ಬಾಳೆಹಣ್ಣು

ಬಾಳೆ ಥ್ರಿಪ್ಸ್ ತುಕ್ಕು

Chaetanaphothrips signipennis

ಕೀಟ

5 mins to read

ಸಂಕ್ಷಿಪ್ತವಾಗಿ

  • ಹಣ್ಣುಗಳ ಮೇಲೆ ನೀರು ತುಂಬಿದಂತಹ ಕಲೆಗಳು ಕಂಡುಬರುತ್ತವೆ.
  • ಕಲೆಗಳು ತುಕ್ಕು ಹಿಡಿದಂತೆ, ಒರಟಾದ ಕಲೆಗಳಾಗಿ ಬದಲಾಗುತ್ತವೆ - ಗಾಢವಾದ ಕೆಂಪು ಬಣ್ಣದಿಂದ ಗಾಢ ಕಂದು ಬಣ್ಣದಲ್ಲಿರುತ್ತವೆ, ಇಡೀ ಸಿಪ್ಪೆಯನ್ನು ಆವರಿಸುತ್ತದೆ.
  • ಹೆಚ್ಚು ಕಳಿತ ಹಣ್ಣುಗಳ ಮೇಲೆ ಬಿರುಕುಗಳು ಅಥವಾ ಒಡಕುಗಳು.
  • ಪ್ರೌಢ ಕೀಟಗಳು ತೆಳ್ಳಗೆ, ಹಳದಿ ಬಣ್ಣದಿಂದ ಕಂದು ಬಣ್ಣದಲ್ಲಿರುತ್ತವೆ, ಕಿರಿದಾದ ಅಂಚಿನ ರೆಕ್ಕೆಗಳನ್ನು ಹೊಂದಿದ್ದು ಸುಮಾರು 1.3 ಮಿ.ಮೀ ಗಾತ್ರದ್ದಾಗಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಬಾಳೆಹಣ್ಣು

ರೋಗಲಕ್ಷಣಗಳು

ಸೋಂಕು ಬೆಳವಣಿಗೆಯ ಯಾವುದೇ ಹಂತದಲ್ಲಿಯಾದರೂ ಸಂಭವಿಸಬಹುದು. ಎಲೆಗಳು, ದಿಂಡು ಮತ್ತು ಹಣ್ಣುಗಳಲ್ಲಿ ಸೋಂಕಿನ ಲಕ್ಷಣ ಗೋಚರಿಸುತ್ತದೆ. ಪೂರ್ಣ ಬೆಳೆದ ನುಸಿಗಳು ಮತ್ತು ಮರಿಹುಳುಗಳು ಸಾಮಾನ್ಯವಾಗಿ ಎಲೆಯು ದಿಂಡನ್ನು ಸುತ್ತುವರಿದ ಭಾಗದ ಹಿಂದೆ ನೆಲೆಗೊಳ್ಳುತ್ತವೆ. ರೆಕ್ಕೆ ಮೂಡದ ಹುಳಗಳು ಗುಂಪುಗುಂಪಾಗಿ ಕಂಡು ಬರುತ್ತವೆ ಹಾಗೂ ಅವುಗಳ ಬಾಯಿಯ ಭಾಗದಿಂದ ಸಸ್ಯರಸವನ್ನು ಹೀರಿ ಕುಡಿಯುತ್ತವೆ. ಆರಂಭದಲ್ಲಿ ರೋಗಲಕ್ಷಣಗಳು ನೀರಲ್ಲಿ-ನೆನೆಸಿಟ್ಟಂತಹ ಪ್ರದೇಶಗಳಾಗಿ ಹಣ್ಣುಗಳ ಮೇಲೆ ಕಾಣಿಸುತ್ತವೆ. ಕಾಲ ಕಳೆದಂತೆ ಈ ಪ್ರದೇಶಗಳು ಸಿಪ್ಪೆಯನ್ನು ಕಡುಗೆಂಪು ಬಣ್ಣ ಅಥವಾ ಕಂದು ಬಣ್ಣಕ್ಕೆ ತಿರುಗಿಸಿ ತುಕ್ಕು ಹಿಡಿದಂತೆ ಕಾಣುತ್ತವೆ. ಈ ರೀತಿ ತುಕ್ಕು ಹಿಡಿದಂತೆ ಕಾಣುವುದು ಈ ರೋಗದ ವಿಶೇಷ ಲಕ್ಷಣ. ಸಾಮಾನ್ಯವಾಗಿ ಸಿಪ್ಪೆಗೆ ಮಾತ್ರ ಹಾನಿಯಾಗುತ್ತದೆ. ಆದರೆ ಸೋಂಕು ಹೆಚ್ಚಾಗಿದ್ದರೆ ತಿರುಳು ಕೂಡ ಹಾನಿಯಾಗಬಹುದು. ಹೆಚ್ಚು ಮಾಗಿದ ಹಣ್ಣುಗಳಲ್ಲಿ ಬಿರುಕುಗಳು ಗೋಚರಿಸಬಹುದು. ಕೆಲವೊಮ್ಮೆ ಹಣ್ಣುಗಳು ಸೀಳುತ್ತವೆ. ಬೆಳವಣಿಗೆಯ ಆರಂಭಿಕ ಹಂತಗಳಲ್ಲಿ ಸೋಂಕು ತಗುಲಿದರೆ ಹಣ್ಣಿಗೆ ಹೆಚ್ಚು ಹಾನಿಕಾರಕವಾಗಿದೆ.

Recommendations

ಜೈವಿಕ ನಿಯಂತ್ರಣ

ಪರಾವಲಂಬಿ ಕೀಟಗಳಾದ ಕ್ರೈಸೋಪಿಡೇ ಕುಲದ ಕೀಟ ಸಂತತಿ ಮತ್ತು ಜೀರುಂಡೆ ಜಾತಿಯ ಕೀಟಗಳನ್ನು ನುಸಿಯ ನಿಯಂತ್ರಣಕ್ಕೆ ಬಳಸಬಹುದು. ಕೆಲವು ಜಾತಿಯ ಇರುವೆಗಳು ಕೂಡ ಪರಿಣಾಮಕಾರಿಯಾಗಬಹುದು. ಇರುವೆಗಳು ಮಣ್ಣಿನಲ್ಲಿರುವ ಪ್ಯೂಪಾಗಳನ್ನು ಆಕ್ರಮಿಸುತ್ತವೆ. ಸಸ್ಯಭಾಗಗಳು ಆರೋಗ್ಯಕರ ಮೂಲದ್ದಾಗಿವೆಯೇ ಎಂದು ಖಚಿತವಾಗಿರದಿದ್ದರೆ, ಬಿಸಿ ನೀರಲ್ಲಿ ಸಂಸ್ಕರಿಸುವುದರಿಂದ ಸೋಂಕಿನ ಅಪಾಯವನ್ನು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕೀಟನಾಶಕಗಳ ಅಗತ್ಯವಿದ್ದಲ್ಲಿ, ಪ್ರೌಢ ನುಸಿಗಳನ್ನು ಕೊಲ್ಲಲು ಗಿಡ ಮತ್ತು ಹಣ್ಣಿನ ಮೇಲೂ, ಪ್ಯೂಪಾಗಳನ್ನು ಕೊಲ್ಲಲು ಮಣ್ಣಿನ ಮೇಲೂ ಸಿಂಪಡಿಸಬೇಕು. ಸೋಂಕು ಮತ್ತೆ ಬರದಂತೆ ತಪ್ಪಿಸಲು ಇರಬಹುದಾದ ಮಾರ್ಗ ಇದೊಂದೇ.

ಅದಕ್ಕೆ ಏನು ಕಾರಣ

ನುಸಿಯು ಹೆಚ್ಚಾಗಿ ಸೋಂಕಿತ ಸಸ್ಯದ ಭಾಗಗಳ ಮೂಲಕ ಅಥವಾ ಸ್ವಲ್ಪ ಮಟ್ಟಿಗೆ ಮರದಿಂದ ಮರಕ್ಕೆ ಹಾರುವ ಕೀಟಗಳ ಮೂಲಕ ಹರಡುತ್ತದೆ. ಪೂರ್ಣ ಬೆಳೆದ ನುಸಿ ತೆಳ್ಳಗಿದ್ದು ಹಳದಿ ಮತ್ತು ಕಂದು ಬಣ್ಣದ್ದಾಗಿರುತ್ತದೆ. ಸುಮಾರು 1.3 ಮಿಮೀ ಗಾತ್ರ. ಮುಂದಿನ ರೆಕ್ಕೆಗಳ ಮೇಲೆ ಗಾಢ ಬಣ್ಣದ ಎರಡು ಮಚ್ಚೆಗಳಿದ್ದು, ಕಿರಿದಾದ ರೆಕ್ಕೆಗಳನ್ನು ಹೊಂದಿರುತ್ತವೆ. ಹೆಣ್ಣು ನುಸಿಯು ಎಲೆಯು ದಿಂಡನ್ನು ಸುತ್ತುವರಿಯುವ ಭಾಗದ ಹಿಂದೆ ಮತ್ತು ಹಣ್ಣುಗಳು ಗಿಡಕ್ಕೆ ತಾಕುವ ಸ್ಥಳಗಳಲ್ಲಿ ಸಣ್ಣ ಮೊಟ್ಟೆಗಳನ್ನು (ಬರಿಗಣ್ಣಿಗೆ ಗೋಚರಿಸುವುದಿಲ್ಲ) ಇಡುತ್ತದೆ. ಸುಮಾರು 7 ದಿನಗಳ ನಂತರ, ರೆಕ್ಕೆಗಳಿಲ್ಲದ, ಬಿಳಿ ಅಥವಾ ಕೆನೆ ಬಣ್ಣದ ಮರಿಹುಳು (ಲಾರ್ವಾ) ಮೊಟ್ಟೆಯಿಂದ ಹೊರಬರುತ್ತದೆ. ಅವು ಸುಮಾರು 7 ದಿನಗಳಲ್ಲಿ ಪೂರ್ಣ ಗಾತ್ರಕ್ಕೆ ಬೆಳೆಯುತ್ತವೆ. ನಂತರ ನೆಲಕ್ಕೆ ತೆರಳಿ ಗಿಡದ ಬುಡದಲ್ಲಿ ಮಣ್ಣಿನಲ್ಲಿ ಪ್ಯೂಪಾ ಹಂತಕ್ಕೆ ಬೆಳೆಯುತ್ತವೆ. ಪ್ಯೂಪಾ ಗಾತ್ರದಲ್ಲಿ ಸುಮಾರು 1 ಮಿ.ಮೀ. ಇದ್ದು ಬಿಳಿ ಬಣ್ಣದಲ್ಲಿರುತ್ತದೆ ಮತ್ತು ಚಲನಶಕ್ತಿ ಹೊಂದಿರುತ್ತದೆ. ಮತ್ತೂ 7 ರಿಂದ 10 ದಿನಗಳ ನಂತರ, ಹೊಸ ಸಂತತಿಯ ಪ್ರೌಢ ನುಸಿಯು ಹೊರಬರುತ್ತದೆ. ವರ್ಷಕ್ಕೆ ಹಲವು ತಲೆಮಾರುಗಳು ಇರಬಹುದು. ಬಿಸಿ ಮತ್ತು ಆರ್ದ್ರ ವಾತಾವರಣದಲ್ಲಿ ನುಸಿಯ ಸಂಖ್ಯೆ ಅತಿ ಹೆಚ್ಚಿರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಪ್ರಮಾಣೀಕೃತ ಮೂಲಗಳಿಂದ ಪಡೆದ ಆರೋಗ್ಯಕರ ಸಸಿಗಳನ್ನು ಬಳಸಿ.
  • ತಾನಾಗಿಯೇ ಹುಟ್ಟಿದ ಗಿಡಗಳನ್ನು ತೆಗೆದುಹಾಕಿ ಮತ್ತು ಪ್ರಧಾನ ಬೆಳೆಯ ತೋಟದ ಸುತ್ತ ಈ ನುಸಿಗಳ ಆಶ್ರಯದಾತ ಸಸ್ಯಗಳನ್ನು ಬೆಳೆಸದಿರಿ.
  • ತೋಟವನ್ನು ಮತ್ತು ಗಿಡಗಳನ್ನು ಆಗಾಗ ಪರಿಶೀಲಿಸಿ ನುಸಿಯಿಲ್ಲದಿರುವುದನ್ನು ಖಾತ್ರಿಪಡಿಸಿಕೊಳ್ಳಿ.
  • ಆರಂಭಿಕ ಹಂತದಲ್ಲೇ ಹಣ್ಣಿನ ಗೊಂಚಲುಗಳನ್ನು, ಹೊದಿಕೆಗಳನ್ನು ಉಪಯೋಗಿಸಿ ಸಂರಕ್ಷಿಸಿ.
  • ಸೋಂಕಿತ ಸಸ್ಯಗಳನ್ನು ತೆಗೆದುಹಾಕಿ ಮತ್ತು ಅವುಗಳನ್ನು ಸುಟ್ಟು ನಾಶಮಾಡಿ.
  • ಏನನ್ನೂ ಬೆಳೆಯದೆ ಬಿಟ್ಟ ಸ್ಥಳಗಳು ನುಸಿ ಹರಡುವುದಕ್ಕೆ ಮೂಲಗಳಾಗುವುದರಿಂದ ಅಂತಹ ಸ್ಥಳಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ