ಆಲಿವ್

ಆಲಿವ್ ಲೇಸ್ ಬಗ್

Froggattia olivinia

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಯ ಮೇಲ್ಮೈಯ ಮೇಲೆ ಚುಕ್ಕೆಯಂತಹ ಬಣ್ಣಗೆಡುವಿಕೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಆಲಿವ್

ಆಲಿವ್

ರೋಗಲಕ್ಷಣಗಳು

ಎಲೆಯ ಮೇಲ್ಮೈಯ ಹಳದಿ ಮಚ್ಚೆ (ಮಚ್ಚೆಯಿಂದ ಬಣ್ಣಗೆಡುವಿಕೆ) ಕಂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಅಂತಿಮವಾಗಿ ಉದುರುತ್ತದೆ. ಹಾನಿಯು ಬೆಳೆಗಳ ತೀವ್ರವಾದ ಎಲೆ ಉದುರುವಿಕೆಯನ್ನು ಉಂಟುಮಾಡುತ್ತದೆ ಮತ್ತು ಹಣ್ಣಿನ ಇಳುವರಿಯನ್ನು ಕಡಿಮೆ ಮಾಡುತ್ತದೆ.

Recommendations

ಜೈವಿಕ ನಿಯಂತ್ರಣ

ಸಣ್ಣ ಪ್ರಮಾಣದಲ್ಲಿ, ಜೈವಿಕ ನಿಯಂತ್ರಣವು ಯಶಸ್ವಿಯಾಗಬಹುದು. ಲೇಸ್ ಕೀಟಗಳು ಮೊಟ್ಟೆ ಪರಾವಲಂಬಿಯನ್ನು ಹೊಂದಿವೆ ಎಂದು ವರದಿಯಾಗಿದೆ. ಆದರೆ ಇದು ಅನೇಕ ಸಾಂಪ್ರದಾಯಿಕ ಆಲಿವ್ ತೋಪುಗಳಲ್ಲಿ ಕಂಡುಬರುವ ಸಾಧ್ಯತೆಯಿಲ್ಲ, ವಿಶೇಷವಾಗಿ ನೆಲವು ಖಾಲಿಬಿದ್ದಿದ್ದರೆ (ಮೊಟ್ಟೆಯ ಪರಾವಲಂಬಿಗಳು ಸಾಮಾನ್ಯವಾಗಿ ಮಕರಂದವನ್ನು ತಿನ್ನುತ್ತವೆ). ಹಸಿರು ಲೇಸ್ವಿಂಗ್ ಯಶಸ್ವಿ ನಿಯಂತ್ರಣಕ್ಕಾಗಿ ಬಳಸಲಾಗುವ ಅತ್ಯಂತ ಸಾಮಾನ್ಯ ಪರಭಕ್ಷಕವಾಗಿದೆ.

ರಾಸಾಯನಿಕ ನಿಯಂತ್ರಣ

ರಾಸಾಯನಿಕ ಚಿಕಿತ್ಸೆಗಳನ್ನು ಬಳಸುವಾಗ ಉತ್ತಮ ಸ್ಪ್ರೇ ಕವರೇಜ್ ಇದ್ದರೆ ಲೇಸ್ ಕೀಟಗಳನ್ನು ಕೊಲ್ಲುವುದು ಸುಲಭ. ನೈಸರ್ಗಿಕ ಪೈರೆಥ್ರಮ್ (ಪೈರೆಥ್ರಿನ್) ಮತ್ತು ಸಿಂಥೆಟಿಕ್ ಪೈರೆಥ್ರಮ್ (ಪೈರೆಥ್ರಾಯ್ಡ್ಗಳು) ಆಲಿವ್ ನ ಲೇಸ್ ಕೀಟಗಳನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ. ಸೋಪ್ ಲವಣಗಳು ಎಂದು ಕರೆಯಲ್ಪಡುವ ಕೊಬ್ಬಿನಾಮ್ಲಗಳ ಪೊಟ್ಯಾಸಿಯಮ್ ಲವಣಗಳು ಕೀಟವನ್ನು ನಿಯಂತ್ರಿಸುತ್ತವೆ ಎಂದು ವರದಿಯಾಗಿದೆ. ಕೆಲವು ಆರ್ಗನೋಫಾಸ್ಫೇಟ್ಗಳನ್ನು ಉತ್ಪಾದನಾ ಮಟ್ಟದಲ್ಲಿ ಬಳಸಬಹುದು. 10-14 ದಿನಗಳ ನಂತರ ಹೊಸದಾಗಿ ಮೊಟ್ಟೆಯೊಡೆದ ಮರಿಕೀಟಗಳನ್ನು ನಿಯಂತ್ರಿಸಲು ಎರಡನೇ ಸ್ಪ್ರೇ ಅನ್ನು ಪುನರಾವರ್ತಿಸಿ. ಕೀಟನಾಶಕವನ್ನು ಬಳಸುವಾಗ, ಯಾವಾಗಲೂ ರಕ್ಷಣಾತ್ಮಕ ಉಡುಪುಗಳನ್ನು ಧರಿಸಿ ಮತ್ತು ಉತ್ಪನ್ನದ ಲೇಬಲ್‌ನಲ್ಲಿನ ಸೂಚನೆಗಳನ್ನು ಅನುಸರಿಸಿ. ಉದಾಹರಣೆಗೆ ಡೋಸೇಜ್, ಹಾಕಬೇಕಾದ ಸಮಯ ಮತ್ತು ಕೊಯ್ಲಿಗೂ ಮೊದಲು ಇರಬೇಕಾದ ಅಂತರ. ಕೀಟನಾಶಕ ಬಳಕೆಯ ಸ್ಥಳೀಯ ನಿಯಮಗಳನ್ನು ಯಾವಾಗಲೂ ಅನುಸರಿಸಿ.

ಅದಕ್ಕೆ ಏನು ಕಾರಣ

ಫ್ರೋಗ್ಯಾಟಿಯಾ ಒಲಿವಿನಿಯಾದಿಂದ ಹಾನಿ ಉಂಟಾಗುತ್ತದೆ. ಹಾನಿಗೊಳಗಾದ ಎಲೆಗಳ ಕೆಳಗಿನ ಭಾಗದಲ್ಲಿ ವಿವಿಧ ಹಂತಗಳಲ್ಲಿರುವ ಕೀಟಗಳು ಕಂಡುಬರುವುದು ಸಾಮಾನ್ಯವಾಗಿದೆ. ಮರದ ಮೇಲೆ ಚಳಿಗಾಲ ಕಳೆದ ಮೊಟ್ಟೆಗಳು ಸಾಮಾನ್ಯವಾಗಿ ವಸಂತಕಾಲದಲ್ಲಿ ಅಥವಾ ಚಳಿಗಾಲದ ಕೊನೆಯಲ್ಲಿ ಹೊರಬರಲು ಪ್ರಾರಂಭಿಸುತ್ತವೆ. ಬೆಳೆದ ಕೀಟಗಳು ಕಡಿಮೆ ದೂರ ಮಾತ್ರ ಹಾರಬಲ್ಲವು. ಬೆಳೆದಿರದ ಮತ್ತು ಬೆಳೆದ ಕೀಟಗಳು ತಿನ್ನುವುದರಿಂದ ಎಲೆಗಳ ಮೇಲ್ಮೈಯಲ್ಲಿ ಹಳದಿ ಮಚ್ಚೆ ಉಂಟಾಗುತ್ತದೆ. ಆಲಿವ್ ಲೇಸ್ ಕೀಟ ಹವಾಮಾನವನ್ನು ಅವಲಂಬಿಸಿ ವರ್ಷಕ್ಕೆ ಹಲವಾರು ತಲೆಮಾರುಗಳನ್ನು ಹೊಂದುತ್ತದೆ. ಬೆಳವಣಿಗೆಯ ಋತುವಿನ ಉದ್ದಕ್ಕೂ ಹೊಸ ಸೋಂಕುಗಳು ನಿಯಮಿತವಾಗಿ ಸಂಭವಿಸಬಹುದು. ಎಲ್ಲಾ ಚಲನಶೀಲ ಹಂತಗಳಲ್ಲೂ ಚುಚ್ಚುವ ಮತ್ತು ಹೀರುವ ಬಾಯಿಯ ಅಂಗಗಳನ್ನು ಕೀಟಗಳು ಹೊಂದಿರುತ್ತವೆ, ಹೀಗಾಗಿ ಎಲ್ಲಾ ಹಂತಗಳು ಸಸ್ಯಕ್ಕೆ ಹಾನಿಯನ್ನುಂಟುಮಾಡುತ್ತವೆ.


ಮುಂಜಾಗ್ರತಾ ಕ್ರಮಗಳು

  • ಕೀಟಗಳ ಮುತ್ತಿಕೊಳ್ಳುವಿಕೆಯ ಸಾಕ್ಷಿಗಾಗಿ ವಸಂತಕಾಲದ ಆರಂಭದಲ್ಲಿ ಮರಗಳ ಮೇಲ್ವಿಚಾರಣೆ ಮಾಡಿ.
  • ಕೀಟದ ಚಟುವಟಿಕೆ ಗಮನಕ್ಕೆ ಬಂದ ತಕ್ಷಣ ನಿಯಂತ್ರಣ ಕ್ರಮಗಳನ್ನು ಬಳಸಿ.
  • ಪರಿಶೀಲಿಸದೆ ಬಿಟ್ಟರೆ ಲೇಸ್ ಬಗ್ ಸಂಖ್ಯೆಯು ವೇಗವಾಗಿ ಬೆಳೆಯಬಹುದು.
  • ನಿಯಂತ್ರಣ ವಿಧಾನಗಳನ್ನು ಸುಲಭಗೊಳಿಸಲು ತೀವ್ರವಾಗಿ ಸೋಂಕಿತವಾದ ಮರಗಳನ್ನು ಸಮರಿ.
  • ಸಮರುವಿಕೆಯು ತೀವ್ರವಾಗಿ ಹಾನಿಗೊಳಗಾದ ಮರಗಳ ಪುನಶ್ಚೇತನಕ್ಕೆ ಸಹಾಯ ಮಾಡುತ್ತದೆ.
  • ಬೆಳೆಯುವ ಋತುವಿನಲ್ಲಿ ಹದಿನೈದು ದಿನಗಳಿಗೊಮ್ಮೆ ಕೀಟಗಳ ನಿಯಮಿತ ಮೇಲ್ವಿಚಾರಣೆ ಅಗತ್ಯವಿರುತ್ತದೆ, ವಿಶೇಷವಾಗಿ ಅದೇ ಋತುವಿನಲ್ಲಿ ಮೊದಲ ಸೋಂಕಿನ ನಂತರ.
  • ಕೀಟಗಳು ಚಲಿಸಬಹುದಾದ್ದರಿಂದ ತೋಪಿನ ಅಂಚಿನಲ್ಲಿ ಸೂಕ್ಷ್ಮವಾಗಿ ಗಮನಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ