ಇತರೆ

ಸುಳಿ ನೊಣ

Atherigona sp.

ಕೀಟ

5 mins to read

ಸಂಕ್ಷಿಪ್ತವಾಗಿ

  • ನೊಣಗಳು ಬೆಳೆಯುತ್ತಿರುವ ಸಸಿಗಳ ಚಿಗುರುಗಳನ್ನು ತಿನ್ನುತ್ತದೆ.
  • ಇದು "ಡೆಡ್ ಹಾರ್ಟ್" ಗೆ ಕಾರಣವಾಗುತ್ತದೆ.
  • ಹೊಸ ಚಿಗುರಿನ ಪ್ರವೇಶದ್ವಾರಗಳಲ್ಲಿ.
  • ಸಣ್ಣ, ವೃತ್ತಾಕಾರದ ಗಾಯಗಳು ಗೋಚರಿಸುತ್ತವೆ.
  • ಎಲೆಗಳು ಹಳದಿ-ಹಸಿರು ಬಣ್ಣಕ್ಕೆ ತಿರುಗುತ್ತದೆ ಮತ್ತು ಜೋಲು ಬೀಳುತ್ತವೆ.
  • ಸಸಿಗಳ ಬೆಳವಣಿಗೆ ಕುಂಠಿತವಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

6 ಬೆಳೆಗಳು
ಮಸೂರ ಅವರೆ
ಮೆಕ್ಕೆ ಜೋಳ
ಸಿರಿಧಾನ್ಯ
ಭತ್ತ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ನೊಣಗಳು ಬೆಳೆಯುತ್ತಿರುವ ಸಸಿಗಳ ಚಿಗುರುಗಳನ್ನು ತಿನ್ನುತ್ತದೆ. ಇದು ಗೋಧಿ ಮತ್ತು ಮೆಕ್ಕೆ ಜೋಳದಲ್ಲಿ "ಡೆಡ್ ಹಾರ್ಟ್" ಗೆ ಕಾರಣವಾಗುತ್ತದೆ. ಹೊಸ ಚಿಗುರಿನ ಪ್ರವೇಶದ್ವಾರಗಳಲ್ಲಿ. ಸಣ್ಣ, ವೃತ್ತಾಕಾರದ ಗಾಯಗಳು ಸಾಮಾನ್ಯವಾಗಿ ಮೊದಲ ಎಲೆಕವಚಕ್ಕಿಂತ ಮೇಲೆ ಗೋಚರಿಸುತ್ತವೆ. ಮುತ್ತುವಿಕೆಯ 6-7 ದಿನಗಳ ನಂತರ, ಬೆಳೆಯುತ್ತಿರುವ ಎಲೆಗಳಲ್ಲಿ ಹಾನಿಯ ಲಕ್ಷಣಗಳು ಹೆಚ್ಚು ಪ್ರಮುಖವಾಗಿ ಕಂಡುಬರುತ್ತವೆ. ತುಂಡಾದ ಎಲೆಗಳು ತಿಳಿ ಹಸಿರು ಅಥವಾ ಹಳದಿ-ಹಸಿರು ಬಣ್ಣಕ್ಕೆ ತಿರುಗುತ್ತದೆ ಮತ್ತು ಜೋಲು ಬೀಳುತ್ತವೆ. ಅಂಚುಗಳಿಂದ ಒಳಗೆ ಮಡಚಿಕೊಳ್ಳುತ್ತದೆ. ತೀವ್ರ ಮುತ್ತುವಿಕೆಯ ಸಂದರ್ಭಗಳಲ್ಲಿ ಸಸಿಗಳು ಬಾಡುತ್ತವೆ. ತುದಿಯ ಬೆಳವಣಿಗೆ ಸ್ಥಗಿತಗೊಂಡು, ಸಸ್ಯ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಸಾಮಾನ್ಯವಾಗಿ, ಪ್ರತಿ ಸಸಿಗೆ ಕೇವಲ ಒಂದು ಲಾರ್ವಾ ಕಂಡುಬರುತ್ತದೆ. ಆದಾಗ್ಯೂ ಹೆಣ್ಣು ಕೀಟ ಹೆಚ್ಚಿನ ಮೊಟ್ಟೆಗಳನ್ನು ಇಡಬಹುದು.

Recommendations

ಜೈವಿಕ ನಿಯಂತ್ರಣ

ಇದುವರೆಗೂ ಈ ಕೀಟಕ್ಕೆ ಯಾವುದೇ ಜೈವಿಕ ನಿಯಂತ್ರಣ ನಮಗೆ ತಿಳಿದಿಲ್ಲ. ಈ ಬಗ್ಗೆ ನಿಮಗೆ ಯಾವುದಾದರೂ ಮಾಹಿತಿ ಇದ್ದರೆ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ , ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಈ ಕೀಟಗಳ ಅತಿಯಾದ ಸಂಖ್ಯೆಯನ್ನು ತಪ್ಪಿಸಲು ಮೊದಲೇ ಬಿತ್ತನೆ ಮಾಡುವ ಮೂಲಕ ಮುತ್ತುವಿಕೆ ತಡೆಯುವುದು ಸಧ್ಯಕ್ಕೆ ಮಾಡಲಾಗುವ ಶಿಫಾರಸ್ಸಾಗಿದೆ. ಪೈರೆಥ್ರಾಯ್ಡ್ ಕೀಟನಾಶಕಗಳ ಬಳಕೆಯು ಸಂಖ್ಯೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅದಕ್ಕೆ ಏನು ಕಾರಣ

ಆಥೆರಿಗೊನಾ ಕುಲಕ್ಕೆ ಸೇರಿದ ಹಲವಾರು ನೊಣಗಳ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ಈ ಸಣ್ಣ, ಬೂದುಬಣ್ಣದ ನೊಣಗಳು ವಿವಿಧ ಸಸ್ಯಗಳನ್ನು ತಿನ್ನುತ್ತವೆ ಮತ್ತು ಗೋಧಿ, ಮೆಕ್ಕೆ ಜೋಳ ಮತ್ತು ಹುಲ್ಲು ಜೋಳದಂತಹ ಪ್ರಮುಖ ಬೆಳೆಗಳ ಮೇಲೂ ದಾಳಿಮಾಡುತ್ತವೆ. ಮೆಣಸು, ಬೀನ್ಸ್ ಅಥವಾ ಮಸೂರಗಳಂತಹ ಇತರ ಸಸ್ಯಗಳ ಮೇಲೂ ಸಹ ಪರಿಣಾಮ ಬೀರಬಹುದು. ಹೆಣ್ಣುಗಳು ಒಂದು, ಗುಂಪಾಗಿ ಅಥವಾ ಅಪರೂಪಕ್ಕೆ ಜೋಡಿಯಾಗಿ ಕಾಂಡಗಳ ಮೇಲೆ ಅಥವಾ ಮಣ್ಣಿನ ಮೇಲೆ ಸಸಿಗಳ ತಳದಲ್ಲಿ (3-4-ಎಲೆಗಳ ಹಂತ ಅನುಕೂಲಕರ) ಮೊಟ್ಟೆಗಳನ್ನು ಇಡುತ್ತವೆ. ಹಟ್ಟಿ ಗೊಬ್ಬರದ ಬಳಕೆ ಹೆಚ್ಚು ಹೆಣ್ಣು ನೊಣಗಳನ್ನು ಆಕರ್ಷಿಸುತ್ತದೆ ಮತ್ತು ಮೊಟ್ಟೆ ಇಡುವಿಕೆಯನ್ನು ಹೆಚ್ಚಿಸುತ್ತದೆ. ಹೊಸದಾಗಿ ಹೊರಹೊಮ್ಮಿದ ಲಾರ್ವಾಗಳು ಕೊಳವೆಯಾಕಾರದಲ್ಲಿದ್ದು, ಬಿಳಿ ಬಣ್ಣದಲ್ಲಿರುತ್ತವೆ. ಅವು ಸಸ್ಯದ ಮೇಲಕ್ಕೇರಿ ಹೊಸ ಚಿಗುರಿನ ನವಿರಾದ ಭಾಗಗಳನ್ನು, ಸಾಮಾನ್ಯವಾಗಿ ಮೊದಲ ಎಲೆ ಕವಚಕ್ಕಿಂತ ಮೇಲಿನ ಭಾಗವನ್ನು ತಿನ್ನಲು ತಮ್ಮ ಬಾಯಿಕೊಕ್ಕೆಯನ್ನು ಬಳಸುತ್ತವೆ. ಕೋಶಾವಸ್ಥೆ ಕಾಂಡದ ತಳದಲ್ಲಿ ಸಾಮಾನ್ಯವಾಗಿ ಸಂಭವಿಸುತ್ತದೆ. ಈ ನೊಣಗಳು ಕೇಂದ್ರ ಮತ್ತು ಆಗ್ನೇಯ ಏಷ್ಯಾದ ಕೃಷಿಯಲ್ಲಿ ಬಹಳ ಹಾನಿಕಾರಕ ಕೀಟಗಳಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಕೀಟ ಮುತ್ತಿರುವ ಸ್ಥಳದಿಂದ ಮಣ್ಣನ್ನು ಆರೋಗ್ಯವಂತ ಸ್ಥಳಕ್ಕೆ ಸ್ಥಳಾಂತರಿಸಬೇಡಿ.
  • ಲಭ್ಯವಿದ್ದರೆ ಬೇಗ ಚೇತರಿಸಿಕೊಳ್ಳುವ ಪ್ರಭೇದಗಳನ್ನು ಆಯ್ಕೆಮಾಡಿ.
  • ಕೆಲವೊಂದು ನಿದರ್ಶನಗಳಲ್ಲಿ, ಬೇಗ ಬಿತ್ತನೆ ಮಾಡುವ ಮೂಲಕ, ನೊಣಗಳು ಅತ್ಯಧಿಕ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುವ ಮೊದಲೇ ಬೆಳೆಗಳು ಸುಲಭವಾಗಿ ರೋಗಕ್ಕೆ ಒಳಗಾಗುವ ಹಂತವನ್ನು (ಎಳೆ ಸಸಿಗಳು) ದಾಟಲು ಅವಕಾಶ ಮಾಡಿ ಕೊಡಬಹುದು.
  • ಮೆಕ್ಕೆ ಜೋಳದಲ್ಲಿ ನಿಧಾನವಾಗಿ ಬಿತ್ತನೆ ಮಾಡುವುದು ಡೆಡ್ ಹಾರ್ಟ್ ಪ್ರಮಾಣವನ್ನು ತಗ್ಗಿಸಲು ನೆರವಾಗುವುದು ಕಂಡುಬಂದಿದೆ.
  • ಜಮೀನಿನಲ್ಲಿ ಮತ್ತು ಸುತ್ತಮುತ್ತಲಿನಲ್ಲಿ ಕಳೆಗಳನ್ನು ತೆಗೆದುಹಾಕಿ.
  • ಉತ್ತಮ ಮತ್ತು ಸಮತೋಲಿತ ರಸಗೊಬ್ಬರ ಬಳಕೆ ಯೋಜಿಸಿ.
  • ಸಸ್ಯಗಳು ಹೊರಹೊಮ್ಮಿದ ನಂತರ ಕೊಟ್ಟಿಗೆ ಗೊಬ್ಬರ ಬಳಕೆಯನ್ನು ತಪ್ಪಿಸಿ. ಪ್ರಯೋಜನಕಾರಿ ಕೀಟಗಳ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಲು ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ.
  • ಸುಗ್ಗಿಯ ನಂತರ ಧಾಳಿಗೆ ಒಳಗಾಗದ ಬೆಳೆಗಳೊಂದಿಗೆ ಬೆಳೆ ಸರದಿ ಯೋಜನೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ