ಹುರುಳಿ

ಹುರುಳಿಯ ಎಲೆ ಸುರುಳಿ

Urbanus proteus

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳ ಮೇಲೆ ಕೀಟ ತಿನ್ನುವುದರಿಂದಾದ ಹಾನಿ.
  • ಸುರುಳಿಯಾದ ಎಲೆಗಳು.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹುರುಳಿ

ರೋಗಲಕ್ಷಣಗಳು

ಹುರುಳಿಯ ಎಲೆಸುರುಳಿ ಲಾರ್ವಾಗಳು ಎಲೆ ಉದುರಿಸುವ ಕೀಟಗಳಾಗಿವೆ. ಅವು ಎಲೆಯ ಅಂಚಿನಲ್ಲಿ ವಿಶಿಷ್ಟವಾದ ಸಣ್ಣ ತ್ರಿಕೋನವಾದ ತೇಪೆಯನ್ನು ಕತ್ತರಿಸಿ, ಆ ಸುರುಳಿಯನ್ನು ಮೇಲೆ ಸುತ್ತಿ ಅದರೊಳಗೆ ಆಶ್ರಯ ಪಡೆಯುತ್ತವೆ. ಅವು ತಮ್ಮ ಆಶ್ರಯತಾಣವನ್ನು ರೇಷ್ಮೆಯ ಎಳೆಯಿಂದ ಜೋಡಿಸುತ್ತವೆ ಮತ್ತು ರಾತ್ರಿಯಲ್ಲಿ ಎಲೆಗಳನ್ನು ತಿನ್ನುವ ಸಲುವಾಗಿ ಅವುಗಳಿಂದ ಹೊರ ಹೋಗುತ್ತವೆ.

Recommendations

ಜೈವಿಕ ನಿಯಂತ್ರಣ

ಕೀಟಗಳ ಸಂಖ್ಯೆಯು ಮಿತಿಮೀರಿದರೆ ಸಸ್ಯಕ್ಕೆ ಹಾನಿಯಾಗಬಹುದು. ಹುರುಳಿ ಎಲೆ ಸುರುಳಿ ಪರಭಕ್ಷಕಗಳೆಂದರೆ ಕಣಜಗಳ ಕೆಲವು ಪ್ರಭೇದಗಳು ಮತ್ತು ಸ್ಟಿಂಕ್ ಬಗ್ ಗಳು. ಉದಾಹರಣೆಗೆ ಪೋಲಿಸ್ಟೆಸ್ ಜಾತಿಗಳು, ಕಣಜಗಳು ಮತ್ತು ಯುಥಿರ್ಹಿಂಚಸ್ ಫ್ಲೋರಿಡಾನಸ್ ಸ್ಟಿಂಕ್ ಬಗ್ಸ್. ಪೈರೆಥ್ರನ್ ಗಳೊಂದಿಗಿನ ದ್ರವೌಷಧಗಳು ಹುರುಳಿ ಎಲೆ ಸುರುಳಿ ವಿರುದ್ಧವೂ ಕಾರ್ಯನಿರ್ವಹಿಸುತ್ತವೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಒಂದು ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಪರಿಣಾಮಕಾರಿ ಎಲೆ ಸುರುಳಿ ಕೀಟಗಳ ನಿಗ್ರಹಕ್ಕೆ ಎಲೆಗೊಂಚಲುಗಳಿಗೆ ಕೀಟನಾಶಕ ಬಳಸಿ. ಇದು ತಡ ಋತುವಿನ ಹುರುಳಿ ಬೆಳೆಗಳಿಗೆ ಮಾತ್ರ ಅಗತ್ಯವಾಗಿರುತ್ತದೆ. ಪೈರೆಥ್ರಾಯ್ಡ್ ಗಳನ್ನು ಹೊಂದಿರುವ ದ್ರಾವಣಗಳು ಕೀಟ ಸಂಖ್ಯೆ ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅದಕ್ಕೆ ಏನು ಕಾರಣ

ಆಶ್ರಯದಾತ ಸಸ್ಯಗಳ ಎಲೆಗಳ ಕೆಳಗೆ ಹೆಣ್ಣು ಕೀಟಗಳು 20 ಮೊಟ್ಟೆಗಳನ್ನು (ಸಾಮಾನ್ಯವಾಗಿ 2-6 ಸಮೂಹಗಳಲ್ಲಿ) ಇಡುತ್ತವೆ. ಮೊಟ್ಟೆಗಳು ಕೆನೆ ಬಿಳಿ ಬಣ್ಣದಿಂದ ನೀಲಿ-ಹಸಿರು ಬಣ್ಣದಲ್ಲಿರುತ್ತವೆ ಅರ್ಧ ಸಿಲಿಂಡರಿನಾಕಾರದಲ್ಲಿ ಇರುತ್ತದೆ ಮತ್ತು ವ್ಯಾಸ 1 ಮಿ.ಮೀ ಇರುತ್ತದೆ. ಲಾರ್ವಾವು ಕಪ್ಪು ಹಿಂಭಾಗ ಗೆರೆಯೊಂದಿಗೆ ಮತ್ತು ಪ್ರತಿ ಬದಿಯಲ್ಲಿ ಎರಡು ಹಳದಿ ಪಟ್ಟೆಗಳ ಜೊತೆಗೆ ಹಸಿರು ಬಣ್ಣದ್ದಾಗಿರುತ್ತದೆ. ತಲೆ ಕಂದು ಅಥವಾ ಕಪ್ಪು ಬಣ್ಣದಾಗಿರುತ್ತದೆ ಮತ್ತು ಪ್ರತಿ ಬದಿಯಲ್ಲಿ ಕಿತ್ತಳೆ ಅಥವಾ ಹಳದಿ ಬಣ್ಣದ ಚುಕ್ಕೆ ಇರುತ್ತದೆ. ಈ ಚಿಟ್ಟೆಗಳ ಆವಾಸಸ್ಥಾನಗಳಲ್ಲಿ ಪೊದೆಭರಿತ ಜಮೀನು ಮತ್ತು ಕಾಡು ಪ್ರದೇಶ ಅಂಚುಗಳು ಸೇರಿವೆ. ಅವುಗಳ ವಿತರಣೆಯು ಉಷ್ಣತೆಯಿಂದ ನಿಯಂತ್ರಿಸಲ್ಪಡುತ್ತದೆ. ಅವು ಎತ್ತರದ ಪ್ರದೇಶಗಳಲ್ಲಿ ಅಥವಾ ಹೆಚ್ಚು ಎತ್ತರದಲ್ಲಿ ಕಂಡುಬರುವುದಿಲ್ಲ. ಏಕೆಂದರೆ ಅವು ದೀರ್ಘಕಾಲದ ಅತೀ ತಂಪಾದ, ಹಿಮಗಟ್ಟಿಸುವ ತಾಪಮಾನದಲ್ಲಿ ಉಳಿಯುವುದಿಲ್ಲ.


ಮುಂಜಾಗ್ರತಾ ಕ್ರಮಗಳು

  • ನಿಯಮಿತವಾಗಿ ನಿಮ್ಮ ಜಮೀನನ್ನು ಗಮನಿಸಿ ಮತ್ತು ಮುಚ್ಚಿದ ತ್ರಿಕೋನ ರಚನೆಗಳು ಎಲೆಯ ಅಂಚುಗಳ ಮೇಲೆ ಇವೆಯೇ ಎಂದು ಪರಿಶೀಲಿಸಿ.
  • ರೋಗಯುಕ್ತ ಎಲೆಗಳು ಅಥವಾ ಸಸ್ಯದ ಭಾಗಗಳನ್ನು ತೆಗೆದುಹಾಕಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ