ಮಾವು

ಗೋಡಂಬಿ ಎಲೆ ಸುರಂಗ

Acrocercops syngramma

ಕೀಟ

5 mins to read

ಸಂಕ್ಷಿಪ್ತವಾಗಿ

  • ಮಾವಿನ ಎಲೆಗಳ ಮೇಲ್ಮೈ ಮತ್ತು ಕೋಮಲ ಚಿಗುರುಗಳಲ್ಲಿ ಸುರಂಗಳ ಕೊರೆಯುವಿಕೆ.
  • ತಾಜಾ ಎಲೆಗಳ ಮೇಲೆ ಸುಟ್ಟ ಗುರುತುಗಳು.
  • ಎಲೆಗಳ ಮೇಲೆ ಹೊಳಪುಳ್ಳ ಬೂದು-ಬಿಳಿ ತೇಪೆಗಳು.
  • ಇವು ನಂತರ ದೊಡ್ಡ ರಂಧ್ರಗಳಾಗಿ ಮಾರ್ಪಡುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಮಾವು

ರೋಗಲಕ್ಷಣಗಳು

ಲಾರ್ವಾಗಳಿಂದ ಎಳೆಯ ಎಲೆಗಳ ಮೇಲೆ ಕೊರೆದ ಸುರಂಗಗಳು ದಾಳಿಯ ಆರಂಭಿಕ ಚಿಹ್ನೆಗಳು. ಲಾರ್ವಾಗಳು ಎಪಿಡರ್ಮಲ್ ಪದರಗಳನ್ನು ಮುಟ್ಟದಂತೆ ಎಲೆ ಅಂಗಾಂಶಗಳನ್ನು ತಿನ್ನುತ್ತವೆ. ನಂತರ ಬಿಳಿಯ, ಗುಳ್ಳೆಗಳಂತಹ ತೇಪೆಗಳು ಎಲೆಯ ಮೇಲ್ಮೈಯಲ್ಲಿ ಸುರಂಗ ಕೊರೆದ ಭಾಗಗಳು ವಿಲೀನಗೊಂಡಲ್ಲಿ ಕಾಣಿಸಿಕೊಳ್ಳುತ್ತವೆ. ಹಳೆಯ, ಪ್ರಬುದ್ಧ ಎಲೆಗಳಲ್ಲಿ ಹಾನಿಗಳು ದೊಡ್ಡ ರಂಧ್ರಗಳಾಗಿ ಕಾಣಿಸುತ್ತವೆ. ಎಲೆಯಲ್ಲಿ ಸುರಂಗ ಕೊರೆದ ಮಾಡಿದ ಭಾಗಗಳು ಒಣಗಿ ಮತ್ತು ಉದುರುವುದರಿಂದ ಇದು ಸಂಭವಿಸುತ್ತದೆ.

Recommendations

ಜೈವಿಕ ನಿಯಂತ್ರಣ

ಡಿಗ್ಲಿಫಸ್ ಐಸಿಯಾದಂತಹ ಪರಾವಲಂಬಿ ಕಣಜಗಳನ್ನು ಬಳಸಿ. ಇದು ಎಲೆ ಸುರಂಗ ಲಾರ್ವಾಗಳ ಪರಾವಲಂಬಿಯಾಗಿದ್ದು, ಅವುಗಳು ಪ್ಯೂಪಟ್ ಆಗುವ ಮೊದಲೇ ಅವುಗಳನ್ನು ಕೊಲ್ಲುತ್ತವೆ. ಸಸ್ಯಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾವಯವ ಗೊಬ್ಬರಗಳನ್ನು ಬಳಸಿ. ತೇಲುವ ಸಾಲು ಪದರಗಳನ್ನು ಬಳಸಿಕೊಂಡು ವಯಸ್ಕ ಸುರಂಗ ಕೊರೆಯುವ ಕೀಟಗಳು ಎಲೆಗಳ ಮೇಲೆ ಮೊಟ್ಟೆ ಇಡುವುದನ್ನು ತಡೆಯಿರಿ. ಮೊಟ್ಟೆಯಿಡುವ ವಯಸ್ಕ ಕೀಟಗಳನ್ನು ಹಿಡಿಯಲು ಹಳದಿ ಅಥವಾ ನೀಲಿ ಜಿಗುಟಾದ ಬಲೆಗಳನ್ನು ಬಳಸಬಹುದು. ಮುತ್ತಿಗೆಗೆ ಒಳಗಾಗಿರುವ ಸಸ್ಯಗಳ ಅಡಿಯಲ್ಲಿರುವ ಮಣ್ಣನ್ನು, ಲಾರ್ವಾಗಳು ನೆಲದೊಳಗೆ ಸೇರಿ ಕೋಶಾವಸ್ಥೆ ತಲುಪುವುದನ್ನು ತಡೆಯಲು ಪ್ಲಾಸ್ಟಿಕ್ ಮಲ್ಚ್‌ಗಳಿಂದ ಮುಚ್ಚಬೇಕು. ಬೇವಿನ ಎಣ್ಣೆ ಮತ್ತು ಪ್ರಬಲ ಸೈಪರ್ಮೆಥ್ರಿನ್ ದ್ರಾವಣದ ಸಿಂಪಡಿಸುವಿಕೆಯು ಕೀಟಗಳ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಮೊನೊಕ್ರೊಫೋಸ್ 36 ಡಬ್ಲ್ಯೂಎಸ್ಸಿ 0.05% (@ 0.5 ಮಿಲಿ / ಲಿ). ಅನ್ನು ಸಿಂಪಡಿಸಿ. ವೇಗವಾಗಿ ಕಾರ್ಯನಿರ್ವಹಿಸುವ ಸಸ್ಯಶಾಸ್ತ್ರೀಯ ಕೀಟನಾಶಕಗಳನ್ನು ಕೊನೆಯ ಉಪಾಯವಾಗಿ ಮಾತ್ರ ಬಳಸಬೇಕು.

ಅದಕ್ಕೆ ಏನು ಕಾರಣ

ಎಲೆ ಸುರಂಗ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ಬೆಳ್ಳಿಯ ಬೂದು ಬಣ್ಣದ ವಯಸ್ಕ ಪತಂಗಗಳು ಕೋಮಲ ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಬೆಳೆಯುವ ಮೊದಲು, ಲಾರ್ವಾಗಳು ಸಾಮಾನ್ಯವಾಗಿ ಮಂದ ಬಿಳಿದಲ್ಲಿದ್ದು ನಂತರ ಗುಲಾಬಿ ಅಥವಾ ಕೆಂಪು ಕಂದು ಬಣ್ಣಕ್ಕೆ ತಿರುಗುತ್ತವೆ. ಲಾರ್ವಾಗಳು ಮಣ್ಣಿಗೆ ಬಿದ್ದು 7-9 ದಿನಗಳ ನಂತರ ವಯಸ್ಕ ಕೀಟಗಳಾಗಿ ಹೊರಹೊಮ್ಮುತ್ತವೆ. ಒಟ್ಟು ಜೀವನ ಚಕ್ರವು 20 ರಿಂದ 40 ದಿನಗಳವರೆಗೆ ಇರಬಹುದು. ಹಾನಿಯು ಸಸ್ಯಗಳ ದ್ಯುತಿಸಂಶ್ಲೇಷಣೆ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ. ಏಕೆಂದರೆ ಎಲೆಗಳು ಒಣಗುತ್ತವೆ ಮತ್ತು ಉದುರುತ್ತವೆ. ಇದರಿಂದಾಗಿ ಉತ್ಪಾದನೆಯಲ್ಲಿ ಭಾರಿ ನಷ್ಟವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ತ್ವರಿತ ಚಿಕಿತ್ಸೆ ಸಾಧ್ಯವಾಗುವಂತೆ ಸಸ್ಯದ ಎಲೆಗಳನ್ನು ನಿಕಟವಾಗಿ ಮತ್ತು ಋತುವಿನ ಆರಂಭದಲ್ಲೇ ಪರಿಶೀಲಿಸಿ.
  • ಸಣ್ಣ ತೋಟಗಳಲ್ಲಿ ತೀವ್ರವಾಗಿ ಮುತ್ತಿಕೊಂಡಿರುವ ಎಲೆಗಳನ್ನು ತೆಗೆದುಹಾಕಿ, ನಾಶಮಾಡಿ.
  • ಸಸ್ಯಗಳಿಗೆ ಹಾನಿಯಾಗದಂತೆ ನಿರೋಧಕ ಮತ್ತು ಸಹಿಷ್ಣುತೆಯನ್ನು ಸಸ್ಯಗಳಿಗೆ ನೀಡಲು ಸರಿಯಾದ ನೀರಾವರಿ ಅಭ್ಯಾಸ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ