ಇತರೆ

ಮೆಕ್ಕೆ ಜೋಳದ ಚುಕ್ಕೆ ಜೀರಂಡೆ

Astylus atromaculatus

ಕೀಟ

5 mins to read

ಸಂಕ್ಷಿಪ್ತವಾಗಿ

  • ಹೂವುಗಳು ಮತ್ತು ಮೆಕ್ಕೆ ಜೋಳದ ತೆನೆಯ ಮೇಲೆ ಹಳದಿ ಬಣ್ಣದ, ಕಪ್ಪು ಚುಕ್ಕೆಗಳಿರುವ.
  • ಉದ್ದವಾದ ಜೀರುಂಡೆಗಳು ಗುಂಪಿನಲ್ಲಿ ಕಂಡುಬರುತ್ತವೆ.
  • ರೇಷ್ಮೆ ಎಳೆಗಳು ಅಥವಾ ಧಾನ್ಯಗಳಿಗೆ ಹಾನಿಯಾಗುತ್ತದೆ.
  • ಬೀಜಗಳಿಗೆ ಅಥವಾ ಮೊಳಕೆಯೊಡೆಯುತ್ತಿರುವ ಮೆಕ್ಕೆ ಜೋಳದ ಸಸಿಗಳಿಗೆ ಹಾನಿಯಾಗುತ್ತದೆ.
  • ಮತ್ತು ಸಸ್ಯ ಬೇರು ಹಿಡಿಯುವ ಸಂಖ್ಯೆ ಕಡಿಮೆಯಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ಹೂವುಗಳು ಮತ್ತು ಮೆಕ್ಕೆ ಜೋಳದ ತೆನೆಯ ಮೇಲೆ ಹಳದಿ ಬಣ್ಣದ, ಕಪ್ಪು ಚುಕ್ಕೆಗಳಿರುವ. ಉದ್ದವಾದ ಜೀರುಂಡೆಗಳು ಗುಂಪಿನಲ್ಲಿ ಕಂಡುಬರುತ್ತವೆ. ಬೀಜಗಳಿಗೆ ಅಥವಾ ಮೊಳಕೆಯೊಡೆಯುತ್ತಿರುವ ಮೆಕ್ಕೆ ಜೋಳದ ಸಸಿಗಳಿಗೆ ಹಾನಿಯಾಗುತ್ತದೆ. ಮತ್ತು ಸಸ್ಯ ಬೇರು ಹಿಡಿಯುವ ಸಂಖ್ಯೆ ಕಡಿಮೆಯಾಗುತ್ತದೆ. ಈ ಕೀಟವು ವಾಸ್ತವವಾಗಿ ದಕ್ಷ ಪರಾಗಸ್ಪರ್ಶಕ ಎಂದು ಪರಿಗಣಿಸಲ್ಪಡುತ್ತದೆ. ಏಕೆಂದರೆ ಇದರ ಹಾರುವ ಶ್ರೇಣಿಯು ಕೆಲವೊಮ್ಮೆ 200 ಮೀ ಅಥವಾ ಅದಕ್ಕೂ ಹೆಚ್ಚಿನದಾಗಿರುತ್ತದೆ. ಪರಿಸ್ಥಿತಿಗಳು ಅನುಕೂಲಕರವಾದಾಗ ಮಾತ್ರ ಅದು ರೋಗಕಾರಕ ಕೀಟವಾಗುತ್ತದೆ. (ಬೆಚ್ಚಗಿನ, ಶುಷ್ಕ ಹವಾಮಾನ ಮತ್ತು 15 °C ಗಿಂತ ಹೆಚ್ಚಿನ ತಾಪಮಾನ). ಈ ಪರಿಸ್ಥಿತಿಗಳಲ್ಲೂ ಕೂಡ, ಕೀಟನಾಶಕ ಬಳಕೆಯನ್ನು ಸಮರ್ಥಿಸುವಷ್ಟು ಹಾನಿ ಉಂಟು ಮಾಡುವುದಿಲ್ಲ.

Recommendations

ಜೈವಿಕ ನಿಯಂತ್ರಣ

ತಿಳಿದ ಪರಭಕ್ಷಕಗಳೊಂದಿಗೆ (ಧಾನ್ಯದ ಕಾಂಡ ಕೊರಕಗಳು) ಆವಾಸಸ್ಥಾನ ನಿರ್ವಹಣೆ, ಜೊತೆಗೆ ಒಂದು ಸಸ್ಯ ಪುಶ್-ಪುಲ್ ವ್ಯವಸ್ಥೆ (ಡೆಸ್ಮೋಡಿಯಮ್ ನೊಂದಿಗೆ ಅಂತರ್ ಬೆಳೆ ಮತ್ತು ನೇಪಿಯರ್ ಹುಲ್ಲಿನಿಂದ ತಡೆ ಒಳಗೊಂಡಂತೆ) ಈ ಸಾಂದರ್ಭಿಕ ಕೀಟ, ಬೆಳೆಗಳನ್ನು ತಿನ್ನದಂತೆ ತಡೆಯುವಲ್ಲಿ ಈ ಹಿಂದೆ ಚೆನ್ನಾಗಿ ಕೆಲಸ ಮಾಡಿದೆ.

ರಾಸಾಯನಿಕ ನಿಯಂತ್ರಣ

ಸಾಧ್ಯವಾದರೆ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಒಂದು ಸಮಗ್ರ ವಿಧಾನವನ್ನು ಪರಿಗಣಿಸಿ. ಆಸ್ಟಿಲಸ್ ಜೀರುಂಡೆ ನಿಯಂತ್ರಣಕ್ಕೆ ಶಿಫಾರಸು ಮಾಡಲಾಗುವ ವಿಧಾನಗಳೆಂದರೆ ರಾಸಾಯನಿಕ ಬೀಜ ಚಿಕಿತ್ಸೆಗಳು ಮತ್ತು ರಾಸಾಯನಿಕ ದ್ರವೌಷಧಗಳು.

ಅದಕ್ಕೆ ಏನು ಕಾರಣ

ಮೆಕ್ಕೆ ಜೋಳದ ಚುಕ್ಕೆ ಜೀರುಂಡೆ, ಅಸ್ಟಿಲಸ್ ಅಟ್ರೋಮ್ಯಾಕ್ಯುಲೇಟಸ್ ನಿಂದ ಹಾನಿ ಉಂಟಾಗುತ್ತದೆ. ವಯಸ್ಕ ಜೀರುಂಡೆಗಳು ಸ್ವಲ್ಪ ಉದ್ದವಾಗಿರುತ್ತವೆ, ಮತ್ತು ಹಳದಿ ರೆಕ್ಕೆಗಳ ಮೇಲೆ ಕಪ್ಪು ಚುಕ್ಕೆಗಳಿರುತ್ತವೆ. ಅವು ಮುಖ್ಯವಾಗಿ ಸಸ್ಯಹಾರಿಯಾಗಿದ್ದು ಮೆಕ್ಕೆ ಜೋಳ, ಭತ್ತ, ಹುಲ್ಲು ಜೋಳ ಅಥವಾ ಸೂರ್ಯಕಾಂತಿಗಳಂತಹ ಬೆಳೆಗಳ ರೇಷ್ಮೆ ಎಳೆಗಳು, ಪರಾಗ ಅಥವಾ ಧಾನ್ಯಗಳನ್ನು ತಿನ್ನುತ್ತವೆ. ಅವು ಸಾಮಾನ್ಯವಾಗಿ ಈ ಗಿಡಗಳಿಗೆ ಹೆಚ್ಚು ಹಾನಿ ಉಂಟು ಮಾಡುವುದಿಲ್ಲ. ಹೊಲದಲ್ಲಿ ತುಂಬಾ ಕಡಿಮೆ ಬೆಳೆಗಳಿರುವಾಗ, ಜೀರುಂಡೆಗಳು ಹುಲ್ಲುಗಳ ಮೇಲೆ ಸೇರುತ್ತವೆ ಮತ್ತು ಅವುಗಳನ್ನು ಜಾನುವಾರುಗಳು ಸೇವಿಸಿದರೆ ಸಮಸ್ಯೆಯಾಗಬಹುದು. ಸಾವುಗಳನ್ನು ಉಂಟುಮಾಡುವ ಸಾಧ್ಯತೆ ಇದೆ. ಒಣ ಎಲೆಗಳ ಅಡಿಯಲ್ಲಿ ಹೆಣ್ಣುಗಳು ಮೊಟ್ಟೆಗಳನ್ನು ಇಡುತ್ತವೆ. ಮರಿಹುಳುಗಳು ನೆಲದಲ್ಲಿ ವಾಸಿಸುತ್ತವೆ ಮತ್ತು ಕೊಳೆಯುವ ಸಸ್ಯದ ಅವಶೇಷಗಳನ್ನು ತಿನ್ನುತ್ತವೆ. ಅವು ಕೆಲವೊಮ್ಮೆ ಬೀಜಗಳಿಗೆ ಅಥವಾ ಮೊಳಕೆಯೊಡುತ್ತಿರುವ ಮೆಕ್ಕೆಜೋಳದ ಸಸಿಗಳಿಗೂ ಹಾನಿ ಮಾಡಬಹುದು. ಹೀಗಾಗಿ ಸಸ್ಯ ಬೇರು ಹಿಡಿಯುವ ಪ್ರಮಾಣ ಕಡಿಮೆಯಾಗುತ್ತದೆ. ಬೆಚ್ಚಗಿನ, ಶುಷ್ಕ ವಾತಾವರಣದ (15 °C ಗಿಂತ ಹೆಚ್ಚಿನ) ಅವಧಿಗಳು ಕೀಟಗಳ ಜೀವನ ಚಕ್ರವನ್ನು ಬೆಂಬಲಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ಕೀಟಗಳ ಅಭಿವೃದ್ಧಿಗೆ ಅನುಕೂಲವಾಗುವ ಏಕ ಬೆಳೆ ವ್ಯವಸ್ಥೆ ತಪ್ಪಿಸಿ.
  • ಸಂಖ್ಯೆಯನ್ನು ಕಡಿಮೆಗೊಳಿಸಲು 2-ಫಿನೈಲ್ ಎಥೆನಾಲ್ ಇರುವ ಬಲೆ ಅಥವಾ ನೀರು ತುಂಬಿದ ಹಳದಿ ಬಕೆಟ್ ಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ