ಹತ್ತಿ

ಗುಲಾಬಿ ಕಾಯಿಕೊರಕ (ಪಿಂಕ್ ಬಾಲ್‌ವರ್ಮ್)

Pectinophora gossypiella

ಕೀಟ

5 mins to read

ಸಂಕ್ಷಿಪ್ತವಾಗಿ

  • ಹೂವಿನ ಮೊಗ್ಗುಗಳಲ್ಲಿ ಕೀಟ ತಿಂದುಬಿಟ್ಟಿರುವ ಹಾನಿ.
  • ರೇಷ್ಮೆ ಎಳೆಗಳು ದಳಗಳನ್ನು ಒಟ್ಟಿಗೆ ಕಟ್ಟುತ್ತವೆ.
  • ಹತ್ತಿಯ ಬೀಜಗಳಲ್ಲಿ ಕೀಟ ತಿಂದಿರುವ ರಂಧ್ರಗಳು.
  • ಕಂದು, ಅಂಡಾಕಾರದ ರೆಕ್ಕೆಗಳನ್ನು ಹೊಂದಿರುವ ಬೂದು-ಕಂದು ಪತಂಗಗಳು.
  • ಲಾರ್ವಾಗಳು ಅಗಲವಾದ ಅಡ್ಡ ಗುಲಾಬಿ ಪಟ್ಟೆಗಳು ಮತ್ತು ಗಾಢ ಬಣ್ಣದ ತಲೆಗಳನ್ನು ಹೊಂದಿರುವ ಬಿಳಿ ದೇಹವನ್ನು ಹೊಂದಿವೆ.

ಇವುಗಳಲ್ಲಿ ಸಹ ಕಾಣಬಹುದು


ಹತ್ತಿ

ರೋಗಲಕ್ಷಣಗಳು

ಗುಲಾಬಿ ಕಾಯಿಕೊರಕ ಉಂಟು ಮಾಡುವ ಹಾನಿಯಿಂದಾಗಿ ಮೊಗ್ಗುಗಳು ಅರಳುವುದಿಲ್ಲ. ಅಲ್ಲದೆ ಬೀಜಕೋಶ ಉದುರುತ್ತದೆ, ಹಾಗೂ ಹತ್ತಿಯ ನಾರಿಗೆ ಹಾನಿಯಾಗಿ ಹತ್ತಿ ಬೀಜದ ನಷ್ಟವೂ ಸಂಭವಿಸುತ್ತದೆ. ಬೇಸಿಗೆಯ ಆರಂಭದಲ್ಲಿ, ಮೊದಲ ತಲೆಮಾರಿನ ಮರಿಹುಳುಗಳು ಸ್ಕ್ವಯರನ್ನು ಆಹಾರ ಮಾಡಿಕೊಳ್ಳುತ್ತವೆ. ಸೋಂಕಿತ ಸ್ಕ್ವಯರ್ ಬೆಳೆದು ಹೂಬಿಡುತ್ತದೆ. ಸೋಂಕಿತ ಹೂವುಗಳು ಲಾರ್ವಾ ರೇಷ್ಮೆ ಎಳೆಗಳಿಂದ ಸುತ್ತಲ್ಪಟ್ಟ ದಳಗಳನ್ನು ಹೊಂದಿರಬಹುದು. ಎರಡನೇ ತಲೆಮಾರಿನ ಲಾರ್ವಾ ಬೀಜಗಳನ್ನು ತಿನ್ನುವುದಕ್ಕೆ ಹತ್ತಿ ನಾರಿನ ಮೂಲಕ ಕೊರೆಯುತ್ತಾ ಹೋಗುತ್ತದೆ. ಹತ್ತಿ ನಾರು ತುಂಡಾಗಿ ಬಣ್ಣಗೆಡುತ್ತದೆ, ಇದರಿಂದಾಗಿ ಗುಣಮಟ್ಟದಲ್ಲಿ ತೀವ್ರ ನಷ್ಟವಾಗುತ್ತದೆ. ಬೀಜಕೋಶಗಳಲ್ಲಿಯೂ ಅವುಗಳ ಗೋಡೆಗಳ ಒಳಭಾಗದಲ್ಲಿರುವ ಸಣ್ಣ ಗಡ್ಡೆಗಳ ರೂಪದಲ್ಲಿ ಕೂಡ ಹಾನಿ ಕಂಡುಬರುತ್ತದೆ. ಗುಲಾಬಿ ಬೋಲ್ವರ್ಮಿನ ಲಾರ್ವಾಗಳು ಮಾಮೂಲಿ ಬೋಲ್ವರ್ಮಿನ ಹಾಗೆ ಬೀಜಕೋಶವನ್ನು ಟೊಳ್ಳು ಮಾಡಿ, ಹೊರಗೆ ತನ್ನ ವಿಸರ್ಜನೆಯನ್ನು ಬಿಡುವುದಿಲ್ಲ. ಅವಕಾಶಕ್ಕೆ ಹೊಂಚುತ್ತಿರುವ ಬಾಲ್ ರಾಟ್ ಫಂಗೈ ನಂತಹ ಶಿಲೀಂಧ್ರಗಳು ಲಾರ್ವಾಗಳು ಮಾಡುವ ಪ್ರವೇಶ ಅಥವಾ ನಿರ್ಗಮನ ರಂಧ್ರಗಳ ಮೂಲಕ ಬೀಜಗಳನ್ನು ಪ್ರವೇಶಿಸಿ ಸೋಂಕು ತರುತ್ತವೆ.

Recommendations

ಜೈವಿಕ ನಿಯಂತ್ರಣ

ಪೆಕ್ಟಿನೊಫೊರಾ ಗೊಸ್ಸಿಪೈಲ್ಲಾದಿಂದ ಪಡೆಯಲಾದ ಸೆಕ್ಸ್ ಫೆರೋಮೋನ್ಗಳನ್ನು ಸೋಂಕಿತ ಸ್ಥಳಗಳಿಗೆ ಸಿಂಪಡಿಸಬಹುದು. ಇದು ಗಂಡು ಕೀಟಗಳು ಹೆಣ್ಣು ಕೀಟವನ್ನು ಕಂಡುಕೊಂಡು ಕೂಡುವ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ. ಸ್ಪಿನೋಸಾಡ್ ಅಥವಾ ಬ್ಯಾಸಿಲಸ್ ತುರಿಂಜಿಯೆನ್ಸಿಸ್ಸಿನ ಉತ್ಪನ್ನಗಳನ್ನು ಸಮಯೋಚಿತವಾಗಿ ಸಿಂಪಡಣೆ ಮಾಡುವುದು ಪರಿಣಾಮಕಾರಿಯಾಗಿದೆ. ಬಿತ್ತನೆಯ 45 ದಿನಗಳ ನಂತರ ಅಥವಾ ಹೂಬಿಡುವ ಹಂತದಲ್ಲಿ ಫೆರೋಮೋನ್ ಬಲೆಗಳನ್ನು (ಪ್ರತೀ ಎಕರೆಗೆ 8) ಅಳವಡಿಸಬಹುದು ಮತ್ತು ಕೊನೆಯ ಹತ್ತಿ ಕೊಯ್ಲು ಅಥವಾ ಬೆಳೆ ಅವಧಿಯ ಅಂತ್ಯದವರೆಗೂ ಇವುಗಳನ್ನು ಮುಂದುವರೆಸಬಹುದು. ಬಲೆಯಲ್ಲಿ ಕೀಟ ಆಕರ್ಷಕಗಳನ್ನು 21 ದಿನಗಳಿಗೊಮ್ಮೆ ಬದಲಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ತಡೆಗಟ್ಟುವ ಕ್ರಮಗಳು ನಿರೀಕ್ಷಿತ ಫಲಿತಾಂಶವನ್ನು ನೀಡದಿದ್ದಲ್ಲಿ, ಕ್ಲೋರಿಪಿರಿಫಾಸ್, ಎಸ್ಫೆನ್ವಲರೇಟ್ ಅಥವಾ ಇಂಡೋಕ್ಸಾಕಾರ್ಬನ್ನು ಹೊಂದಿರುವ ಕೀಟನಾಶಕ ಉತ್ಪನ್ನವನ್ನು ಗುಲಾಬಿ ಕಾಯಿಕೊರಕದ ಪತಂಗಗಳನ್ನು ಕೊಲ್ಲಲು ಎಲೆಗಳ ಮೇಲೆ ಬಳಸಬಹುದು. ಇತರ ಸಕ್ರಿಯ ಪ್ರಮುಖ ಪದಾರ್ಥಗಳಲ್ಲಿ ಗಾಮಾ- ಮತ್ತು ಲ್ಯಾಮ್ಡಾ-ಸೈಹಲೋಥರಿನ್ ಮತ್ತು ಬೈಬೆಂಥ್ರಿನ್ ಸೇರಿವೆ. ಲಾರ್ವಾಗಳು ಸಸ್ಯ ಅಂಗಾಂಶಗಳ ಒಳಗೆ ಸಾಮಾನ್ಯವಾಗಿ ಕಂಡುಬರುವುದರಿಂದ ಲಾರ್ವಾಗಳ ವಿರುದ್ಧ ಯಾವುದೇ ಚಿಕಿತ್ಸೆಯನ್ನು ಶಿಫಾರಸು ಮಾಡುವುದಿಲ್ಲ. ಬಿತ್ತನೆಯ 45 ದಿನಗಳ ನಂತರ ಅಥವಾ ಹೂಬಿಡುವ ಹಂತದಲ್ಲಿ ಫೆರೋಮೋನ್ ಬಲೆಗಳನ್ನು (ಪ್ರತೀ ಎಕರೆಗೆ 8) ಅಳವಡಿಸಬಹುದು ಮತ್ತು ಬೆಳೆ ಅವಧಿಯ ಅಂತ್ಯದವರೆಗೂ ಇವುಗಳನ್ನು ಮುಂದುವರೆಸಬಹುದು.

ಅದಕ್ಕೆ ಏನು ಕಾರಣ

ಪೆಕ್ಟಿನೊಫೊರಾ ಗೊಸಿಪಿಲ್ಲೆಯಾದ ಗುಲಾಬಿ ಕಾಯಿಕೊರಕದ ಲಾರ್ವಾ ಹತ್ತಿ ಸ್ಕ್ವಯರ್ಗಳು ಮತ್ತು ಬೀಜಕೋಶಗಳಿಗೆ ಹಾನಿಯುಂಟುಮಾಡುತ್ತದೆ. ಪ್ರೌಢ ಕೀಟದ ಬಣ್ಣ ಮತ್ತು ಗಾತ್ರದಲ್ಲಿ ವ್ಯತ್ಯಾಸ ಕಂಡು ಬಂದರೂ ಕೂಡ, ಸಾಮಾನ್ಯವಾಗಿ ನಡುವೆ ಬೇರೆ ಬಣ್ಣಗಳ ಚುಕ್ಕೆಗಳಿರುವ ಬೂದುಬಣ್ಣ ಅಥವಾ ಬೂದು ಮಿಶ್ರಿತ ಕಂದು ಬಣ್ಣದಲ್ಲಿರುತ್ತವೆ. ಅವುಗಳು ಉದ್ದಕ್ಕೆ ತೆಳುವಾಗಿದ್ದು ಕಂದು ಬಣ್ಣದ, ಅಂಚಿನಲ್ಲಿ ರೋಮಗಳಿರುವ ಅಂಡಾಕಾರದ ರೆಕ್ಕೆಗಳನ್ನು ಹೊಂದಿರುತ್ತವೆ. ಹೆಣ್ಣು ಕೀಟಗಳು ಸ್ಕ್ವಯರ್ಗಳ ಎಲೆಗಳಲ್ಲಿ ಅಥವಾ ಹಸಿರು ಬೀಜಕೋಶಗಳ ತಳದಲ್ಲಿ ಬೀಜಕೋಶಗಳನ್ನು ಸುತ್ತಿಕೊಂಡಿರುವ ಕ್ಯಾಲಿಕ್ಸ್ ಎಂದು ಕರೆಯಲ್ಪಡುವ ಭಾಗದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಸಾಮಾನ್ಯವಾಗಿ 4 ರಿಂದ 5 ದಿನಗಳಲ್ಲಿ ಮೊಟ್ಟೆ ಒಡೆದು ಮರಿ ಹೊರಬರುತ್ತವೆ ಮತ್ತು ಅದರ ನಂತರ ಶೀಘ್ರದಲ್ಲೇ ಸ್ಕ್ವಯರ್ಗಳನ್ನು ಅಥವಾ ಬೀಜಕೋಶಗಳನ್ನು ಪ್ರವೇಶಿಸುತ್ತವೆ. ಎಳೆಯ ಲಾರ್ವಾಗಳು ಗಾಢ ಕಂದು ಬಣ್ಣದ ತಲೆ ಮತ್ತು ಹಿಂಭಾಗದಲ್ಲಿ ಅಗಲವಾದ ಅಡ್ಡ ಗುಲಾಬಿ ಪಟ್ಟೆಗಳಿರುವ ಬಿಳಿ ದೇಹವನ್ನು ಹೊಂದಿರುತ್ತವೆ. ಅವುಗಳು ಬೆಳೆದಂತೆ ಕ್ರಮೇಣ ಗುಲಾಬಿ ಛಾಯೆಗಳನ್ನು ಪಡೆದುಕೊಳ್ಳುತ್ತವೆ. ಬೀಜಕೋಶವನ್ನು ಒಡೆದು ನೋಡಿದರೆ ಲಾರ್ವಾಗಳು ಬೀಜಕೋಶಗಳ ಒಳಗಿನ ಭಾಗವನ್ನು ತಿನ್ನುತ್ತಿರುವುದು ಕಂಡುಬರುತ್ತದೆ. ಲಾರ್ವಾಗಳು 10 ರಿಂದ 14 ದಿನಗಳ ಕಾಲ ಆಹಾರ ತಿಂದು ಸಾಮಾನ್ಯವಾಗಿ ಮಣ್ಣಿನಲ್ಲಿ( ಬೀಜಕೋಶದಲ್ಲಿ ಅಲ್ಲ; ಗಮನಿಸಿ) ಪ್ಯೂಪಾ ಹಂತಕ್ಕೆ ಬೆಳೆಯುತ್ತವೆ. ಗುಲಾಬಿ ಬೋಲ್ವರ್ಮಿನ ಬೆಳವಣಿಗೆಗೆ ಮಧ್ಯಮದಿಂದ ಅಧಿಕ ತಾಪಮಾನ ಅನುಕೂಲಕರವಾಗಿರುತ್ತದೆ. ಆದಾಗ್ಯೂ, 37.5 °C ಗಿಂತ ಹೆಚ್ಚು ಇದ್ದಲ್ಲಿ ಕೀಟದ ಸಾವಿನ ಮಟ್ಟ ಹೆಚ್ಚಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಕಾಯಿಕೊರಕದ ದಾಳಿ ಋತುವಿನ ಕೊನೆಯಲ್ಲಿ ತಗುಲುವುದರಿಂದ ಬೇಗನೆ ಮಾಗುವ ಪ್ರಭೇದಗಳನ್ನು ಬಳಸಿ.
  • ಕೀಟದ ಕುರುಹಿಗೆ ನಿಯಮಿತವಾಗಿ ಗಿಡಗಳನ್ನು ಪರಿಶೀಲಿಸಿ.
  • ಕೀಟ ಸಂಖ್ಯೆಯನ್ನು ಅಂದಾಜಿಸಲು ಫೆರೋಮನ್ ಬಲೆ ಬಳಸಿ.
  • ಚಳಿಗಾಲ ಮತ್ತು ವಸಂತಕಾಲದಲ್ಲಿ ನೀರಾವರಿಯನ್ನು ಸರಿಯಾಗಿ ಯೋಜಿಸಿ ಕೀಟಗಳ ಸಂಖ್ಯೆಯನ್ನು ಕಡಿಮೆಗೊಳಿಸಿ; ಉದಾಹರಣೆಗೆ, ತೋಟದ ತುಂಬಾ ನೀರು ಹಾಯಿಸುವುದರ ಮೂಲಕ.
  • ಈ ಕೀಟದ ಪರಭಕ್ಷಕಗಳನ್ನು ನಾಶ ಮಾಡದ ಹಾಗೆ ಹಾಗೂ ನಾಶಕಗಳಿಗೆ ಪ್ರತಿರೋಧ ಬೆಳೆಸಿಕೊಳ್ಳುವುದನ್ನು ತಪ್ಪಿಸಲು ಕೀಟನಾಶಕಗಳ ಬಳಕೆಯನ್ನು ಎಚ್ಚರಿಕೆಯಿಂದ ಮಾಡಿ.
  • ಕೀಟಗಳು ಹೆಚ್ಚಿರುವ ಸಮಯವನ್ನು ತಪ್ಪಿಸಲು ಬೇಗನೆ ಕೊಯ್ಲು ಮಾಡಿ.
  • ಕೊಯ್ಲು ಮಾಡಿದ ಕೂಡಲೇ ಬೆಳೆಯ ಉಳಿಕೆಗಳನ್ನು ನಾಶಮಾಡಿ.
  • ಬೇಸಿಗೆಯಲ್ಲಿ ಏನೂ ಸಾಗುವಳಿ ಮಾಡದೆ ನೆಲವನ್ನು ಖಾಲಿ ಬಿಡಿ.
  • 7 ತಿಂಗಳ ಕಾಲ ಹತ್ತಿ ಹಾಕದೆ ಬೇರೆ ಬೆಳೆಗಳೊಂದಿಗೆ ಸರದಿ ಬೆಳೆ ಮಾಡಿ (ಉದಾಹರಣೆಗೆ ಸಣ್ಣ ಧಾನ್ಯಗಳು ಅಥವಾ ಆಲ್ಫಾಲ್ಫಾ – ಕುದುರೆಯ ಮೇವಿಗೆ ಉಪಯೋಗಿಸುವ ಒಂದು ಬೆಳೆ).

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ