ಕಡಲೆಕಾಯಿ

ಜ್ಯುವೆಲ್ ಜೀರುಂಡೆ

Sphenoptera indica

ಕೀಟ

5 mins to read

ಸಂಕ್ಷಿಪ್ತವಾಗಿ

  • ಹುಳುವು ಕಾಂಡದೊಳಗೆ ಬಿಲಗಳನ್ನು ಮಾಡುತ್ತದೆ ಮತ್ತು ಬೇರುಗಳು ಹಾಗು ಕಾಂಡದ ಆಂತರಿಕ ಅಂಗಾಂಶಗಳನ್ನು ತಿನ್ನುತ್ತವೆ.
  • ಸಸ್ಯದ ವೈಮಾನಿಕ ಭಾಗಗಳಿಗೆ ನೀರು ಮತ್ತು ಪೌಷ್ಟಿಕ ದ್ರವ್ಯಗಳ ಸಾಗಣೆಗೆ ಅಡ್ಡಿಯಾಗುತ್ತದೆ.
  • ಸೋಂಕಿತ ಜಮೀನುಗಳು ಸಾಮಾನ್ಯವಾಗಿ ಸತ್ತ ಮತ್ತು ಸೊರಗುತ್ತಿರುವ ಸಸ್ಯಗಳ ತೇಪೆಗಳನ್ನು ತೋರಿಸುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಕಡಲೆಕಾಯಿ

ರೋಗಲಕ್ಷಣಗಳು

ಮಣ್ಣಿನ ಮೇಲ್ಮೈಗೆ ಹತ್ತಿರವಿರುವ ಕಾಂಡದೊಳಗೆ ಹುಳುಗಳು ಬಿಲಗಳನ್ನು ಕೊರೆದುಕೊಂಡು ಹೋಗುತ್ತವೆ ಮತ್ತು ಕಾಂಡ ಹಾಗು ಮುಖ್ಯ ಬೇರುಗಳ ಆಂತರಿಕ ಅಂಗಾಂಶಗಳನ್ನು ತಿನ್ನುತ್ತವೆ. ಈ ಹಾನಿಯಿಂದಾಗಿ ಸಸ್ಯದ ವೈಮಾನಿಕ ಭಾಗಗಳಿಗೆ ನೀರು ಮತ್ತು ಪೋಷಕಾಂಶದ ಸಾಗಣೆಗೆ ಅಡ್ಡಿಯಾಗುತ್ತದೆ, ಅಂತಿಮವಾಗಿ ಸಸ್ಯ ಸೊರಗಿಹೋಗುತ್ತದೆ ಮತ್ತು ಸಾಯುತ್ತದೆ. ಗ್ರಬ್ ನ ಆಹಾರ ಚಟುವಟಿಕೆ ಮತ್ತು ಮಣ್ಣಿನಲ್ಲಿನ ಅದರ ವಿತರಣಾ ವಿಧಾನದಿಂದಾಗಿ, ಸೋಂಕಿತ ಜಮೀನುಗಳು ಸಾಮಾನ್ಯವಾಗಿ ಸತ್ತ ಮತ್ತು ಸೊರಗುತ್ತಿರುವ ಸಸ್ಯಗಳ ತೇಪೆಗಳನ್ನು ತೋರಿಸುತ್ತವೆ. ಮಣ್ಣಿನಿಂದ ಸಸ್ಯವನ್ನು ಎಳೆದಾಗ, ಟೊಳ್ಳಾಗಿರುವ ಕಾಂಡದಲ್ಲಿ ಗ್ರಬ್ಗಳನ್ನು ಕಾಣಬಹುದು.

Recommendations

ಜೈವಿಕ ನಿಯಂತ್ರಣ

ಬ್ರಕೊನಿಡ್ಗಳು ಮತ್ತು ಟ್ರೈಕೊಗ್ರಾಮ್ಯಾಡಿಡ್ಗಳಂತಹ ಪ್ಯಾರಾಸಿಟೊಯಿಡ್ ಕಣಜಗಳು ಮೊಟ್ಟೆ ಮತ್ತು ಗ್ರಬ್ಗಳ ಮೇಲೆ ಪರಾವಲಂಬಿಯಾಗುತ್ತವೆ. ಡ್ರ್ಯಾಗನ್ ನೊಣಗಳು ಜುವೆಲ್ ಜೀರುಂಡೆಯ ಪರಭಕ್ಷಕಗಳಾಗಿವೆ. ನ್ಯೂಕ್ಲಿಯರ್ ಪಾಲಿಹೆಡ್ರೋಸಿಸ್ ವೈರಸ್ (NPV) ಅಥವಾ ಗ್ರೀನ್ ಮಸ್ಕ್ಯಾರ್ಡಿನ್ ಶಿಲೀಂಧ್ರವನ್ನು ಆಧರಿಸಿ ಜೈವಿಕ ಕೀಟನಾಶಕಗಳನ್ನು ಈ ಕೀಟದ ವಿರುದ್ಧ ಯಶಸ್ವಿಯಾಗಿ ಬಳಸಲಾಗಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಯು ಲಭ್ಯವಿದ್ದರೆ ಒಟ್ಟಾಗಿ ತಡೆಗಟ್ಟುವ ಕ್ರಮಗಳೊಂದಿಗೆ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಬೀಜಕಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ನಾಟಿ ಸಾಲಿಗೆ ಕಾರ್ಬೋಫುರಾನ್ ಕಣಗಳನ್ನು ಹಾಕುವುದು ಪರಿಣಾಮಕಾರಿಯಾಗಿದೆ. ಸಸ್ಯದ ಬೆಳವಣಿಗೆಯ ನಂತರದ ಹಂತಗಳಲ್ಲಿ ಬಳಸಲಾಗುವ ಕಾರ್ಬೋಫುರಾನ್ ಅಥವಾ ಕ್ಲೋರಿಪಿರಫೊಸ್ ತೀವ್ರವಾದ ಹಾನಿಯನ್ನು ತಪ್ಪಿಸಬಹುದು.

ಅದಕ್ಕೆ ಏನು ಕಾರಣ

ಪ್ರೌಢ ಜೀರುಂಡೆ ಒಂದು ರತ್ನದಂತಹ ಹೊಳೆಯುವ ದೇಹದಿಂದ ಗಾಢ ಬಣ್ಣದಲ್ಲಿದ್ದು ಅದು ಸುಮಾರು 10 ಮಿಮೀ ಉದ್ದ ಮತ್ತು 3 ಮಿಮೀ ಅಗಲವಿರುತ್ತದೆ. ಹೆಣ್ಣುಗಳು ಮುಖ್ಯ ಕಾಂಡದ ತಳದಲ್ಲಿ ಏಕವಾಗಿ ಮೊಟ್ಟೆಗಳನ್ನು ಇಡುತ್ತವೆ. ಬೆಳವಣಿಗೆಯ ಹಂತವನ್ನು ಅವಲಂಬಿಸಿ, ಮರಿಗಳು ಗಾತ್ರ ಮತ್ತು ಬಣ್ಣದಲ್ಲಿ ಭಿನ್ನವಾಗಿರುತ್ತವೆ. ಸಾಮಾನ್ಯವಾಗಿ ಅವುಗಳ ಬಣ್ಣ ಕಂದು ಮತ್ತು ಹಳದಿಗಳ ನಡುವೆ ಇರುತ್ತದೆ. ಸ್ಪಷ್ಟವಾಗಿ ಕಾಲುಗಳಿಲ್ಲದೆ, ಅವುಗಳು 20 ಮಿ.ಮೀ ಗಿಂತ ಹೆಚ್ಚಿನ ಉದ್ದಕ್ಕೆ ಬೆಳೆಯುತ್ತವೆ. ಅವು ಉದ್ದನೆಯ, ಡಾರ್ಸ್-ವೆಂಟ್ರಲ್ ನಲ್ಲಿ ಚಪ್ಪಟೆಯಾದ ದೇಹ ಮತ್ತು ಗೋಳಾಕಾರದ ತಲೆ ಮತ್ತು ಎದೆಗೂಡಿನಿಂದ ನಿರೂಪಿಸಲ್ಪಟ್ಟಿವೆ. ಬಿತ್ತನೆ ಮಾಡಿದ 50 ದಿನಗಳ ನಂತರ, ಬೆಳೆ ಬೆಳವಣಿಗೆಯ ನಂತರದ ಹಂತಗಳಲ್ಲಿ ಇದು ಕಡಲೆಕಾಯಿಗಳನ್ನು ಆಕ್ರಮಿಸುತ್ತದೆ. ಗ್ರಬ್ ಬೇರುಗಳು ಅಥವಾ ಕಾಂಡಗಳನ್ನು ಕೊರೆಯುತ್ತವೆ ಮತ್ತು ಆಂತರಿಕ ಅಂಗಾಂಶಗಳನ್ನು ಆಹಾರವಾಗಿ ತಿನ್ನುತ್ತವೆ, ಇದು ನೀರು ಮತ್ತು ಪೋಷಕಾಂಶಗಳ ಸಾಗಣೆಗೆ ಅಡಚಣೆ ಮಾಡುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಪ್ರಭೇದಗಳನ್ನು ಬೆಳೆಸಿಕೊಳ್ಳಿ.
  • ಗದ್ದೆಯ ಮೇಲ್ವಿಚಾರಣೆ ಮಾಡಿ ಮತ್ತು ಸೋಂಕಿತ ಸಸ್ಯಗಳನ್ನು ನಾಶಮಾಡಿ.
  • ಚೆನ್ನಾಗಿ ಕೊಳೆತ ಜೈವಿಕ ಗೊಬ್ಬರದಿಂದ ಮಣ್ಣನ್ನು ಕವರ್ ಮಾಡಿ.
  • ಗದ್ದೆ ಮತ್ತು ಅದರ ಸುತ್ತಮುತ್ತಲಿನ ಜೀವವೈವಿಧ್ಯದ ಬಗ್ಗೆ ಗಮನವಿಡಿ.
  • ಕೀಟವನ್ನು ಅದರ ನೈಸರ್ಗಿಕ ಪರಭಕ್ಷಕಗಳಿಗೆ ಒಡ್ಡಲು ಸುಗ್ಗಿಯ ನಂತರ ಆಳವಾಗಿ ಉಳುಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ