ಇತರೆ

ವೆಲ್ವೆಟ್ ಬೀನ್ ಕಂಬಳಿ ಹುಳು

Anticarsia gemmatalis

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಸಮೂಹ ಮತ್ತು ಇಡೀ ಎಲೆಗಳ ಮೇಲೆ ಕೀಟ ತಿನ್ನುವುದರಿಂದ ಹಾನಿ ಉಂಟಾಗುತ್ತದೆ.
  • ಮೊಗ್ಗುಗಳು, ಸಣ್ಣ ಹುರುಳಿ ಕಾಯಿಗಳು ಮತ್ತು ಕಾಂಡಗಳ ಮೇಲೂ ಕೀಟಗಳ ತಿನ್ನುವಿಕೆಯಿಂದ ಹಾನಿ ಉಂಟಾಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು

ಇತರೆ

ರೋಗಲಕ್ಷಣಗಳು

ವೆಲ್ವೆಟ್ ಬೀನ್ ಪತಂಗದ ಮರಿಹುಳುಗಳು ತಮ್ಮ ರೋಗ ಬರುವ ಸಸ್ಯಗಳ ಎಲೆಗಳನ್ನು ಆಕ್ರಮಿಸುತ್ತವೆ. ಮೊದಲಿಗೆ, ಮರಿ ಹುಳುಗಳು ಮೃದು ಅಂಗಾಂಶಗಳನ್ನು ತಿನ್ನುತ್ತವೆ. ನಂತರ ಬೆಳೆದ ಲಾರ್ವಾಗಳು ನಾಳಗಳು ಸೇರಿದಂತೆ ಸಂಪೂರ್ಣ ಎಲೆಗಳನ್ನು ತಿನ್ನುತ್ತವೆ. ನಂತರದ ಹಂತಗಳಲ್ಲಿ, ಮೊಗ್ಗುಗಳು, ಸಣ್ಣ ಹುರುಳಿ ಕಾಯಿಗಳು ಮತ್ತು ಕಾಂಡಗಳನ್ನು ಲಾರ್ವಾ ತಿನ್ನುತ್ತವೆ. ರಾತ್ರಿಯ ಸಮಯದಲ್ಲಿ ಅವು ಹೆಚ್ಚಾಗಿ ಸಕ್ರಿಯವಾಗಿರುತ್ತವೆ. ಅವುಗಳು ಅತಿ ದೊಡ್ಡ ಸಂಖ್ಯೆಯಲ್ಲಿ ಕಂಡುಬರುತ್ತವೆ ಮತ್ತು ಅವುಗಳನ್ನು ನಿಯಂತ್ರಿಸದಿದ್ದಲ್ಲಿ ಬೀನ್ ಅಥವಾ ಇತರ ದ್ವಿದಳ ಬೆಳೆಗಳ ಹೊಲವನ್ನು ಸಂಪೂರ್ಣವಾಗಿ ವಾರದೊಳಗೆ ವಿಪರ್ಣಗೊಳಿಸುವ(ಎಲೆಗಳನ್ನು ತಿಂದು ಮುಗಿಸುವ)ಸಾಮರ್ಥ್ಯವನ್ನು ಹೊಂದಿವೆ.

Recommendations

ಜೈವಿಕ ನಿಯಂತ್ರಣ

ವೆಲ್ವೆಟ್ಬೀನ್ ಪತಂಗವನ್ನು ಎದುರಿಸಲು ನೈಸರ್ಗಿಕ ಶತ್ರುಗಳನ್ನು ಬಳಸಿ. ಉದಾಹರಣೆಗೆ ಯೂಪ್ಲೆಕ್ಟ್ರಸ್ ಪುಟ್ಲೇರಿ ಮತ್ತು ಮೆಟಿಯೊರಸ್ ಆಟೋಗ್ರಾಫಿಯಂತಹ ಕಣಜ ಪ್ಯಾರಾಸಿಟಾಯ್ಡ್ ಗಳ ಹಲವಾರು ಜಾತಿಗಳು. ಗಮನಿಸಲಾಗಿರುವ ಇತರ ಪರಭಕ್ಷಕಗಳೆಂದರೆ, ನೆಲದ ಜೀರುಂಡೆಗಳು, ಹುಲಿ ಜೀರುಂಡೆಗಳು, ದಿ ರೆಡ್ ಫೈರ್ ಇರುವೆ ಅಥವಾ ಟಾಚಿನಿಡ್ ನೊಣ ವಿನ್ತೆಮಿಯಾ ರುಫೊಪಿಕ್ಟಾ. ಪಕ್ಷಿಗಳು, ಕಪ್ಪೆಗಳು ಮತ್ತು ದಂಶಕಗಳಂತಹ ಕಶೇರುಕ ಪರಭಕ್ಷಕಗಳು ವೆಲ್ವೆಟ್ಬೀನ್ ಪತಂಗಗಳ ಸಂಖ್ಯೆಯನ್ನು ಕಡಿಮೆಗೊಳಿಸುತ್ತವೆ ಅಥವಾ ವೆಲ್ವೆಟ್ಬೀನ್ ಪತಂಗಗಳ ಸಂಖ್ಯೆಯನ್ನು ಕಡಿಮೆ ಮಾಡಲು ರೋಗಕಾರಕಗಳನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ ಬ್ಯಾಕ್ಟೀರಿಯಾ ಬ್ಯಾಸಿಲಸ್ ತುರಿಂಜಿಯೆನ್ಸಿಸ್.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಜೈವಿಕ ಚಿಕಿತ್ಸೆಗಳು ಮತ್ತು ತಡೆಗಟ್ಟುವ ಕ್ರಮಗಳು ಒಟ್ಟಾಗಿ ಇರುವ ಸಮಗ್ರವಾದ ಮಾರ್ಗವನ್ನು ಯಾವಾಗಲೂ ಪರಿಗಣಿಸಿ. ಕೀಟನಾಶಕಗಳೊಂದಿಗೆ ತಡೆಗಟ್ಟುವ ಚಿಕಿತ್ಸೆಯು ಕೀಟವನ್ನು ನಿಯಂತ್ರಿಸುವಲ್ಲಿ ಹೆಚ್ಚು ಭರವಸೆ ಮೂಡಿಸುವ ಫಲಿತಾಂಶವನ್ನು ನೀಡುತ್ತದೆ.

ಅದಕ್ಕೆ ಏನು ಕಾರಣ

ಅಂಟಿಕಾರ್ಸಿಯಾ ಜೆಮ್ಮಾಟಲಿಸ್ ನ ಬೆಳೆದ ಪತಂಗಗಳು 30 ರಿಂದ 40 ಮಿಮೀ ಉದ್ದದ ರೆಕ್ಕೆಗಳನ್ನು ಹೊಂದಿರುತ್ತವೆ. ಮುಂದಿನ ರೆಕ್ಕೆಗಳು ಬೂದಿ ಬಣ್ಣದಿಂದ ಹಳದಿ ಮಿಶ್ರಿತ ಕಂದು ಅಥವಾ ಗಾಢ ಕೆಂಪು ಕಂದು ಬಣ್ಣಕ್ಕೆ ಬದಲಾಗುತ್ತವೆ. ಹಿಂಭಾಗದ ರೆಕ್ಕೆಗಳು ಅಂಚಿನ ಬಳಿ ತೆಳು ಬಣ್ಣದ ಚುಕ್ಕೆಗಳನ್ನು ಹೊಂದಿದ್ದು, ಕಂದು ಬಣ್ಣದಲ್ಲಿರುತ್ತವೆ. ರೆಕ್ಕೆಗಳನ್ನು ಸಂಪೂರ್ಣವಾಗಿ ಬಿಚ್ಚಿದಾಗ ಒಂದು ಗಾಢ ಬಣ್ಣದ ರೇಖೆಯು ಒಂದು ಬದಿಯಿಂದ ವಿರುದ್ದ ತುದಿಗೆ ಎರಡೂ ರೆಕ್ಕಗಳ ಮೇಲೂ ಹರಡುತ್ತದೆ. ಮೊಟ್ಟೆಗಳು ಸ್ವಲ್ಪ ಅಂಡಾಕಾರವಾಗಿದ್ದು, ಅಡ್ಡಗೆರೆಗಳನ್ನು ಹೊಂದಿದ್ದು ಬಿಳಿ ಬಣ್ಣದ್ದಾಗಿರುತ್ತವೆ. ಅವು ಒಡೆಯುವ ಮೊದಲು ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಎಲೆಗಳ ಕೆಳಭಾಗದಲ್ಲಿ ಒಂಟಿಯಾಗಿ ಮೊಟ್ಟೆಗಳು ಇರುತ್ತವೆ. ಮೂರುರಿಂದ ಏಳು ದಿನಗಳ ನಂತರ ಮೊಟ್ಟೆ ಒಡೆದು ಹೊರಬಂದ ಮರಿಹುಳುಗಳು ತಾವು ಹೊರಬಂದ ಮೊಟ್ಟೆಯ ಕವಚವನ್ನು ತಿನ್ನುತ್ತವೆ. ವೆಲ್ವೆಟ್ಬೀನ್ ಪತಂಗದ ಮರಿಹುಳುಗಳು ಅಂತರಾಕಾರದ ಹಂತಗಳಲ್ಲಿ ಬಣ್ಣ ಮತ್ತು ಗುರುತುಗಳಲ್ಲಿ ಬಹಳ ವಿಭಿನ್ನವಾಗಿರುತ್ತವೆ. ಎಳೆಯ ಅಂತರಾಕಾರ(ಇನ್ಸ್ಟಾರ್)ಗಳು ಕೆಲವೊಮ್ಮೆ ಸೋಯಾಬೀನ್ ಲೂಪರ್ಸ್ ಎಂದು ತಪ್ಪಾಗಿ ಗುರುತಿಸಲ್ಪಡುತ್ತವೆ (ಸೂಡೋಪ್ಲುಸಿಯ ಇನ್ಕ್ಲೂಡೆನ್ಸ್ ). ಕೋಶದ ಪ್ರಾಥಮಿಕ ಹಂತದಲ್ಲಿ ಲಾರ್ವಾವು 25 ಮಿ.ಮೀ ಗೆ ಕುಗ್ಗುತ್ತದೆ ಮತ್ತು ಮಹೋಗಾನಿ ಕಂದು ಬಣ್ಣಕ್ಕೆ ತಿರುಗುತ್ತದೆ. ಕೋಶವು ತಿಳಿ ಹಸಿರುನಿಂದ ಕಂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಸುಮಾರು 20 ಮಿಮೀ ಉದ್ದವಿರುತ್ತದೆ. ಇದು ನೇರವಾಗಿ ಮಣ್ಣಿನ ಮೇಲ್ಮೈಯ ಕೆಳಗೆ ಇರುತ್ತದೆ. ಬೇಸಿಗೆಯಲ್ಲಿ ಜೀವನ ಚಕ್ರವು ಸುಮಾರು ನಾಲ್ಕು ವಾರಗಳಲ್ಲಿ ಪೂರ್ಣಗೊಳ್ಳುತ್ತದೆ. ತಾಪಮಾನವು ಕಡಿಮೆಯಾದಾಗ ಜೀವನ ಚಕ್ರವು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವರ್ಷವೊಂದಕ್ಕೆ ಪೀಳಿಗೆಯ ಸಂಖ್ಯೆಯು ಪ್ರದೇಶಗಳನ್ನು ಆಧರಿಸಿ ಬದಲಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಚೇತರಿಸಿಕೊಳ್ಳುವ ಪ್ರಭೇದಗಳನ್ನು ನೆಡಿ.
  • ಬೇಗ ಬಲಿಯುವ ತಳಿಗಳನ್ನು ಆರಿಸಿ.
  • ಬೇಗ ಕೊಯ್ಲು ಮಾಡಲು ಬೇಗ ನೆಡಿ.
  • ನಿಮ್ಮ ಸಸ್ಯಗಳನ್ನು ಎಚ್ಚರಿಕೆಯಿಂದ ಮೇಲ್ವಿಚಾರಣೆ ಮಾಡಿ.
  • ಕೀಟಗಳು ನಿರ್ಣಾಯಕ ಸಂಖ್ಯೆಯನ್ನು ತಲುಪಿದಾಗ, ರೋಗ ನಿರ್ವಹಣೆ ಕ್ರಮಗಳನ್ನು ಜಾರಿಗೊಳಿಸಿ.
  • ಫೆರೋಮೋನ್ ಬಲೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ