ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಓರಿಯಂಟಲ್ ಜೇಡರ ಮಿಟೆ

Eutetranychus orientalis

ಹುಳು

5 mins to read

ಸಂಕ್ಷಿಪ್ತವಾಗಿ

  • ಓರಿಯಂಟಲ್ ಜೇಡರ ಮಿಟೆಯ ಹಾನಿಯು, ಸಿಟ್ರಸ್ ಕೆಂಪು ಮಿಟೆಯ ಆಹಾರದ ಹಾನಿಗನ್ನು ಹೋಲುತ್ತದೆ.
  • ಎಲೆಗಳು ಕ್ಲೋರೋಟಿಕ್ ಆಗುತ್ತವೆ ಮತ್ತು ಹೆಚ್ಚಿನ ಮುತ್ತಿವಿಕೆಯಿದ್ದಲ್ಲಿ ಅಕಾಲಿಕವಾಗಿ ಎಲೆಗಳು ಉದುರುತ್ತವೆ.
  • ರೆಂಬೆಯ ಡೈಬ್ಯಾಕ್, ಹಣ್ಣುಗಳ ಗುಣಮಟ್ಟ ಕಡಿಮೆಯಾಗುತ್ತದೆ ಮತ್ತು ಮರಗಳ ಚೈತನ್ಯ ಕಡಿಮೆಯಾಗುತ್ತದೆ.
  • ಉತ್ತಮ ನೀರು ಸರಬರಾಜು ಈ ಕೀಟದಿಂದ ಉಂಟಾಗುವ ಹಾನಿ ಮತ್ತು ಸಂಭವನೀಯತೆಯನ್ನು ಕಡಿಮೆ ಮಾಡುತ್ತದೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಆಹಾರದ ಹಾನಿಯು, ಮೇಲಿನ ಎಲೆಯ ಬದಿಯಲ್ಲಿ, ಮುಖ್ಯವಾಗಿ ಮಧ್ಯಭಾಗದಲ್ಲಿ, ಪಾರ್ಶ್ವದ ನಾಳಗಳಿಗೆ ಹರಡುವುದು ಈ ರೋಗದ ಲಕ್ಷಣ. ಮಸುಕಾದ-ಹಳದಿ ಗೆರೆಗಳು ಮಧ್ಯಭಾಗ ಮತ್ತು ಎಲೆಗಳ ನಾಳಗಳಲ್ಲಿ ಬೆಳೆಯುತ್ತವೆ ಮತ್ತು ಅಂತಿಮವಾಗಿ ಎಲೆಗಳು ಕ್ಲೋರೋಟಿಕ್ ಆಗುತ್ತವೆ. ಕೆಲವೊಮ್ಮೆ ಎಲೆಗಳ ಮೇಲೆ ಸಣ್ಣದಾದ ಧೂಳಿನ ಹೊದಿಕೆ ಮತ್ತು ಸ್ವಲ್ಪ ಬಲೆಗಳು ಕಾಣಬಹುದು. ಎಳೆಯ ಮುತ್ತಿಗೆ ಒಳಗಾದ ಎಲೆಗಳ ಅಂಚುಗಳು ಮೇಲಕ್ಕೆ ಸುರುಳಿಯಾಗುತ್ತವೆ. ಹೆಚ್ಚಿನ ಮಟ್ಟದ ಮುತ್ತಿಕೊಳ್ಳುವಿಕೆಯಲ್ಲಿ, ಹುಳಗಳು ಇಡೀ ಮೇಲಿನ ಎಲೆಯ ಮೇಲ್ಮೈಯಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಇದು ಅಕಾಲಿಕ ವಿಪರ್ಣನ, ಕೊಂಬೆಯ ಡೈ-ಬ್ಯಾಕ್ಸ್ ಮತ್ತು ಹಣ್ಣು ಉದುರಲು ಕಾರಣವಾಗಬಹುದು. ಮುಂದಿನ ವರ್ಷದ ಹೂಬಿಡುವಿಕೆಯ ಮೇಲೂ ತೀವ್ರವಾಗಿ ಪರಿಣಾಮ ಬೀರಬಹುದು. ಮರಗಳು ನೀರಿನ ಒತ್ತಡದಲ್ಲಿದ್ದರೆ ಕಡಿಮೆ ಕೀಟ ಸಂಖ್ಯೆಯೂ ಕೂಡ ಹಣ್ಣುಗಳ ಮೇಲೆ ಕ್ಲೋರೋಸಿಸ್ ಉಂಟು ಮಾಡಬಹುದು ಮತ್ತು ಅಕಾಲಿಕ ಎಲೆಗಳ ಉದುರುವಿಕೆಗೆ ಕಾರಣವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಯುಟೆಟ್ರಾನಿಕಸ್ ಓರಿಯಂಟಲಿಸ್ ಹೆಚ್ಚಿನ ಸಂಖ್ಯೆಯ ಪರಭಕ್ಷಕ ಮತ್ತು ಇತರ ನೈಸರ್ಗಿಕ ಶತ್ರುಗಳನ್ನು ಹೊಂದಿದೆ. ಇದು ಹರಡುವಿಕೆಯನ್ನು ನಿಯಂತ್ರಿಸಲು ಅನೇಕ ವೇಳೆ ಇದೇ ಸಾಕಾಗುತ್ತದೆ. ಸಿಟ್ರಸ್ ಓರಿಯೆಂಟಲ್ ಮಿಟೆ ಪರಿಣಾಮಕಾರಿ ನಿಯಂತ್ರಣಕ್ಕಾಗಿ ಹಲವಾರು ಫೈಟೊಸೀಡೆ ಮತ್ತು ಸ್ಟಿಗ್ಮೈಡೆ ಹುಳಗಳನ್ನು ವಿವಿಧ ದೇಶಗಳಲ್ಲಿ ಬಳಸಲಾಗುತ್ತದೆ, ಉದಾ .: ಯೂಸಿಯಸ್ ಸ್ಟಿಪುಲಟಸ್, ಟೈಫ್ಲೋಡ್ರೊಮಸ್ ಫಿಯಾಲಟಸ್, ನಿಯೋಸಿಯುಲಸ್ ಕ್ಯಾಲಿಫೋರ್ನಿಕಸ್, ಫೈಟೊಸಿಯುಲಸ್ ಪರ್ಸಿಮಿಲಿಸ್. ಪರಭಕ್ಷಕ ಜೀರುಂಡೆ ಸ್ಟೆಥರಸ್ ಎಸ್ಪಿಪಿ ಮತ್ತು ಓರಿಯಸ್ ಥ್ರೈಪೊಬೊರಸ್. ಆದರೆ ಲೇಸ್ವಿಂಗ್ ಲಾರ್ವಾಗಳು ಕೂಡ ಮರಿಹುಳಗಳನ್ನು ತಿನ್ನುತ್ತವೆ. ಕೀಟವನ್ನು ತೊಡೆದುಹಾಕಲು ನೀವು ನಿಮ್ಮ ಸಸ್ಯಗಳನ್ನು ಗಂಧಕದಿಂದ ಸಿಂಪಡಿಸಬಹುದು ಅಥವಾ ಪುಡಿ ಎರಚಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮುತ್ತಿಗೆಗೆ ಒಳಗಾಗಿರುವ ಸಸ್ಯಗಳ 20% ದಷ್ಟು ಎಲೆಗಳು ಮತ್ತು / ಅಥವಾ ಹಣ್ಣುಗಳು ಪರಿಣಾಮಕ್ಕೆ ಒಳಗಾಗಿದ್ದರೆ ಚಿಕಿತ್ಸೆ ನೀಡಿ. ಆಯ್ದ ಕೀಟನಾಶಕಗಳನ್ನು ಹೆಚ್ಚು ಶಿಫಾರಸು ಮಾಡಲಾಗುತ್ತದೆ. ಏಕೆಂದರೆ ವಿಶಾಲ-ರೋಹಿತ ಕೀಟನಾಶಕಗಳು ಪರಿಸ್ಥಿತಿಯನ್ನು ಉಲ್ಬಣಗೊಳಿಸಬಹುದು. ಹಲವಾರು ರೀತಿಯ ಅಕಾರಿಸೈಡ್‌ಗಳ ಬಳಕೆಯು ಪ್ರತಿರೋಧದ ಬೆಳವಣಿಗೆಯನ್ನು ತಪ್ಪಿಸುತ್ತದೆ. ಫ್ಲುಬೆನ್ಜಿಮೈನ್, ಒಮೆಥೊಯೇಟ್ ಮತ್ತು ಡೈಕೋಫೊಲ್ ಗಳ ಪರಿಣಾಮಕಾರಿ ಎಂದು ವರದಿಯಾಗಿದೆ.

ಅದಕ್ಕೆ ಏನು ಕಾರಣ

ಸಿಟ್ರಸ್ ಓರಿಯೆಂಟಲ್ ಮಿಟೆ, ಯುಟೆಟ್ರಾನೈಕಸ್ ಓರಿಯಂಟಲಿಸ್ ನ ವಯಸ್ಕ ಮತ್ತು ಮರಿಹುಳಗಳ ಆಹಾರ ಚಟುವಟಿಕೆಯಿಂದ ರೋಗಲಕ್ಷಣಗಳು ಉಂಟಾಗುತ್ತವೆ. ಅವುಗಳು ಅಂಡಾಕಾರದ , ಚಪ್ಪಟೆಯಾದ ದೇಹ ಹೊಂದಿದ್ದು, ಮಸುಕಾದ-ಕಂದು, ಕೆಂಪು ಮಿಶ್ರಿತ ಕಂದು ಬಣ್ಣ, ಕಡು-ಹಸಿರು ಬಣ್ಣದಲ್ಲಿರುತ್ತವೆ. ದೇಹದ ಉದ್ದಕ್ಕೂ ಅವು ಗಾಢವಾದ ಕಲೆಗಳನ್ನು ಮತ್ತು ತೆಳು ಬಣ್ಣದ ಕಾಲುಗಳನ್ನು ಹೊಂದಿರುತ್ತವೆ. ಅವು ಹೆಚ್ಚಾಗಿ ಸಿಟ್ರಸ್ ಮರಗಳಿಗೆ ಸೋಂಕು ತಗುಲಿಸುತ್ತವೆ ಮತ್ತು ಸಾಂದರ್ಭಿಕವಾಗಿ ಇತರ ಬೆಳೆಗಳಾದ ಬಾದಾಮಿ, ಬಾಳೆಹಣ್ಣು, ಕಸಾವ ಮತ್ತು ಹತ್ತಿಗೂ ಸಹ ಸೋಂಕು ತರುತ್ತವೆ. ಸಾಮಾನ್ಯವಾಗಿ ಮೇಲಿನ ಎಲೆಯ ಮೇಲ್ಮೈಯಲ್ಲಿ ಕಂಡುಬರುವ ಇವು ಮುಖ್ಯವಾಗಿ ಗಾಳಿಯ ಮೂಲಕ ಹರಡುತ್ತವೆ. ಭೌಗೋಳಿಕ ಸಂಭವದ ವ್ಯಾಪ್ತಿಯನ್ನು ಅವಲಂಬಿಸಿ ವರ್ಷಕ್ಕೆ 8 - 27 ತಲೆಮಾರುಗಳು ಇರುತ್ತವೆ. ಪ್ರತಿ ಹೆಣ್ಣು ಜೀವಿತಾವಧಿಯಲ್ಲಿ (2-3 ವಾರಗಳು) 30-40 ಮೊಟ್ಟೆಗಳನ್ನು ಇಡುತ್ತವೆ. ತುಂಬಾ ಕಡಿಮೆ ಅಥವಾ ಹೆಚ್ಚಿನ ಆರ್ದ್ರತೆ, ಹೆಚ್ಚಿನ ಗಾಳಿ, ಬರ ಅಥವಾ ಸರಿಯಾಗಿ ಅಭಿವೃದ್ಧಿ ಹೊಂದದ ಬೇರಿನ ವ್ಯವಸ್ಥೆಯು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಓರಿಯೆಂಟಲ್ ಜೇಡರ ಮಿಟೆಗೆ ಸೂಕ್ತವಾದ ಪರಿಸ್ಥಿತಿಗಳು 21-27 ° C ಮತ್ತು 59-70% ಆರ್ದ್ರತೆ.


ಮುಂಜಾಗ್ರತಾ ಕ್ರಮಗಳು

  • ಹುಳಗಳ ಸಂಖ್ಯೆಯನ್ನು ನಿರ್ಣಯಿಸಲು ವಾರಕ್ಕೊಮ್ಮೆ ಲೆನ್ಸ್‌ನೊಂದಿಗೆ ತೋಟಗಳನ್ನು ಪರಿಶೀಲಿಸಿ.
  • ಕೀಟನಾಶಕಗಳ ಅತಿಯಾದ ಬಳಕೆಯನ್ನು ತಪ್ಪಿಸಿ.
  • ಏಕೆಂದರೆ ಇದು ಪ್ರಯೋಜನಕಾರಿ ಕೀಟಗಳ ಸಂಖ್ಯೆಯ ಮೇಲೆ ಋಣಾತ್ಮಕ ಪ್ರಭಾವ ಬೀರುತ್ತದೆ.
  • ಮರಕ್ಕೆ ಸರಿಯಾಗಿ ನೀರು ಹಾಕಿ ಮತ್ತು ಬಿಸಿಲಿನ ವಾತಾವರಣದಲ್ಲಿ ಬರ ಒತ್ತಡವನ್ನು ತಪ್ಪಿಸಿ.
  • ನೆಲದ ಮೇಲೆ ಹುಲ್ಲು ಅಥವಾ ಕಳೆಗಳೊಂದಿಗೆ, ಶಾಖೆಗಳು ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿ.
  • ಹಣ್ಣಿನ ತೋಟದಿಂದ ಕಳೆಗಳನ್ನು ಕಿತ್ತು ಸ್ವಚ್ಛವಾಗಿರಿಸಿಕೊಳ್ಳಿ.
  • ಸುಗ್ಗಿಯ ನಂತರ ತ್ಯಾಜ್ಯ ಮತ್ತು ಅವಶೇಷಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ