ಬದನೆ

ಬಿಳಿಬದನೆಯ ಲೇಸ್ ಬಗ್

Gargaphia solani

ಕೀಟ

5 mins to read

ಸಂಕ್ಷಿಪ್ತವಾಗಿ

  • ಮರಿಕೀಟಗಳು ಎಲೆಗಳ ಕೆಳಭಾಗವನ್ನು ತಿನ್ನುತ್ತವೆ, ಮತ್ತು ಕಂದು ಬಣ್ಣದ ಹಿಕ್ಕೆ ಎಲೆಯನ್ನು ಆವರಿಸುತ್ತವೆ.
  • ಎಲೆಗಳು ಸುರುಳಿಯಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ.
  • ಕೀಟ ತಿನ್ನುವುದರಿಂದ ಬಣ್ಣಗೆಟ್ಟ ತೇಪೆಗಳು(ಕ್ಲೋರಾಟಿಕ್) ಕಂಡುಬರುತ್ತವೆ, ನಂತರ ಎಲೆಗಳು ಬಾಡಿ ಉದುರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಬದನೆ

ರೋಗಲಕ್ಷಣಗಳು

ಪ್ರೌಢಕೀಟಗಳು ಮತ್ತು ಮರಿಹುಳಗಳು ಬದನೆಯ ಎಲೆಗಳನ್ನು ತಿನ್ನುತ್ತವೆ. ಗಿಡ ಇನ್ನೂ ಸಸಿ ಹಂತದಲ್ಲಿರುವ ವಸಂತಕಾಲದ ಆರಂಭ ನಿರ್ಣಾಯಕ ಹಂತವಾಗಿದೆ. ಸುಪ್ತಾವಸ್ಥೆಯಲ್ಲಿರುವ ಪ್ರೌಢ ಕೀಟಗಳು ಸಸ್ಯಗಳನ್ನು ಆಕ್ರಮಿಸಲು ಆರಂಭಿಸುತ್ತವೆ. ಭವಿಷ್ಯದ ಮರಿಕೀಟಗಳ ಸಮೂಹ ಸ್ಥಾಪಿಸಲು ಎಲೆಗಳ ಕೆಳಭಾಗದಲ್ಲಿ ಹಸಿರು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆ ಒಡೆದ ನಂತರ ಮರಿಕೀಟಗಳು ಗುಂಪಾಗಿ ಎಲೆಗಳ ಕೆಳಭಾಗವನ್ನು ತಿನ್ನಲು ಆರಂಭಿಸುತ್ತವೆ, ಮತ್ತು ಎಲೆಯನ್ನು ಕಂದು ಬಣ್ಣದ ಹಿಕ್ಕೆ ಆವರಿಸುತ್ತದೆ. ಎಲೆಗಳನ್ನು ಜಗಿಯುವುದರಿಂದ ವೃತ್ತಾಕಾರದ, ಬಣ್ಣ ಕಳೆದುಕೊಂಡ ತೇಪೆಗಳು ಕಾಣಿಸುತ್ತವೆ. ಇವು ಎಲೆಯ ಮೇಲ್ಭಾಗದಲ್ಲಿ ಸ್ಪಷ್ಟವಾಗಿ ಗೋಚರವಾಗುತ್ತವೆ. ಕೀಟಗಳು ಮುಂದೆ ಚಲಿಸುತ್ತಾ, ಹೊರಗೆ ತಿನ್ನಲು ಆರಂಭಿಸಿದಾಗ, ಹೆಚ್ಚುತ್ತಿರುವ ಹಾನಿಯಿಂದಾಗಿ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ ಮತ್ತು ಅಂತಿಮವಾಗಿ ಮೇಲಕ್ಕೆ ಮಡಚಿಕೊಂಡು, ಸುರುಳಿ ಸುತ್ತುತ್ತವೆ. ತೀವ್ರ ಸೋಂಕು ಸಸ್ಯಗಳನ್ನು ಕೊಲ್ಲಬಹುದು ಅಥವಾ ಹಣ್ಣುಗಳ ಬೆಳವಣಿಗೆಯಾಗದಂತೆ ಅವುಗಳನ್ನು ದುರ್ಬಲಗೊಳಿಸಬಹುದು.

Recommendations

ಜೈವಿಕ ನಿಯಂತ್ರಣ

ಬಿಳಿಬದನೆಯ ಲೇಸ್ ವಿಂಗ್ ಗಳ ನೈಸರ್ಗಿಕ ಶತ್ರುಗಳೆಂದರೆ ಲೇಡಿಬಗ್, ಜೇಡಗಳು ಮತ್ತು ಪೈರೇಟ್ ಬಗ್ಸ್ ಗಳನ್ನು ಸಂರಕ್ಷಿಸಿ. ಕೀಟನಾಶಕ ಸೋಪ್ ಗಳು ಮತ್ತು ಬೇವಿನ ಎಣ್ಣೆಯನ್ನು ಎಲೆಗಳ ಕೆಳಭಾಗದಲ್ಲಿ ಸಿಂಪಡಿಸಬಹುದಾಗಿದೆ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆ ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಿಗೆ ಇರುವ ಸಮಗ್ರ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಮ್ಯಾಲಾಥಿಯಾನ್ ಅಥವಾ ಪೈರೆಥ್ರಾಯಡ್ಸ್ಗಗಳನ್ನು ಆಧರಿಸಿದ ವಿಶಾಲ ರೋಹಿತ ಕೀಟನಾಶಕಗಳನ್ನು ಎಲೆಗಳ ಸಿಂಪಡಣೆಗಳಾಗಿ ಬಳಸಬಹುದು. ಆದರೆ ಇವು ಪ್ರಯೋಜನಕಾರಿ ಕೀಟಗಳಿಗೂ ಹಾನಿ ಮಾಡುವುದರಿಂದ ಎಚ್ಚರಿಕೆ ವಹಿಸಿ.

ಅದಕ್ಕೆ ಏನು ಕಾರಣ

ಬಿಳಿಬದನೆ ಲೇಸ್ ಬಗ್ಸ್ ನ ಪ್ರೌಢಕೀಟಗಳು ರೆಕ್ಕೆಗಳಲ್ಲಿ ಪಾರದರ್ಶಕ ಹಸಿರು, ಲೇಸ್ ರೀತಿಯ ನರಗಳನ್ನು ಹೊಂದಿರುವ ತಿಳಿ ಕಂದು ಮತ್ತು ಬಿಳಿ ಬಣ್ಣದ ಕೀಟಗಳಾಗಿವೆ. ಅವು ಸುಮಾರು 4 ಮಿಮೀ ಉದ್ದವಿರುತ್ತವೆ ಮತ್ತು ಸಸ್ಯದ ಉಳಿಕೆಗಳಲ್ಲಿ ಉಳಿದುಕೊಂಡಿದ್ದು, ಅನುಕೂಲಕರ ಹವಾಮಾನ ಪರಿಸ್ಥಿತಿಗಳಲ್ಲಿ ಹೊರಹೊಮ್ಮುತ್ತವೆ ಮತ್ತು ಮೊಟ್ಟೆಗಳನ್ನು ಇಡುತ್ತವೆ. ಮೊಟ್ಟೆಗಳು ಹಸಿರಾಗಿರುತ್ತವೆ ಮತ್ತು ಎಲೆಗಳ ಕೆಳಭಾಗಕ್ಕೆ ಗುಂಪು ಗುಂಪಾಗಿ ಅಂಟಿಕೊಂಡಿರುತ್ತವೆ. ಮರಿಕೀಟಗಳಿಗೆ ರೆಕ್ಕೆಗಳಿರುವುದಿಲ್ಲ, ಹೊಟ್ಟೆಯ ತುದಿಯಲ್ಲಿ ಕಪ್ಪು ಮಚ್ಚೆಯಿದ್ದು ಹಳದಿ ಬಣ್ಣದಲ್ಲಿರುತ್ತವೆ. ಮರಿಕೀಟಗಳು ಮತ್ತು ಪ್ರೌಢಕೀಟಗಳು ಎರಡೂ ಎಲೆಗಳಿಗೆ ಹಾನಿ ಉಂಟುಮಾಡುತ್ತವೆ. ಮರಿಕೀಟಗಳು ತಾವು ಹುಟ್ಟಿದ ಸಸ್ಯದಲ್ಲಿ ಇದ್ದು ಸ್ಥಳೀಯವಾಗಿ ಹಾನಿ ಮಾಡಿದರೆ, ಪ್ರೌಢಕೀಟಗಳು ಇತರ ಸಸ್ಯಗಳಿಗೆ ಹಾರಿಹೋಗಿ ಅವುಗಳನ್ನೂ ತಿಂದು ಹಾನಿ ಮಾಡುತ್ತವೆ. ಈ ಕೀಟವನ್ನು ವಿಶೇಷವಾಗಿ ಬಳಿಬದನೆಯನ್ನು ಕಾಡುವ ಕೀಟ ಎಂದು ಇನ್ನೂ ನಿರ್ದಿಷ್ಟವಾಗಿ ಗುರುತಿಸಿಲ್ಲ. ಇಳುವರಿ ನಷ್ಟಗಳು ಸಾಮಾನ್ಯವಾಗಿ ಕಡಿಮೆ ಇರುತ್ತವೆ. ಆದರೆ ಕೆಲವು ನಿರ್ದಿಷ್ಟ ಸಂದರ್ಭಗಳಲ್ಲಿ, ಇವು ಹೆಚ್ಚು ಪರಿಣಾಮ ಬೀರಬಹುದು. ಬಿಳಿಬದನೆ ಜೊತೆಗೆ, ಟೊಮೆಟೊ, ಆಲೂಗೆಡ್ಡೆ, ಸೂರ್ಯಕಾಂತಿ, ಸಣ್ಣ ಕರ್ಪೂರದ ಗಿಡ , ಹತ್ತಿ, ನೈಟ್ ಶೇಡ್ಸ್ ಮತ್ತು ಕಳೆ ಗಿಡವಾದ ಹಾರ್ಸ್ ನೆಟಲ್ ಗಳು ಇತರ ಪರ್ಯಾಯ ಆಶ್ರಯದಾತ ಸಸ್ಯಗಳಾಗಿವೆ.


ಮುಂಜಾಗ್ರತಾ ಕ್ರಮಗಳು

  • ಈ ಕೀಟ ಇದೆಯೇ ಎಂಬುದನ್ನು ತಿಳಿಯಲು ಸರಿಯಾಗಿ ಸಸ್ಯಗಳನ್ನು ಪರಿಶೀಲಿಸಿ.
  • ಕೀಟಗಳು ಅಥವಾ ಅವುಗಳು ಇರುವ ಎಲೆಗಳನ್ನು ಹೆಕ್ಕಿ ತೆಗಿಯಿರಿ.
  • ತಾನಾಗೇ ಹುಟ್ಟಿದ ಸಸ್ಯಗಳನ್ನು ಅಥವಾ ಪರ್ಯಾಯ ಆಶ್ರಯದಾತ ಗಿಡಗಳನ್ನು ಉದಾಹರಣೆಗೆ ಕಳೆಗಿಡ ಹಾರ್ಸ್ ನೆಟಲ್ ಮತ್ತು ನೈಟ್ ಶೇಡ್ಸ್, ತೆಗೆದುಹಾಕಿ.
  • ಪ್ರಯೋಜನಕಾರಿ ಕೀಟಗಳ ಸಂಖ್ಯೆಯ ಮೇಲೆ ಪ್ರಭಾವ ಬೀರದಂತೆ ತಡೆಯಲು ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ.
  • ಪ್ರೌಢ ಕೀಟಗಳಿಗೆ ಪ್ರತಿಕೂಲ ಹವಾಮಾನ ಕಳೆಯಲು ಅನುವು ಮಾಡಿಕೊಡುವ ಕಳೆಗಳು ಮತ್ತು ಬೆಳೆಯ ಉಳಿಕೆಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ