ದಾಳಿಂಬೆ

ದಾಳಿಂಬೆ ಹಣ್ಣು ಕೊರಕ

Deudorix Isocrates

ಕೀಟ

5 mins to read

ಸಂಕ್ಷಿಪ್ತವಾಗಿ

  • ಆರಂಭಿಕ ಹಂತದಲ್ಲಿ ಹಣ್ಣು ಆರೋಗ್ಯಕರವಾಗಿ ಕಾಣುತ್ತದೆ.
  • ನಂತರದ ಹಂತಗಳಲ್ಲಿ, ಹಣ್ಣು ಕೊಳೆತು, ಉದುರುತ್ತದೆ.
  • ನೀಲಿ ಕಂದು ಚಿಟ್ಟೆ.
  • ಸಂಪೂರ್ಣವಾಗಿ ಬೆಳೆದ ಲಾರ್ವಾಗಳು ಸಣ್ಣ ಕೂದಲು ಮತ್ತು ಬಿಳಿ ತೇಪೆಗಳೊಂದಿಗೆ ಗಾಢ ಕಂದು ಬಣ್ಣದಲ್ಲಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಸೀಬೆಕಾಯಿ
ದಾಳಿಂಬೆ

ದಾಳಿಂಬೆ

ರೋಗಲಕ್ಷಣಗಳು

ಮುತ್ತಿಗೆಯ ನಂತರದ ಹಂತಗಳಲ್ಲಿ ರೋಗಲಕ್ಷಣಗಳು ಹೆಚ್ಚಾಗಿ ಗೋಚರಿಸುತ್ತವೆ. ಹೂವಿನ ಮೊಗ್ಗುಗಳ ಮತ್ತು ಹಣ್ಣುಗಳ ಮೇಲೆ ಪ್ರಧಾನವಾಗಿ ಪರಿಣಾಮ ಕಂಡುಬರುತ್ತದೆ. ಹಣ್ಣುಗಳು ಮೊದಲಿಗೆ ಆರೋಗ್ಯಕರವಾಗಿ ಕಾಣಿಸುತ್ತವೆ, ಏಕೆಂದರೆ ಪ್ರವೇಶ ರಂಧ್ರಗಳು ಹಣ್ಣಿನ ರಸದಿಂದ ಗುಣವಾಗುತ್ತವೆ. ರೋಗವು ಮುಂದುವರಿದಂತೆ, ಲಾರ್ವಾ ಹಂತದ ರಂಧ್ರಗಳನ್ನು ಲಾರ್ವಾಗಳ ಕೊನೆಯ ಭಾಗದಿಂದ ಮುಚ್ಚಿರುವುದರ ಮೂಲಕ ಕಂಡುಹಿಡಿಯಬಹುದು. ಸಂಪೂರ್ಣವಾಗಿ ಬೆಳೆದ ಲಾರ್ವಾಗಳು ಗಟ್ಟಿಯಾದ ಸಿಪ್ಪೆಯನ್ನು ಕೊರೆದು ಹಣ್ಣಿನಿಂದ ನಿರ್ಗಮಿಸುತ್ತದೆ. ಮತ್ತು ಹಣ್ಣು ಅಥವಾ ಕಾಂಡವನ್ನು ಮುಖ್ಯ ಶಾಖೆಗೆ ಕಟ್ಟುವ ಬಲೆಯನ್ನು ಹೆಣೆಯುತ್ತದೆ. ಪೀಡಿತ ಹಣ್ಣುಗಳು ತರುವಾಯ ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದಿಂದ ಆಕ್ರಮಣಕ್ಕೆ ಒಳಗಾಗುತ್ತವೆ. ಇದರಿಂದಾಗಿ ಕೊಳೆತು, ಅಂತಿಮವಾಗಿ ಉದುರುತ್ತವೆ. ಮರಿಹುಳುಗಳ ಮಲವಿಸರ್ಜನೆಯಿಂದಾಗಿ ಹಣ್ಣುಗಳು ಅಸಹ್ಯವಾದ ವಾಸನೆಯನ್ನು ಉಂಟುಮಾಡುತ್ತವೆ. ಮಲವು ಪ್ರವೇಶ ರಂಧ್ರಗಳಿಂದ ಹೊರಬಂದು ಅಂತಿಮವಾಗಿ ಒಣಗುತ್ತದೆ. ಇದರಿಂದಾಗಿ ಹಣ್ಣುಗಳು ಮಾನವನ ಬಳಕೆಗೆ ಅನರ್ಹವಾಗುತ್ತವೆ.

Recommendations

ಜೈವಿಕ ನಿಯಂತ್ರಣ

ಕೀಟವನ್ನು ನಿಯಂತ್ರಿಸುವಲ್ಲಿ ಪರಾವಲಂಬಿ ಟ್ರೈಕೊಗ್ರಾಮಾ ಪ್ರಭೇದವು ಪರಿಣಾಮಕಾರಿಯಾಗಿದೆ. 10 ದಿನಗಳ ಅಂತರದಲ್ಲಿ ಅವುಗಳನ್ನು 1.0 ಲಕ್ಷ / ಎಕರೆಗೆ ದರದಲ್ಲಿ ನಾಲ್ಕು ಬಾರಿ ಬಿಡುಗಡೆ ಮಾಡಿ. ಅವುಗಳನ್ನು ಮಧ್ಯದಲ್ಲಿ ಮತ್ತು ಹೊಲದ ಅಂಚುಗಳಲ್ಲಿ ಇರಿಸಬಹುದು. ಡಿ. ಐಸೊಕ್ರೇಟ್ಸ್‌ನ್ನು ತಿನ್ನುವ ಲೇಸ್‌ವಿಂಗ್, ಲೇಡಿ ಬರ್ಡ್ ಜೀರುಂಡೆ, ಜೇಡ, ಕೆಂಪು ಇರುವೆ, ಡ್ರ್ಯಾಗನ್‌ಫ್ಲೈ, ರಾಬರ್ ನೊಣ, ರಿಡ್ಯೂವಿಡ್ ಬಗ್ ಮತ್ತು ಪ್ರೇಯಿಂಗ್ ಮಾಂಟಿಸ್. ಇವಲ್ಲದೆ, ಕಣಜಗಳ ಜಾತಿಗಳು, ಬಿಗ್ ಅಯಡ್ ಬಗ್ (ಜಿಯೋಕೊರಿಸ್ ಎಸ್ಪಿ), ಇಯರ್ವಿಗ್, ನೆಲದ ಜೀರುಂಡೆ, ಪೆಂಟಾಟೊಮಿಡ್ ಬಗ್ (ಇಕಾಂಥೆಕೋನಾ ಫರ್ಸೆಲ್ಲಾಟಾ) ಹಣ್ಣು ಕೊರಕದ ವಿರುದ್ಧ ಪರಿಣಾಮಕಾರಿ ಎಂದು ವರದಿಯಾಗಿದೆ. ಪಕ್ಷಿ ಪ್ರಭೇದಗಳು ಮರಿಹುಳುಗಳನ್ನು ಸಹ ತಿನ್ನುತ್ತವೆ. ಹಣ್ಣಿನ ಕೊರಕ ಕ್ಯಾಲಿಕ್ಸ್ ಕಪ್‌ನಲ್ಲಿ ಮೊಟ್ಟೆಗಳನ್ನು ಇಡುವುದರಿಂದ ಪರಾಗಸ್ಪರ್ಶದ ನಂತರ ಕ್ಯಾಲಿಕ್ಸ್ ಕಪ್ ಅನ್ನು ಕತ್ತರಿಸಬೇಕು ಮತ್ತು ಹೂಬಿಡುವ ಹಂತದಲ್ಲಿ ಬೇವಿನ ಎಣ್ಣೆ (3%) ಹಚ್ಚಬೇಕು. ಕೀಟದಿಂದ ರಕ್ಷಿಸಲು ಹಣ್ಣಿನ ಬುಡದ ಸುತ್ತಲೂ ಸ್ವಚ್ಛವಾದ ಮಣ್ಣನ್ನು (ಸೂರ್ಯನಿಂದ ಬಿಸಿಯಾದ) ಇರಿಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಹೂಬಿಡುವ ಹಂತದಲ್ಲಿ, ಹೂಬಿಡುವ ಪ್ರಾರಂಭದಿಂದ ಕೊಯ್ಲಿನವರೆಗೆ ಹಣ್ಣಿನ ಕೊರಕ ಇದ್ದರೆ 15 ದಿನಗಳ ಅಂತರದಲ್ಲಿ ಆಜಾಡಿರಕ್ಟಿನ್ 1500 ಪಿಪಿಎಂ @ 3.0 ಮಿಲಿ / ಲೀಟರ್ ನೀರನ್ನು ಸಿಂಪಡಿಸಿ. ಕೆಳಗಿನ ರಾಸಾಯನಿಕಗಳಲ್ಲಿ ಒಂದನ್ನು ಸಿಂಪಡಿಸಿ: ಹೂಬಿಡುವಿಕೆಯಿಂದ ಹಣ್ಣಿನ ಬೆಳವಣಿಗೆಯವರೆಗೆ ಹದಿನೈದು ದಿನಗಳ ಅಂತರದಲ್ಲಿ ಡೈಮೆಥೊಯೇಟ್ (2 ಮಿಲಿ / ಲೀ), ಇಂಡೊಕ್ಸಾಕಾರ್ಬ್ (1 ಗ್ರಾಂ / ಲೀ), ಸೈಪರ್‌ಮೆಥ್ರಿನ್ (1.5 ಮಿಲಿ / ಲೀ) ಅಥವಾ ಪ್ರೊಫೆನೋಫೋಸ್ (2 ಮಿಲಿ / ಲೀ). ದಾಳಿಂಬೆ ಹಣ್ಣು ಕೊರಕದ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಲ್ಯಾಂಬ್ಡಾ-ಸಿಹಲೋಥ್ರಿನ್‌ನ ರಾಸಾಯನಿಕ ಅನ್ವಯಿಕೆಗಳನ್ನು ಸಹ ಶಿಫಾರಸು ಮಾಡಲಾಗಿದೆ. ಎಮ್ಯಾಮೆಕ್ಟಿನ್ ಬೆಂಜೊಯೇಟ್ 5 ಎಸ್‌ಜಿಯ ಎರಡು ದ್ರವೌಷಧಗಳು 0.25 ಗ್ರಾಂ / ಲೀಟರ್ ನೀರಿನ ದರದಲ್ಲಿ ಅಥವಾ ಸ್ಪಿನೋಸಾಡ್ 45 ಎಸ್‌ಸಿ 0.20 ಮಿಲಿ / ಲೀಟರ್ ನೀರಿನ ದರದಲ್ಲಿ ಬಳಸಿದರೆ ಹಣ್ಣಿನ ಹಾನಿಯಲ್ಲಿ ಅತೀ ಹೆಚ್ಚು ಇಳಿಕೆ ದಾಖಲಿಸಬಹುದು.

ಅದಕ್ಕೆ ಏನು ಕಾರಣ

ದಾಳಿಂಬೆಗಳಿಗೆ ಹಾನಿ ಡ್ಯೂಡೋರಿಕ್ಸ್ ಐಸೊಕ್ರೇಟ್ಸ್‌ನ ಲಾರ್ವಾಗಳಿಂದ ಉಂಟಾಗುತ್ತದೆ. ಇದನ್ನು ಸಾಮಾನ್ಯವಾಗಿ ದಾಳಿಂಬೆ ಚಿಟ್ಟೆ ಅಥವಾ ದಾಳಿಂಬೆ ಹಣ್ಣು ಕೊರಕ ಎಂದು ಕರೆಯಲಾಗುತ್ತದೆ. ಇದು ದಾಳಿಂಬೆ ಹಣ್ಣಿನ ಅತ್ಯಂತ ವಿನಾಶಕಾರಿ ಕೀಟವಾಗಿದೆ. ಚಿಟ್ಟೆಗಳು ಹಗಲಿನ ವೇಳೆಯಲ್ಲಿ ಸಕ್ರಿಯವಾಗಿರುತ್ತವೆ ಮತ್ತು ಹಣ್ಣುಗಳು, ಕೋಮಲ ಎಲೆಗಳು, ಹೂವಿನ ಮೊಗ್ಗುಗಳು ಮತ್ತು ತೊಟ್ಟುಗಳ ಮೇಲೆ ಒಂದೊಂದೇ ಮೊಟ್ಟೆಗಳನ್ನು ಇಡುತ್ತವೆ. ನಿಯಂತ್ರಿತ ಪರಿಸ್ಥಿತಿಗಳಲ್ಲಿ ಹೆಣ್ಣು 20.5 ಮೊಟ್ಟೆಗಳನ್ನು ಸರಾಸರಿ 6.35 ಮೊಟ್ಟೆಗಳನ್ನು ಇಡುತ್ತದೆ. ಡಿ. ಐಸೊಕ್ರೇಟ್ಸ್ ಮೊಟ್ಟೆಯಿಂದ ವಯಸ್ಕ ಕೀಟವಾಗಿ ಹೊರಹೊಮ್ಮುವವರೆಗಿನ ಜೀವನ ಚಕ್ರವನ್ನು ಪೂರ್ಣಗೊಳಿಸಲು ಸುಮಾರು 33 - 39 ದಿನಗಳನ್ನು ತೆಗೆದುಕೊಳ್ಳುತ್ತದೆ. ಮೊಟ್ಟೆಯೊಡೆದ ನಂತರ, ಲಾರ್ವಾಗಳು ಬೆಳೆಯುತ್ತಿರುವ ಹಣ್ಣುಗಳನ್ನು ಕೊರೆದು ಒಳ ಸೇರಿ ತಿರುಳನ್ನು. ಬೆಳೆಯುತ್ತಿರುವ ಬೀಜಗಳು ಮತ್ತು ಅಂಗಾಂಶಗಳನ್ನು ತಿನ್ನುತ್ತವೆ. 30 ರಿಂದ 50 ದಿನಗಳ ನಡುವೆ ಆಹಾರ ಸೇವನೆಯಿಂದಾಗುವ ಹಾನಿ ಅತ್ಯಧಿಕವಾಗಿರುತ್ತದೆ. ಜುಲೈನಲ್ಲಿ ದಾಳಿಂಬೆ ಚಿಟ್ಟೆಯ ಸಂಭವವು ಅತ್ಯಂತ ತೀವ್ರವಾಗಿರುತ್ತದೆ ಮತ್ತು ಸಾಪೇಕ್ಷ ಆರ್ದ್ರತೆಯೊಂದಿಗೆ ಗಮನಾರ್ಹವಾದ ಸಕಾರಾತ್ಮಕ ಸಂಬಂಧವನ್ನು ತೋರಿಸುತ್ತದೆ. ಮಾರ್ಚ್ ನಲ್ಲಿ ಈ ಪ್ರಮಾಣವು ಕಡಿಮೆ ಮತ್ತು ಸೆಪ್ಟೆಂಬರ್ ನಲ್ಲಿ ಗರಿಷ್ಠ ಮಟ್ಟವನ್ನು ತಲುಪುವವರೆಗೆ ಸ್ಥಿರವಾಗಿ ಹೆಚ್ಚಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಒಣ ಶಾಖೆಗಳಿಗಾಗಿ ನಿಮ್ಮ ತೋಟವನ್ನು ನಿಯಮಿತವಾಗಿ ಹುಡುಕಿ.
  • ವಯಸ್ಕ ಚಿಟ್ಟೆಗಳನ್ನು ನಿಯಂತ್ರಿಸಲು ಎಕರೆಗೆ ಒಂದರಂತೆ ಬೆಳಕಿನ ಬಲೆಗಳನ್ನು ಸ್ಥಾಪಿಸಿ.
  • ಹಾನಿಗೊಳಗಾದ ಹಣ್ಣುಗಳನ್ನು ಸಂಗ್ರಹಿಸಿ ಅವುಗಳನ್ನು ಹೊಲದಿಂದ ದೂರ ನಾಶಮಾಡಿ.
  • ಪರಾಗಸ್ಪರ್ಶದವಾದ ಕೂಡಲೇ ಹೂವುಗಳ ಕ್ಯಾಲಿಕ್ಸ್ ಕಪ್ ಗಳನ್ನು ಕತ್ತರಿಸುವುದು ಹಣ್ಣುಗಳ ಮೇಲೆ ಮೊಟ್ಟೆಯ ಹೊರೆ ಮತ್ತು ಹಾನಿಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ಪರ್ಯಾಯ ಆತಿಥೇಯ ಸಸ್ಯಗಳಾಗಿ ಕಾರ್ಯನಿರ್ವಹಿಸುವ ಕಳೆಗಳು ಮತ್ತು ಸಸ್ಯಗಳನ್ನು ತೆಗೆದುಹಾಕಿ.
  • ಹಣ್ಣಿಗೆ ತಡೆಗೋಡೆ ಸೃಷ್ಟಿಸಲು ಅವು ಸಣ್ಣದಿರುವಾಗಲೇ (ಅವು ಸುಮಾರು 5 ಸೆಂ.ಮೀ ದೊಡ್ಡದಾಗಿದ್ದಾಗ) ಹಣ್ಣುಗಳನ್ನು ಬೆಣ್ಣೆ ಕಾಗದ, ಒರಟಾದ ಬಟ್ಟೆ ಅಥವಾ 300 ಗೇಜ್ ದಪ್ಪವಿರುವ ಮಸ್ಲಿನ್ ಬಟ್ಟೆಯಿಂದ ಚೀಲದಂತೆ ಸುತ್ತಿ.
  • ಪ್ಯೂಪೆಯನ್ನು ಪರಭಕ್ಷಕ ಪಕ್ಷಿಗಳು, ಇತರ ನೈಸರ್ಗಿಕ ಶತ್ರುಗಳು ಮತ್ತು ಸೂರ್ಯನಿಗೆ ಒಡ್ಡಲು ಸುಗ್ಗಿಯ ನಂತರ ದಾಳಿಂಬೆ ಮರದ ಸುತ್ತಲೂ ಅಗೆಯಿರಿ ಅಥವಾ ಉಳುಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ