ್ ಜೀರುಂಡೆಗಳನ್ನು ಬಳಸಿ. ಲಾರ್ವಾ ರಂಧ್ರಗಳಿಗೆ ಬ್ಯೂವೇರಿಯಾ ಬಾಸ್ಸಿಯಾನಾವನ್ನು ಚುಚ್ಚುಮದ್ದಿನ ಮೂಲಕ ನೀಡಿ. ISPM 15 ರ ಪ್ರಕಾರ ಮರದ ಪ್ಯಾಕೇಜಿಂಗ್ ವಸ್ತುಗಳನ್ನು ಸಂಸ್ಕರಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಗ್ರಬ್ ಅನ್ನು ಕೊಲ್ಲಲು. ಮೊನೊಕ್ರೊಟೊಫಾಸ್ 36 WSC ಯ 10 ಮಿಲಿ ಚುಚ್ಚುಮದ್ದು ನೀಡಿ ಮತ್ತು ಒದ್ದೆಯಾದ ಜೇಡಿಮಣ್ಣಿನಿಂದ ಪ್ಲಗ್ ಮಾಡಿ.

ಅದಕ್ಕೆ ಏನು ಕಾರಣ

ಮರಿಹುಳು (ಗ್ರಬ್) ಮತ್ತು ಪ್ರೌಢ ಕಾಂಡ ಕೊರೆಯುವ ಕೀಟದಿಂದ ಹಾನಿ ಉಂಟಾಗುತ್ತದೆ, ಆದಾಗ್ಯೂ, ಗ್ರಬ್ ಹೆಚ್ಚು ವಿನಾಶಕಾರಿಯಾಗಿದೆ. ಗ್ರಬ್ ಗಾಢ ಕಂದು ಬಣ್ಣದ ಚಪ್ಪಟೆ ತಲೆಯೊಂದಿಗೆ ತಿಳಿ ಹಳದಿಯಾಗಿರುತ್ತದೆ. ಆದರೆ ವಯಸ್ಕ ಗ್ರಬ್ ತಿಳಿ ಬೂದು ಬಣ್ಣದ್ದಾಗಿದ್ದು ತಳದಲ್ಲಿ ಹಲವಾರು ಕಪ್ಪು ಟ್ಯೂಬರ್ಕಲ್ಸ್ ಹೊಂದಿರುತ್ತದೆ. ಮೊಟ್ಟೆಗಳನ್ನು ಈ ಹಿಂದೆ ಹೆಣ್ಣು ಗ್ರಬ್ ನಿಂದ ಅಗೆಯಲ್ಪಟ್ಟ, ಕೊಂಬೆಗಳ ಮೇಲೆ ಅಥವಾ ತೊಗಟೆಯ ಕೆಳಗಿರುವ ಮುಖ್ಯ ಕಾಂಡದ ಮೇಲಿನ ಮೊಟ್ಟೆ ಇಡುವ ಸೀಳುಗಳಲ್ಲಿ ಇಡಲಾಗುತ್ತದೆ. 5-7 ದಿನಗಳ ನಂತರ ಲಾರ್ವಾಗಳು ಹೊರಬಂದು ಕಾಂಡದಲ್ಲಿ ಕೆಳಮುಖವಾಗಿ ಕೊರೆಯುತ್ತಾ, ಮೇಲ್ಮೈಗೆ ಸುರಂಗಗಳನ್ನು ರಚಿಸುತ್ತವೆ ಮತ್ತು ನಿಯಮಿತ ಮಧ್ಯಂತರದಲ್ಲಿ ರಂಧ್ರಗಳನ್ನು ರಚಿಸಿ ಅದರ ಮೂಲಕ ಹಿಕ್ಕೆಗಳನ್ನು (ಫ್ರಾಸ್) ಹೊರಹಾಕುತ್ತವೆ. ಲಾರ್ವಾವು ಕಾಲುಗಳಿಲ್ಲದ ಕೆನೆ ಬಿಳಿ ಬಣ್ಣದ ಗ್ರಬ್ ಆಗಿದ್ದು, ಉದ್ದವಾದ ಮತ್ತು ಸಿಲಿಂಡರ್ ಆಕಾರ ಹೊಂದಿದೆ. ಇತರ ಕೊರಕಗಳೊಂದಿಗೆ ಹೋಲಿಸಿದರೆ ನಿಯಮಿತವಾಗಿ ಹಿಕ್ಕೆ ಹೊರಹಾಕುವ ರಂಧ್ರಗಳ ಉಪಸ್ಥಿತಿಯಿಂದಾಗಿ ಎ. ಸಿನೆರಿಯಾದ ಲಾರ್ವಾಗಳನ್ನು ಪತ್ತೆಹಚ್ಚಲು ಸುಲಭವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಉತ್ತಮ ಕೃಷಿ ಪದ್ಧತಿ ಅನುಸರಿಸಿ, ತೋಟವನ್ನು ಆರೋಗ್ಯವಾಗಿಡಿ.
  • ಹುಳುಗಳನ್ನು ಹೊಂದಿರುವ ಕೊಂಬೆಗಳು ಮರದ ಕಾಂಡವನ್ನು ಪ್ರವೇಶಿಸುವ ಮೊದಲೇ ಮೇಲ್ವಿಚಾರಣೆ ಮಾಡಿ ಮತ್ತು ಕತ್ತರಿಸಿ.
  • ಮಲ್ಬೆರಿ ಅಥವಾ ಪೇಪರ್ ಮಲ್ಬೆರಿಯಂತಹ ಇತರ ಆಶ್ರಯದಾತ ಮರಗಳನ್ನು ತೆಗೆದುಹಾಕಿ.
  • ಏಕೆಂದರೆ ಅದು ಕೀಟವು ಪ್ರೌಡಾವಸ್ಥೆಗೆ ಬರಲು ಮತ್ತು ಆಹಾರವಾಗಿ ಸಹಾಯ ಮಾಡುತ್ತದೆ.
  • ಬೆಳೆದ ಕೀಟಗಳನ್ನು ಕೈಯಲ್ಲಿ ಹಿಡಿದು ಕೊಂದು ಹಾಕಿ.
  • ಗೂಡಿನ ತೂತಿನೊಳಗೆ ತಂತಿಯನ್ನು ತೂರಿಸುವ ಮೂಲಕ ಲಾರ್ವಾಗಳನ್ನು ಕೊಲ್ಲಿ.
  • ಪೆಟ್ರೋಲ್ ನಲ್ಲಿ ನೆನೆಸಿದ ಹತ್ತಿ ಬತ್ತಿಯಿಂದ ರಂಧ್ರವನ್ನು ಮುಚ್ಚಿ ಮತ್ತು ಅದನ್ನು ಮಣ್ಣಿನಿಂದ ಮುಚ್ಚಿ.
  • ನೈರ್ಮಲ್ಯ ಕಡಿಯುವಿಕೆಯಂತಹ ವ್ಯಾವಸಾಯಿಕ ಅಭ್ಯಾಸಗಳನ್ನು ಬಳಸಿ (ಹಾನಿಗೊಳಗಾದ ಮತ್ತು ಸೋಂಕಿತ ಸಸ್ಯಗಳ ನಾಶ ಅಥವಾ ಸಮರುವಿಕೆ).
  • ಅಲ್ಲದೆ, ಬಲೆ ಮರಗಳನ್ನು ಬಳಸಿ.
  • ಸೋಂಕಿತ ಸ್ಟ್ಯಾಂಡ್‌ಗಳ ಬಳಿ ಹೊಸ ತೋಟಗಳನ್ನು ಸ್ಥಾಪಿಸಬಾರದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ