ಭತ್ತ

ಡೆಮೆರಾರಾ ಫ್ರಾಗ್ ಹಾಪರ್

Deois flavopicta

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು ಹಳದಿಯಾಗುತ್ತವೆ ಮತ್ತು ಬಾಡುತ್ತವೆ.
  • ಎಳೆಯ ಸಸ್ಯಗಳ ಸಾಯುತ್ತವೆ.
  • ಬಿಳಿ ನೊರೆಯಂತಹ ದ್ರವ - 'ಸ್ಪಿಟಲ್ ಮಾಸ್' ಕಂಡುಬರುತ್ತದೆ.
  • ಹಿಂಭಾಗದಲ್ಲಿ ತಿಳಿ ಕಂದು ಬಣ್ಣದ ಮಾದರಿಯನ್ನು ಹೊಂದಿರುವ ಗಾಢ ಕಂದು ಬಣ್ಣದ ಫ್ರಾಗ್ ಪಾಪರ್ ಇರುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಎಂಜಿಲಿನಂತಹ ಸ್ಪಿಟಲ್-ಮಾಸ್ (ನೀರಿನಂತಹ ವಿಸರ್ಜನೆಗೆ ಗಾಳಿಯನ್ನು ಹಾಯಿಸಿದಾಗ ರೂಪುಗೊಳ್ಳುವ ನೊರೆ ದ್ರವ) ಇರುವಿಕೆ ಸಸ್ಯಗಳನ್ನು ಮರಿಹುಳುಗಳು ತಿನ್ನುತ್ತಿರುವುದಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಹೆಣ್ಣು ಕೀಟಗಳು ಆಶ್ರಯದಾತ ಸಸ್ಯಗಳ ಬಳಿ ಮಣ್ಣಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಯೊಡೆದ ನಂತರ, ಮರಿಹುಳುಗಳು ಬೇರುಗಳನ್ನು ಅತಿಯಾಗಿ ತಿನ್ನಲು ತೊಡಗುತ್ತವೆ. ಮತ್ತು ಮಣ್ಣಿನ ಮೇಲ್ಮೈಗೆ ಹತ್ತಿರದಲ್ಲಿರುತ್ತವೆ. ಮರಿಹುಳುಗಳು ಮತ್ತು ವಯಸ್ಕ ಕೀಟಗಳು ಎರಡೂ ಸಾರವನ್ನು ಹೀರುತ್ತವೆ ಮತ್ತು ಸಸ್ಯಗಳನ್ನು ನಾಶಮಾಡುತ್ತವೆ. ಮರಿಹುಳುಗಳು ಮತ್ತು ವಯಸ್ಕ ಕೀಟಗಳು ಸಸ್ಯಗಳ ಸಾರ ಹೀರುವ ಮೂಲಕ ಮತ್ತು ರಕ್ತಪರಿಚಲನೆಯನ್ನು ತಡೆಯುವ ಅಥವಾ ಅಡ್ಡಿಮಾಡುವ ವಿಷವನ್ನು ಚುಚ್ಚುವ ಮೂಲಕ ಅವುಗಳನ್ನು ದುರ್ಬಲಗೊಳಿಸುತ್ತವೆ.

Recommendations

ಜೈವಿಕ ನಿಯಂತ್ರಣ

ರಾತ್ರಿ ಸಮಯದ ಉಷ್ಣಾಂಶ ಕಡಿಮೆಯಾದರೆ ಮತ್ತು ಶೀತ ಹವಾಮಾನಕ್ಕೆ ಮೊಟ್ಟೆಗಳನ್ನು ದೀರ್ಘಕಾಲದವರೆಗೆ ಒಡ್ಡಿದರೆ ಮೊಟ್ಟೆಯೊಡೆಯಲು ಅಗತ್ಯವಿರುವ ಸಮಯ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಈ ಬೇಗ ಮೊಟ್ಟೆಯೊಡೆಯುವ ಕ್ರಿಯೆ ಈ ಕೀಟದ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಡಿಪೋಯಿಸ್ ಫ್ಲಾವೊಪಿಕ್ಟಾದ ಆಕ್ರಮಣವನ್ನು ತಡೆಗಟ್ಟಲು ಬೆಳೆ ಬೀಜಗಳನ್ನು ವ್ಯವಸ್ಥಿತ ಕೀಟನಾಶಕಗಳೊಂದಿಗೆ ಸಂಸ್ಕರಣೆ ಮಾಡಬಹುದು.

ಅದಕ್ಕೆ ಏನು ಕಾರಣ

ಸ್ಪಿಟಲ್ ಬಗ್ (ಡಿಪೋಯಿಸ್ ಫ್ಲಾವೊಪಿಕ್ಟಾ) ಎಂದೂ ಕರೆಯಲ್ಪಡುವ ಡೆಮೆರಾರಾ ಫ್ರಾಗ್ ಹಾಪರ್, ಹಲವಾರು ಬೆಳೆಗಳಿಗೆ, ಸಾಮಾನ್ಯವಾಗಿ ಭತ್ತ ಮತ್ತು ಮೆಕ್ಕೆ ಜೋಳಗಳನ್ನು ಹಾನಿಮಾಡುವ ಒಂದು ಕೀಟವಾಗಿದೆ. ಹೆಣ್ಣು ಕೀಟಗಳು ಆಶ್ರಯದಾತ ಸಸ್ಯಗಳ ಹತ್ತಿರ ಮಣ್ಣಿನಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಒಡೆದ ನಂತರ, ಮರಿ ಹುಳುಗಳು ಮಣ್ಣಿನ ಮೇಲ್ಭಾಗಕ್ಕೆ ಹತ್ತಿರವಿರುವ ಬೇರು ಮತ್ತು ಕಾಂಡಗಳನ್ನು ಒಟ್ಟೊಟ್ಟಿಗೆ ತಿನ್ನಲು ಪ್ರಾರಂಭಿಸುತ್ತವೆ. ಅವುಗಳು "ಸ್ಪಿಟಲ್ ಮಾಸ್", ನೀರಿನಂತಹ ವಿಸರ್ಜನೆಗೆ ಗಾಳಿಯನ್ನು ಹಾಯಿಸಿದಾಗ ರೂಪುಗೊಳ್ಳುವ ನೊರೆಯಂತಹ ದ್ರವವನ್ನು ರೂಪಿಸುತ್ತವೆ. ಆ ಭಾಗದಲ್ಲಿ ಸಸ್ಯವನ್ನು ಮರಿಹುಳುಗಳು ತಿಂದಿರುವುದಕ್ಕೆ ಇದು ಒಂದು ಸಾಕ್ಷಿಯಾಗಿದೆ. ಹೊಲದ ಸುತ್ತ ಮುತ್ತ ರೋಗಕ್ಕೆ ತುತ್ತಾಗುವ ಹುಲ್ಲುಗಳಿದ್ದರೆ (ಬ್ರಚಿಯಾರಿಯಾ ಅಥವಾ ಆಕ್ಸೊನೊಪಸ್ ಪ್ರಭೇದಗಳು) ಅವು ಇದರ ಸಂಖ್ಯೆಯನ್ನು ಹೆಚ್ಚಿಸಬಹುದು. ಅವು ಈ ಸಸ್ಯಗಳಿಗೆ ಆಕರ್ಷಿತವಾಗುತ್ತವೆ ಮತ್ತು ತಮ್ಮ ಜೀವನ ಚಕ್ರಗಳನ್ನು ಮುಂದುವರೆಸಲು ಇವನ್ನು ಪರ್ಯಾಯ ಆಶ್ರಯದಾತ ಸಸ್ಯಗಳಾಗಿ ಬಳಸುತ್ತವೆ.


ಮುಂಜಾಗ್ರತಾ ಕ್ರಮಗಳು

  • ಎಲೆಗಳ ಮೇಲೆ ಬಿಳಿ ಬಣ್ಣದ ನೊರೆ ರೀತಿಯ ದ್ರವ ಇದೆಯೇ ಎಂದು ಕಂಡುಹಿಡಿಯಲು ಹೊಲವನ್ನು ಆಗಾಗ್ಗೆ ಪರಿಶೀಲಿಸಿ (ಸ್ಪಿಟ್ಟಲ್ ಮಾಸ್).
  • ಹೊಲದ ಸುತ್ತ ಮುತ್ತಲಿನ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ನಿಯಂತ್ರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ