ಮಾವು

ಸ್ಲಗ್ ಕ್ಯಾಟರ್ಪಿಲ್ಲರ್ ಚಿಟ್ಟೆ

Limacodidae sp.

ಕೀಟ

5 mins to read

ಸಂಕ್ಷಿಪ್ತವಾಗಿ

  • ಕೀಟ ತಿಂದ ಎಲೆಗಳು.
  • ಕ್ಯಾಟರ್ಪಿಲ್ಲರ್ ಇರುವ ಸುಳುಹು.


ಮಾವು

ರೋಗಲಕ್ಷಣಗಳು

ಸ್ಲಗ್ ಮರಿಹುಳುಗಳು ಎಲೆಗಳನ್ನು ತಿನ್ನುವ ಮೂಲಕ ಅವುಗಳನ್ನು ನಾಶ ಮಾಡುತ್ತವೆ. ಮರಿಹುಳುಗಳು ದೊಡ್ಡ ಪ್ರಮಾಣದ ಸಸ್ಯ ಅಂಗಾಂಶವನ್ನು ತಿನ್ನುತ್ತವೆ ಮತ್ತು ಸಿರೆಗಳು ಮತ್ತು ಕಾಂಡಗಳನ್ನು ಮಾತ್ರ ಬಿಡುತ್ತವೆ. ಪರಿಣಾಮವಾಗಿ, ಸಸ್ಯಗಳು ಸರಿಯಾಗಿ ದ್ಯುತಿಸಂಶ್ಲೇಷಣೆ ಮಾಡಲು ಸಾಧ್ಯವಾಗುವುದಿಲ್ಲ, ಇದರಿಂದ ಬೆಳೆಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ. ಇದರರ್ಥ ಬಾಧಿತ ಸಸ್ಯಗಳು ಸ್ಲಗ್ ಕ್ಯಾಟರ್ಪಿಲ್ಲರ್ಗಳಿಂದ ಹಾನಿಗೊಳಗಾದರೆ ಅವುಗಳು ಕಡಿಮೆ ಹಣ್ಣುಗಳನ್ನು ಉತ್ಪಾದಿಸಬಹುದು.

Recommendations

ಜೈವಿಕ ನಿಯಂತ್ರಣ

ರಾಸಾಯನಿಕಗಳಿಲ್ಲದೆ ಕೀಟವನ್ನು ನಿಯಂತ್ರಿಸಲು, ಪೀಡಿತ ಸಸ್ಯಗಳಿಂದ ಮರಿಹುಳುಗಳನ್ನು ಕೈಯಿಂದ ತೆಗೆದುಹಾಕುವುದು ಒಂದು ಆಯ್ಕೆಯಾಗಿದೆ. ಇದನ್ನು ನೇರವಾಗಿ ಮುಟ್ಟದೆ, ಒಂದು ಜೋಡಿ ಟ್ವೀಜರ್ ಅಥವಾ ಟೇಪ್ ತುಂಡನ್ನು ಬಳಸಿ ಮಾಡಬೇಕು. ಬೆಳೆದ ಪತಂಗಗಳನ್ನು ಬಲೆಗೆ ಬೀಳಿಸಲು ಮತ್ತು ಸಂಗ್ರಹಿಸಲು ಬೆಳಕಿನ ಬಲೆಗಳನ್ನು ಸಹ ಸ್ಥಾಪಿಸಬಹುದು. ಕೀಟವನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಪ್ರತಿ ಹೆಕ್ಟೇರಿಗೆ ಸುಮಾರು 5 ಬೆಳಕಿನ ಬಲೆಗಳನ್ನು ಅಳವಡಿಸಬಹುದು.

ರಾಸಾಯನಿಕ ನಿಯಂತ್ರಣ

ನಿಮ್ಮ ನಿರ್ದಿಷ್ಟ ಸನ್ನಿವೇಶಕ್ಕೆ ಸೂಕ್ತವಾದ ಕೀಟನಾಶಕವನ್ನು ಆಯ್ಕೆಮಾಡಿ. ಲೇಬಲ್ ಸೂಚನೆಗಳನ್ನು ಎಚ್ಚರಿಕೆಯಿಂದ ಅನುಸರಿಸಿ ಮತ್ತು ಅದನ್ನು ಬಳಸುವಾಗ ರಕ್ಷಣಾತ್ಮಕ ಬಟ್ಟೆ ಮತ್ತು ಕೈಗವಸುಗಳನ್ನು ಧರಿಸಿ. ಕಾರ್ಬರಿಲ್ ಮತ್ತು ಡಿಕ್ಲೋರ್ವೋಸ್ ಎಂಬ ಎರಡು ಸಕ್ರಿಯ ಪದಾರ್ಥಗಳು ಉತ್ತಮ ಪರಿಣಾಮವನ್ನು ಬೀರುತ್ತವೆ ಎಂದು ವರದಿಯಾಗಿದೆ.

ಅದಕ್ಕೆ ಏನು ಕಾರಣ

ಸ್ಲಗ್ ಕ್ಯಾಟರ್‌ಪಿಲ್ಲರ್‌ಗಳಿಂದ ಉಂಟಾಗುವ ಹಾನಿಗೆ ಲಿಮಾಕೊಡೈಡೆ ಕುಟುಂಬಕ್ಕೆ ಸೇರಿದ ಪತಂಗಗಳ ಕ್ಯಾಟರ್ಪಿಲ್ಲರ್ ಕಾರಣ. ಈ ಕ್ಯಾಟರ್‌ಪಿಲ್ಲರ್‌ಗಳು ಸ್ಲಗ್ ನಂತೆ ಕಾಣುತ್ತವೆ ಮತ್ತು ಈ ಕುಟುಂಬದಲ್ಲಿನ ಹೆಚ್ಚಿನ ಜಾತಿಗಳು ಮಾನವರಿಗೆ ಕುಟುಕಿದಾಗ ಆಗುವ ನೋವಿನಂದಾಗಿ ಸಂಭವನೀಯ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತವೆ. ಅವು ಉಷ್ಣವಲಯದಲ್ಲಿ ವರ್ಷಪೂರ್ತಿ ಹೇರಳವಾಗಿರುತ್ತವೆ. ಸ್ಲಗ್ ಕ್ಯಾಟರ್ಪಿಲ್ಲರ್‌ಗಳು ತಮ್ಮ ಜೀವನ ಚಕ್ರದಲ್ಲಿ ಹಲವಾರು ಹಂತಗಳನ್ನು ಹಾದು ಹೋಗುತ್ತವೆ. ಇದು ಸಸ್ಯಗಳ ಎಲೆಗಳ ಮೇಲೆ ಇಡುವ ಮೊಟ್ಟೆಗಳಿಂದ ಪ್ರಾರಂಭವಾಗುತ್ತದೆ. ಮೊಟ್ಟೆಯೊಡೆದ ನಂತರ, ಎಳೆಯ ಮರಿಹುಳುಗಳು ಎಲೆಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಬೆಳವಣಿಗೆಯ ಸಮಯದಲ್ಲಿ, ಅವು ತಮ್ಮ ಚರ್ಮವನ್ನು ಹಲವಾರು ಬಾರಿ ನವೀಕರಿಸುತ್ತವೆ ಮತ್ತು ಅದನ್ನು ಹೊಸದರೊಂದಿಗೆ ಬದಲಾಯಿಸುತ್ತವೆ. ಅಂತಿಮವಾಗಿ,ಅವು ತಮ್ಮ ಸುತ್ತಲೂ ಕಕೂನ್ಅನ್ನು ರೂಪಿಸುತ್ತವೆ ಮತ್ತು ಪ್ಯೂಪೇಟ್ ಆಗುತ್ತವೆ. ಸ್ವಲ್ಪ ಸಮಯದ ನಂತರ, ಬೆಳೆದ ಪತಂಗಗಳು ಕಕೂನ್‌ಗಳಿಂದ ಹೊರಬರುತ್ತವೆ ಮತ್ತು ಮತ್ತೆ ಜೀವನಚಕ್ರವನ್ನು ಪ್ರಾರಂಭಿಸುತ್ತವೆ. ಈ ಕೀಟಗಳು ತಾಳೆ ಮರಗಳ ವಿಷಯದಲ್ಲಿ ಹೆಚ್ಚಿನ ಪರಿಸರ ಪ್ರಾಮುಖ್ಯತೆಯನ್ನು ಹೊಂದಿವೆ. ಏಕೆಂದರೆ ಅವು ಗಂಭೀರವಾದ ಎಲೆ ಕಳಚುವಿಕೆಯನ್ನು ಉಂಟುಮಾಡಬಹುದು. ಬೆಳೆಗಳಿಗೆ ಹಾನಿಯನ್ನು ತಡೆಗಟ್ಟಲು ಮತ್ತು ಸಸ್ಯಗಳ ಆರೋಗ್ಯಕರ ಬೆಳವಣಿಗೆಯನ್ನು ಖಚಿತಪಡಿಸಿಕೊಳ್ಳಲು ಈ ಕೀಟಗಳನ್ನು ಮೊದಲೇ ಗುರುತಿಸುವುದು ಮತ್ತು ನಿಯಂತ್ರಿಸುವುದು ಮುಖ್ಯವಾಗಿದೆ.


ಮುಂಜಾಗ್ರತಾ ಕ್ರಮಗಳು

  • ಸ್ಲಗ್ ಕ್ಯಾಟರ್ಪಿಲ್ಲರ್ ಬಾಧೆಯನ್ನು ತಡೆಗಟ್ಟಲು, ನಿಮ್ಮ ಸಸ್ಯಗಳನ್ನು ಆರೋಗ್ಯಕರವಾಗಿ ಮತ್ತು ಹಾನಿಯಾಗದಂತೆ ನೋಡಿಕೊಳ್ಳುವುದು ಮುಖ್ಯವಾಗಿದೆ.
  • ಶುದ್ಧ, ಮಾನ್ಯತೆ ಪಡೆದ ಪೂರೈಕೆದಾರರಿಂದ ಮಾತ್ರ ಪ್ರಮಾಣೀಕರಿಸಿದ ಆದ್ಯತೆಯ ಸಸ್ಯ ವಸ್ತುಗಳನ್ನು ಖರೀದಿಸಿ.
  • ಕೀಟವನ್ನು ಮೊದಲೇ ಗುರುತಿಸುವುದು ಬಹಳ ಮುಖ್ಯ.
  • ಎಲೆಗಳಲ್ಲಿ ಕೀಟ ಅಗಿದಿರುವ ತೂತುಗಳ ಬಗ್ಗೆ ಗಮನವಿರಲಿ.
  • ಇದು ಮರಿಹುಳುಗಳ ಉಪಸ್ಥಿತಿಯನ್ನು ಸೂಚಿಸುತ್ತದೆ.
  • ಸ್ಲಗ್ ಕ್ಯಾಟರ್ಪಿಲ್ಲರ್ ಚಿಟ್ಟೆ ನಿಜವಾಗಲೂ ಮುತ್ತಿಕೊಂಡಿದೆ ಎಂದು ಖಚಿತಪಡಿಸಿಕೊಳ್ಳಲು, ಪತಂಗಗಳು ಮತ್ತು ಮರಿಹುಳುಗಳೂ ಸಹ ಹೊಲದಲ್ಲಿ ಕಂಡುಬರಬೇಕು.
  • ಅಂತಹ ಎಲೆಗಳ ಹಾನಿ ಮತ್ತು ಮರಗಳ ವಿರೂಪತೆಯು ಇತರ ಕೀಟ ಬಾಧೆಯಿಂದಲೂ ಉಂಟಾಗಬಹುದು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ