ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಎಲೆ ತುಂಡರಿಸುವ ಜೇನುನೊಣ(ಲೀಫ್ ಕಟ್ಟರ್ ಬೀಸ್)

Megachile sp.

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ತಿಂದಿರುವುದರಿಂದ ಆದ ಅರ್ಧವೃತ್ತಾಕಾರದ ಹಾನಿಗಳು.

ಇವುಗಳಲ್ಲಿ ಸಹ ಕಾಣಬಹುದು


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ರೋಗಲಕ್ಷಣಗಳು ಎಲೆಗಳ ಮೇಲೆ ಮಾತ್ರ ಸ್ಪಷ್ಟವಾಗಿರುತ್ತವೆ. ಎಲೆಯ ಅಂಚಿನಲ್ಲಿ ವೃತ್ತಾಕಾರದಿಂದ ಅಂಡಾಕಾರದ ರಂಧ್ರಗಳನ್ನು ಗಮನಿಸಬಹುದು.

Recommendations

ಜೈವಿಕ ನಿಯಂತ್ರಣ

ಯಾವುದೇ ಚಿಕಿತ್ಸೆಯ ಅಗತ್ಯವಿಲ್ಲ.

ರಾಸಾಯನಿಕ ನಿಯಂತ್ರಣ

ಈ ಜೇನುನೊಣಗಳು ನಿಮ್ಮ ಬೆಳೆಗೆ ಉತ್ತಮ ಪರಾಗಸ್ಪರ್ಶಕಗಳಾಗಿರುವುದರಿಂದ, ಯಾವುದೇ ತೀವ್ರ ಅಥವಾ ಕಠಿಣ ನಿರ್ವಹಣಾ ಕ್ರಮಗಳನ್ನು ಕಾರ್ಯಗತಗೊಳಿಸಲು ಶಿಫಾರಸು ಮಾಡುವುದಿಲ್ಲ.

ಅದಕ್ಕೆ ಏನು ಕಾರಣ

ಮೆಗಾಚೈಲ್ ಕುಟುಂಬಕ್ಕೆ ಸೇರಿದ ಏಕಾಂಗಿ ಜೇನುನೊಣಗಳಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಈ ಜೇನುನೊಣಗಳು ಎಲೆಗಳನ್ನು ತುಂಡುಗಳಾಗಿ ಕತ್ತರಿಸಿ ಅವುಗಳನ್ನು ಗೂಡುಗಳಿಗೆ ಸಾಗಿಸುತ್ತವೆ. ವಯಸ್ಕ ಹೆಣ್ಣು ನೊಣ ಕತ್ತರಿಸಿದ ಎಲೆಗಳನ್ನು ಬಳಸಿಕೊಂಡು ಗೂಡುಗಳನ್ನು ನಿರ್ಮಿಸುತ್ತದೆ. ಇದನ್ನು ಕೋಶಗಳಾಗಿ ವಿಂಗಡಿಸುತ್ತದೆ ಮತ್ತು ಪ್ರತಿ ಕೋಶದಲ್ಲಿ ಒಂದೇ ಮೊಟ್ಟೆಯನ್ನು ಇಡುತ್ತದೆ. ಕೆಲವು ಬಾರಿ ಮೌಲ್ಟ್ ಮಾಡಿದ ನಂತರ, ಲಾರ್ವಾಗಳು ಒಂದು ಕಕೂನ್ ರಚಿಸಿ, ಪ್ಯೂಪಾಗಳಾಗುತ್ತವೆ. ನಂತರ ಗೂಡಿನಿಂದ ವಯಸ್ಕ ಕೀಟವಾಗಿ ಹೊರಬರುತ್ತದೆ. ಸಂಯೋಗ ನಡೆಸಿದ ನಂತರ ಗಂಡು ಕೀಟ ಸಾಯುತ್ತದೆ. ಆದರೆ ಹೆಣ್ಣು ಇನ್ನೂ ಕೆಲವು ವಾರಗಳವರೆಗೆ ಬದುಕುಳಿಯುತ್ತದೆ. ಈ ಸಮಯದಲ್ಲಿ ಅವು ಹೊಸ ಗೂಡುಗಳನ್ನು ನಿರ್ಮಿಸುತ್ತವೆ. ಇವು ಯಾವುದೇ ಆರ್ಥಿಕ ಹಾನಿಯನ್ನುಂಟು ಮಾಡುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ಯಾವುದೇ ತಡೆಗಟ್ಟುವ ಕ್ರಮಗಳ ಅಗತ್ಯವಿಲ್ಲ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ