ಮಾವು

ಮಾವಿನ ಎಲೆ ವೆಬ್ಬರ್

Orthaga euadrusalis

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಕೆರೆದಂತಹ ಮೇಲ್ಮೈಗಳು ಕಾಣುತ್ತವೆ.
  • ಕೋಮಲ ಚಿಗುರುಗಳು ಮತ್ತು ಎಲೆಗಳು ಬಲೆ ಕಟ್ಟುತ್ತವೆ.
  • ಎಲೆಗಳು ಒಣ ಮತ್ತು ಕಂದು ಬಣ್ಣದಲ್ಲಿ ಕಾಣಿಸಿಕೊಳ್ಳುತ್ತವೆ.
  • ಕಪ್ಪು ಮತ್ತು ಬಿಳಿ ಪಟ್ಟಿಯಂತಹ ರೇಖೆಗಳೊಂದಿಗೆ ಹಸಿರು ಬಣ್ಣದ ಲಾರ್ವಾಗಳು ಕಾಣುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ರೋಗಲಕ್ಷಣಗಳು ಎಲೆಗಳಲ್ಲಿ ಹೆಚ್ಚು ಎದ್ದುಕಾಣುತ್ತವೆ. ನಾಳಗಳ ನಡುವೆ ಎಪಿಡರ್ಮಲ್ ಮೇಲ್ಮೈಯನ್ನು ಕೆರೆದು ಲಾರ್ವಾಗಳು ಕೋಮಲ ಎಲೆಗಳನ್ನು ತಿನ್ನುತ್ತವೆ. ನಂತರ ಅವು ಈ ಎಲೆಗಳನ್ನೇ ಹೊಟ್ಟೆಬಾಕರಂತೆ ತಿನ್ನುತ್ತವೆ. ಮಧ್ಯನಾಳ ಮತ್ತು ನಾಳಗಳನ್ನು ಮಾತ್ರ ಉಳಿಸುತ್ತದೆ. ಇದು ಒಣದಾದ, ಬಲೆಯಾದ ಮತ್ತು ಒಣಗಿದ ಎಲೆಗಳ ಸಮೂಹಗಳಿಗೆ ಕಾರಣವಾಗುತ್ತದೆ. ತೀವ್ರವಾದ ಮುತ್ತುವಿಕೆ ಇದ್ದರೆ ಚಿಗುರುಗಳು ಒಣಗುತ್ತವೆ. ಇದು ದ್ಯುತಿಸಂಶ್ಲೇಷಣೆಯನ್ನು ನಿರ್ಬಂಧಿಸುತ್ತದೆ. ಪೀಡಿತ ಮರಗಳು ಅನಾರೋಗ್ಯಕರವಾಗಿ ಕಾಣುತ್ತವೆ ಮತ್ತು ಅವುಗಳ ಕಂದಾದ, ಒಣಗಿದ ಮತ್ತು ಗುಂಪು ಗುಂಪಾದ ಎಲೆಗಳಿಂದ ಅವುಗಳನ್ನು ಸುಲಭವಾಗಿ ಪತ್ತೆ ಮಾಡಬಹುದು. ಹೂವಿನ ಕಾಂಡದ ರಚನೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಇದು ಹೂಬಿಡುವ ಮತ್ತು ಹಣ್ಣು ಬಿಡುವ ಪ್ರಕ್ರಿಯೆಗಳ ಮೇಲೆ ಪರಿಣಾಮ ಬೀರುತ್ತದೆ.

Recommendations

ಜೈವಿಕ ನಿಯಂತ್ರಣ

ಎಲೆ ವೆಬ್ಬರ್ ಪರಾವಲಂಬಿಗಳ ನೈಸರ್ಗಿಕ ಶತ್ರುಗಳಾದ ಬ್ರಾಕಿಮೆರಿಯಾ ಲಾಸಸ್, ಹಾರ್ಮಿಯಸ್ ಎಸ್ಪಿ, ಪೀಡಿಯೊಬಿಯಸ್ ಬ್ರೂಸಿಸಿಡಾ, ಮತ್ತು ನೈಸರ್ಗಿಕ ಪರಭಕ್ಷಕಗಳಾದ ಕ್ಯಾರಾಬಿಡ್ ಜೀರುಂಡೆ ಮತ್ತು ರಿಡ್ಯೂವಿಡ್ ಬಗ್ ಬಳಸಿ. ಹೆಚ್ಚಿನ ಆರ್ದ್ರತೆಯ ಅವಧಿಯಲ್ಲಿ ಬ್ಯೂವೇರಿಯಾ ಬಾಸ್ಸಿಯಾನಾವನ್ನು ಎರಡು ಅಥವಾ ಮೂರು ಬಾರಿ ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕ್ವಿನಾಲ್ಫೋಸ್ (0.05%) ನೊಂದಿಗೆ 15 ದಿನಗಳ ಅಂತರದಲ್ಲಿ ಮೂರು ಸಿಂಡಪಣೆಗಳನ್ನು ಶಿಫಾರಸು ಮಾಡಲಾಗುತ್ತದೆ. ಲ್ಯಾಂಬ್ಡಾ-ಸಿಹಲೋಥ್ರಿನ್ 5 ಇಸಿ (2 ಮಿಲಿ / ಲೀಟರ್ ನೀರು) ಅಥವಾ ಕ್ಲೋಸೊಪಿರಿಫಾಸ್ (2 ಮಿಲಿ / ಲೀ), ಅಸೆಫೇಟ್ (1.5 ಗ್ರಾಂ / ಲೀ) ಆಧಾರಿತ ರಾಸಾಯನಿಕಗಳನ್ನು ಸಿಂಪಡಿಸಿ.

ಅದಕ್ಕೆ ಏನು ಕಾರಣ

ಒರ್ಥಾಗಾ ಯುಡ್ರುಸಾಲಿಸ್‌ನ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ಹೆಣ್ಣು ಪತಂಗಗಳು ಮಾವಿನ ಎಲೆಗಳ ಮೇಲೆ ಹಳದಿ ಮಿಶ್ರಿತ ಹಸಿರು ಮಂದ ಬಣ್ಣದ ಮೊಟ್ಟೆಗಳನ್ನು ಇಡುತ್ತವೆ. ಅವು ಸಾಮಾನ್ಯವಾಗಿ ಒಂದು ವಾರದೊಳಗೆ ಒಡೆದು ಮರಿಗಳು ಹೊರಬರುತ್ತವೆ. ಹವಾಮಾನ ಪರಿಸ್ಥಿತಿಗಳಿಗೆ ಅನುಗುಣವಾಗಿ, ಲಾರ್ವಾ ಹಂತವು 15 ರಿಂದ 30 ದಿನಗಳ ನಡುವೆ ಇರಬಹುದು. ಏಕೆಂದರೆ ಸಾಮಾನ್ಯವಾಗಿ ಐದು ಲಾರ್ವಾ ಇನ್‌ಸ್ಟಾರ್‌ಗಳಿರುತ್ತವೆ. ಕೊನೆಯ ಇನ್ಸ್ಟಾರ್ ನಂತರ, ಲಾರ್ವಾಗಳು ಬಲೆಯಲ್ಲೇ ಕೋಶವಾಸ್ಥೆಗೆ ತೆರಳುತ್ತವೆ, ಮತ್ತು ಜೋರಾಗಿ ನೆಲದ ಮೇಲೆ ಬೀಳುತ್ತವೆ ಮತ್ತು ಮಣ್ಣಿನಲ್ಲಿ ಪ್ರಕ್ರಿಯೆಯನ್ನು ಮುಂದುವರಿಸುತ್ತವೆ. ಕೋಶಾವಧಿಯು ತಾಪಮಾನವನ್ನು ಅವಲಂಬಿಸಿ 5 ರಿಂದ 15 ದಿನಗಳವರೆಗೆ ಬದಲಾಗಬಹುದು. ದಟ್ಟವಾಗಿ ನೆಟ್ಟ ತೋಟಗಳಲ್ಲಿ. ಸಾಮಾನ್ಯ-ಅಂತರವಿರುವ ಮತ್ತು ಮೇಲಾವರಣವನ್ನು ಸರಿಯಾಗಿ ನಿರ್ವಹಿಸಿದ ತೋಟಗಳಿಗಿಂತ ಹೆಚ್ಚಿನ ಮುತ್ತುವಿಕೆ ಪ್ರಮಾಣವನ್ನು ನೋಡಬಹುದು. ಕೀಟಗಳ ಮುತ್ತುವಿಕೆಯು ಸಾಮಾನ್ಯವಾಗಿ ಏಪ್ರಿಲ್ ತಿಂಗಳಿನಿಂದ ಪ್ರಾರಂಭವಾಗುತ್ತದೆ ಮತ್ತು ಡಿಸೆಂಬರ್ ವರೆಗೆ ಮುಂದುವರಿಯುತ್ತದೆ. ಸಾಪೇಕ್ಷ ಆರ್ದ್ರತೆಯು ಎಲೆ ವೆಬ್ಬರ್ ಸಂಖ್ಯೆಯೊಂದಿಗೆ ಗಮನಾರ್ಹ ಸಂಬಂಧ ಹೊಂದಿದೆ.


ಮುಂಜಾಗ್ರತಾ ಕ್ರಮಗಳು

  • ತಿಂಗಳಿಗೊಮ್ಮೆ ಹಣ್ಣಿನ ತೋಟದ ಮೇಲ್ವಿಚಾರಣೆ ಮಾಡಿ.
  • ಸೋಂಕಿತ ಚಿಗುರುಗಳನ್ನು ಯಾಂತ್ರಿಕವಾಗಿ ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟುಹಾಕಿ.
  • ಬಲೆಯಾದ, ಮುತ್ತಿಗೆಗೆ ಒಳಗಾದ ಎಲೆಗಳನ್ನು ತೆಗೆದುಹಾಕಲು ಮರಗಳ ಬುಡದ ಸುತ್ತಲೂ ಮಣ್ಣನ್ನು ಹಾಕಿ.
  • ಮರದ ಮೇಲಾವರಣವು ಎಲ್ಲಾ ಕಡೆಗಳಿಂದ ತೆರೆದಿರುವಂತೆ, ಸಾಕಷ್ಟು ಗಾಳಿ ಮತ್ತು ಸೂರ್ಯನ ಬೆಳಕು ಒಳಗೆ ಬರುವಂತೆ ದಟ್ಟವಾದ ತೋಟಗಳನ್ನು ಸಮರಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ