ಕಬ್ಬು

ಕಬ್ಬಿನ ಪಿರಿಲ್ಲಾ

Pyrilla perpusilla

ಕೀಟ

5 mins to read

ಸಂಕ್ಷಿಪ್ತವಾಗಿ

  • ಹಸಿರಿನಿಂದ ಕಂದು ಬಣ್ಣದ ಕೀಟಗಳು ಎಲೆಗಳ ಕೆಳಭಾಗವನ್ನು ತಿನ್ನುತ್ತವೆ.
  • ಕುಂಠಿತಗೊಂಡ ಸಸ್ಯಗಳು, ಎಲೆಗಳ ಹಳದಿಯಾಗುವಿಕೆ ಮತ್ತು ಒಣಗುವಿಕೆ.
  • ಹನಿಡ್ಯೂ ಉತ್ಪಾದನೆ ಮತ್ತು ಎಲೆಯ ಮೇಲ್ಮೈಯಲ್ಲಿ ಮಸಿ ಮೋಲ್ಡ್ ಬೆಳವಣಿಗೆ.
  • ಮೆಕ್ಕೆಜೋಳ ಹೊರತುಪಡಿಸಿ, ಅವು ಇತರ ಹುಲ್ಲುಗಳು ಮತ್ತು ಸಿರಿಧಾನ್ಯಗಳನ್ನೂ ಸಹ ಸುಲಭವಾಗಿ ಆಕ್ರಮಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಕಬ್ಬು

ರೋಗಲಕ್ಷಣಗಳು

ಕೀಟಗಳು ಎಲೆಗಳ ಕೆಳಭಾಗದಲ್ಲಿ ಕಂಡುಬರುತ್ತವೆ. ಅಲ್ಲಿ ಅವು ಸಸ್ಯದ ಸಾರವನ್ನು ಹೀರುತ್ತವೆ. ಇದು ಮೊದಲು ಎಲೆಗಳು ಹಳದಿಯಾಗಲು ಒಣಗಲು ಕಾರಣವಾಗುತ್ತದೆ. ಕಡಿಮೆ ಮುತ್ತುವಿಕೆಯ ಸಂದರ್ಭದಲ್ಲಿ, ಎಲೆಯ ಮೇಲ್ಮೈಯಲ್ಲಿ ಹಳದಿ ತೇಪೆಗಳು ಕಾಣಿಸಿಕೊಳ್ಳುತ್ತವೆ. ದ್ಯುತಿಸಂಶ್ಲೇಷಣೆ ಕಡಿಮೆಯಾಗುವುದರಿಂದ ಸಸ್ಯದ ಬೆಳವಣಿಗೆ ಕುಂಠಿತವಾಗುತ್ತದೆ. ಜಿಗಿ ಹುಳುಗಳು ಸಹ ಹನಿಡ್ಯೂ ಎಂಬ ಸಿಹಿ ಪದಾರ್ಥವನ್ನು ಸ್ರವಿಸುತ್ತವೆ. ಅದು ಎಲೆಗಳ ಮೇಲೆ ಲೇಪಿತವಾಗುತ್ತದೆ. ಇದು ಅವಕಾಶವಾದಿ ಶಿಲೀಂಧ್ರಗಳನ್ನು ಆಕರ್ಷಿಸುತ್ತದೆ. ಅದರ ಬೆಳವಣಿಗೆಯಿಂದಾಗಿ ಎಲೆಯ ಗರಿ ಕಪ್ಪಾಗುತ್ತದೆ. ಇದು ದ್ಯುತಿಸಂಶ್ಲೇಷಣೆಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಇದರ ಪರಿಣಾಮವಾಗಿ ಇಳುವರಿ ನಷ್ಟವಾಗುತ್ತದೆ. ಮೆಕ್ಕೆಜೋಳದ ಜೊತೆಗೆ, ಇವು ಕಬ್ಬು, ರಾಗಿ, ಅಕ್ಕಿ, ಬಾರ್ಲಿ, ಓಟ್ಸ್, ಹಲ್ಲುಜೋಳ, ಸಜ್ಜೆ ಮತ್ತು ಕಾಡು ಹುಲ್ಲುಗಳನ್ನೂ ಸಹ ಸುಲಭವಾಗಿ ಆಕ್ರಮಣ ಮಾಡುತ್ತವೆ.

Recommendations

ಜೈವಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ಕೀಟದ ವಿರುದ್ಧ ಮಾಲಾಥಿಯಾನ್ ಹೊಂದಿರುವ ಉತ್ಪನ್ನಗಳು ಪರಿಣಾಮಕಾರಿ. ಜೈವಿಕ ನಿಯಂತ್ರಣ ಹಲವಾರು ಪರಾವಲಂಬಿಗಳು ಇವುಗಳ ಮೊಟ್ಟೆಗಳು ಮತ್ತು ಮರಿಹುಳುಗಳ ಮೇಲೆ ದಾಳಿ ಮಾಡುತ್ತವೆ. ಮೊಟ್ಟೆಯ ಪರಾವಲಂಬಿಗಳೆಂದೆರ ಟೆಟ್ರಾಸ್ಟಿಕಸ್ ಪಿರಿಲ್ಲೆ, ಚೈಲೋನರಸ್ ಪಿರಿಲ್ಲೆ, ಒಯೆನ್ಸಿರ್ಟಸ್ ಪಿರಿಲ್ಲೆ, ಒ. ಪಿಪಿಲಿಯೊನಸ್ ಮತ್ತು ಅಗೋನಿಯಾಸ್ಪಿಸ್ ಪಿರಿಲ್ಲೆ. ಮರಿಹುಳುಗಳ ಮೇಲೆ ಲೆಸ್ಟೊಡ್ರೈನಸ್ ಪಿರಿಲ್ಲೆ, ಪಿರಿಲ್ಲೊಕ್ಸೆನೋಸ್ ಒಂಪ್ಯಾಕ್ಟಸ್, ಕ್ಲೋರೊಡ್ರೈನಸ್ ಪ್ಯಾಲಿಡಸ್, ಎಪಿರಿಕೇನಿಯಾ ಮೆಲನೊಲ್ಯುಕಾ ಆಕ್ರಮಣ ಮಾಡುತ್ತವೆ. ಈ ಕೀಟದ ಪರಭಕ್ಷಕಗಳಲ್ಲಿ ಹಲವಾರು ಜಾತಿಯ ಲೇಡಿ ಬರ್ಡ್‌ಗಳಾದ ಕೊಕಿನೆಲ್ಲಾ ಸೆಪ್ಟೆಂಪಂಕ್ಟಾಟಾ, ಸಿ. ಉಂಡೆಸಿಂಪಂಕ್ಟಾಟಾ, ಚಿಲೋಮಿನೆಸ್ ಸೆಕ್ಸ್‌ಮ್ಯಾಕುಲಾಟಾ, ಬ್ರೂಮಸ್ ಸುತುರಾಲಿಸ್ ಸೇರಿವೆ. ಮೊಟ್ಟೆ-ಪರಭಕ್ಷಕವೆಂದರೆ ನಿಂಬೋವಾ ಬೆಸಿಪಂಕ್ಟಾಟಾ, ಗೊನಿಯೊಪ್ಟೆರಿಕ್ಸ್ ಪುಸಾನಾ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ಕೀಟದ ವಿರುದ್ಧ ಮಾಲಾಥಿಯಾನ್ ಹೊಂದಿರುವ ಉತ್ಪನ್ನಗಳು ಪರಿಣಾಮಕಾರಿ.

ಅದಕ್ಕೆ ಏನು ಕಾರಣ

ಪಿರಿಲ್ಲಾ ಪೆರ್ಪುಸಿಲ್ಲಾದ ವಯಸ್ಕ ಕೀಟಗಳಿಂದ ಹಾನಿ ಉಂಟಾಗುತ್ತದೆ. ಇದು ವರ್ಷಪೂರ್ತಿ ಸಂತಾನೋತ್ಪತ್ತಿ ಮಾಡುವ, ಕ್ರಿಯಾಶೀಲವಾದ ಜಿಗಿಹುಳುವಾಗಿದೆ, ಇದು ಹೊಲದಿಂದ ಹೊಲಕ್ಕೆ ವಲಸೆ ಹೋಗಬಹುದು ಮತ್ತು ದೊಡ್ಡ ಹಾನಿಯನ್ನುಂಟುಮಾಡುತ್ತದೆ. ವಯಸ್ಕ ಕೀಟಗಳು ಹಸಿರು ಬಣ್ಣದಿಂದ ಒಣಹುಲ್ಲಿನ ಬಣ್ಣ ಮತ್ತು ಸುಮಾರು 7-8 ಮಿ.ಮೀ ಉದ್ದ ಇರುತ್ತವೆ. ಇವು ಸಾಮಾನ್ಯವಾಗಿ ಸಸ್ಯಗಳನ್ನು ಚೆನ್ನಾಗಿ ತಿನ್ನುತ್ತಾ ಇರುವುದನ್ನು ನೋಡಬಹುದು ಮತ್ತು ತೊಂದರೆಪಡಿಸಿದಾಗ ಸುಲಭವಾಗಿ ಬೇರೆಡೆಗೆ ಜಿಗಿಯುತ್ತವೆ. ಅವುಗಳ ಮೊನಚಾದ ಮೂತಿ ಬಾಯಿಯ ಭಾಗಗಳನ್ನು ಮರೆಮಾಡುತ್ತದೆ ಮತ್ತು ಅವು ಸಸ್ಯ ಅಂಗಾಂಶಗಳನ್ನು ಚುಚ್ಚುತ್ತವೆ ಮತ್ತು ಹೀರುತ್ತವೆ. ಕೀಟಗಳ ಹರಡುವಿಕೆಗೆ ಹೆಚ್ಚಿನ ಆರ್ದ್ರತೆ ಮತ್ತು ತ್ವರಿತ ಸಸ್ಯಗಳ ಬೆಳವಣಿಗೆ ಅನುಕೂಲಕರವಾಗಿದೆ, ಉದಾಹರಣೆಗೆ ಹೆಚ್ಚು ಗೊಬ್ಬರ ಅಥವಾ ಫಲವತ್ತಾದ ಹೊಲಗಳಲ್ಲಿ. ಹೆಚ್ಚುವರಿ ನೀರಾವರಿ ಅಥವಾ ಮಳೆಗಾಲವೂ ಅದರ ಪ್ರಸರಣಕ್ಕೆ ಕೊಡುಗೆ ನೀಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಕೀಟಗಳ ಲಕ್ಷಣಗಳಿಗಾಗಿ ಹೊಲವನ್ನು ನಿಯಮಿತವಾಗಿ ತಪಾಸಣೆ ಮಾಡಿ.
  • ಸುಗ್ಗಿಯ ನಂತರ ಸೋಂಕಿತ ಸಸ್ಯವನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟುಹಾಕಿ.
  • ವಿಶಾಲ-ಶ್ರೇಣಿಯ ಕೀಟನಾಶಕಗಳನ್ನು ಬಳಸಬೇಡಿ.
  • ಏಕೆಂದರೆ ಇದು ಪ್ರಯೋಜನಕಾರಿ ಕೀಟಗಳ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ