ಬಾಳೆಹಣ್ಣು

ಬಾಳೆಹಣ್ಣು ಗಾಯಕಾರಕ ಜೀರಂಡೆ

Colaspis hypochlora

ಕೀಟ

5 mins to read

ಸಂಕ್ಷಿಪ್ತವಾಗಿ

  • ಹಣ್ಣಿನ ಸಿಪ್ಪೆ ಮತ್ತು ಸಣ್ಣ ಎಲೆಗಳ ಮೇಲೆ ತೀವ್ರ ಗಾಯ ಅಥವಾ ಕಲೆ.
  • ಕಲೆಗಳು ಅಂಡಾಕಾರದಲ್ಲಿರುತ್ತವೆ.
  • ಲಾರ್ವಾಗಳು ತಿನ್ನುವುದರಿಂದ ಬೇರುಗಳಿಗೆ ಹಾನಿಯಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಬಾಳೆಹಣ್ಣು

ರೋಗಲಕ್ಷಣಗಳು

ವಯಸ್ಕ ಜೀರುಂಡೆಗಳು ವಿವಿಧ ಕಳೆಗಳನ್ನು ಹಾಗೂ ಸಣ್ಣ, ಇನ್ನೂ ತೆರೆಯದ ಎಲೆಗಳು, ಕಾಂಡಗಳು ಮತ್ತು ಬಾಳೆ ಮರಗಳ ಬೇರುಗಳನ್ನು ತಿನ್ನುತ್ತವೆ. ಅವು ಹೊಸ ಹಣ್ಣನ್ನು ಕೂಡ ತಿನ್ನುತ್ತವೆ. ಆ ಮೂಲಕ ಸಿಪ್ಪೆ ಮೇಲೆ ಕಲೆಗಳನ್ನು ಉಂಟು ಮಾಡುತ್ತವೆ ಮತ್ತು ಅದನ್ನು ವಿರೂಪಗೊಳಿಸುತ್ತವೆ. ಇದರಿಂದಾಗಿ ಹಣ್ಣುಗಳ ಮಾರುಕಟ್ಟೆ ಸಾಧ್ಯವಾಗುವುದಿಲ್ಲ. ಬಹುತೇಕ ಗುರುತುಗಳು ಹಣ್ಣುಗಳ ತಳಭಾಗದಲ್ಲಿ ಸಂಭವಿಸುತ್ತದೆ. ಜೀರುಂಡೆಗಳು ಹೆಚ್ಚು ರಕ್ಷಿಸಲ್ಪಟ್ಟಿರುವ ತಾಣಗಳನ್ನೇ ತಿನ್ನಲು ಆಯ್ಕೆ ಮಾಡಿಕೊಳ್ಳುತ್ತವೆ (ಉದಾಹರಣೆಗೆ ಪತ್ರಕಗಳ ಅಡಿಭಾಗ) ಎಂಬುದನ್ನು ಇದು ಬಿಂಬಿಸುತ್ತದೆ. ಕಲೆಗಳು ಹೆಚ್ಚಾಗಿ ಅಂಡಾಕೃತಿಯಲ್ಲಿರುತ್ತವೆ. ಇದರಿಂದಾಗಿ ಈ ರೋಗವನ್ನು ಮೆಲಿಪೋನಾ ಅಮಲ್ತಿಯಾ ಜೇನುನೊಣ ಹಣ್ಣು ಗಾಯವೆಂದು ತಪ್ಪಾಗಿ ತಿಳಿಯುವ ಸಂಭವವಿದೆ. ಅವಕಾಶವಾದಿ ರೋಗಕಾರಕಗಳು ಅಂಗಾಂಶಗಳಲ್ಲಿ ನೆಲೆ ನಿಲ್ಲುವುದರಿಂದ ಹಾನಿ ಮತ್ತಷ್ಟು ಹೆಚ್ಚಾಗುತ್ತದೆ. ಮರಿ ಹುಳಗಳು ಹೊಸ ಬೇರುಗಳನ್ನು ತಿನ್ನುತ್ತವೆ ಮತ್ತು ಹಳೆಯ ಬೇರುಗಳ ಅಂಗಾಂಶಗಳನ್ನು ತಿನ್ನಲು ಸುರಂಗ ಕೊರೆಯುತ್ತವೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಈ ಕೀಟದ ಹಾವಳಿ ಹೆಚ್ಚು.

Recommendations

ಜೈವಿಕ ನಿಯಂತ್ರಣ

ಈ ಕೀಟಕ್ಕೆ ಯಾವುದೇ ಜೈವಿಕ ಚಿಕಿತ್ಸೆ ಲಭ್ಯವಿಲ್ಲ. ಅದರ ಪ್ರಸರಣವನ್ನು ತಪ್ಪಿಸಲು ಉತ್ತಮ ತಡೆಗಟ್ಟುವಿಕೆ ವಿಧಾನವೆಂದರೆ ಕಳೆ ನಿವಾರಣೆಯಾಗಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿರುವ ಸಮಗ್ರ ಮಾರ್ಗವಿದ್ದರೆ ಯಾವಾಗಲೂ ಮೊದಲು ಅದನ್ನು ಪರಿಗಣಿಸಿ. ರಾಸಾಯನಿಕ ನಿಯಂತ್ರಣ ಸಾಮಾನ್ಯವಾಗಿ ಶಿಫಾರಸ್ಸು ಮಾಡಲಾಗುವುದಿಲ್ಲ. ಏಕೆಂದರೆ, ಉದಾಹರಣೆಗೆ, ಕೀಟನಾಶಕಗಳ ಬಳಕೆ ತಪ್ಪಿಸುವಷ್ಟು ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಕಳೆ ಕಿತ್ತಬಹುದು. ಕೀಟದ ಕಾಟದ ತೀವ್ರತೆಯನ್ನು ಆಧರಿಸಿ, ಕೀಟನಾಶಕಗಳ ಸಿಂಪಡಣೆಯನ್ನು ಸರದಿಯಲ್ಲಿ ಬಳಸಬಹುದಾಗಿದೆ. ಆದರೂ, ಜೀರುಂಡೆಗಳು ಗಂಭೀರ ಆರ್ಥಿಕ ನಷ್ಟವನ್ನು ಉಂಟುಮಾಡದ ಹೊರತು ಕೀಟನಾಶಕಗಳ ಬಳಕೆಯನ್ನು ತಪ್ಪಿಸಬೇಕು.

ಅದಕ್ಕೆ ಏನು ಕಾರಣ

ಬಾಳೆಹಣ್ಣು ಗಾಯಕಾರಕ ಜೀರಂಡೆ, ಕೊಲ್ಪಾಸ್ಪಿಸ್ ಹೈಪೊಕ್ಲೋರದಿಂದ ಈ ಹಾನಿ ಉಂಟಾಗುತ್ತವೆ. ವಯಸ್ಕ ಕೀಟಗಳು ಸಣ್ಣ ಸಮಾನಾಂತರ ಚುಕ್ಕೆಗಳ ವಿಶಿಷ್ಟ ಸಾಲುಗಳಿರುವ ಕಂದು ಬಣ್ಣದ ಮುಂದಿನ ರೆಕ್ಕೆಗಳನ್ನು ಹೊಂದಿರುತ್ತವೆ. ಇವು ತುಂಬಾ ಉತ್ತಮವಾಗಿ ಹಾರಾಡುತ್ತವೆ. ಹೆಣ್ಣು ಕೀಟಗಳು, ತೆಳು ನಿಂಬೆ ಹಳದಿ ಬಣ್ಣದ ಒಂದು ಮೊಟ್ಟೆಯನ್ನು ಅಥವಾ 5 ರಿಂದ 45ರ ಗುಂಪುಗಳಲ್ಲಿ ಇಡುತ್ತದೆ. ತೆನೆಯ ಬಳಿಯಿರುವ ಎಲೆಯ ಕೋಶಗಳು ಸವೆದು ಉಂಟಾದ ಕುಳಿಗಳಲ್ಲಿ ಅಥವಾ ಬೇರುಗಳು ಮೇಲ್ಮೈಯನ್ನು ಹೊರ ತೋರುವ ನೈಸರ್ಗಿಕ ಕುಳಿಗಳಲ್ಲಿ ಮೊಟ್ಟೆ ಇಡುತ್ತವೆ. 7 ರಿಂದ 9 ದಿನಗಳಲ್ಲಿ ಹೊಸದಾಗಿ ಮೊಟ್ಟೆಯೊಡೆದು ಬಂದ ಮರಿಗಳು ಹೊಸ ಬೇರುಗಳನ್ನು ತಿನ್ನುತ್ತವೆ ಅಥವಾ ಹಳೆಯ ಬೇರುಗಳ ಮೃದುವಾದ ಹೊರಚರ್ಮದ ಅಂಗಾಂಶಗಳನ್ನು ತಿನ್ನಲು ಸುರಂಗಗಳನ್ನು ಕೊರೆಯಲು ಆರಂಭಿಸುತ್ತವೆ. ಇವು ಬಿಳಿಯ, ತೆಳ್ಳಗಿನ ಮತ್ತು ಕೂದಲುಳ್ಳ ದೇಹವನ್ನು ಹೊಂದಿರುತ್ತವೆ ಮತ್ತು ತಲೆಯು ಸ್ವಲ್ಪ ಅಂಬರ್ ಬಣ್ಣವನ್ನು ಹೊಂದಿರುತ್ತದೆ. ಕೋಶವು ಕೊಳಕು ಹಳದಿಯಾಗಿರುತ್ತದೆ ಮತ್ತು ವಯಸ್ಕ ಕೀಟ ಹೊರಹೊಮ್ಮಲು ತಯಾರಾಗುವ ಸಂದರ್ಭದಲ್ಲಿ ಬಣ್ಣ ಗಾಢವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ತೋಟಗಳಲ್ಲಿನ ಕಳೆಗಳನ್ನು ಸಂಪೂರ್ಣವಾಗಿ ನಿಯಂತ್ರಿಸಿ.
  • ಏಕೆಂದರೆ, ಈ ಕೀಟಗಳು ಅವುಗಳ ಮೇಲೆ ಬೆಳೆಯುತ್ತವೆ.
  • ಒಳಚರಂಡಿ ಕಾಲುವೆಗಳ ಬಳಿ ಬಾಳೆ ಮರಗಳು ಬೆಳೆಯುವುದನ್ನು ತಪ್ಪಿಸಿ.
  • ನೆಲದ ಮಟ್ಟಕ್ಕಿಂತ ಕೆಳಗೆ ಸೂಡೊಸ್ಟೊಮ್ಗಳನ್ನು ತೆಗೆದುಹಾಕಿ ಮತ್ತು ಲಾರ್ವಾಗಳು ಬೆಳೆದ ಬೇರುಕಾಂಡವನ್ನು ಕತ್ತರಿಸಿ.
  • ತೋಟದಿಂದ ಹಾನಿಗೊಂಡಿರುವ ಸಸ್ಯದ ಭಾಗಗಳನ್ನು ತೆಗೆದುಹಾಕಿ.
  • ಪರಭಕ್ಷಕಗಳಿಗೆ ಕೋಶಗಳನ್ನು ಒಡ್ಡಲು ಮಣ್ಣಿನ ಮೇಲ್ಮೈಯನ್ನು ಕೆತ್ತಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ