ಭತ್ತ

ಭತ್ತದ ಹಸಿರು ಜಿಗಿ ಹುಳು

Nephotettix spp.

ಕೀಟ

5 mins to read

ಸಂಕ್ಷಿಪ್ತವಾಗಿ

  • ಭತ್ತದ ಗದ್ದೆಯಲ್ಲಿ ಹಸಿರು ಜಿಗಿ ಹುಳುಗಳು ಸಾಮಾನ್ಯ ಕೀಟಗಳಾಗಿವೆ.
  • ಅವು ಮಳೆಯಾಶ್ರಿತ ಮತ್ತು ನೀರಾವರಿ ಒದ್ದೆ ಭೂಮಿ ಪರಿಸರದಲ್ಲಿ ಬೆಳೆಯುತ್ತವೆ ಮತ್ತು ವೈರಲ್ ರೋಗ ತುಂಗ್ರೊವನ್ನು ಹರಡುತ್ತವೆ.
  • ಸಾಮಾನ್ಯ ರೋಗಲಕ್ಷಣಗಳೆಂದರೆ ಎಲೆ ತುದಿ ಬಣ್ಣ ಕಳೆದುಕೊಳ್ಳುವುದು, ಟಿಲ್ಲರ್ ಗಳ ಸಂಖ್ಯೆಯಲ್ಲಿ ಇಳಿಕೆ ಮತ್ತು ಕುಂಠಿತ ಬೆಳವಣಿಗೆಯ ಸಸ್ಯಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಭತ್ತ

ರೋಗಲಕ್ಷಣಗಳು

ಹಸಿರು ಜಿಗಿ ಹುಳುಗಳು ಭತ್ತದ ಕ್ಷೇತ್ರಗಳಲ್ಲಿ ಅತ್ಯಂತ ಸಾಮಾನ್ಯವಾದ ಜಿಗಿ ಹುಳುಗಳಾಗಿವೆ. ಮತ್ತು ವೈರಸ್ ರೋಗ ತುಂಗ್ರೋವನ್ನು ಹರಡುತ್ತವೆ. ಈ ವೈರಸ್ ಎಲೆ ತುದಿ ಬಣ್ಣ ಕಳೆದುಕೊಳ್ಳಲು, ಟಿಲ್ಲರ್ ಸಂಖ್ಯೆ ಕುಸಿಯಲು, ಕುಂಠಿತ ಸಸ್ಯ ಬೆಳವಣಿಗೆಗೆ ಮತ್ತು ಸಸ್ಯಗಳ ಕಡಿಮೆ ಚಟುವಟಿಕೆಗೆ ಕಾರಣವಾಗುತ್ತದೆ. ಮತ್ತು ತೀವ್ರ ಸಂದರ್ಭಗಳಲ್ಲಿ ಸಸ್ಯದ ಬಾಡುವಿಕೆಗೂ ಕಾರಣವಾಗುತ್ತದೆ. ಸಾರಜನಕ ಕೊರತೆ ಅಥವಾ ಕಬ್ಬಿಣದ ವಿಷತ್ವದಿಂದ ತುಂಗ್ರೋ-ಸೋಂಕಿನ ರೋಗಲಕ್ಷಣಗಳನ್ನು ಬೇರೆಯಾಗಿ ಗುರುತಿಸಲು, ಕೀಟದ ಉಪಸ್ಥಿತಿಯನ್ನು ಪರೀಕ್ಷಿಸಿ: ಎಲೆಯ ಕವಚಗಳು ಅಥವಾ ಮಧ್ಯನಾಳಗಳ ಒಳಗೆ ಬಿಳಿ ಅಥವಾ ತಿಳಿ ಹಳದಿ ಮೊಟ್ಟೆಗಳು; ಕಪ್ಪು ಗುರುತುಗಳೊಂದಿಗೆ ಅಥವಾ ಗುರುತಿಲ್ಲದೆ ಹಳದಿ ಅಥವಾ ತಿಳಿ ಹಸಿರು ಮರಿಹುಳುಗಳು; ಕಪ್ಪು ಗುರುತುಗಳೊಂದಿಗೆ ಅಥವಾ ಕಪ್ಪು ಗುರುತಿಲ್ಲದ ತಿಳಿ ಹಸಿರು ಬೆಳೆದ ಹುಳುಗಳು; ಮತ್ತು ವಿಶಿಷ್ಟವಾದ ಅಡ್ಡ ಚಲನೆ.

Recommendations

ಜೈವಿಕ ನಿಯಂತ್ರಣ

ಜೈವಿಕ ನಿಯಂತ್ರಣವು ಸಣ್ಣ ಕಣಜಗಳು (ಮೊಟ್ಟೆಗಳ ಪರಾವಲಂಬಿಯಾಗಿ), ಮಿರಿಡ್ ಬಗ್; ಸ್ಟ್ರೆಪ್ಸಿಪ್ಟೆರಾನ್ಸ್, ಪಿಪಂಕ್ಕ್ಯುಲಿಡ್ ನೊಣಗಳು, ಮತ್ತು ನೆಮಟೋಡ್ಸ್ (ಮರಿ ಮತ್ತು ವಯಸ್ಕ ಕೀಟ ಎರಡರ ಪರಾವಲಂಬಿ), ಜಲಚರ ವೆಲಿಡ್ ಬಗ್ಸ್, ನಾಬಿಡ್ ಬಗ್ಸ್, ಎಂಪಿಡ್ ನೊಣಗಳು, ಡ್ಯಾಮ್ಸೆಲ್ಫ್ಲೀಸ್, ಡ್ರಾಗನ್ ಫ್ಲೈಸ್ ಮತ್ತು ಜೇಡಗಳು ಅಥವಾ ಫಂಗಲ್ ರೋಗಕಾರಕಗಳನ್ನು ಒಳಗೊಂಡಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಈ ಕೀಟದ ವಿರುದ್ಧ ಮಾರುಕಟ್ಟೆಯಲ್ಲಿ ಹಲವಾರು ಕೀಟನಾಶಕಗಳು ಲಭ್ಯವಿದೆ. ನಿಮ್ಮ ಗದ್ದೆಗೆ ಪ್ರಚಲಿತದಲ್ಲಿರುವ ಸ್ಥಿತಿಯಲ್ಲಿ ಉತ್ತಮವಾಗಿ ಹೊಂದಿಕೊಳ್ಳುವ ಪರಿಹಾರ ಏನು ಎಂದು ನಿಮ್ಮ ಸ್ಥಳೀಯ ವ್ಯಾಪಾರಿಗಳೊಂದಿಗೆ ಮಾತನಾಡಿ. ಬುಪ್ರೊಫೆಸಿನ್ ಅಥವಾ ಪೈಮೆಟ್ರೋಜೈನ್ ನ ಪರ್ಯಾಯ ಚಿಕಿತ್ಸೆಗಳು ಉಪಯುಕ್ತವಾಗಿವೆ. ಕ್ಲೋರಿಪಿರಿಫೊಸ್, ಲ್ಯಾಮ್ಡಾ ಸೈಹಲೋಥರಿನ್ ಅಥವಾ ಇತರ ಸಿಂಥೆಟಿಕ್ ಪೈರೆಥ್ರಾಯ್ಡ್ ಸಂಯೋಜನೆಗಳಂತಹ ರಾಸಾಯನಿಕಗಳನ್ನು ಬಳಸುವುದನ್ನು ತಪ್ಪಿಸಿ. ಇವುಗಳಿಗೆ ಕೀಟವು ನಿರೋಧಕತೆ ಬೆಳೆಸಿಕೊಂಡಿದೆ.

ಅದಕ್ಕೆ ಏನು ಕಾರಣ

ಮಳೆಯಾಶ್ರಿತ ಮತ್ತು ನೀರಾವರಿ ಒದ್ದೆ ಗದ್ದೆಯಲ್ಲಿ ಹಸಿರು ಜಿಗಿ ಹುಳುಗಳು ಸಾಮಾನ್ಯವಾಗಿರುತ್ತವೆ. ಅವು ಮೇಲ್ಮಟ್ಟದ ಭತ್ತದ ಗದ್ದೆಗಳಲ್ಲಿ ಇರುವುದಿಲ್ಲ. ಮರಿಹುಳುಗಳು ಮತ್ತು ವಯಸ್ಕ ಹುಳುಗಳು, ಎಲೆ ಕವಚ ಮತ್ತು ಮಧ್ಯ ಎಲೆಗಳನ್ನು ಹೊರತುಪಡಿಸಿ, ಪಾರ್ಶ್ವದ ಎಲೆಯ ಹಿಂದಿನ ಮೇಲ್ಮೈಗಳನ್ನು ತಿನ್ನುತ್ತವೆ. ದೊಡ್ಡ ಪ್ರಮಾಣದಲ್ಲಿ ಸಾರಜನಕ ಹಾಕಿದ ಭತ್ತದ ಗಿಡಗಳಿಗೆ ಅವು ಆದ್ಯತೆ ನೀಡುತ್ತವೆ. ಆರ್ ಟಿ ವಿ ಪ್ರಸಾರ ಮಾಡುವಾಗ ಹೊರತುಪಡಿಸಿ, ಇದು ಸಾಮಾನ್ಯವಾಗಿ ಒಂದು ಚಿಂತಿಸಬೇಕಾದ ಕೀಟವಲ್ಲ.


ಮುಂಜಾಗ್ರತಾ ಕ್ರಮಗಳು

  • ಕೀಟ ನಿರೋಧಕ ಮತ್ತು ತುಂಗ್ರೋ ನಿರೋಧಕ ಪ್ರಭೇದಗಳನ್ನು ಬಳಸಿ (ಉದಾ: CR-1009).
  • ಭತ್ತದ ಕೃಷಿಯನ್ನು ವರ್ಷಕ್ಕೆ ಎರಡು ಬೆಳೆಗೆ ಇಳಿಸಿ.
  • ವಿವಿಧ ಗದ್ದೆಗಳಲ್ಲಿ ಬೆಳೆಗಳ ಸ್ಥಾಪನೆಯನ್ನು ಏಕಕಾಲಕ್ಕೆ ಮಾಡಿ.
  • ಕೊಡಲಾದ ನಿರ್ದಿಷ್ಟ ಅವಧಿಯೊಳಗೆ, ವಿಶೇಷವಾಗಿ ಶುಷ್ಕ ಋತುವಿನಲ್ಲಿ ಆದಷ್ಚು ಬೇಗ ನೆಡಿ.
  • ಶುಷ್ಕ ಋತುವಿನಲ್ಲಿ ಭತ್ತವಲ್ಲದೆ ಬೇರೆ ಬೆಳೆಯೊಂದಿಗೆ ಬೆಳೆ ಸರದಿ ಮಾಡಿ.
  • ಸಂಖ್ಯೆಗಳನ್ನು ಕಡಿಮೆ ಮಾಡಲು ಅಥವಾ ತೋರಿಸಲು ಬೆಳಕಿನ ಬಲೆಗಳನ್ನು ಬಳಸಬಹುದು.
  • ಶಿಫಾರಸು ಮಾಡಿದಂತೆ ಸಾರಜನಕವನ್ನು ಬಳಸಿ.
  • ಗದ್ದೆ ಮತ್ತು ಗದ್ದೆಯ ಅಂಚಿನಲ್ಲಿರುವ ಕಳೆಗಳನ್ನು ನಿಯಂತ್ರಿಸಿ ಪರ್ಯಾಯ ಆಶ್ರಯದಾತ ಸಸ್ಯಗಳನ್ನು ಕಡಿಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ