ಎಲೆಕೋಸು

ವಜ್ರಕವಚದ ಪತಂಗ

Plutella xylostella

ಕೀಟ

5 mins to read

ಸಂಕ್ಷಿಪ್ತವಾಗಿ

  • ಹುಳುಗಳು ಎಲೆಯನ್ನು ತಿಂದು ಚಿಕ್ಕಚಿಕ್ಕ ತೂತುಗಳನ್ನು ಮಾಡುತ್ತವೆ.
  • ಎಲೆಯ ಒಂದು ಪದರವನ್ನು ಹುಳುಗಳು ತಿನ್ನುವುದರಿಂದ ಎಲೆಯು ಪಾರದರ್ಶಕವಾಗಿ ಕಿಟಕಿಯ ಗಾಜಿನಂತೆ ಕಾಣುತ್ತದೆ.
  • ಕೋಸುಗೆಡ್ಡೆಯ (ಬ್ರೊಕೋಲಿ) ಕಿರುಹೂವುಗಳಲ್ಲಿ ಹಾಗೂ ಹೂಕೋಸಿನ ಬಿಳಿಯ ಭಾಗದಲ್ಲಿ ಪತಂಗವು ಪ್ಯೂಪಾವಸ್ಥೆಗೆ ಬೆಳೆಯುತ್ತದೆ, ಇದರಿಂದ ಬೆಳೆ ಹಾಳಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

3 ಬೆಳೆಗಳು
ಎಲೆಕೋಸು
ಕ್ಯಾನೋಲ
ಹೂಕೋಸು

ಎಲೆಕೋಸು

ರೋಗಲಕ್ಷಣಗಳು

ಈ ಪತಂಗವನ್ನು ನಿರುಪದ್ರವಿಯೆಂದು ಪರಿಗಣಿಸಲಾಗಿದೆ. ಆದರೆ ಕೀಟಗಳು ನಿಬಿಡವಾಗಿದ್ದರೆ ಬ್ರಾಸಿಕಾ ಜಾತಿಯ ಬೆಳೆಗೆ ತೊಂದರೆ ಉಂಟಾಗಬಹುದು. ಎಲೆಯ ಕೆಳ ಮೇಲ್ಮೈಯನ್ನು ಕೆರೆಯುವ ಅಥವಾ ಎಲೆಯ ಅಂಗಾಂಶವನ್ನು ಕೊರೆಯುವ ಲಾರ್ವಾದಿಂದಾಗಿ ಹಾನಿಯುಂಟಾಗುತ್ತದೆ. ಅನಿಯಮಿತ ಕಲೆಗಳು ಕಾಣಿಸಿಕೊಳ್ಳುತ್ತವೆ, ಕೆಲವೊಮ್ಮೆ ಎಲೆಯ ಮೇಲ್ಮೈಗೆ ಯಾವುದೇ ಹಾನಿಯಾಗಿರುವುದಿಲ್ಲವಾದ್ದರಿಂದ ಎಲೆಯು ಪಾರದರ್ಶಕವಾಗಿ ಕಿಟಕಿಯ ಗಾಜಿನಂತೆ ಭಾಸವಾಗುತ್ತದೆ. ಬೆಳೆದ ಲಾರ್ವಾ ಹೆಚ್ಚು ಆಹಾರ ಬೇಡುತ್ತದೆ, ಸೋಂಕು ತೀವ್ರವಾದಾಗ ಎಲೆನಾಳಗಳನ್ನು ಮಾತ್ರವೇ ಉಳಿಸಿ ಇಡೀ ಎಲೆಯನ್ನೇ ತಿಂದುಬಿಡುವ ಸಾಧ್ಯತೆ ಇರುತ್ತದೆ. ಕಿರುಹೂವುಗಳಲ್ಲಿ ಲಾರ್ವಾಗಳಿದ್ದರೆ ಕೋಸುಗೆಡ್ಡೆ ಮತ್ತು ಹೂಕೋಸುಗಳ ಶಿರವು ಪೂರ್ತಿಯಾಗಿ ಬೆಳೆಯಲು ಸಾಧ್ಯವಾಗುವುದಿಲ್ಲ.

Recommendations

ಜೈವಿಕ ನಿಯಂತ್ರಣ

ಪರಾವಲಂಬಿ ಕೀಟಗಳಾದ ಡಯಾಡೆಗ್ಮಾ ಇನ್ಸುಲೇರ್, ಓಮಿಝಸ್ ಸೊಕೊಲೊವ್ಸ್ಕಿ, ಮೈಕ್ರೊಪ್ಲೈಟಿಸ್ ಪ್ಲೂಟೆಲೇ, ಡಯಾಡ್ರೋಮಸ್ ಸಬ್ಟಿಲಿಕಾರ್ನಿಸ್ ಮತ್ತು ಕೊಟೇಸಿಯಾ ಪ್ಲೂಟೆಲೇ ಮುಂತಾದವು ವಜ್ರಕವಚ ಪತಂಗದ ಶತ್ರುಗಳು. ಇದಲ್ಲದೆ ಕೀಟಾವಲಂಬಿ ಶಿಲೀಂಧ್ರಗಳನ್ನು ಅಥವಾ ನ್ಯೂಕ್ಲಿಯರ್ ಪಾಲಿಹೈಡ್ರೊಸಿಸ್ ವೈರಸ್ಸನ್ನು ಹೊಂದಿರುವ ದ್ರಾವಣವನ್ನು ಉಪಯೋಗಿಸಿ ಈ ಪತಂಗದ ಸಂಖ್ಯೆಯನ್ನು ನಿಯಂತ್ರಿಸಬಹುದು. ಬಾಸಿಲಸ್ ತುರಿಂಜಿಯೆನ್ಸಿಸ್ ಇರುವ ಕೀಟನಾಶಕಗಳು ಬಹಳ ಪ್ರಯೋಜನಕಾರಿಯಾಗಿದ್ದರೂ ಕೂಡ ಪ್ರತಿರೋಧ ಬೆಳೆಸಿಕೊಳ್ಳುವುದನ್ನು ತಡೆಯಲು ಉತ್ಪನ್ನಗಳನ್ನು ಆಗಾಗ ಬದಲಿಸಿ ಬಳಸುವುದು ಉತ್ತಮ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಹೆಚ್ಚಿನ ವರ್ಗದ ಕೀಟನಾಶಕಗಳಿಗೂ ಈ ಪತಂಗವು ಪ್ರತಿರೋಧ ತೋರುವುದು ವ್ಯಾಪಕವಾಗಿ ಕಂಡುಬಂದಿದೆ, ಹಾಗಾಗಿ ಸಕ್ರಿಯ ಪದಾರ್ಥಗಳನ್ನು ಬದಲಾಯಿಸಿ ಉಪಯೋಗಿಸುವುದು ಉತ್ತಮ. 80ರ ದಶಕದಲ್ಲೇ ಅತಿಯಾಗಿ ಬಳಸಿದ್ದರಿಂದ ಪೈರೆತ್ರಾಯಿಡ್ಸ್ ಹೊಂದಿರುವ ಉತ್ಪನ್ನಗಳು ಈಗಾಗಲೇ ಕೆಲಸ ಮಾಡುವುದು ನಿಲ್ಲಿಸಿವೆ.

ಅದಕ್ಕೆ ಏನು ಕಾರಣ

ಪ್ಲುಟೆಲ್ಲಾ ಕ್ಸೈಲೋಸ್ಟೆಲಾ ಎಂಬ ಪತಂಗದ ಲಾರ್ವಾ ಹಾನಿಗೆ ಕಾರಣ. ಬ್ರಾಸಿಕಾ ಪ್ರಭೇದದ ಕೋಸುಗೆಡ್ಡೆ, ಎಲೆಕೋಸು, ಹೂಕೋಸು, ಮೂಲಂಗಿ ಮತ್ತು ಟರ್ನಿಪ್ ಮುಂತಾದವು ಹಾಗೂ ಹಲವು ಕಳೆಗಳು ಈ ಕೀಟಕ್ಕೆ ಆಶ್ರಯ ಕೊಡುತ್ತವೆ. ಪ್ರೌಢ ಕೀಟಗಳು ಸಣ್ಣಗೆ, ತೆಳ್ಳಗೆ ಇರುತ್ತವೆ. ಇವುಗಳ ಉದ್ದ 6 ಮಿಮೀ ನಷ್ಟು ಇರುತ್ತದೆ. ಎದ್ದು ಕಾಣುವ ಆಂಟೆನಾ ಇರುತ್ತದೆ. ಗಾಢ ಕಂದು ಬಣ್ಣದ ಕೀಟದ ಬೆನ್ನಿನುದ್ದಕ್ಕೂ ತೆಳು ಕಂದು ಬಣ್ಣದ ಪಟ್ಟಿ ಇರುತ್ತದೆ. ಹಾರುವ ಕೌಶಲವಿಲ್ಲದಿದ್ದರೂ ಗಾಳಿಯೇ ಈ ಕೀಟಗಳನ್ನು ಬಹುದೂರ ಸಾಗಿಸುತ್ತದೆ. ಪ್ರತಿ ಹೆಣ್ಣು ಕೀಟವು ಎಲೆಯ ಕೆಳಭಾಗದಲ್ಲಿ ಸರಾಸರಿ 150 ಮೊಟ್ಟೆಗಳನ್ನಿಡುತ್ತದೆ. ಸಾಮಾನ್ಯವಾಗಿ ಎಲೆಯ ನಾಳದ ಬಳಿ ಗುಂಪು ಗುಂಪಾಗಿರುವ ಮೊಟ್ಟೆಗಳನ್ನು ಕಾಣಬಹುದು, ಪ್ರತಿ ಗುಂಪಿನಲ್ಲೂ ಸುಮಾರು ಎಂಟರಷ್ಟು ಮೊಟ್ಟೆಗಳಿರುತ್ತವೆ. ಎಳೆಯ ಲಾರ್ವಾಗಳಿಗೆ ಎಲೆ ಕೊರೆದು ತಿನ್ನುವ ಅಭ್ಯಾಸವಿದ್ದರೆ, ಬೆಳೆದವು ಎಲೆಯ ಕೆಳ ಮೇಲ್ಮೈಯನ್ನು ತಿನ್ನುತ್ತವೆ. ಇದರಿಂದಾಗಿ ಅನಿಯಮಿತ ಕಲೆಗಳುಂಟಾಗುತ್ತವೆ. ಎಳೆಯ ಲಾರ್ವಾ ಮಳೆ ಬಿದ್ದಾಗ ಸಾಯುವುದು ಕಂಡುಬಂದಿದೆ.


ಮುಂಜಾಗ್ರತಾ ಕ್ರಮಗಳು

  • ಸಾಸಿವೆ, ಟರ್ನಿಪ್, ನವಿಲುಕೋಸು ಇದೇ ಮುಂತಾದ ನಿರೋಧಕ ತಳಿಗಳನ್ನು ಬೆಳೆಸಿ.
  • ಅಂಟು ಮೇಲ್ಮೈ ಇರದ ಹೊಳಪು ಮೇಲ್ಮೈ ಇರುವ ಪ್ರಭೇದವನ್ನು ಆರಿಸಿಕೊಳ್ಳಿ, ಪತಂಗಕ್ಕೆ ಇವು ನಿರೋಧ ಒಡ್ಡುವ ಕಾರಣಕ್ಕಾಗಿ.
  • ಸಸಿಯನ್ನು ನೆಡುವಾಗ ಅದು ಕೀಟಮುಕ್ತವಾಗಿದೆಯೆಂದು ಖಚಿತಪಡಿಸಿಕೊಳ್ಳಿ.
  • ಲಾರ್ವಾ ಇದೆಯೇ ಎಂದು ಪರಿಶೀಲಿಸಿ.
  • ಹಾಗೆಯೇ ಗಿಡಗಳಲ್ಲಿ ಹಾನಿ ಏನಾದರೂ ಆಗಿದೆಯೇ ಎಂದು ಪರಿಶೀಲಿಸಿ.
  • (ಮೂರು ಗಿಡಗಳಲ್ಲಿ ಒಂದಕ್ಕಿಂತ ಹೆಚ್ಚು ಲಾರ್ವಾ ಇರಬಾರದು ಅಥವಾ ಒಂದು ಗಿಡದಲ್ಲಿ ಒಂದಕ್ಕಿಂತ ಹೆಚ್ಚು ತೂತು ಇರಬಾರದು).
  • ಫೆರೋಮೋನ್ ಬಲೆಗಳನ್ನು ಬಳಸುವುದರಿಂದ ಪ್ರೌಢ ಕೀಟಗಳನ್ನು ಹಿಡಿದು ಹಾಕಬಹುದಲ್ಲದೆ ಕೀಟಗಳ ಸಂಖ್ಯೆಯ ಅಂದಾಜು ಹಾಕಬಹುದು.
  • ಸಾಧ್ಯವಾದರೆ ಓವರ್ ಹೆಡ್ ಸ್ಪ್ರಿಂಕ್ಲರ್ ಬಳಸಿ ಮಳೆಯನ್ನು ನಕಲು ಮಾಡಿ.
  • ಮಿಶ್ರಬೆಳೆ ಪದ್ಧತಿ ಅನುಸರಿಸಿ ಈ ಕೀಟಕ್ಕೆ ಆಶ್ರಯ ಕೊಡದ ಮತ್ತೊಂದು ಬೆಳೆಯನ್ನು ಜೊತೆಯಲ್ಲೇ ಬೆಳೆಸಿ.
  • ಆವರ್ತ ಬೆಳೆ ವಿಧಾನ ಬಳಸಿ ಬೇರೆ ಪ್ರಭೇದದ ಸಸ್ಯಗಳನ್ನು ಆವರ್ತಿಸಿ.
  • ಕೊಯ್ಲಿನ ನಂತರ ಕಸವನ್ನು ನಾಶ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ