ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಹಸಿರು ಸಿಟ್ರಸ್ ಗಿಡಹೇನು

Aphis spiraecola

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಳೆಯ ಎಲೆಗಳಲ್ಲಿ ತೀವ್ರವಾದ, ವಿಶಿಷ್ಟವಾದ ರೀತಿಯಲ್ಲಿ ಅಂತರ್ಮುಖವಾಗಿ ಸುರುಳಿ ಸುತ್ತಿಕೊಳ್ಳುವಿಕೆ ಮತ್ತು ವಿಕೃತವಾದ ಸಣ್ಣ ರೆಂಬೆಗಳು.
  • ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಹಿಅಂಟಿನ ಉಪಸ್ಥಿತಿ, ಇದು ಕೆಳಗಿರುವ ಎಲೆಗಳ ಮೇಲೆ ತೊಟ್ಟಿಕ್ಕುತ್ತದೆ ಮತ್ತು ಮಸಿಯಾದ ಬೂಷ್ಟಿನಿಂದ ವಸಾಹತು ಸ್ಥಾಪನೆಯಾಗುತ್ತದೆ.
  • ಈ ಕೀಟಕ್ಕೆ ವಿಶೇಷವಾಗಿ ಎಳೆಯ ಮರಗಳು ತುತ್ತಾಗುತ್ತವೆ ಮತ್ತು ಅವು ಕುಂಠಿತ ಬೆಳವಣಿಗೆಯನ್ನು ತೋರಬಹುದು.

ಇವುಗಳಲ್ಲಿ ಸಹ ಕಾಣಬಹುದು


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಎಳೆಯ ಎಲೆಗಳಲ್ಲಿ ತೀವ್ರವಾದ, ವಿಶಿಷ್ಟವಾದ ರೀತಿಯಲ್ಲಿ ಅಂತರ್ಮುಖವಾಗಿ ಸುರುಳಿ ಸುತ್ತಿಕೊಳ್ಳುವಿಕೆ ಮತ್ತು ವಿಕೃತವಾದ ಸಣ್ಣ ರೆಂಬೆಗಳಂತಹ ರೋಗಲಕ್ಷಣಗಳಿರುತ್ತವೆ. ಹಾನಿಗೊಳಗಾದ ಹೂವುಗಳು ಮತ್ತು ಎಳೆಯ ಹಣ್ಣುಗಳು ಅವುಗಳಲ್ಲೂ ವಿಶೇಷವಾಗಿ, ಹೆಚ್ಚಾಗಿ ಹಾನಿಗೆ ತುತ್ತಾಗಬಲ್ಲ ಮೃದು ಚರ್ಮವುಳ್ಳವು ಅಕಾಲಿಕವಾಗಿ ಉದುರುತ್ತವೆ. ಇದಲ್ಲದೆ, ಕೀಟವು ಅತಿ ಹೆಚ್ಚಿನ ಪ್ರಮಾಣದಲ್ಲಿ ಸಿಹಿಅಂಟನ್ನು ಉತ್ಪಾದಿಸುತ್ತದೆ ಇದು ಕೆಳಗಿನ ಎಲೆಗಳ ಮೇಲೆ ಬೀಳುತ್ತದೆ. ಇದರಲ್ಲಿನ ಸಿಹಿ ಅಂಶದ ಕಾರಣ, ಇದು ತಕ್ಷಣವೇ ಕಪ್ಪು ಮಸಿಯಾದ ಬೂಷ್ಟಿನಿಂದ ವಸಾಹತುಗೊಳ್ಳುತ್ತದೆ. ಇರುವೆಗಳು ಸಹ ಸಿಹಿಅಂಟನ್ನು ತಿನ್ನುತ್ತವೆ ಮತ್ತು ಬದಲಿಗೆ ಗಿಡಹೇನುಗಳ ಆರೈಕೆ ಮಾಡುತ್ತವೆ. ಗಿಡಹೇನುಗಳಿಂದ ಸತತವಾದ ಆಹಾರ ಸೇವನೆ ಮತ್ತು ಬೂಷ್ಟು ಲೇಪನದಿಂದ ತಗ್ಗಿದ ದ್ಯುತಿಸಂಶ್ಲೇಷಣಾ ಪ್ರಮಾಣವು ಮರಗಳನ್ನು ದುರ್ಬಲಗೊಳಿಸುತ್ತವೆ. ಈ ಕೀಟಕ್ಕೆ ವಿಶೇಷವಾಗಿ ಎಳೆಯ ಮರಗಳು ತುತ್ತಾಗುತ್ತವೆ ಮತ್ತು ಅವು ಕುಂಠಿತ ಬೆಳವಣಿಗೆಯನ್ನು ತೋರಬಹುದು. ಬೆಳೆಯ ಹೋಸ್ಟ್ ನ ಮೇಲೆ ಎಷ್ಟು ಬೇಗ ಆಕ್ರಮಣವಾಗುತ್ತದೆಯೋ ರೋಗಲಕ್ಷಣಗಳು ಅಷ್ಟು ತೀವ್ರವಾಗಿರುತ್ತವೆ. ಹಣ್ಣಿನ ಗುಣಮಟ್ಟದ ಮೇಲೂ ಸಹ ಪರಿಣಾಮವಾಗುತ್ತದೆ.

Recommendations

ಜೈವಿಕ ನಿಯಂತ್ರಣ

ನೊಣಗಳ ಅನೇಕ ಜಾತಿಗಳು, ಲೇಸ್ವಿಂಗ್ಸ್, ಜೀರುಂಡೆಗಳು, ಹೋವರ್ ಫ್ಲೈ ಗಳಂತವು ಸ್ಪೈರೆ ಅಫಿಡ್ ನ ಪರಭಕ್ಷಗಳಲ್ಲಿ ಸೇರಿವೆ. ಅಫಿಡಿಡೆ ಕುಟುಂಬದ ಕೆಲವು ಪ್ಯಾರಾಸಿಟಾಯ್ಡ್ ಕಣಜಗಳು ಎ. ಸ್ಪೈರೆಯ ಮೇಲೆ ದಾಳಿ ಮಾಡುವಂತೆ ಕಂಡುಬಂದಿವೆ ಆದರೆ ಲಾರ್ವಾಗಳಲ್ಲಿ ಅವು ತಮ್ಮ ಜೀವನಚಕ್ರವನ್ನು ಪೂರ್ಣಗೊಳಿಸುವುದಿಲ್ಲ, ಆದ್ದರಿಂದ ಅವುಗಳು ಅವಿಶ್ವಾಸನೀಯವಾಗಿವೆ. ಹಲವಾರು ರೋಗಕಾರಕ ಶಿಲೀಂಧ್ರವು ಸಹ ಗಿಡಹೇನನ್ನು ಸೋಂಕಿಗೆ ಒಳಪಡಿಸುತ್ತದೆ ಆದರೆ ಈ ಹಿಂದೆ ಇವು ಯಾವುವನ್ನೂ ಕೀಟದ ಹಾನಿಯನ್ನು ಕಡಿಮೆಮಾಡಲು ಬಳಸಲಾಗಿಲ್ಲ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಏಕೆಂದರೆ, ಎಳೆಯ ಮರಗಳು ಹೆಚ್ಚಾಗಿ ಈ ಕೀಟಕ್ಕೆ ತುತ್ತಾಗುತ್ತವೆ, ಹಾನಿಯನ್ನು ಕಡಿಮೆಗೊಳಿಸುವ ಚಿಕಿತ್ಸೆಗಳನ್ನು ಅವುಗಳಿಗೆ ಸೀಮಿತವಾಗಿಡಬಹುದು. ಅತಿ ಹೆಚ್ಚಿನ ತಾಪಮಾನಗಳ ಮತ್ತು ಕಡಿಮೆ ಆರ್ದ್ರತೆಗಳ ಅವಧಿಗಳಲ್ಲಿ ಸಿಂಪರಣೆಯನ್ನು ತಪ್ಪಿಸಿ. ಸ್ಪೈರೆ ಅಫಿಡ್ ಅನ್ನು ನಿಯಂತ್ರಿಸಲು ಕಾರ್ಬಮೇಟ್ ಗಳು, ಕೆಲವು ಆರ್ಗನೋಫಾಸ್ಫೇಟ್ ಗಳು, ಅಸಿಟಾಮಿಪ್ರಿಡ್, ಪ್ರಿಮಿಕಾರ್ಬ್ ಮತ್ತು ಇಮಿಡೊಕ್ಲೋರೀಡ್ ಗಳನ್ನು ಬಳಸಬಹುದು.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು, ಸ್ಪೈರಿಯ ಅಫಿಡ್ ಎಂದೂ ಕರೆಯಲ್ಪಡುವ ಪಾಲಿಫೆಗಸ್ ಗಿಡಹೇನಾದ ಅಫೀಸ್ ಸ್ಪೈರೆಕೋಲದ ಆಹಾರ ಸೇವನೆಯ ಚಟುವಟಿಕೆಯಿಂದ ಉಂಟಾಗುತ್ತವೆ. ಸೇಬು, ನಿಂಬೆ ಮತ್ತು ಪಪ್ಪಾಯ ಮಾತ್ರವಲ್ಲದೆ, ಇದು ಗಣನೀಯ ಪ್ರಮಾಣದಲ್ಲಿ ದ್ವಿತೀಯಕ ಹೋಸ್ಟ್ ನಂತಹ ಬೆಳೆಗಳನ್ನೂ ಸಹ ಸೋಂಕಿಗೆ ಒಳಪಡಿಸಬಹುದು. ಕಾಡು ಹೋಸ್ಟ್ ಗಳಲ್ಲಿ ಕ್ರಾಟೇಗಸ್ (ಹಾಥಾರ್ನ್) ಮತ್ತು ಈ ಕೀಟದ ಸಾಮಾನ್ಯ ಹೆಸರಿಗೆ ಕಾರಣವಾದ ಸ್ಪೈರೆ, ಕುಲದ ಅನೇಕ ಜಾತಿಗಳು ಸೇರಿವೆ. ಇದರ ದೇಹವು ಹಳದಿಯಿಂದ ಮಂಕಾದ ಹಸಿರು ಬಣ್ಣ ಹೊಂದಿದ್ದು, ಸುಮಾರು 2 ಮಿಮೀ ಉದ್ದವಿರುತ್ತದೆ. ಮೂರು ಕಪ್ಪನೆಯ ಉಬ್ಬುವಿಕೆಗಳು ಹೊಟ್ಟೆಯ ಕೆಳಗಿನ ಭಾಗದಿಂದ ಹೊರಚಾಚಿರುತ್ತವೆ. ಪ್ರೌಢ ಮತ್ತು ಮರಿ ಕೀಟಗಳು ಗುಂಪಿನಲ್ಲಿ ಎಲೆಗಳನ್ನು ಮತ್ತು ರೆಂಬೆಗಳನ್ನು ತಿನ್ನುತ್ತವೆ, ಸಸ್ಯದ ರಸವನ್ನು ಹೀರುತ್ತವೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಿಹಿಅಂಟನ್ನು ಉತ್ಪಾದಿಸುತ್ತವೆ. ಈ ಸಿಹಿ ಪದಾರ್ಥವು ನಂತರ ಮಸಿಯಾದ ಬೂಷ್ಟಿನಿಂದ ವಸಾಹತುಗೊಳ್ಳಬಹುದು. ಇದರ ಜೀವನಚಕ್ರದ ಮೇಲೆ ತಾಪಮಾನವು ಗಣನೀಯ ಪರಿಣಾಮವನ್ನು ಹೊಂದಿದೆ. ಉದಾಹರಣೆಗೆ, ಅತಿ ಹೆಚ್ಚಿನ ತಾಪಮಾನಗಳು ಮತ್ತು ಅತಿ ಕಡಿಮೆ ಸಾಪೇಕ್ಷ ಆರ್ದ್ರತೆಯು ಈ ಕೀಟಕ್ಕೆ ಅನುಕೂಲಕರವಾಗಿಲ್ಲ. ಈ ಕೀಟವು ಚಳಿಗಾಲದ ಅವಧಿಗಳನ್ನು ಸಹ ಚೆನ್ನಾಗಿಯೇ ಸಹಿಸಿಕೊಳ್ಳುತ್ತದೆ, ತೀಕ್ಷವಲ್ಲದ ಚಳಿಗಾಲದ ನಂತರ, ವಸಂತ ಋತುವಿನ ಪ್ರಾರಂಭದಲ್ಲಿ ಹಠಾತ್ತಾದ ನಿಂಬೆ ತೋಪುಗಳ ರೋಗ ಮುತ್ತುವಿಕೆಯ ಕಾರಣವನ್ನು ಇದರಿಂದ ತಿಳಿಯಬಹುದು. ಕೊನೆಯದಾಗಿ, ಇದು ಟ್ರಿಸ್ಟೇಜ ವೈರಸ್ಸಿನ ರೋಗವಾಹಕವಾಗಿದೆ ಮತ್ತು ಇದು ಬೇರೆ ಬೇರೆ ಹೋಸ್ಟ್ ಗಳ ನಡುವೆ ಪ್ರಸಾರವಾಗಬಹುದು.


ಮುಂಜಾಗ್ರತಾ ಕ್ರಮಗಳು

  • ಗಿಡಹೇನುಗಳ ಉಪಸ್ಥಿತಿಯ ಚಿಹ್ನೆಗಳಿಗಾಗಿ ಹಣ್ಣಿನ ತೋಟಗಳನ್ನು ಪರಿವೀಕ್ಷಿಸಿ.
  • ಇರುವೆಗಳ ಚಲನೆಯನ್ನು ಪ್ರತಿಬಂಧಿಸಲು ತಡೆಗಳನ್ನು ಬಳಸಿ.
  • ಸಿಹಿಅಂಟಿನ ಇರುವಿಕೆಯನ್ನು ನಿರ್ಣಯಿಸಲು ನೀರು-ಸೂಕ್ಷ್ಮ ಕಾಗದಗಳಂತಹ ಪರಿವೀಕ್ಷಣಾ ವ್ಯವಸ್ಥೆಗಳನ್ನು ಬಳಸಿ.
  • ಇರುವೆಗಳನ್ನು ತಡೆಯಲು ಜಿಗುಟಾದ ಬಲೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ