ಕ್ಯಾನೋಲ

ರೇಪ್ ಜೀರುಂಡೆ

Brassicogethes aeneus

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಕೋಸು ಅಥವಾ ಕ್ಯಾನೋಲ ಹೂವುಗಳ ಸುತ್ತಲೂ ಹೊಳೆಯುವ ಕಪ್ಪು ಜೀರುಂಡೆಗಳು.
  • ಮೊಗ್ಗುಗಳಲ್ಲಿ ರಂಧ್ರಗಳು.
  • ತೀವ್ರ ಪರಿಸ್ಥಿತಿಯಲ್ಲಿ ಬೀಜಕೋಶಗಳಿಲ್ಲದ ತೊಟ್ಟುಗಳು.

ಇವುಗಳಲ್ಲಿ ಸಹ ಕಾಣಬಹುದು

2 ಬೆಳೆಗಳು
ಎಲೆಕೋಸು
ಕ್ಯಾನೋಲ

ಕ್ಯಾನೋಲ

ರೋಗಲಕ್ಷಣಗಳು

ಆತಿಥೇಯ ಸಸ್ಯದ ಹೂವುಗಳ ಸುತ್ತಲೂ ತೆವಳುತ್ತಿರುವ ಹೊಳೆಯುವ ಕಪ್ಪು ಜೀರುಂಡೆಗಳ ಉಪಸ್ಥಿತಿಯು ದಾಳಿಯ ಅತ್ಯಂತ ಸ್ಪಷ್ಟವಾದ ಸಂಕೇತವಾಗಿದೆ. ಮೊಗ್ಗುಗಳಲ್ಲಿನ ರಂಧ್ರಗಳು ವಯಸ್ಕ ಕೀಟಗಳು ಮೊಗ್ಗುಗಳನ್ನು ಎಲ್ಲಿ ತಿಂದಿವೆ ಮತ್ತು ತಮ್ಮ ಮೊಟ್ಟೆಗಳನ್ನು ಇಟ್ಟಿವೆ ಎಂಬುದನ್ನು ಸೂಚಿಸುತ್ತವೆ. ಮೊಗ್ಗುಗಳಿಗೆ ತೀವ್ರವಾದ ಹಾನಿಯು ಮೊಗ್ಗುಗಳು ಬೀಳಲು ಕಾರಣವಾಗಬಹುದು ಮತ್ತು ಇದರಿಂದಾಗಿ ಬೀಜಕೋಶ ರಹಿತ ತೊಟ್ಟುಗಳು ಉಳಿಯಬಹುದು. ಹೂವುಗಳಲ್ಲಿ ಕೀಟಗಳು ಪರಾಗವನ್ನು ಹೊಂದಿರುವ ಕೇಸರಗಳನ್ನು ಮಾತ್ರ ತಿನ್ನುತ್ತವೆ ಮತ್ತು ಕೆಲವು ಗೋಚರ ಲಕ್ಷಣಗಳು ಸ್ಪಷ್ಟವಾಗಿ ಕಂಡುಬರುತ್ತವೆ.

Recommendations

ಜೈವಿಕ ನಿಯಂತ್ರಣ

ಬ್ಯಾಸಿಲಸ್ ತುರಿಂಜಿಯೆನ್ಸಿಸ್‌ನ ಸೂತ್ರೀಕರಣಗಳನ್ನು ಬಿ. ಎನಿಯಸ್ ವಿರುದ್ಧ ಬಳಸಬಹುದು. ಇದು ಸ್ವಲ್ಪಮಟ್ಟಗೆ ಯಶಸ್ಸು ನೀಡುತ್ತದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಬ್ರೊಕೊಲಿ ಮತ್ತು ಹೂಕೋಸು ಸಸ್ಯಗಳಿಗೆ ಕೀಟನಾಶಕವನ್ನು - ಸಾಮಾನ್ಯವಾಗಿ ಡೆಲ್ಟಾಮೆಥ್ರಿನ್ - ಸಿಂಪಡಿಸಿ, ಬಲೆ ಬೆಳೆಗಳಾಗಿ ಬಳಸಬಹುದು. ಕೆಲವು ಪ್ರಯೋಗಗಳು ಇದರಿಂದ ಬಹುತೇಕ ಸಂಪೂರ್ಣ ರಕ್ಷಣೆ ಸಾಧ್ಯವೆಂದು ತೋರಿಸಿವೆ. ಆದರೆ, ಇದು ಮುಖ್ಯ ಬೆಳೆಗೆ ಮುಂಚಿತವಾಗಿ ಹೂಬಿಡುವ ಬಲೆಯ ಬೆಳೆಯನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಅವಲಂಬಿಸಿರುತ್ತದೆ. ಈ ರೀತಿ ಸಮಯ ನಿರ್ಧರಿಸುವುದು ಕಷ್ಟಕರವಾಗಿದೆ. ರಾಸಾಯನಿಕಕ್ಕೆ ಪ್ರತಿರೋಧ ಇಲ್ಲವಾದಲ್ಲಿ ಪೈರೆಥ್ರಾಯ್ಡ್ ಕೀಟನಾಶಕಗಳನ್ನು ಬಳಸಬಹುದು. ಆದಾಗ್ಯೂ, ಪೈರೆಥ್ರಾಯ್ಡ್ ಕೀಟನಾಶಕಗಳು ಪರಭಕ್ಷಕ ಜೀವಿಗಳ ಮೇಲೂ ಪರಿಣಾಮ ಬೀರುತ್ತವೆ. ಪೈರೆಥ್ರಾಯ್ಡ್‌ಗಳಿಗೆ ಪರ್ಯಾಯವಾಗಿ ನಿಯೋನಿಕೋಟಿನಾಯ್ಡ್‌ಗಳು, ಇಂಡೋಕ್ಸಾಕಾರ್ಬ್ ಅಥವಾ ಪೈಮೆಟ್ರೋಜಿನ್ ಅನ್ನು ಪರಿಗಣಿಸಿ. ಹೂಬಿಡುವಿಕೆ ಪ್ರಾರಂಭವಾದ ನಂತರ ಸಿಂಪಡಿಸಬೇಡಿ.

ಅದಕ್ಕೆ ಏನು ಕಾರಣ

ವಯಸ್ಕ ಕೀಟಗಳು ಕಾಡಿನಲ್ಲಿ ಮತ್ತು ಇತರ ಕೃಷಿ ಮಾಡದ ಆಶ್ರಯವಿರುವ ಸ್ಥಳಗಳಲ್ಲಿ ಚಳಿಗಾಲ ಕಳೆದ ನಂತರ ವಸಂತಕಾಲದಲ್ಲಿ ಹೊರಹೊಮ್ಮುತ್ತವೆ. ತಾಪಮಾನವು 12-15 °C ಗಿಂತ ಹೆಚ್ಚಾದಾಗ ಅವು ಸಕ್ರಿಯವಾಗಿ ಹಾರುತ್ತವೆ. ತಮ್ಮ ಸಂತಾನೋತ್ಪತ್ತಿಯ ತಾಣಗಳನ್ನು ಪತ್ತೆಹಚ್ಚುವ ಮೊದಲು ಲಭ್ಯವಿರುವ ಯಾವುದೇ ಹೂವುಗಳ ಪರಾಗವನ್ನು ತಿನ್ನುತ್ತವೆ. ಕನಿಷ್ಠ 3 ಮಿಮೀ ಉದ್ದದ ಮೊಗ್ಗುಗಳಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಲಾರ್ವಾಗಳು ಹೂವುಗಳಲ್ಲಿನ ಪರಾಗವನ್ನು ತಿನ್ನುತ್ತವೆ. ಎರಡು ಲಾರ್ವಾ ಇನ್ಸ್ಟಾರ್ಗಳನ್ನು ಪೂರ್ಣಗೊಳಿಸಲು 9-13 ದಿನಗಳನ್ನು ತೆಗೆದುಕೊಳ್ಳುತ್ತದೆ. ಪೂರ್ಣವಾಗಿ ಬೆಳೆದ ಲಾರ್ವಾ ನಂತರ ನೆಲಕ್ಕೆ ಇಳಿಯುತ್ತದೆ. ಸ್ವತಃ ಮಣ್ಣಿನಲ್ಲಿ ಹೂತುಹೋಗುತ್ತದೆ. ಹೊಸ ವಯಸ್ಕ ಕೀಟಗಳು ನಂತರ ಹೊರಹೊಮ್ಮುತ್ತವೆ ಮತ್ತು ಮತ್ತೊಮ್ಮೆ ಚಳಿಗಾಲದ ತಾಣಗಳನ್ನು ಹುಡುಕುವ ಮೊದಲು ಲಭ್ಯವಿರುವ ಯಾವುದೇ ಹೂವುಗಳಿಂದ ಪರಾಗವನ್ನು ತಿನ್ನುತ್ತವೆ. ಬೆಳೆಗಳ ಮೇಲೆ ಬಿ. ಏನಿಯಸ್‌ನ ಹರಡುವಿಕೆಯು ಸಾಮಾನ್ಯವಾಗಿ ಸಂಕೀರ್ಣ ಮತ್ತು ಅನಿಯಮಿತವಾಗಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಆಳವಾದ ಉಳುಮೆಯನ್ನು ತಪ್ಪಿಸಿ.
  • ಇದು ಬಿ.
  • ಎನಿಯಸ್‌ನ ಪರಾವಲಂಬಿಗಳನ್ನು ಕೊಲ್ಲುತ್ತದೆ.
  • ಜೀರುಂಡೆಗಳು ಅಥವಾ ಮೊಗ್ಗುಗಳಲ್ಲಿ ರಂಧ್ರಗಳಿವೆಯೇ ಎಂದು ನಿಯಮಿತವಾಗಿ ಸಸ್ಯಗಳನ್ನು ಮೇಲ್ವಿಚಾರಣೆ ಮಾಡಿ.
  • ಹೂಬಿಡಲು ಪ್ರಾರಂಭಿಸಿದ ನಂತರ ಕೀಟನಾಶಕಗಳನ್ನು ಸಿಂಪಡಿಸಬೇಡಿ; ಪರಾಗ ಜೀರುಂಡೆಗಳು ತೆರೆದ ಹೂವುಗಳತ್ತ ವಲಸೆ ಹೋಗುತ್ತವೆ ಮತ್ತು ಮೊಗ್ಗುಗಳಿಂದ ದೂರವಿರುತ್ತವೆ.
  • ಹೀಗಾಗಿ, ಕೀಟಗಳ ಬದಲು ಪರಾಗಸ್ಪರ್ಶಕವಾಗಿ ಕೆಲಸ ಮಾಡುತ್ತವೆ.
  • ಬೈಟೆಡ್ ಬಲೆಗಳು ಅಥವಾ ಆನ್‌ಲೈನ್ ಪರಾಗ ಜೀರುಂಡೆ ವಲಸೆ ಮುನ್ಸೂಚನೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ