ಇತರೆ

ಓರಿಯೆಂಟಲ್ ಹಣ್ಣಿನ ಚಿಟ್ಟೆ

Grapholita molesta

ಕೀಟ

5 mins to read

ಸಂಕ್ಷಿಪ್ತವಾಗಿ

  • ಲಾರ್ವಾಗಳು ಆತಿಥೇಯ ಸಸ್ಯಗಳ ಕೊಂಬೆಗಳು ಮತ್ತು ಹಣ್ಣುಗಳ ಮೇಲೆ ದಾಳಿ ಮಾಡುವುದರಿಂದ ಹಾನಿ ಉಂಟಾಗುತ್ತದೆ.
  • ಸೋಂಕಿಗೆ ಒಳಗಾದ ಕೊಂಬೆಗಳಲ್ಲಿ ಎಲೆಗಳು ಬಾಡಿರುತ್ತವೆ.
  • ಇದು ಚಿಗುರು ಬಾಡುವುದರ ಸಂಕೇತವಾಗಿದೆ.
  • ಕೀಟ ಹೊರಹೋಗುವ ರಂಧ್ರಗಳು ಹಣ್ಣುಗಳ ಮೇಲೆ ಕಾಣುತ್ತವೆ.
  • ಅವು ಅಂಟು ಸ್ರವಿಕೆ ಮತ್ತು ಲಾರ್ವಾ ಹಿಕ್ಕೆಯಿಂದ ಆವೃತವಾಗಿರುತ್ತವೆ.
  • ಅವಕಾಶವಾದಿ ರೋಗಕಾರಕಗಳು ಈ ಗಾಯಗಳನ್ನು ವಸಾಹತುವನ್ನಾಗಿ ಮಾಡಿಕೊಳ್ಳಬಹುದು.

ಇವುಗಳಲ್ಲಿ ಸಹ ಕಾಣಬಹುದು

5 ಬೆಳೆಗಳು
ಸೇಬು
ಜಲ್ದರು ಹಣ್ಣು
ಚೆರ್ರಿ
ಪೀಚ್
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಲಾರ್ವಾಗಳು ಆತಿಥೇಯ ಸಸ್ಯಗಳ ಕೊಂಬೆಗಳು ಮತ್ತು ಹಣ್ಣುಗಳ ಮೇಲೆ ದಾಳಿ ಮಾಡುವುದರಿಂದ ಹಾನಿ ಉಂಟಾಗುತ್ತದೆ. ಎಳೆಯ ಲಾರ್ವಾಗಳು ಬೆಳೆಯುತ್ತಿರುವ ಚಿಗುರುಗಳ ಮೇಲೆ ರಂಧ್ರಗಳನ್ನು ಕೊರೆದು ಕೆಳಕ್ಕೆ ಚಲಿಸುತ್ತವೆ. ಒಳಗಿನ ಅಂಗಾಂಶಗಳನ್ನು ತಿನ್ನುತ್ತವೆ. ಸೋಂಕಿಗೆ ಒಳಗಾದ ಕೊಂಬೆಗಳಲ್ಲಿ ಎಲೆಗಳು ಬಾಡಿರುತ್ತವೆ, ಇದು ಚಿಗುರು ಬಾಡುವ(ಡೈಬ್ಯಾಕ್) ಸಂಕೇತವಾಗಿದೆ. ಎಷ್ಟು ಹೆಚ್ಚು ಎಲೆಗಳು ಬಾಡಿವೆಯೋ, ಲಾರ್ವಾಗಳು ಅಷ್ಟು ಕೆಳಕ್ಕೆ ನುಸುಳಿವೆ ಎಂದರ್ಥ. ಅಂತಿಮವಾಗಿ, ಕೊಂಬೆಗಳು ಗಾಢ ಬಣ್ಣಕ್ಕೆ ತಿರುಗುತ್ತವೆ ಅಥವಾ ಒಣ ಎಲೆಗಳನ್ನು ಹೊಂದುತ್ತವೆ ಮತ್ತು ಅಂಟನ್ನು ಸ್ರವಿಸುತ್ತವೆ. ನಂತರದ ತಲೆಮಾರುಗಳು ಕಾಂಡದ ಮೂಲಕ ಹಣ್ಣುಗಳನ್ನು ಪ್ರವೇಶಿಸುತ್ತವೆ ಮತ್ತು ತಿರುಳಿನೊಳಗೆ ಅನಿಯಮಿತ ಕಾಲುವೆಗಳನ್ನು ಕೊರೆಯುತ್ತವೆ. ಸಾಮಾನ್ಯವಾಗಿ ಪಿಟ್ ಹತ್ತಿರ. ಕೀಟ ಹೊರಹೋಗುವ ರಂಧ್ರಗಳು ಹಣ್ಣುಗಳ ಮೇಲೆ ಕಾಣುತ್ತವೆ. ಅವು ಅಂಟು ಸ್ರವಿಕೆ ಮತ್ತು ಲಾರ್ವಾ ಹಿಕ್ಕೆಯಿಂದ ಆವೃತವಾಗಿರುತ್ತವೆ. ಅವಕಾಶವಾದಿ ರೋಗಕಾರಕಗಳು ಈ ಗಾಯಗಳನ್ನು ವಸಾಹತುವನ್ನಾಗಿ ಮಾಡಬಹುದು. ಹಣ್ಣುಗಳು ವಿರೂಪಗೊಳ್ಳುತ್ತವೆ ಮತ್ತು ತೀವ್ರವಾಗಿ ಪರಿಣಾಮಕ್ಕೊಳಗಾದರೆ ಉದುರುತ್ತವೆ. ಸಾಮಾನ್ಯವಾಗಿ, ಲಾರ್ವಾಗಳು ಒಂದು ಹಣ್ಣನ್ನು ಮಾತ್ರ ತಿನ್ನುತ್ತವೆ ಮತ್ತು ಹಣ್ಣಿನಿಂದ ಕೊಂಬೆಗಳಿಗೆ ಹಿಂತಿರುಗುವುದಿಲ್ಲ.

Recommendations

ಜೈವಿಕ ನಿಯಂತ್ರಣ

ಟ್ರೈಕೊಗ್ರಾಮಾ ಕುಲದ ಹಲವಾರು ಪರಾವಲಂಬಿ ಕಣಜಗಳು ಮತ್ತು ಬ್ರಕೋನಿಡ್ ಕಣಜ ಮ್ಯಾಕ್ರೋಸೆಂಟ್ರಸ್ ಆನ್ಸಿಲಿವೋರಸ್ ಗಳನ್ನು, ಓರಿಯೆಂಟಲ್ ಹಣ್ಣಿನ ಪತಂಗದ ವಿರುದ್ಧ ಬಳಸಲಾಗಿದೆ. ಶಿಲೀಂಧ್ರ ಮತ್ತು ಬ್ಯಾಕ್ಟೀರಿಯಾದ ರೋಗಕಾರಕಗಳ ಒಂದು ಶ್ರೇಣಿ, ಉದಾಹರಣೆಗೆ ಬ್ಯೂವೆರಿಯಾ ಬಾಸ್ಸಿಯಾನಾ ಮತ್ತು ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಸಹ ಪರಿಣಾಮಕಾರಿ. ಮೊಟ್ಟೆಗಳು ಅಥವಾ ಲಾರ್ವಾಗಳ ವಿವಿಧ ಹಂತಗಳ ಇತರ ಪರಾವಲಂಬಿಗಳು ತಿಳಿದಿವೆ ಆದರೆ ಪ್ರಾಯೋಗಿಕವಾಗಿ ಪ್ರಯತ್ನಿಸಲಾಗಿಲ್ಲ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ಮುಂಜಾಗ್ರತಾ ಕ್ರಮಗಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಔಷಧದ ಬಳಕೆ ಸಮಯವು ಮುಖ್ಯವಾದದ್ದು ಮತ್ತು ತಾಪಮಾನ ಮತ್ತು ಪತಂಗಗಳ ಸಂಖ್ಯೆಯನ್ನು ಪರಿಶೀಲಿಸುವ ಮೂಲಕ ಅದನ್ನು ನಿರ್ಧರಿಸಬೇಕು. ರಾಸಾಯನಿಕ ನಿಯಂತ್ರಣವು ಹೊಸದಾಗಿ ಮೊಟ್ಟೆಯೊಡೆದ ಲಾರ್ವಾಗಳನ್ನು ಗುರಿಯಾಗಿಸಬಹುದು. ಆದರೆ ಜಿ. ಮೊಲೆಸಾಟಾ ಹಾರಾಡುವ ಸಾಮರ್ಥ್ಯವನ್ನು ಹೊಂದಿರುವಾಗ ಬಳಸಿದರೆ ಔಷದಗಳು ಸಾಮಾನ್ಯವಾಗಿ ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಸ್ಪ್ರೇ ಮಾಡಬಹುದಾದ ಫೆರೋಮೋನ್‌ಗಳನ್ನು ಆಧರಿಸಿದ ಕೀಟಗಳ ಕೂಡುವಿಕೆಯನ್ನು ತಡೆಯುವ ವಿಘಟಕಗಳನ್ನು ಸಹ ಬಳಸಬಹುದು.

ಅದಕ್ಕೆ ಏನು ಕಾರಣ

ಓರಿಯೆಂಟಲ್ ಹಣ್ಣಿನ ಚಿಟ್ಟೆಯ ಪ್ರಾಥಮಿಕ ಅತಿಥೇಯ ಸಸ್ಯಗಳೆಂದರೆ ಪೀಚ್ ಮತ್ತು ನೆಕ್ಟರಿನ್. ಆದರೆ ಇದು ಇತರ ಸ್ಟೋನ್ ಹಣ್ಣುಗಳು ಮತ್ತು ಕ್ವಿನ್ಸ್, ಸೇಬು, ಪೇರಳೆ ಮತ್ತು ಗುಲಾಬಿಗಳ ಮೇಲೆ ಸಹ ದಾಳಿ ಮಾಡುತ್ತದೆ. ಪತಂಗಗಳು ಇದ್ದಿಲಿನ ಬಣ್ಣವನ್ನು ಹೊಂದಿರುತ್ತವೆ ಮತ್ತು ಸುಮಾರು 5 ಮಿಮೀ ರೆಕ್ಕೆಗಳನ್ನು ಹೊಂದಿರುತ್ತವೆ. ಮುಂಭಾಗದ ರೆಕ್ಕೆಗಳು ಬೂದು ಬಣ್ಣದಲ್ಲಿರುತ್ತವೆ ಮತ್ತು ಅಸ್ಪಷ್ಟವಾದ ತಿಳಿ ಮತ್ತು ಗಾಢ ಬಣ್ಣದ ಪಟ್ಟಿಗಳನ್ನು ಹೊಂದಿರುತ್ತವೆ. ವಸಂತಕಾಲದಲ್ಲಿ ಹೊರಬಂದ ನಂತರ, ಹೆಣ್ಣು ಕೀಟ ಸುಮಾರು 200 ಸಣ್ಣ, ಚಪ್ಪಟೆ, ಬಿಳಿ ಮೊಟ್ಟೆಗಳನ್ನು ಎಲೆಗಳು ಅಥವಾ ಕೊಂಬೆಗಳ ಕೆಳಭಾಗದಲ್ಲಿ ಇಡುತ್ತವೆ. ಎಳೆಯ ಲಾರ್ವಾಗಳು ಕೆನೆ-ಬಿಳಿ ದೇಹವನ್ನು ಹೊಂದಿದ್ದು ನಂತರ ಗುಲಾಬಿ ಬಣ್ಣಕ್ಕೆ ತಿರುಗುತ್ತವೆ. ಸುಮಾರು 8 ರಿಂದ 13 ಮಿಮೀ ಉದ್ದ ಮತ್ತು ಕಪ್ಪು ಕಂದು ತಲೆಯಿರುತ್ತದೆ. ಲಾರ್ವಾಗಳ ಮೊದಲ ತಲೆಮಾರುಗಳು ಬೆಳೆಯುತ್ತಿರುವ ಚಿಗುರುಗಳಲ್ಲಿ ಎಲೆಯ ತಳದಲ್ಲಿ ರಂಧ್ರಗಳನ್ನು ಕೊರೆಯುತ್ತವೆ. ಅಲ್ಲಿಂದ, ಅವು ಒಳಗಿನ ನವಿರಾದ ಅಂಗಾಂಶಗಳನ್ನು ತಿನ್ನುತ್ತಾ ಕೆಳಕ್ಕೆ ಚಲಿಸುತ್ತವೆ. ಅಂತಿಮವಾಗಿ ರೆಂಬೆಯು ಒಣಗಲು ಕಾರಣವಾಗುತ್ತದೆ. ನಂತರದ ತಲೆಮಾರುಗಳು ಹಣ್ಣುಗಳ ಮೇಲೆ ದಾಳಿ ಮಾಡುತ್ತವೆ. ಕಾಂಡದ ಬುಡದ ಬಳಿ ಅಥವಾ ಬದಿಯ ಮೂಲಕ ಪ್ರವೇಶಿಸುತ್ತವೆ. ಅವು ನಂತರ ಸಂಪೂರ್ಣವಾಗಿ ಬೆಳೆದ ಲಾರ್ವಾಗಳಾಗಿ ಮರದ ಬುಡದಲ್ಲಿರುವ ತೊಗಟೆಯ ಸ್ಕೇಲ್ ಅಥವಾ ಕಸದಂತಹ ಸಂರಕ್ಷಿತ ಸ್ಥಳಗಳಲ್ಲಿ ರೇಷ್ಮೆಯಂತಹ ಕಕೂನ್‌ನಲ್ಲಿ ಚಳಿಗಾಲವನ್ನು ಕಳೆಯುತ್ತವೆ.


ಮುಂಜಾಗ್ರತಾ ಕ್ರಮಗಳು

  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ತೋಟಗಳನ್ನು ಮೇಲ್ವಿಚಾರಣೆ ಮಾಡಿ.
  • ವಸಂತಕಾಲದ ಆರಂಭದಲ್ಲಿ, ಪ್ರೌಢ ಕೀಟಸಂಖ್ಯೆಯನ್ನು ಮೇಲ್ವಿಚಾರಣೆ ಮಾಡಲು ಫೆರೋಮೋನ್ ಬಲೆಗಳನ್ನು ಇರಿಸಿ.
  • ಕತ್ತರಿಸಿ ತೆಗೆದ ವಸ್ತು, ಮರದ ಮೇಲೆ ಮತ್ತು ನೆಲದ ಮೇಲೆ ಉಳಿದಿರುವ ಹಣ್ಣುಗಳನ್ನು ತೆಗೆದುಹಾಕಿ ಮತ್ತು ನಾಶಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ