ಎಲೆಕೋಸು

ಬಾಗ್ರಾಡಾ ಕೀಟ

Bagrada hilaris

ಕೀಟ

5 mins to read

ಸಂಕ್ಷಿಪ್ತವಾಗಿ

  • ಕಾಗದದಂತಹ ಬಿಳಿ ತೇಪೆಗಳು.
  • ಎಲೆಗಳ ಬಾಡುವುದು, ಹಳದಿಯಾಗುವುದು ಮತ್ತು ಒಣಗುವುದು.
  • ಕುಂಠಿತ ಬೆಳವಣಿಗೆ.
  • ಸಣ್ಣ ಪುಷ್ಪ ತೆನೆಗಳು.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಎಲೆಕೋಸು
ಹೂಕೋಸು
ಬದನೆ
ಬೆಂಡೆಕಾಯಿ
ಇನ್ನಷ್ಟು

ಎಲೆಕೋಸು

ರೋಗಲಕ್ಷಣಗಳು

ಎಲೆಗಳು, ಕಾಂಡಗಳು, ಹೂವುಗಳಲ್ಲಿ ಕೀಟ ತಿಂದ ಕಾರಣದಿಂದ ಆದ ಹಾನಿ ಕಾಣುತ್ತದೆ. ಪತಂಗವು ತಿಂದ ಕಾರಣ ಎಲೆಗಳ ಎರಡೂ ಬದಿಗಳಲ್ಲಿ ಬಿಳಿ ಕಲೆಗಳು ಉಳಿದಿರುತ್ತವೆ. ತೆಳುವಾದ ಎಲೆಗಳ ಮೇಲೆ ಕಾಗದದಂತಹ, ಬಿಳಿಯ ತೇಪೆಗಳುಂಟಾಗಬಹುದು. ಸೋಂಕಿತ ಸಸ್ಯಗಳ ಎಲೆಗಳು ಬಾಡುವ, ಹಳದಿಯಾಗುವ ಮತ್ತು ಒಣಗುವ ಲಕ್ಷಣಗಳನ್ನು ತೋರಿಸುತ್ತವೆ. ಸಸ್ಯದ ಬೆಳವಣಿಗೆಯ ಭಾಗಗಳು ಸಾಯಬಹುದು ಮತ್ತು ಎಳೆಯ ಸಸ್ಯಗಳು ದಾಳಿಗೆ ಬಲಿಯಾದರೆ ಅದು ಗಿಡಗಳ ಸಾವಿಗೂ ಕಾರಣವಾಗಬಹುದು. ಹಾನಿಯು ಕೊಯ್ಲು ಮಾಡಿದ ಬೆಳೆಗಳ ಮೇಲೂ ಪರಿಣಾಮ ಬೀರಬಹುದು. ಈ ಬೆಳೆಗಳಲ್ಲಿ ಸಣ್ಣ, ಮಾರಾಟ ಮಾಡಲಾಗದ ಗೆಡ್ಡೆಗಳು ಬೆಳೆಯಬಹುದು ಅಥವಾ ಯಾವುದೇ ಗೆಡ್ಡೆಗಳು ("ಬ್ಲೈಂಡ್" ಸಸ್ಯಗಳು ಎಂದು ಹೇಳಲಾಗುತ್ತದೆ) ಇಲ್ಲದೇ ಹೋಗಬಹುದು. ವಯಸ್ಕ ಕೀಟಗಳು ಮತ್ತು ಮರಿಹುಳುಗಳೆರಡೂ ಸಸ್ಯದ ಎಲ್ಲಾ ಭಾಗಗಳಿಂದ ರಸವನ್ನು ಹೀರುತ್ತವೆ. ವಯಸ್ಕ ಕೀಟಗಳು ಬೆಳೆಯನ್ನು ಹಾಳುಮಾಡುವಂತಹ ಜಿಗುಟಾದ ವಸ್ತುವನ್ನು ಸಹ ಬಿಡುಗಡೆ ಮಾಡುತ್ತವೆ.

Recommendations

ಜೈವಿಕ ನಿಯಂತ್ರಣ

ಗ್ರಿಯಾನ್, ಓಯೆನ್ಸಿರ್ಟಸ್, ಟೆಲಿನೊಮಸ್ ಮತ್ತು ಟ್ರಿಸೊಲ್ಕಸ್‌ನಂತಹ ಹಲವಾರು ಕೀಟಗಳು ಬಾಗ್ರಾಡಾ ಹಿಲಾರಿಸ್‌ನ ಮೊಟ್ಟೆಗಳ ಪರಾವಲಂಬಿಯಾಗಿವೆ. ನೊಣಗಳು ಮತ್ತು ಜೇಡಗಳು ವಯಸ್ಕ ಕೀಟಗಳ ಪರಾವಲಂಬಿಯಾಗಿವೆ. ಸೋಪ್ ದ್ರಾವಣದ ಸ್ಪ್ರೇಗಳು ಕೀಟಗಳ ವಿರುದ್ಧ ಪರಿಣಾಮಕಾರಿ ಎಂದು ಕಂಡುಬಂದಿದೆ. ಮೆಣಸಿನಕಾಯಿ, ಸಾಬೂನು, ಬೆಳ್ಳುಳ್ಳಿ ಮತ್ತು ಪ್ಯಾರಾಫಿನ್ ಅನ್ನು ಮಿಶ್ರಣ ಮಾಡಿ ಮತ್ತು ಅದನ್ನು ನಿಮ್ಮ ಬೆಳೆಗಳಿಗೆ ಸಿಂಪಡಿಸಿ

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಇಮಿಡಾಕ್ಲೋಪ್ರಿಡ್ ನಿಂದ ಸಂಸ್ಕರಿಸಿದ ಬೀಜಗಳನ್ನು ಬಿತ್ತಿ. ಮಧ್ಯಾಹ್ನ ಮತ್ತು ಸಂಜೆಯ ಆರಂಭದಲ್ಲಿ ಎಳೆಯ ಸಸಿಗಳ ಮೇಲೆ ಸಂಪರ್ಕ ಎಲೆ ಕೀಟನಾಶಕಗಳನ್ನು ಬಳಸಿ. ಪೈರೆಥ್ರಾಯ್ಡ್‌ಗಳು, ಪೈರೆಥ್ರಿನ್‌ಗಳು, ನಿಯೋನಿಕೋಟಿನಾಯ್ಡ್‌ಗಳು ಮತ್ತು ಆರ್ಗನೋಫಾಸ್ಫೇಟ್ ಈ ಕೀಟದ ವಿರುದ್ಧ ಪರಿಣಾಮಕಾರಿಯಾಗಿದೆ.

ಅದಕ್ಕೆ ಏನು ಕಾರಣ

ಬಾಗ್ರಾಡಾ ಹಿಲಾರಿಸ್‌ನ ವಯಸ್ಕ ಮತ್ತು ಮರಿಹುಳುಗಳಿಂದ (ನಿಂಪ್ಸ್) ಹಾನಿ ಉಂಟಾಗುತ್ತದೆ. ಇದನ್ನು ಬಾಗ್ರಾಡಾ ಅಥವಾ ಪೇಂಟೆಡ್ ಬಗ್ ಎಂದೂ ಕರೆಯಲಾಗುತ್ತದೆ. ವಯಸ್ಕ ಕೀಟವು ಕಪ್ಪು ಬಣ್ಣದಲ್ಲಿದ್ದು, ಅದರ ದೇಹದ ಮೇಲೆ ಬಿಳಿ ಮತ್ತು ಕಿತ್ತಳೆ ಗುರುತುಗಳನ್ನು ಹೊಂದಿರುತ್ತದೆ. ಇವು ಗುರಾಣಿಯ ಆಕಾರದಲ್ಲಿರುತ್ತವೆ. ಇದು ಸುಮಾರು 5-7 ಮಿಲಿಮೀಟರ್ ಗಳಷ್ಟು ಉದ್ದ ಇರುತ್ತದೆ. ಕೀಟಗಳು ತಮ್ಮ ಮೊಟ್ಟೆಗಳನ್ನು ಎಲೆಗಳ ಮೇಲೆ ಅಥವಾ ಸಸ್ಯಗಳ ಬಳಿ ಮಣ್ಣಿನಲ್ಲಿ ಗುಂಪುಗಳಲ್ಲಿ ಇಡುತ್ತವೆ. ಆರಂಭದಲ್ಲಿ, ಎಳೆ ಕೀಟಗಳು ಯಾವುದೇ ರೆಕ್ಕೆಗಳನ್ನು ಹೊಂದಿರುವುದಿಲ್ಲ ಮತ್ತು ಪ್ರಕಾಶಮಾನವಾದ ಕಿತ್ತಳೆ ಬಣ್ಣದಲ್ಲಿರುತ್ತವೆ. ಅವು ಬೆಳೆದಂತೆ ಕೆಂಪು ಬಣ್ಣಕ್ಕೆ ತಿರುಗುತ್ತವೆ ಮತ್ತು ವಯಸ್ಕ ರೂಪ ಪಡೆಯುವವರೆಗೂ ಕಪ್ಪು ಗುರುತುಗಳನ್ನು ಬೆಳೆಸಿಕೊಳ್ಳುತ್ತಾ ಹೋಗುತ್ತವೆ. ಕೀಟಗಳು ಮುಖ್ಯವಾಗಿ ಬ್ರಾಸಿಕಾ ಕುಟುಂಬದ ಸಸ್ಯಗಳಾದ ಎಲೆಕೋಸು, ಹೂಕೋಸು ಮತ್ತು ಕೇಲ್ ಮೇಲೆ ಪರಿಣಾಮ ಬೀರುತ್ತವೆ. ಈ ಸಸ್ಯಗಳು ಹೆಚ್ಚಾಗಿ ಶಾಖ ಮತ್ತು ನೀರಿನ ಕೊರತೆಯಿಂದ ಬಳಲುತ್ತವೆ. ಕೀಟಗಳು ಎಲೆಗಳಿಂದ ರಸವನ್ನು ಹೀರುವ ಮೂಲಕ ಮತ್ತು ಅವುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮುತ್ತಿಕೊಳ್ಳುವ ಮೂಲಕ ಸಸ್ಯಗಳಿಗೆ ಹಾನಿಯನ್ನುಂಟುಮಾಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಾಟಿ ಮಾಡುವ ಮೊದಲು ನಿಮ್ಮ ಹೊಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ಕೀಟಗಳು ಇವೆಯೇ ಎಂದು ಪರಿಶೀಲಿಸಿ.
  • ನೆಟ್ಟ ನಂತರವೂ ದಿನದ ಬೆಚ್ಚಗಿನ ಅವಧಿಗಳಲ್ಲಿ ನಿಯಮಿತವಾಗಿ ಕೀಟಗಳಿಗಾಗಿ ಪರಿಶೀಲನೆ ಮುಂದುವರಿಸಿ.
  • ಶುದ್ಧವಾದ, ಸೋಂಕುರಹಿತ ಕಸಿಗಳನ್ನು ಮಾತ್ರ ನೆಡಬೇಕು.
  • ಸಸಿಗಳನ್ನು ರಕ್ಷಿಸಲು ತೆಳುವಾದ ಬಲೆಯಂತಹ ವಸ್ತುವನ್ನು ರಕ್ಷಣಾತ್ಮಕ ಕವಚವಾಗಿ ಬಳಸಬಹುದು.
  • ನಿಮ್ಮ ಹೊಲದಿಂದ ಬೆಳೆ ಉಳಿಕೆಗಳು ಮತ್ತು ಕಳೆಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ