ಹತ್ತಿ

ಹತ್ತಿಯ ಜಿಗಿ ಹುಳು ಜಾಸ್ಸಿಡ್

Amrasca biguttula

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಹಳದಿ ಬಣ್ಣಕ್ಕೆ ತಿರುಗುವುದು ಮತ್ತು ಮೇಲ್ಮುಖವಾಗಿ ಸುರುಳಿ ಸುತ್ತಿಕೊಳ್ಳುವುದು.
  • ನಂತರದಲ್ಲಿ ಅಂಚಿನಿಂದ ಪ್ರಾರಂಭವಾಗುವ ಕಂದು ಬಣ್ಣ.
  • ಒಣ ಎಲೆಗಳ ಉದುರುವಿಕೆ.
  • ಕುಂಠಿತಗೊಂಡ ಬೆಳವಣಿಗೆ.

ಇವುಗಳಲ್ಲಿ ಸಹ ಕಾಣಬಹುದು


ಹತ್ತಿ

ರೋಗಲಕ್ಷಣಗಳು

ಬಾಧಿತ ಎಲೆಗಳು ಹಳದಿ ಬಣ್ಣಕ್ಕೆ ಬದಲಾಗುತ್ತದೆ, ನಂತರ ಅಂಚಿನಿಂದ ಕಂದು ಬಣ್ಣಕ್ಕೆ ತಿರುಗಲಾರಂಭಿಸಿ ಎಲೆಯ ಮಧ್ಯನಾಳ ಭಾಗಕ್ಕೆ ಹರಡತೊಡಗುತ್ತದೆ. ಎಲೆಗಳು ಕ್ರಮೇಣ ಸುರುಳಿ ಸುತ್ತಿಕೊಳ್ಳತೊಡಗಿ ಕೊನೆಗೆ ಸಂಪೂರ್ಣವಾಗಿ ಒಣಗಿ ಚೂರುಚೂರಾಗುತ್ತವೆ ಮತ್ತು ಉದುರುತ್ತವೆ. ಸೋಂಕು ತೀವ್ರವಾಗಿದ್ದರೆ ಕೊನೆಗೆ “ಹಾಪ್ಪರ್ ಬರ್ನ್” ಗಾಯವಾಗುತ್ತದೆ. ಎಲೆ ಸತ್ತು ಎಳೆಯ ಗಿಡದ ಬೆಳವಣಿಗೆ ಕುಂಠಿತವಾಗುತ್ತದೆ. ಬೆಳವಣಿಗೆಯ ನಂತರದ ಹಂತಗಳಲ್ಲಿ ಸೋಂಕು ತಗುಲಿದರೆ ಹಣ್ಣು ಬಿಡುವ ಸಾಮರ್ಥ್ಯದ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ ಮತ್ತು ಅನೇಕ ಸಂದರ್ಭಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ. ಅಲ್ಲದೆ ಹತ್ತಿ ನಾರಿನ ಗುಣಮಟ್ಟ ಕೂಡ ಕುಸಿಯುತ್ತದೆ.

Recommendations

ಜೈವಿಕ ನಿಯಂತ್ರಣ

ಸಾಮಾನ್ಯ ಹಸಿರು ಲೇಸ್-ವಿಂಗ್ (ಕ್ರಿಸೋಪೆರ್ಲಾ ಕಾರ್ನೆಯಾ), ಓರಿಯಸ್ ಅಥವಾ ಜಿಯೊಕರಿಸ್ ಎಂಬ ಜಾತಿಯ ಕೀಟಗಳು, ಕೋಸಿನಲಿಡ್ಸ್ ಮತ್ತು ಜೇಡಗಳ ಕೆಲವು ಪ್ರಭೇದಗಳು – ಇವು ಹತ್ತಿ ಎಲೆಯ ಜಿಗಿ ಹುಳದ ಪರಭಕ್ಷಕಗಳು. ಆ ಜಾತಿಗಳ ಕೀಟದ ಇರುವಿಕೆಯನ್ನು ಉತ್ತೇಜಿಸಿ ಹಾಗೂ ವಿಶಾಲ ರೋಹಿತ ಕೀಟನಾಶಕಗಳ ಬಳಕೆ ತಪ್ಪಿಸಿ. ಮೊದಲ ರೋಗಲಕ್ಷಣಗಳು ಸಂಭವಿಸಿದಾಗ ಸ್ಪಿನೊಸಾಡ್ (0.35 ಮಿಲಿ / ಲೀ) ಅನ್ನು ಬಳಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಮೆಲಾಥಿಯಾನ್, ಸೈಪರ್ಮೆಥರಿನ್ (1 ಮಿಲಿ / ಲೀ), ಸಲ್ಫೋಕ್ಸಾಫ್ಲೋರ್, ಕ್ಲೋರಿಪಿರಿಫೊಸ್ (2.5 ಮಿಲೀ / ಲೀ), ಡೈಮಿಥೋಯೇಟ್, ಲ್ಯಾಂಬಡೇಸೈಹಲೋಥ್ರಿನ್ (1 ಮಿಲಿ / ಲೀ) ಅಥವಾ ಕ್ಲೋರಂತ್ರಾನಿಲಿಪ್ರೋಲ್ + ಲ್ಯಾಂಬ್ಡಾ-ಸೈಹಲೋಥರಿನ್ (0.5 ಮಿಲಿ / ಲೀ) ಗಳನ್ನು ಆಧರಿಸಿದ ಕೀಟನಾಶಕ ಉತ್ಪನ್ನಗಳನ್ನು ಬಳಸಬಹುದು. ಆದರೆ ಅವು ಜಿಗಿಹುಳಗಳ ನೈಸರ್ಗಿಕ ಪರಭಕ್ಷಕಗಳ ಮೇಲೆಯೂ ಪರಿಣಾಮ ಬೀರಬಹುದಾದ್ದರಿಂದ ಸೋಂಕು ತೀವ್ರವಾಗಿದ್ದಲ್ಲಿ, ಸರಿಯಾದ ಸಮಯ ನೋಡಿಕೊಂಡು ಮಾತ್ರ ಬಳಸಬೇಕಾಗುತ್ತದೆ. ಬೀಜವನ್ನು ಕೀಟನಾಶಕಗಳಿಂದ ಸಂಸ್ಕರಿಸಿದರೆ 45-50 ದಿನಗಳ ಕಾಲ ಜಿಗಿಹುಳಗಳನ್ನು ನಿಯಂತ್ರಿಸಬಹುದು.

ಅದಕ್ಕೆ ಏನು ಕಾರಣ

ಅಮ್ರಾಸ್ಕಾ ಕೀಟದ ಎಳೆ ಪತಂಗ ಮತ್ತು ಪ್ರೌಢ ಕೀಟಗಳೆರಡರಿಂದಲೂ ರೋಗ ಉಂಟಾಗುತ್ತದೆ. ಇವು ಗಿಡದ ರಸವನ್ನು ಹೀರುವಾಗ ಬಿಡುವ ವಿಷಯುಕ್ತ ಎಂಜಲು ಗಿಡದ ಅಂಗಾಂಶಗಳಿಗೆ ಹಾನಿ ಮಾಡುವ ಮತ್ತು ದ್ಯುತಿ ಸಂಶ್ಲೇಷಣೆಯ ಸಾಮರ್ಥ್ಯ ಕುಗ್ಗಿಸುವ ಸಾಮರ್ಥ್ಯ ಹೊಂದಿವೆ. ಮಧ್ಯಮದಿಂದ ಅಧಿಕ ತಾಪಮಾನ (21 ರಿಂದ 31 ° ಸಿ), ಮಧ್ಯಮದಿಂದ ಅಧಿಕ ತೇವಾಂಶ (55 ರಿಂದ 85%) ಈ ಕೀಟದ ಇರುವಿಕೆ ಮತ್ತು ಚಟುವಟಿಕೆಯನ್ನು ಹೆಚ್ಚಿಸುತ್ತವೆ. ಕಡಿಮೆ ತಾಪಮಾನ ಮತ್ತು ಬಲವಾದ ಗಾಳಿ ಅವುಗಳ ಚಟುವಟಿಕೆಯನ್ನು ನಿಯಂತ್ರಿಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಅಥವಾ ಸಹಿಷ್ಣು ಪ್ರಭೇದಗಳನ್ನು (ಹಲವಾರು ಪ್ರಭೇದಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ) ನೆಡಿ.
  • ಹತ್ತಿ ಜಿಗಿ ಹುಳುವಿಗಾಗಿ ನಿಯಮಿತವಾಗಿ ತೋಟದ ಮೇಲ್ವಿಚಾರಣೆ ಮಾಡಿ.
  • ಸಮತೋಲಿತ ರಸಗೊಬ್ಬಳ ಬಳಕೆ ಮಾಡಿ ಹಾಗೂ ಮುಖ್ಯವಾಗಿ ಹೆಚ್ಚಿನ ಸಾರಜನಕವನ್ನು ಬಳಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ