ಕರ್ರಂಟ್

ರೆಡ್ ಕರ್ರಂಟ್ ಬ್ಲಿಸ್ಟರ್ ಗಿಡಹೇನು

Cryptomyzus ribis

ಕೀಟ

5 mins to read

ಸಂಕ್ಷಿಪ್ತವಾಗಿ

  • ಮೇಲಿನ ಎಲೆಯ ಮೇಲೆ ಕೆಂಪು, ನೇರಳೆ ಅಥವಾ ಹಳದಿ-ಹಸಿರು ಗುಳ್ಳೆಗಳು.
  • ವಿರೂಪಗೊಂಡ ಅಂಗಾಂಶಗಳ ಸುತ್ತಲೂ ಬಣ್ಣಬಣ್ಣದ ಪ್ರದೇಶಗಳು.
  • ಭಾರೀ ಮುತ್ತಿಕೊಳ್ಳುವಿಕೆಯ ಸಂದರ್ಭದಲ್ಲಿ ಎಲೆಗಳ ವಿರೂಪತೆ.
  • ಸಿಹಿ ಸ್ರವಿಸುವಿಕೆಯು ಕಪ್ಪುಮಸಿ ಶಿಲೀಂಧ್ರದ ಬೆಳವಣಿಗೆಯನ್ನು ಬೆಂಬಲಿಸುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು
ಕರ್ರಂಟ್

ಕರ್ರಂಟ್

ರೋಗಲಕ್ಷಣಗಳು

ಕೆಂಪು ಮತ್ತು ಬಿಳಿ ಕರಂಟ್ ಗಳ ಎಲೆಯ ಮೇಲಿನ ಮೇಲ್ಮೈ ನಲ್ಲಿ ಎದ್ದುಕಾಣುವ ಕೆಂಪು ಬಣ್ಣದಿಂದ ನೇರಳೆ ಬಣ್ಣದ ಗುಳ್ಳೆಗಳು ಗೋಚರಿಸುತ್ತವೆ. ಈ ಗುಳ್ಳೆಗಳು ಸಾಮಾನ್ಯವಾಗಿ ಕಪ್ಪು ಕರಂಟ್ ಗಳ ಮೇಲೆ ಹಳದಿ-ಹಸಿರು ಬಣ್ಣದಲ್ಲಿರುತ್ತವೆ. ಬಣ್ಣಗೆಟ್ಟ ಪ್ರದೇಶಗಳು ಸಾಮಾನ್ಯವಾಗಿ ವಿರೂಪಗೊಂಡ ಅಂಗಾಂಶಗಳನ್ನು ಸುತ್ತುವರೆದಿರುತ್ತವೆ. ಮುಖ್ಯವಾಗಿ ಚಿಗುರಿನ ತುದಿಯಲ್ಲಿರುವ ಎಲೆಗಳು ಸುಕ್ಕಾದಂತೆ ಅಥವಾ ವಿರೂಪಗೊಂಡಂತೆ ಕಾಣುತ್ತವೆ. ತೀವ್ರವಾದ ಮುತ್ತಿವಿಕೆ ಸಂದರ್ಭದಲ್ಲಿ ಎಲೆಗಳ ತೀವ್ರ ವಿರೂಪತೆ ಸಂಭವಿಸಬಹುದು. ಮಸುಕಾದ ಹಳದಿ ಗಿಡಹೇನುಗಳು ವಸಂತಕಾಲದ ಕೊನೆಯಲ್ಲಿ-ಬೇಸಿಗೆಯ ಆರಂಭದಲ್ಲಿ ಗುಳ್ಳೆಗಳ ಪ್ರದೇಶಗಳ ಕೆಳಗೆ ಕಂಡುಬರುತ್ತವೆ. ಎಲೆಗಳ ಮೇಲೆ ಸಿಹಿ ಸ್ರಾವ ಕೂಡ ಇರಬಹುದು. ಇದು ಅಂತಿಮವಾಗಿ ಅವಕಾಶವಾದಿ ಮಸಿಕಪ್ಪು ಶಿಲೀಂಧ್ರಗಳ ಬೆಳವಣಿಗೆಗೆ ಅನುಕೂಲಕರವಾಗಿದೆ. ಸಾಮಾನ್ಯವಾಗಿ, ಪೊದೆಗಳು ಎಲೆಗಳ ಮೇಲೆ ಸೌಮ್ಯವಾದ ರೋಗಲಕ್ಷಣಗಳೊಂದಿಗೆ ಇನ್ನೂ ಸಾಮಾನ್ಯ ಬೆಳೆಯನ್ನು ಉತ್ಪಾದಿಸಬಹುದು.

Recommendations

ಜೈವಿಕ ನಿಯಂತ್ರಣ

ನೈಸರ್ಗಿಕ ಪರಭಕ್ಷಕಗಳಲ್ಲಿ ಲೇಡಿಬಗ್‌ಗಳು ಸೇರಿವೆ - ರೋಗ ಉಲ್ಭಣಗೊಂಡರೆಅವುಗಳನ್ನು ಬಿಡುಗಡೆ ಮಾಡಬಹುದು. ರೆಡ್‌ಕರ್ರಂಟ್ ಬ್ಲಿಸ್ಟರ್ ಗಿಡಹೇನುಗಳ ನಿಯಂತ್ರಣಕ್ಕೆ ತೋಟಗಾರಿಕಾ ಸೋಪ್ ಅಥವಾ ವಾಷಿಂಗ್ ಡಿಟರ್ಜೆಂಟ್ ನ ಸೌಮ್ಯ ದ್ರಾವಣವನ್ನು ಹೊಂದಿರುವ ಸಿಂಪಡಣೆಗಳು ಸಾಕು. ಹೋಸ್ ನಿಂದ ನೀರಿನ ಬಲವಾದ ಸಿಂಪಡಣೆಯ ಮೂಲಕವೂ ಗಿಡಹೇನುಗಳನ್ನು ತೆಗೆದು ಹಾಕಬಹುದು. ಚಳಿಗಾಲದ ಮೊಟ್ಟೆಗಳನ್ನು ಕೊಲ್ಲಲು ಉತ್ತಮ-ರೀತಿಯ ತೋಟಗಾರಿಕಾ ತೈಲವನ್ನು ಅನ್ವಯಿಸಬಹುದು. ಹೊರಹೊಮ್ಮುವ ಗಿಡಹೇನುಗಳನ್ನು ಕೊಲ್ಲುವ ಇತರ ಸಾವಯವ ಸೂತ್ರೀಕರಣಗಳಲ್ಲಿ ಪೈರೆಥ್ರಮ್ ಅಥವಾ ಪೈರೆಥ್ರಮ್ ಮತ್ತು ಫ್ಯಾಟೀ ಆಸಿಡ್ ಗಳು ಸೇರಿವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ತೀವ್ರತರವಾದ ಪ್ರಕರಣಗಳಲ್ಲಿ, ಡೆಲ್ಟಾಮೆಥ್ರಿನ್ ಅಥವಾ ಲ್ಯಾಂಬ್ಡಾ-ಸೈಹಾಲೋಥ್ರಿನ್ ಎಂಬ ಕೀಟನಾಶಕವನ್ನು ಹೊಂದಿರುವ ಸಿಂಪಡಣೆಗಳನ್ನು ಹೊರಹೊಮ್ಮುತ್ತಿರುವ ಗಿಡಹೇನುಗಳನ್ನು ಕೊಲ್ಲಲು ಬಳಸಬಹುದು. ರೋಗಲಕ್ಷಣಗಳು ಗೋಚರಿಸಲು ಕಾಯಬೇಡಿ. ಏಕೆಂದರೆ ಎಲೆಗಳು ಸುಕ್ಕಾದ ನಂತರ ಸಿಂಪಡಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಜೇನುನೊಣಗಳು ಮತ್ತು ಇತರ ಪರಾಗಸ್ಪರ್ಶ ಕೀಟಗಳಿಗೆ ಅಪಾಯವಾಗುವ ಸಾಧ್ಯತೆ ಇರುವುದರಿಂದ ಹೂಬಿಡುವ ಸಸ್ಯಗಳಿಗೆ ಸಿಂಪಡಿಸಬೇಡಿ.

ಅದಕ್ಕೆ ಏನು ಕಾರಣ

ರೆಡ್‌ಕರ್ರಂಟ್ ಬ್ಲಿಸ್ಟರ್ ಗಿಡಹೇನು, ಕ್ರಿಪ್ಟೊಮೈಜಸ್ ರಿಬಿಸ್‌ನಿಂದ ಹಾನಿ ಉಂಟಾಗುತ್ತದೆ. ಎಲೆಯ ಕೆಳಭಾಗದಲ್ಲಿ ರಸವನ್ನು ಹೀರುವ, ವಸಂತಕಾಲದ ಕೊನೆಯಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ ಗೋಚರಿಸುವ, ರೆಕ್ಕೆಗಳಿಲ್ಲದ, ಮಸುಕಾದ ಹಳದಿ ಗಿಡಹೇನುಗಳಿಗಿಂತ ಸುಕ್ಕಾದ ಮತ್ತು ಗುಳ್ಳೆಗಳಿರುವ ಎಲೆಯ ಅಂಗಾಂಶಗಳು ಹೆಚ್ಚಾಗಿ ಗಮನ ಸೆಳೆಯುತ್ತವೆ. ಗುಳ್ಳೆಗಳು ಮತ್ತು ಬಣ್ಣಗೆಡುವಿಕೆಗೆ ಗಿಡಹೇನುಗಳು ಆಹಾರ ತಿನ್ನುವ ಪ್ರಕ್ರಿಯೆಯಲ್ಲಿ ಎಲೆಗಳಿಗೆ ಚುಚ್ಚಲಾದ ರಾಸಾಯನಿಕಗಳೇ ಕಾರಣ. ಬೇಸಿಗೆಯ ಮಧ್ಯದಲ್ಲಿ ರೆಕ್ಕೆಯ ಗಿಡಹೇನುಗಳು ಉತ್ಪತ್ತಿಯಾಗುತ್ತವೆ. ಅವು ದ್ವಿತೀಯಕ ಆತಿಥೇಯ ಸಸ್ಯಗಳಿಗೆ ವಲಸೆ ಹೋಗುತ್ತವೆ, ಮುಖ್ಯವಾಗಿ ಹೆಡ್ಜ್ ವುಂಡ್ ಹುಳುಗಳು (ಸ್ಟಾಚಿಸ್ ಸಿಲ್ವಾಟಿಕಾ). ಇವುಗಳು ಶರತ್ಕಾಲದಲ್ಲಿ ಕರ್ರಂಟ್ ಗೆ ಹಿಂತಿರುಗುತ್ತವೆ ಮತ್ತು ಚಿಗುರುಗಳ ಮೇಲೆ ಚಳಿಗಾಲದ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಒಡೆದು ಮರಿಗಳು ವಸಂತಕಾಲದಲ್ಲಿ ಹೊರಬರುತ್ತವೆ ಮತ್ತು ಎಲೆಗಳ ಕೆಳಭಾಗಕ್ಕೆ ವಲಸೆ ಹೋಗುವ ಗಿಡಹೇನುಗಳ ವಸಾಹತುಗಳನ್ನು ರೂಪಿಸುತ್ತವೆ. ಕರ್ರಂಟ್ ಬ್ಲಿಸ್ಟರ್ ಗಿಡಹೇನು ಕೆಂಪು, ಬಿಳಿ ಮತ್ತು ಕಪ್ಪು ಕರ್ರಂಟ್, ಹಾಗೆಯೇ ಕಾಡು ಸಂಬಂಧಿ ಜೋಸ್ಟಾಬೆರಿ (ರೈಬ್ಸ್ ಜೀನಸ್ ಕೂಡ) ಮೇಲೆ ಪರಿಣಾಮ ಬೀರುತ್ತದೆ. ಬೆಳೆಗಳ ಮೇಲೆ ಸಾಮಾನ್ಯವಾಗಿ ಪರಿಣಾಮ ಬೀರುವುದಿಲ್ಲವಾದ್ದರಿಂದ, ನಿಯಂತ್ರಣ ಕ್ರಮಗಳನ್ನು ಅತ್ಯಂತ ತೀವ್ರತರವಾದ ಪ್ರಕರಣಗಳಲ್ಲಿ ಮಾತ್ರ ಬಳಸಬೇಕಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಿ.
  • ರಿಬಿಸ್ ಮತ್ತು ಅವುಗಳ ರೋಗಲಕ್ಷಣಗಳಿಗಾಗಿ ಕರಂಟ್ ಗಳು ಮತ್ತು ಸಂಬಂಧಿತ ಆಶ್ರಯದಾತ ಸಸ್ಯಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ.
  • ಕೀಟನಾಶಕಗಳನ್ನು ವಿವೇಚನೆಯಿಲ್ಲದೆ ಬಳಸಬೇಡಿ ಏಕೆಂದರೆ ಇದು ಲೇಡಿಬಗ್‌ಗಳಂತಹ ನೈಸರ್ಗಿಕ ಪರಭಕ್ಷಕಗಳ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ.
  • ಸಾರಜನಕದ ಅತಿಯಾದ ಬಳಕೆಯನ್ನು ತಪ್ಪಿಸಿ.
  • ಏಕೆಂದರೆ, ಇದರ ಪರಿಣಾಮವಾಗಿ ಬೆಳೆಯುವ ಸೊಂಪಾದ ಎಲೆಗಳು ಹೆಚ್ಚು ಗಿಡಹೇನುಗಳನ್ನು ಆಕರ್ಷಿಸುತ್ತವೆ.
  • ಹಿಂದಿನ ಕೃಷಿಯಿಂದ ತ್ಯಾಜ್ಯವನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ