ಇತರೆ

ಬಿಳಿ ಹುಳು (ಬಿಳಿ ಗ್ರಬ್ಸ್)

Phyllophaga spp.

ಕೀಟ

5 mins to read

ಸಂಕ್ಷಿಪ್ತವಾಗಿ

  • ಕುಂಠಿತಗೊಂಡ, ಬಾಗಿರುವ, ಮತ್ತು ಬಣ್ಣ ಕಳೆದುಕೊಂಡ ಸಸ್ಯಗಳು.
  • ಜಮೀನಿನಲ್ಲಿ ಬಾಡಿದ ಸಸ್ಯಗಳ ಸಣ್ಣ ತೇಪೆಗಳು ಕಂಡುಬರುತ್ತವೆ.
  • ಗಾಯಗೊಂಡ ಸಸ್ಯಗಳು ಸಾಮಾನ್ಯವಾಗಿ ನೇರಳೆ ಕಾಂಡವನ್ನು ಹೊಂದಿರುತ್ತವೆ.
  • ತಂಪಾದ, ಆರ್ದ್ರ ಮಣ್ಣು, ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ಬಿಳಿ ಹುಳುಗಳು ಮುಖ್ಯ ಬೇರುಗಳನ್ನು ಕತ್ತರಿಸುತ್ತವೆ ಅಥವಾ ಪ್ರೌಢ ಸಸ್ಯಗಳ ಸಣ್ಣ ಬೇರುಗಳನ್ನು ಕಡಿಯುತ್ತವೆ. ಇದು ನೀರು ಮತ್ತು ಪೋಷಕಾಂಶಗಳ ಹೀರುವಿಕೆಯನ್ನು ತಡೆಗಟ್ಟುತ್ತದೆ. ಇದು ಸಾಮಾನ್ಯವಾಗಿ ಕುಂಠಿತಗೊಂಡ, ಬಾಗಿರುವ, ಮತ್ತು ಹಳದಿ ಬಣ್ಣದ ಮೇಲಾವರಣಕ್ಕೆ ಕಾರಣವಾಗುತ್ತದೆ. ಹೊರಹೊಮ್ಮುತ್ತಿರುವ ಸಸಿಗಳನ್ನು ಸಹ ಇದು ಆಕ್ರಮಣ ಮಾಡಬಹುದು. ಇದರಿಂದಾಗಿ ಜಮೀನಿನಲ್ಲಿ ಬಾಡಿದ ಸಸ್ಯಗಳ ತೇಪೆಗಳು ಅಥವಾ ನಡುನಡುವೆ ಖಾಲಿ ಜಾಗಗಳು ಉಂಟಾಗಬಹುದು. ವೈಶಿಷ್ಟ್ಯವೆಂದರೆ, ಗಾಯಗೊಂಡ ಸಸ್ಯಗಳ ಕಾಂಡವು ನೇರಳೆ ಬಣ್ಣಕ್ಕೆ ತಿರುಗಬಹುದು. ಇದು ಫಾಸ್ಪರಸ್ ಕೊರತೆಯನ್ನು ಸೂಚಿಸುತ್ತದೆ. ತಂಪಾದ, ಆರ್ದ್ರ ಮಣ್ಣು, ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತದೆ. ಏಕೆಂದರೆ ಜೋಳದ ಸಸಿಗಳ ಬೆಳವಣಿಗೆ ನಿಧಾನಗೊಳ್ಳುತ್ತದೆ. ಮತ್ತು ದೀರ್ಘಾವಧಿಯವರೆಗೆ ಇವು ಧಾಳಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಬಿಳಿ ಗ್ರಬ್ ಗಳನ್ನು ನಿಯಂತ್ರಿಸುವ ನೈಸರ್ಗಿಕ ಶತ್ರುಗಳಲ್ಲಿ, ಟಿಪಿಯಾ ಮತ್ತು ಮೈಝಿನಮ್ ಪ್ರಭೇದಗಳ ಮತ್ತು ಮತ್ತು ಪಲೆಸಿನಸ್ ಪಾಲಿಟುರೇಟರ್ ಜಾತಿಗೆ ಸೇರಿದ ಪರಾವಲಂಬಿ ಕಣಜಗಳು ಸೇರಿವೆ. ಪರಾವಲಂಬಿ ನೊಣಗಳಲ್ಲಿ ಪಿರ್ಗೊಟಾ ಉಂಡಾಟಾದ ಜಾತಿಗಳು ಸೇರಿವೆ. ಕಾರ್ಡಿಸೆಪ್ಸ್ ಜಾತಿಯ ಶಿಲೀಂಧ್ರಗಳು ಮರಿಹುಳುಗಳಿಗೆ ಸೋಂಕು ತರುತ್ತವೆ ಮತ್ತು ಅವುಗಳ ಸಂಖ್ಯೆಯನ್ನು ನಿಯಂತ್ರಿಸುವ ಪರಿಹಾರಗಳಲ್ಲಿ ಬಳಸಬಹುದು. ಬ್ಯಾಸಿಲಸ್ ಪೊಪಿಲ್ಲಿಯೆ ಮತ್ತು ಬ್ಯಾಸಿಲಸ್ ಲೆಂಟಿಮೋರ್ಬಸ್ ನ ಬ್ಯಾಕ್ಟೀರಿಯಾ ಬೀಜಕಗಳ ಜೊತೆಗೆ ಮಣ್ಣನ್ನು ಇನಾಕ್ಯುಲೇಟ್ ಮಾಡುವುದು ಸಹ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಉತ್ಪನ್ನಗಳೆಲ್ಲವೂ ವಾಣಿಜ್ಯಿಕವಾಗಿ ಲಭ್ಯವಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಒಂದು ಸಂಯೋಜಿತ ವಿಧಾನವನ್ನು ಯಾವಾಗಲೂ ಬಳಸಿ. ಬಿಳಿಯ ಗ್ರಿಬ್ ಗಳ ನಿರ್ವಹಣೆಗೆ, ಅವುಗಳ ಉಪಸ್ಥಿತಿಯನ್ನು ಪತ್ತೆಹಚ್ಚಲು, ಗಿಡ ನೆಡುವ ಮೊದಲು ಜಮೀನಿನ ಸಂಪೂರ್ಣ ಪರಿಶೀಲನೆಯ ಅಗತ್ಯವಾಗಿರುತ್ತದೆ. ಮಣ್ಣಿನ ಕೀಟನಾಶಕಗಳನ್ನು ಹೊಂದಿರುವ ಫ್ಯೂಮಿಗೇಷ್ ಅನ್ನು ಇವುಗಳ ಸಂಖ್ಯೆಯನ್ನು ಕನಿಷ್ಟ ಮಟ್ಟಕ್ಕೆ ತರಲು ಬಳಸಬಹುದು. ಕೆಲವು ಸಂದರ್ಭಗಳಲ್ಲಿ ಬಿಳಿ ಹುಳುಗಳ ಪ್ರಭಾವವನ್ನು ಕಡಿಮೆ ಮಾಡಲು ಬೀಜ ಚಿಕಿತ್ಸೆಯು ಸಹಾಯ ಮಾಡುತ್ತದೆ. ಆದರೆ ಸಾಮಾನ್ಯವಾಗಿ ಯಾವುದೇ ರಾಸಾಯನಿಕ ಚಿಕಿತ್ಸೆಯನ್ನು ಶಿಫಾರಸು ಮಾಡುವುದಿಲ್ಲ.

ಅದಕ್ಕೆ ಏನು ಕಾರಣ

ಫಿಲೋಫಾಗ ವಂಶಕ್ಕೆ ಸೇರಿದ ಹಲವಾರು ಜೀರುಂಡೆಗಳು, ಸಾಮಾನ್ಯವಾಗಿ "ಬಿಳಿ ಹುಳುಗಳು( ಗ್ರಬ್ ಗಳು)" ಎಂದು ಕರೆಯಲಾಗುವ ಲಾರ್ವಾಗಳಿಂದ (100 ಕ್ಕಿಂತಲೂ ಹೆಚ್ಚಿನ ಜಾತಿಗಳು) ಹಾನಿ ಉಂಟಾಗುತ್ತದೆ. ಇತರ ಹುಳುಗಳು ಕೂಡ ಇವುಗಳಲ್ಲಿ ಸೇರಿರಬಹುದು ಆದ್ದರಿಂದ ಅವುಗಳನ್ನು ಗುರುತಿಸಲು ಕಲಿಯುವುದು ಮುಖ್ಯ. ಜೀರುಂಡೆಗಳು 12 ರಿಂದ 25 ಮಿಮೀ ಉದ್ದವಿರುತ್ತವೆ, ಹಳದಿಯಿಂದ ಕೆಂಪು ಮಿಶ್ರಿತ ಕಂದು ಬಣ್ಣ ಅಥವಾ ಕಪ್ಪಾಗಿರುತ್ತವೆ. ದೃಢವಾಗಿದ್ದು, ಉದ್ದನೆಯ ಆಕಾರ ಹೊಂದಿರುತ್ತವೆ. ಮರಿಗಳು ಕಂದು ತಲೆ ಮತ್ತು C- ಆಕಾರದ, 20 ರಿಂದ 45 ಮಿಮೀ ಉದ್ದ ಮತ್ತು ಮೂರು ಜೋಡಿ ಕಾಲುಗಳನ್ನು ಹೊಂದಿದ್ದು ಬಿಳಿ ಬಣ್ಣದಲ್ಲಿರುತ್ತವೆ. ದೇಹದ ಗೋಡೆಯ ಮೂಲಕ ಮಣ್ಣಿನ ಕಣಗಳು ಕಾಣುವುದರಿಂದ ಹೊಟ್ಟೆಯ ಹಿಂಭಾಗದ ಭಾಗವು ಗಾಢವಾಗಿದ್ದು ಸ್ವಲ್ಪ ದೊಡ್ಡದಾಗಿರುತ್ತದೆ. ಈ ಕೀಟಗಳ ಜೀವನ ಚಕ್ರವು ವ್ಯಾಪಕವಾಗಿ ಬದಲಾಗಬಹುದು . ಆದ್ದರಿಂದ, ಇವುಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿ ಇಡಲು ತಡೆಗಟ್ಟುವ ನಿಯಂತ್ರಣ ಕ್ರಮಗಳು ಅವಶ್ಯವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಹೆಚ್ಚು ಸಹಿಷ್ಣು ಪ್ರಭೇದಗಳನ್ನು ಬೆಳೆಯಿರಿ.
  • ಹುಳುಗಳ ಗರಿಷ್ಟ ಸಂಖ್ಯೆಯನ್ನು ತಪ್ಪಿಸಲು ನೆಡುವ ಸಮಯವನ್ನು ಬದಲಾಯಿಸಿ.
  • ಪೀಡಿತ ಪ್ರದೇಶದಲ್ಲಿ ಕೆಲವು ಸಸ್ಯಗಳನ್ನು ಅಗೆಯುವ ಮೂಲಕ ಮತ್ತು ಬೇರಿನ ವಲಯದಲ್ಲಿ ಬಿಳಿ ಹುಳುಗಳನ್ನು ಹುಡುಕುವ ಮೂಲಕ ಜಮೀನಿನ ಮೇಲ್ವಿಚಾರಣೆ ಮಾಡಿ.
  • ಆಶ್ರಯದಾತವಲ್ಲದ ಬೆಳೆಗಳೊಂದಿಗೆ, ಆಳವಾಗಿ-ಬೇರೂರುವ ದ್ವಿದಳ ಧಾನ್ಯಗಳೊಂದಿಗೆ (ಕುದುರೆ ಮೇವಿನ ಸೊಪ್ಪು ಅಥವಾ ಕ್ಲೋವರ್ಗಳು) ಸರದಿ ಬೆಳೆ ಯೋಜಿಸಿ.
  • ಜಮೀನನ್ನು ಕಳೆಗಳು ಮತ್ತು ಹುಲ್ಲಿನಿಂದ ಮುಕ್ತಗೊಳಿಸುವ ಮೂಲಕ ಮೊಟ್ಟೆಗಳನ್ನು ಇಡುವ ಸಂಖ್ಯೆಯನ್ನು ಕಡಿಮೆ ಮಾಡಿ.
  • ಹಿಂದೆ ಸೋಯಾಬೀನ್ ಅಥವಾ ಆಲೂಗಡ್ಡೆ ಬೆಳೆದ ಜಮೀನಲ್ಲಿ ಜೋಳ ಬಿತ್ತನೆ ತಪ್ಪಿಸಿ.
  • ಮಧ್ಯ-ಋತುವಿನಲ್ಲಿ ಉಳುಮೆ ಮಾಡುವ ಮೂಲಕ ಪರಭಕ್ಷಕಗಳಿಗೆ ಕೀಟಗಳನ್ನು ಒಡ್ಡಿರಿ.
  • ಸುಗ್ಗಿಯ ನಂತರ ಆಳವಾಗಿ ಉಳುಮೆ ಮಾಡಿ ಕೊಯ್ಲಿನ ಉಳಿಕೆಗಳು ಮತ್ತು ಹುಲ್ಲುಗಳನ್ನು ತೆಗೆದುಹಾಕಿ ಮತ್ತು ಸುಟ್ಟು ಬಿಡಿ.
  • ಪರ್ಯಾಯವಾಗಿ, ಹುಳುಗಳನ್ನು ಹೊರತೆಗೆಯಲು ಮತ್ತು ತಿನ್ನಲು ಹುಲ್ಲುಗಾವಲಿನ ಹಂದಿಗಳನ್ನು ಬಳಸಿ.
  • ಕೀಟನಾಶಕಗಳ ಅತಿ ಬಳಕೆ ತಪ್ಪಿಸಿ.
  • ಇದು ಬಿಳಿ ಹುಳುಗಳ ಜೊತೆಗೆ ನೈಸರ್ಗಿಕ ಪರಭಕ್ಷಕಗಳ ಮೇಲೂ ಸಹ ಪರಿಣಾಮ ಬೀರುತ್ತದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ