ಭತ್ತ

ವೈಟ್ ಬ್ಯಾಕ್ಡ್ ಪ್ಲಾನ್ಟ್ ಹಾಪರ್

Sogatella furcifera

ಕೀಟ

5 mins to read

ಸಂಕ್ಷಿಪ್ತವಾಗಿ

  • ಮರಿಹುಳುಗಳು ಮತ್ತು ದೊಡ್ಡ ಹುಳುಗಳೆರಡೂ ಕಾಂಡಗಳ ಮೇಲಿನ ಭಾಗದಲ್ಲಿ ಕಂಡುಬರುತ್ತವೆ.
  • ಎಲೆಗಳು ಸೊರಗುತ್ತವೆ ಮತ್ತು ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
  • ಕಂದು ಬಣ್ಣದ ಜೊಂಡುಗಳು, ಬೂಷ್ಟು ಹಿಡಿದ ಅಥವಾ ಕಪ್ಪು-ಬಿರುಕುಗೊಂಡ ಧಾನ್ಯಗಳು ಮತ್ತು ಧಾನ್ಯದ ಉತ್ಪಾದನೆಯಲ್ಲಿ ಕಡಿತ.
  • ತೀವ್ರವಾಗಿ ಸೋಂಕಾದ ಸಸ್ಯಗಳು ಸಾಯಬಹುದು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಈ ಕೀಟವು ಸಾಮಾನ್ಯವಾಗಿ ಭತ್ತದಲ್ಲಿ ತೆನೆ ಅಥವಾ ಹೂಗೊಂಚಲು ಹಂತದೊಂದಿಗೆ ಬರುತ್ತದೆ. ಮರಿಹುಳುಗಳು ಮತ್ತು ದೊಡ್ಡ ಹುಳುಗಳೆರಡೂ ಸಸ್ಯಗಳ ಮೇಲಿನ ಭಾಗದಲ್ಲಿ ಕಂಡುಬರುತ್ತವೆ, ಸಾಮಾನ್ಯವಾಗಿ ಎಲೆಗಳು ಮತ್ತು ಕಾಂಡಗಳ ನಡುವಿನ ಜಾಗದಲ್ಲಿ. ಅವು ಆಹಾರ ಕೊಳವೆಯ ರಸವನ್ನು ತಿನ್ನುತ್ತವೆ ಮತ್ತು ಅಂಗಾಂಶಗಳನ್ನು ಹಾನಿ ಮಾಡುತ್ತವೆ. ಇದರ ಪರಿಣಾಮವಾಗಿ ನೀರು ಮತ್ತು ಪೌಷ್ಟಿಕ ದ್ರವ್ಯಗಳ ನಷ್ಟವಾಗುತ್ತದೆ. ಎಲೆಗಳು ಸೊರಗುತ್ತವೆ ಮತ್ತು ಸಸ್ಯಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಹೆಚ್ಚಿನ ಜನ ಸಾಂದ್ರತೆ "ಹಾಪರ್ ಬರ್ನ್ " ಗೆ ಕಾರಣವಾಗಬಹುದು. ಅಂದರೆ,ಎಲೆಗಳು ಹಂತಹಂತವಾಗಿ ತುದಿಯಿಂದ ಮಧ್ಯ ನಾಳದವರೆಗೆ ಕಿತ್ತಳೆ-ಹಳದಿ ಬಣ್ಣಕ್ಕೆ ತಿರುಗುತ್ತದೆ, ನಂತರ ಒಣಗಿ ಸಾಯುತ್ತವೆ. ಸಸ್ಯಗಳ ಬೆಳವಣಿಗೆ ಕುಂಠಿತವಾಗುತ್ತದೆ. ಕಡಿಮೆ ಜೊಂಡು ಬೆಳೆಯುತ್ತವೆ ಮತ್ತು ಅವು ಬಾಗಬಹುದು. ಅವುಗಳು ಹೂಗೊಂಚಲುಗಳ ಮೇಲೂ ದಾಳಿ ಮಾಡಬಹುದು. ಇದರಿಂದ. ಕಂದು ಬಣ್ಣದ ಜೊಂಡುಗಳು, ಬೂಷ್ಟು ಹಿಡಿದ ಅಥವಾ ಕಪ್ಪು-ಬಿರುಕುಗೊಂಡ ಧಾನ್ಯಗಳು ಮತ್ತು ಧಾನ್ಯದ ಉತ್ಪಾದನೆಯಲ್ಲಿ ಕಡಿತ ಕಂಡುಬರುತ್ತದೆ.

Recommendations

ಜೈವಿಕ ನಿಯಂತ್ರಣ

ನೈಸರ್ಗಿಕವಾಗಿ ಬರುವ ಜೈವಿಕ ನಿಯಂತ್ರಣ ಏಜೆಂಟ್ ಗಳು S. ಫರ್ಸಿಫೆರಾದ ಪ್ರಮಾಣವನ್ನು ಕಡಿಮೆ ಮಾಡುತ್ತವೆ. ಪರಭಕ್ಷಕಳೆಂದರೆ ಮಿರಿಡ್ ಬಗ್ ಸಿರ್ಟೋರ್ಹಿನಸ್ ಲಿವಿಡಿಪ್ನೀಸ್ ಮತ್ತು ಕೀಟಗಳ ಮೊಟ್ಟೆಗಳನ್ನು ಆಕ್ರಮಿಸುವ ಅನಗ್ರಾಸ್ (ಎ ಫ್ಲಾವಲೋಸ್, ಎ ಪೆರೊಫೊರೇಟರ್, ಎ ಆಪ್ಟಾಬಿಲಿಸ್ ಮತ್ತು ಎ. ಫ್ರೆಕ್ವೆನ್ಸ್) ಜಾತಿಯ ಕೆಲವು ನೊಣಗಳ ಪ್ರಭೇದಗಳು ಸೇರಿವೆ. ಈ ಕೀಟದ ಮೇಲೆ ಆಕ್ರಮಣ ಮಾಡುವ ಹಲವಾರು ಪರಭಕ್ಷಕ ಜೇಡಗಳು ಸಹ ಇವೆ, ಉದಾಹರಣೆಗೆ ಲಿಕೋಸಾ ಸ್ಯೂಡೋಅನ್ಯುಲಾಟಾ. ಅಂತಿಮವಾಗಿ, ಶಿಲೀಂಧ್ರ ರೋಗಕಾರಕವಾದ ಎರಿನಿಯಾ ಡೆಲ್ಫಾಸಿಸ್ ಸಹ ಕೀಟದ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಇವುಗಳ ನಿರ್ವಹಣೆಗೆ ಕೀಟನಾಶಕಗಳನ್ನು ಹೆಚ್ಚು ಬಳಸಲಾಗುತ್ತಿತ್ತು, ಇದು ಪ್ರತಿರೋಧದ ವೃದ್ಧಿಗೆ ಕಾರಣವಾಗಿದೆ. ಮೆಥೊಮಿಲ್, ಆಕ್ಸಮೈಲ್, ಕೆಲವು ಪೈರೆಥ್ರಾಯ್ಡ್ಸ್, ಬುಪ್ರೊಫೆಸಿನ್ ಮತ್ತು ಪೈಮ್ಟ್ರೋಜಿನ್ಗಳನ್ನು ಪರಿಣಾಮಕಾರಿ ಚಿಕಿತ್ಸೆಗಾಗಿ ಪರ್ಯಾಯವಾಗಿ ಬಳಸಬೇಕು.

ಅದಕ್ಕೆ ಏನು ಕಾರಣ

ವೈಟ್ ಬ್ಯಾಕ್ಡ್ ಪ್ಲಾನ್ಟ್ ಹಾಪರ್ ಎಂದು ಕರೆಯಲಾಗುವ ಸೊಗಟೆಲ್ಲ ಫರ್ಸಿಫೆರಾದ ಆಹಾರ ಸೇವನೆಯಿಂದ ಈ ಹಾನಿ ಉಂಟಾಗುತ್ತದೆ. ದೊಡ್ಡ ಹುಳುಗಳು ಸುಮಾರು 3 ಮಿಮೀ ಉದ್ದ, ತಿಳಿ ಕಂದು ಬಣ್ಣ ಅಥವಾ ಕಪ್ಪು ಬಣ್ಣದ್ದಾಗಿರುತ್ತವೆ. ಮತ್ತು ಅವುಗಳ ಮುಂದಿನ ರೆಕ್ಕೆಗಳು ಅರೆಪಾರದರ್ಶಕವಾಗಿದ್ದು ಅವುಗಳ ತುದಿಯಲ್ಲಿ ಒಂದು ವಿಶಿಷ್ಟ ಗಾಢ ಕಂದು ಬಣ್ಣದ ಗುರುತು ಇರುತ್ತವೆ. ಈ ಕೀಟವು ಹೆಚ್ಚು ಇಳುವರಿಯ ಪ್ರಭೇದಗಳನ್ನು ಆಕ್ರಮಿಸುತ್ತದೆ. ಇದರ ಸಂತಾನೋತ್ಪತ್ತಿಯ ಸಾಮರ್ಥ್ಯ ಮತ್ತು ಇದರ ವಲಸಿಗ ಪದ್ಧತಿಗಳ ಕಾರಣದಿಂದ ಪೂರ್ವ-ಏಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಇದು ಭತ್ತದ ಒಂದು ಪ್ರಮುಖ ಕೀಟವಾಗಿದೆ. ಇದು ನಿರಂತರವಾಗಿ ವೈರಸ್ಗಳನ್ನು ಹರಡುತ್ತದೆ, ಉದಾಹರಣೆಗೆ ರೈಸ್ ಬ್ಲಾಕ್ ಸ್ಟ್ರೀಕ್ಡ್ ಡ್ವಾರ್ಫ್ ವೈರಸ್ ಮತ್ತು ಸದರ್ನ್ ರೈಸ್ ಬ್ಲಾಕ್-ಸ್ಟ್ರೀಕ್ಡ್ ಡ್ವಾರ್ಫ್ ವೈರಸ್. ನಾಟಿಯ ಸಮಯ, ಸಾರಜನಕವು ಸಮೃದ್ಧವಾಗಿರುವ ರಸಗೊಬ್ಬರಗಳ ಹೆಚ್ಚಿನ ಬಳಕೆ ಮತ್ತು ನೀರಾವರಿಗಾಗಿ ನೀರಿನ ಲಭ್ಯತೆಯು ಇವುಗಳ ಸಂಖ್ಯೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತವೆ. ತಾಪಮಾನ, ತೇವಾಂಶ ಅಥವಾ ಮಳೆಯಂಥ ಪರಿಸರ ಅಂಶಗಳೂ ಸಹ ಇದರ ಜೀವನ ಚಕ್ರಕ್ಕೆ ಪ್ರಮುಖ ಚಾಲಕಗಳಾಗಿವೆ.


ಮುಂಜಾಗ್ರತಾ ಕ್ರಮಗಳು

  • ನಾಟಿ ಮಾಡುವ ಸಮಯದಲ್ಲಿ ನಿರೋಧಕ ಪ್ರಭೇದಗಳನ್ನು ಆಯ್ಕೆಮಾಡಿ.
  • ಕೀಟಗಳ ಸಂಖ್ಯೆ ಹೆಚ್ಚಾಗುವುದನ್ನು ತಪ್ಪಿಸಲು ಋತುವಿಗಿಂತ ಮೊದಲೇ ನಾಟಿ ಮಾಡಿ ಅಥವಾ ಲಭ್ಯವಿದ್ದರೆ ಬೇಗ ಪರಿಪಕ್ವವಾಗುವ ಪ್ರಭೇದಗಳನ್ನು ಬಳಸಿ.
  • ಕೀಟದ ಜೀವನ ಚಕ್ರವನ್ನು ಮುರಿಯಲು ಪಕ್ಕದ ಹೊಲಗಳೊಂದಿಗೆ ಏಕಕಾಲಿಕವಾಗಿ ನಾಟಿ ಮಾಡಿ.
  • ಸಾರಜನಕದ ಬಳಕೆಯನ್ನು ವಿಭಜಿಸಿ.
  • ಸ್ವಲ್ಪ ಸಮಯದವರೆಗೆ ಭತ್ತ ನೆಡಬೇಡಿ ಅಥವಾ ಹೊಲವನ್ನು ಖಾಲಿ ಬಿಡಿ.
  • ಸೋಂಕು ತೀವ್ರವಾದರೆ ಬೆಳವಣಿಗೆಯ ಋತುವಿನಲ್ಲಿ ಮೂರು ಅಥವಾ ನಾಲ್ಕು ದಿನಗಳ ಕಾಲ ಎರಡು ಬಾರಿ ಹೊಲವನ್ನು ನೀರಿನಲ್ಲಿ ಮುಳುಗಿಸಿ.
  • ವರ್ಷಕ್ಕೆ ಎರಡು ಬೆಳೆಗಳಿಗಿಂತ ಹೆಚ್ಚು ಬೆಳೆಯಬೇಡಿ.
  • ವಿಶಾಲ ರೋಹಿತ ಕೀಟನಾಶಕಗಳನ್ನು ಬಳಸಬೇಡಿ ಏಕೆಂದರೆ ಅವು ನೈಸರ್ಗಿಕ ಶತ್ರುಗಳ ಮೇಲೆ ಪರಿಣಾಮ ಬೀರುತ್ತವೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ