ಉದ್ದಿನ ಬೇಳೆ & ಹೆಸರು ಬೇಳೆ

ಬೇಳೆಯ ನೀಲಿ ಚಿಟ್ಟೆ

Euchrysops cnejus

ಕೀಟ

5 mins to read

ಸಂಕ್ಷಿಪ್ತವಾಗಿ

  • ಸೋಂಕಿತ ಎಲೆಗಳು ಒಣಗುವುದು.
  • ಸಂಪೂರ್ಣ ಎಲೆಗಳಚುವಿಕೆ.
  • ನೆಟ್ ನಂತೆ ಅಥವಾ ಬಲೆಯಂತಾದ ಎಲೆಗಳು.
  • ಕೆಂಪು ಹೊಟ್ಟೆ ಮತ್ತು ಕಪ್ಪು ಕಲೆಗಳನ್ನು ಹೊಂದಿರುವ ಕಂದು ಬಣ್ಣದ ಚಿಟ್ಟೆ.
  • ಲಾರ್ವಾಗಳು ಹಳದಿ ಬಣ್ಣದಿಂದ ಕಪ್ಪು ಬಣ್ಣದ ಕೂದಲಿನಿಂದ ಆವೃತವಾಗಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಉದ್ದಿನ ಬೇಳೆ & ಹೆಸರು ಬೇಳೆ

ರೋಗಲಕ್ಷಣಗಳು

ಬೇಗನೆ ಸೋಂಕಿತವಾಗಿರುವ ಎಲೆಗಳು ಕಂದು-ಹಳದಿ ಬಣ್ಣಕ್ಕೆ ಬಂದು ಒಣಗುತ್ತವೆ. ಮರಿಹುಳು ಮುಂದುವರೆದಂತೆ, ಇಡೀ ಎಲೆ ಅಂಗಾಂಶಗಳನ್ನು ತಿನ್ನುತ್ತವೆ. ತೀವ್ರವಾದ ಸೋಂಖಾಗಿದ್ದಾಗ, ಸಸ್ಯಗಳಲ್ಲಿ ಎಲೆಗಳಚುವಿಕೆಯಾಗಿ ಕಾಂಡಗಳು ಮಾತ್ರ ಉಳಿದಿರುತ್ತವೆ. ಎಲೆಗಳು ನೆಟ್ ನಂತೆ ಅಥವಾ ಬಲೆಯಂತೆ ಗೋಚರಿಸುತ್ತವೆ ಮತ್ತು ಅಂತಿಮವಾಗಿ ಅಸ್ಥಿಪಂಜದಂತಾಗುತ್ತವೆ.

Recommendations

ಜೈವಿಕ ನಿಯಂತ್ರಣ

ಬಿಹಾರ ಹೇರಿ ಕ್ಯಾಟರ್ಪಿಲ್ಲರ್ ಸಂಖ್ಯೆಯನ್ನು ಸಾಮಾನ್ಯವಾಗಿ ಹಲವಾರು ನೈಸರ್ಗಿಕ ಶತ್ರುಗಳ ಮೂಲಕ ನಿಯಂತ್ರಿಸಬಹುದು ವಿಶೇಷವಾಗಿ ಎಸ್. ಓಬ್ಲಿಕ್ವಾದ ಲಾರ್ವಾ ಹಂತದಲ್ಲಿ. ಪ್ರಯೋಜನಕಾರಿ ಪರಾವಲಂಬಿಗಳೆಂದರೆ ಬ್ರಾಕೊನಿಡ್ ಪರಾವಲಂಬಿಗಳು: ಮೀಟಿಯೋರಸ್ ಸ್ಪೈಲೋಸೋಮೆ ಮತ್ತು ಪ್ರೋಟಾಪಾಂಟೆಲ್ಸ್ ಆಬ್ಲಿಕೇ, ಗ್ಲಿಪ್ಟಾಪಾಂಟೆಲ್ಸ್ ಅಗಮೆಮ್ನೋನಿಸ್ ಮತ್ತು ಕೊಟೇಶಿಯಾ ರುಫಿಕ್ರಸ್ ಇದರ ಜೊತೆ ಇಕ್ನ್ಯುಮೋನಿಡ್ ಅಗಾಥಿಸ್ ಜಾತಿಯ ಸಂಯೋಜನೆಯೊಂದಿಗೆ, ಲೇಸ್ವಿಂಗ್, ಲೇಡಿಬರ್ಡ್ ಜೀರುಂಡೆ, ಜೇಡ, ಕೆಂಪು ಇರುವೆ, ಕೊಡತಿಹುಳುಗಳು (ಡ್ರ್ಯಾಗನ್‌ಫ್ಲೈ), ಪ್ರೇಯಿಂಗ್ ಮಾಂಟಿಸ್, ನೆಲದ ಜೀರುಂಡೆ ಮತ್ತು ಶೀಲ್ಡ್ ಬಗ್ಸ್.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕೀಟನಾಶಕಗಳನ್ನು ಎಚ್ಚರಿಕೆಯಿಂದ ಬಳಸಬೇಕು ಏಕೆಂದರೆ ಕೀಟನಾಶಕಗಳ ಅತಿಯಾದ ಬಳಕೆಯು ಅನೇಕ ಬಿಳಿನೊಣಗಳ ಪ್ರಭೇದಗಳು ಅದಕ್ಕೆ ಪ್ರತಿರೋಧಕವನ್ನು ಬೆಳೆಸಿಕೊಳ್ಳಲು ಕಾರಣವಾಗಿದೆ. ಇದನ್ನು ತಡೆಗಟ್ಟಲು, ಕೀಟನಾಶಕಗಳ ನಡುವೆ ಸರಿಯಾದ ಸರದಿಯನ್ನು ಖಚಿತಪಡಿಸಿಕೊಳ್ಳಿ ಮತ್ತು ಮಿಶ್ರಣಗಳನ್ನು ಬಳಸಿ. ಮರಿಹುಳುಗಳು ಚಿಕ್ಕದಾಗಿದ್ದಾಗ 0.6 ಮಿಲಿ / ಲೀಟರ್ ನೀರಿನಷ್ಟು ಲ್ಯಾಂಬ್ಡಾ-ಸಿಹಲೋಥ್ರಿನ್ 10 ಇಸಿ ಅನ್ನು ಸಿಂಪಡಿಸಿ. ಎಸ್. ಓಬ್ಲಿಕ್ವಾ ವಿರುದ್ಧ ಫೆಂಥೊಯೇಟ್ 50% ಅನ್ನು ಸಹಾಯ ಮಾಡುತ್ತದೆಂದು ಪರಿಗಣಿಸಲಾಗುತ್ತದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಹೆಚ್ಚಾಗಿ ಸ್ಪಿಲಾರ್ಕ್ಟಿಯಾ ಓರೆಯಾದ ಲಾರ್ವಾಗಳಿಂದ ಉಂಟಾಗುತ್ತವೆ. ಪ್ರೌಢ ಕೀಟಗಳನ್ನು ಕೆಂಪು ಹೊಟ್ಟೆ ಮತ್ತು ಕಪ್ಪು ಕಲೆಗಳನ್ನು ಹೊಂದಿರುವ ಮಧ್ಯಮ ಗಾತ್ರದ ಕಂದು ಬಣ್ಣದ ಚಿಟ್ಟೆ ಎಂದು ನಿರೂಪಿಸಲಾಗಿದೆ. ಹೆಣ್ಣು ಕೀಟಗಳು ತಮ್ಮ ಮೊಟ್ಟೆಗಳನ್ನು (1000/ಹೆಣ್ಣು ಕೀಟ) ಎಲೆಗಳ ಕೆಳಭಾಗದಲ್ಲಿ ಒಂದು ಗುಂಪಿನಲ್ಲಿ ಇಡುತ್ತವೆ. ಮೊಟ್ಟೆಯೊಡೆದ ನಂತರ, ಲಾರ್ವಾಗಳ ಮೇಲೆ ಉದ್ದನೆಯ ಹಳದಿ ಬಣ್ಣದಿಂದ ಕಪ್ಪು ಬಣ್ಣದ ಕೂದಲು ಬೆಳೆದು ಅವು ಸಸ್ಯಗಳಿಗೆ ಹತ್ತಿರವಿರುವ ಎಲೆಯ ಕಸದಲ್ಲಿ ಕೋಶಾವಸ್ಥೆಗೆ ಹೋಗುತ್ತವೆ. ಆರಂಭಿಕ ಇನ್ಸ್ಟಾರ್ ಲಾರ್ವಾಗಳು ಎಲೆಗಳ ಅಡಿಯಲ್ಲಿರುವ ಕ್ಲೋರೊಫಿಲ್ ಅನ್ನು ಒಟ್ಟಾಗಿ ತಿನ್ನುತ್ತವೆ. ನಂತರದ ಹಂತಗಳಲ್ಲಿ, ಅದು ಅಂಚಿನಿಂದ ಎಲೆಗಳನ್ನು ಒಂದೊಂದೇ ಕೀಟವಾಗಿ ತಿನ್ನುತ್ತಾ ಬರುತ್ತವೆ. ಸಾಮಾನ್ಯವಾಗಿ, ಲಾರ್ವಾಗಳು ಬೆಳೆದ ಎಲೆಗಳಿಗೆ ಆದ್ಯತೆ ನೀಡುತ್ತವೆ, ಆದರೆ ತೀವ್ರವಾದ ಸೋಂಕಾಗಿದ್ದರೆ ಮೇಲಿರುವ ಚಿಗುರುಗಳಿಗೂ ಸಹ ಪರಿಣಾಮವಾಗುತ್ತದೆ. ಬಿಹಾರ ಹೇರಿ ಕ್ಯಾಟರ್ಪಿಲ್ಲರ್ ವಿವಿಧ ದೇಶಗಳಲ್ಲಿನ ದ್ವಿದಳ ಧಾನ್ಯಗಳು, ಎಣ್ಣೆಕಾಳುಗಳು, ಸಿರಿಧಾನ್ಯಗಳು ಮತ್ತು ಕೆಲವು ತರಕಾರಿಗಳು ಮತ್ತು ಸೆಣಬಿನ ಮೇಲೆ ದಾಳಿ ಮಾಡಿ ತೀವ್ರ ಆರ್ಥಿಕ ಹಾನಿಯನ್ನುಂಟುಮಾಡುತ್ತದೆ. ಇಳುವರಿ ನಷ್ಟದ ವ್ಯಾಪ್ತಿಯು ಮುತ್ತಿಕೊಳ್ಳುವಿಕೆಯ ತೀವ್ರತೆ ಮತ್ತು ಹವಾಮಾನ ಪರಿಸ್ಥಿತಿಗಳೊಂದಿಗೆ ಬದಲಾಗುತ್ತದೆ ಏಕೆಂದರೆ ಈ ಕೀಟಗಳ ಬೆಳವಣಿಗೆಗೆ 18 ರಿಂದ 33°C ತಾಪಮಾನ ಅನುಕೂಲಕರ.


ಮುಂಜಾಗ್ರತಾ ಕ್ರಮಗಳು

  • ಮಣ್ಣಿನಿಂದ ಕೋಶಹುಳುಗಳನ್ನು ತೊಡೆದುಹಾಕಲು ಬೇಸಿಗೆಯಲ್ಲಿ ಆಳವಾಗಿ ಉಳುಮೆ ಮಾಡುವುದನ್ನು ಯೋಜಿಸಿ.
  • ಮಳೆಗಾಲಕ್ಕೆ ಮೊದಲೇ ಬಿತ್ತನೆ ಮಾಡುವುದನ್ನು ತಪ್ಪಿಸಿ.
  • ಸೂಕ್ತವಾದ ಬೀಜದ ಪ್ರಮಾಣವನ್ನು ಬಳಸಿ, ಹೆಚ್ಚೂ ಬೇಡ ಕಡಿಮೆಯೂ ಬೇಡ.
  • ಸಸ್ಯಗಳ ಮಧ್ಯೆ ಸಾಕಷ್ಟು ಅಂತರವನ್ನು ಒದಗಿಸಬೇಕು.
  • ಚೆನ್ನಾಗಿ ಕೊಳೆತ ಗೊಬ್ಬರವನ್ನು ಬಳಸಿ.
  • ತೊಗರಿ ಬೇಳೆ, ಕೆಲವು ಬಗೆಯ ಮೆಕ್ಕೆಜೋಳ ಅಥವಾ ಹುಲ್ಲುಜೋಳದೊಂದಿಗೆ (ಬೇಗನೆ ಪಕ್ವವಾಗುವ) ಅಂತರ ಬೆಳೆ ಮಾಡಿ.
  • ಕೀಟಗಳ ಚಿಹ್ನೆಗಳಿಗಾಗಿ (ಮೊಟ್ಟೆಯ ದ್ರವ್ಯರಾಶಿ, ಮರಿಹುಳುಗಳು ಮತ್ತು ಯಾವುದೇ ಹಾನಿಗಳಿಗೆ) ನಿಯಮಿತವಾಗಿ ಹೊಲಗಳನ್ನು ಮೇಲ್ವಿಚಾರಣೆ ಮಾಡಿ.
  • ಹೊಲ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿರುವ ಕಳೆಗಳನ್ನು ಸಸ್ಯನಾಶಕಗಳಿಂದ ಅಥವಾ ಯಾಂತ್ರಿಕವಾಗಿ ಕೀಳಲು ಸೂಕ್ತವಾದ ವಿಧಾನವನ್ನು ಅಳವಡಿಸಿಕೊಳ್ಳಿ.
  • ಸೋಂಕಿತ ಸಸ್ಯ ಭಾಗಗಳನ್ನು ಸಂಗ್ರಹಿಸಿ ಅವುಗಳನ್ನು ಹೊಲದಿಂದ ದೂರದಲ್ಲಿ ನಾಶಮಾಡಿ.
  • ಲಾರ್ವಾಗಳನ್ನು ತಿನ್ನುವ ಪಕ್ಷಿಗಳು ಕೂರಲು ಅಡ್ಡಕಂಬಿಗಳು ಮತ್ತು ತೆರೆದ ಸ್ಥಳವನ್ನು ನಿರ್ಮಿಸಿ.
  • ವಿಶಾಲ ರೋಹಿತ ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ, ಏಕೆಂದರೆ ಇದು ಪ್ರಯೋಜನಕಾರಿ ಕೀಟಗಳ ಮೇಲೆ ಪರಿಣಾಮ ಬೀರುತ್ತದೆ.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳು ಅಥವಾ ತಾವಾಗೇ ಬೆಳೆದ ಸಸ್ಯಗಳನ್ನು ತೆಗೆದುಹಾಕಿ.
  • ಭತ್ತ ಅಥವಾ ಮೆಕ್ಕೆ ಜೋಳದಂತಹ ರೋಗರಹಿತ ಆತಿಥೇಯ ಬೆಳೆಗಳೊಂದಿಗೆ ಬೆಳೆ ಸರದಿಯನ್ನು ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ