ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಕಪ್ಪು ಪಾರ್ಲೇಟೋರಿಯಾ ಪೊರೆ(ಸ್ಕೇಲ್)

Parlatoria ziziphi

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಹಣ್ಣುಗಳು ಮತ್ತು ಚಿಗುರುಗಳನ್ನು ಆವರಿಸುವ ಸಣ್ಣ, ಕಪ್ಪು ಪೊರೆ(ಸ್ಕೇಲ್) ಗಳು ಕಂಡುಬರುತ್ತವೆ.
  • ಎಲೆಗೊಂಚಲು ಮತ್ತು ಹಣ್ಣಿನ ಮೇಲೆ ಹಳದಿ ಬಣ್ಣದ ಪಟ್ಟೆಗಳು ಮತ್ತು ಕಲೆಗಳು ಗೋಚರಿಸುತ್ತವೆ.
  • ಸೋಂಕು ತೀವ್ರವಾದ ಸಂದರ್ಭದಲ್ಲಿ ಎಲೆಗಳು ಅಕಾಲಿಕವಾಗಿ ಉದುರುತ್ತವೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಪಿ. ಝಿಜಿಫಿಯ ಸೋಂಕಿನ ಗುರುತೇನೆಂದರೆ, ಚಿಗುರುಗಳು, ಎಲೆಗಳು ಮತ್ತು ಹಣ್ಣುಗಳನ್ನು ತಿನ್ನುವ ಕಪ್ಪು ಸಣ್ಣ ಕೀಟಗಳು ಕಂಡುಬರುವುದು. ಸೋಂಕು ತೀವ್ರವಾಗಿದ್ದ ಸಂದರ್ಭದಲ್ಲಿ, ತೆಗೆದುಹಾಕಲು ಸಾಧ್ಯವಾಗದ, ಉಪ ಆಯತಾಕಾರದ ಕಪ್ಪು ಕಣಗಳು ಮತ್ತು ಅವುಗಳ ಬಿಳಿ ತೆವಳುವ ಕ್ರಾಲರ್ ಗಳು ಹಣ್ಣು, ಎಲೆಗಳು ಮತ್ತು ಚಿಗುರುಗಳನ್ನು ಅಕ್ಷರಶ: ಆವರಿಸಿಕೊಳ್ಳುತ್ತವೆ. ಗಿಡದ ಸಾರ ಸವಕಳಿಯಾಗುವುದರಿಂದ ಆಶ್ರಯದಾತ ಸಸ್ಯದ ಚಟುವಟಿಕೆ ಕಡಿಮೆಯಾಗುತ್ತದೆ ಮತ್ತು ತಿಂದು ಬಿಟ್ಟಿರುವ ಭಾಗದಲ್ಲಿ ಹಳದಿ ಕಲೆಗಳು ಅಥವಾ ಗೆರೆಗಳು ಬೆಳೆಯುತ್ತವೆ. ಇದರ ತಿನ್ನುವಿಕೆಯು ಶಾಖೆಗಳನ್ನು ಕೊಲ್ಲುತ್ತದೆ ಮತ್ತು ಹಣ್ಣುಗಳ ಬೆಳವಣಿಗೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತದೆ ಮತ್ತು ಹಣ್ಣುಗಳು ಕೆಲವೊಮ್ಮೆ ವಿರೂಪಗೊಳ್ಳುತ್ತವೆ. ಇದರಿಂದ ಹಣ್ಣುಗಳು ಅಕಾಲಿಕವಾಗಿ ಬಲಿಯುತ್ತವೆ, ಎಲೆ ಮತ್ತು ಹಣ್ಣುಗಳು ಉದುರುತ್ತವೆ ಮತ್ತು ಹಣ್ಣುಗಳ ಪ್ರಮಾಣ ಮತ್ತು ಗುಣಮಟ್ಟ ಕಡಿಮೆಯಾಗುತ್ತದೆ. ಈ ಜಾತಿಯು ಸಿಟ್ರಸ್ನ ಪ್ರಮುಖ ಕೀಟವಾಗಿದೆ.

Recommendations

ಜೈವಿಕ ನಿಯಂತ್ರಣ

ಕೆಲವು ಪರಾವಲಂಬಿ ಕಣಜಗಳು, ಸ್ಕುಟೆಲಿಸ್ಟಾ ಕಾರ್ಯುಲೇಯ, ಡೈವರ್ಸೈರ್ವಸ್ ಎಲಿಗಾನ್ಸ್ ಮತ್ತು ಮೆಟಾಫಿಕಸ್ ಹೆಲ್ವೋಲಸ್, ಅಲ್ಲದೆ ಕೆಲವು ಜಾತಿಗಳಾದ ಆಸ್ಪಿಡಿಯೊಟೈಪಾಗಸ್ ಮತ್ತು ಅಪೈಟಿಸ್ಗಳು ಪಿ. ಜಿಝಿಫಿ ಯನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಸರಿಯಾದ ವ್ಯವಸ್ಥೆಗಳಿದ್ದಾಗ ಲೇಡಿ ಬರ್ಡ್ಸ್ (ಚಿಲೊಕಾರ್ಸ್ ಬೈಪುಸ್ಟುಲೇಟಸ್ ಅಥವಾ ಸಿ. ನಿಗ್ರಿಟಾ, ಲಿಂಡರಸ್ ಲೋಪಾಂಥೆ ಮತ್ತು ಆರ್ಕಸ್ ಚಾಲಿಬಿಯಸ್) ಮೊದಲಾದ ಪರಭಕ್ಷಕಗಳು ಕೂಡಾ ಕಪ್ಪು ಸ್ಕೇಲ್ ನ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಶಿಲೀಂಧ್ರ ಮೂಲದ ಕ್ಯಾನೋಲ ತೈಲ ಅಥವಾ ಜೈವಿಕ ಕೀಟನಾಶಕಗಳನ್ನು ಸಹ ಕಪ್ಪು ಸ್ಕೇಲನ್ನು ನಿಯಂತ್ರಿಸಲು ಬಳಸಬಹುದು. ಪರಿಸರದಲ್ಲಿ ಪ್ರಮುಖವಾದ ಇತರ ಕೀಟಗಳ ಮೇಲೆ ಕಡಿಮೆ ಪ್ರಭಾವ ಬೀರುವ ಬಿಳಿ ಎಣ್ಣೆ ದ್ರಾವಣಗಳನ್ನು (ಉದಾಹರಣೆಗೆ 4 ಭಾಗ ಸಸ್ಯಜನ್ಯ ತೈಲಕ್ಕೆ ಒಂದು ಭಾಗ ಪಾತ್ರೆ ತೊಳೆಯುವ ಮಾರ್ಜಕ) ಕಪ್ಪು ಸ್ಕೇಲ್ ನ ವಿರುದ್ಧ ಪರಿಣಾಮಕಾರಿಯಾಗಿ ಬಳಸಬಹುದು.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಕಪ್ಪು ಸ್ಕೇಲ್ ನ ಚಿಕಿತ್ಸೆಯು, ಹೂ ಅರಳಿದ ನಂತರ ಮತ್ತು ಬೇಸಿಗೆ ತುಂತುರುಗಳ ನಡುವಿನಲ್ಲಿನ ಮೊದಲ ತಲೆಮಾರಿನ ತೆವಳುವ ಕ್ರಾಲರ್ ಗಳನ್ನು ನಿಯಂತ್ರಿಸಲು ಸರಿಯಾದ ಸಮಯದಲ್ಲಿ ಮಾಡಬೇಕು. ಕ್ಲೋರ್ಪಿರಿಫೋಸ್, ಕಾರ್ಬಾರಿಲ್, ಮ್ಯಾಲಥಿಯಾನ್ ಅಥವಾ ಡೈಮೆಥೊಯೇಟ್ ಅನ್ನು ಹೊಂದಿರುವ ಉತ್ಪನ್ನಗಳನ್ನು ಸೂಚಿಸಲಾಗುತ್ತದೆ. ಆದರೆ ಅವುಗಳು ಪರಭಕ್ಷಕ ಕೀಟಗಳ ಮೇಲೂ ಪರಿಣಾಮ ಬೀರಬಹುದಾದ್ದರಿಂದ ಅವುಗಳನ್ನು ಎಚ್ಚರಿಕೆಯಿಂದ ಬಳಸಬೇಕು.

ಅದಕ್ಕೆ ಏನು ಕಾರಣ

ಪಾರಲೋಟೋರಿಯಾ ಜಿಝಿಫಿ ಎಂಬ ಸ್ಕೇಲ್ ನಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ, ಅವುಗಳಿಗೆ ಮುಖ್ಯವಾಗಿ ಸಿಟ್ರಸ್ ಜಾತಿಗಳು ಆಶ್ರಯದಾತ ಸಸ್ಯಗಳು. ಅವುಗಳು ಅಧಿಕವಾಗಿ ಅಂಟಿಕೊಳ್ಳುವುದು ಎಲೆಗಳ ಮೇಲಾದರೂ, ಹಣ್ಣು ಮತ್ತು ಶಾಖೆಗಳ ಮೇಲೂ ಅಂಟಿಕೊಂಡು ಆಹಾರವನ್ನು ತಿನ್ನುತ್ತವೆ. ಇದರ ಎಲ್ಲಾ ಬೆಳವಣಿಗೆಯ ಹಂತಗಳು ವರ್ಷದುದ್ದಕ್ಕೂ ಇರುತ್ತವೆ. ಅಂದರೆ ವಾರ್ಷಿಕವಾಗಿ ಈ ಕೀಟ ಹಲವಾರು ಪೀಳಿಗೆಗಳನ್ನು ಪೂರ್ಣಗೊಳಿಸುತ್ತದೆ, ಸುಮಾರು ಎರಡರಿಂದ ಏಳು ಸಂಖ್ಯೆಯವರೆಗೆ. ಈ ಸಂಖ್ಯೆಯು ಸಿಟ್ರಸ್ ಬೆಳೆಯುವ ಪ್ರದೇಶಗಳ ಮೇಲೆ ಕೂಡಾ ಅವಲಂಬಿತವಾಗಿರುತ್ತದೆ. ಸಿಸಿಲಿಯ ಪ್ರದೇಶದಲ್ಲಿ, ಪರಿಸ್ಥಿತಿಗಳು ಅನುಕೂಲಕರವಾಗಿದ್ದಾಗ ಇದರ ಸಂಪೂರ್ಣ ಜೀವನ ಚಕ್ರವು 30-40 ದಿನಗಳನ್ನು ತೆಗೆದುಕೊಳ್ಳಬಹುದು. ಆದರೆ ಟುನೀಶಿಯದಲ್ಲಿ ಬೆಚ್ಚಗಿನ ಸ್ಥಿತಿಗಳಲ್ಲಿ ಇದು 70-80 ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ತಂಪಾದ ವಾತಾವರಣದಲ್ಲಿ ಸುಮಾರು 160 ದಿನಗಳವರೆಗೂ ತೆಗೆದುಕೊಳ್ಳುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸ್ಕೇಲ್ ನ ಸೋಂಕನ್ನು ಗುರುತಿಸಲು ಮರಗಳನ್ನು ನಿಯಮಿತವಾಗಿ ಪರಿಶೀಲಿಸಿ.
  • ಸೋಂಕು ಕಡಿಮೆ ಇದ್ದ ಸಂದರ್ಭದಲ್ಲಿ, ಸಸ್ಯದ ಭಾಗಗಳನ್ನು ಕೈಯಿಂದ ತೆಗೆಯುವುದು ಅಥವಾ ಕೀಟಗಳನ್ನು ಕೊಲ್ಲುವುದು ಪರಿಣಾಮಕಾರಿಯಾಗಿರುತ್ತದೆ.
  • ಸೋಂಕಿತ ಮರದ ಭಾಗಗಳನ್ನು ತೆಗೆದುಹಾಕಿ ಮತ್ತು ಸುಟ್ಟುಹಾಕಿ ಅಥವಾ ಅವುಗಳನ್ನು ಹಣ್ಣಿನ ತೋಟದಿಂದ ದೂರವಿರುವ ಜಾಗದಲ್ಲಿ ಆಳವಾಗಿ ಹೂತು ಹಾಕಿ.
  • ಸಸ್ಯಗಳ ನಡುವೆ ಕೀಟಗಳ ಒಡಾಟವನ್ನು ತಡೆಗಟ್ಟಲು ಮತ್ತು ಮೇಲಾವರಣದಲ್ಲಿ ಗಾಳಿಯ ಪ್ರಸರಣವನ್ನು ಹೆಚ್ಚಿಸಲು ಸಸ್ಯದ ಎತ್ತರವನ್ನು ಸಮರ್ಪಕವಾಗಿ ಕತ್ತರಿಸಿ.
  • ಸಂಭಾವ್ಯ ಸೋಂಕಿತ ವಸ್ತುಗಳ ಸಾಗಣೆ ಮಾಡಬೇಡಿ.
  • ಹೊಲದಲ್ಲಿ ಬದುಕುವ ನೈಸರ್ಗಿಕ ಶತ್ರುಗಳನ್ನು ರಕ್ಷಿಸಲು ವಿಶಾಲ-ರೋಹಿತ, ಉಳಿಯುವ ಕೀಟನಾಶಕಗಳನ್ನು ಬಳಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ