ದ್ರಾಕ್ಷಿ

ದ್ರಾಕ್ಷಿಯ ಎಲೆ ಸುರುಳಿ ರೋಗ

Sparganothis pilleriana

ಕೀಟ

5 mins to read

ಸಂಕ್ಷಿಪ್ತವಾಗಿ

  • ಹೂವಿನ ಮೊಗ್ಗುಗಳು ಟೊಳ್ಳಾಗುತ್ತವೆ.
  • ಹುಳ ತಿನ್ನುವುದರಿಂದ ಎಲೆಗಳು, ಚಿಗುರುಗಳು ಮತ್ತು ಹೂವುಗಳಿಗೆ ಹಾನಿಯಾಗುತ್ತದೆ.
  • ಎಲೆಗಳು ಅಥವಾ ಹಣ್ಣುಗಳು ರೇಷ್ಮೆ ನೂಲಿನಿಂದ ಬಲೆಯಂತೆ ಜೋಡಿಸಲ್ಪಟ್ಟಿರುತ್ತವೆ.
  • ಪ್ರೌಢ ಪತಂಗಗಳಿಗೆ 3 ಕೆಂಪು ಮಿಶ್ರಿತ ಕಂದು ಬಣ್ಣದ ಟ್ರಾನ್ಸ್‌ವರ್ಸಲ್ ಬ್ಯಾಂಡ್‌ಗಳಿರುವ ಒಣಹುಲ್ಲಿನ ಹಳದಿ ಬಣ್ಣದ ಮುಂದಿನ ರೆಕ್ಕೆಗಳಿರುತ್ತವೆ, ಮತ್ತು ಏಕರೂಪವಾಗಿ ಬೂದು ಬಣ್ಣದ ಹಿಂದಿನ ರೆಕ್ಕೆಗಳಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ದ್ರಾಕ್ಷಿ

ರೋಗಲಕ್ಷಣಗಳು

ಎಸ್ . ಪಿಲ್ಲೆರಿಯಾನಾದ ಮರಿಹುಳುಗಳು ಪ್ರಸರಣದ ಸಮಯದಲ್ಲಿ ಮೊಗ್ಗುಗಳನ್ನು ಕೊರೆಯುತ್ತವೆ ಮತ್ತು ಅವುಗಳ ತಿರುಳನ್ನು ತಿನ್ನುತ್ತವೆ. ಮೊಗ್ಗು ಮೂಡಿದ ನಂತರ ಆಕ್ರಮಣ ನಡೆದರೆ, ಅದು ಎಲೆಗಳು, ಚಿಗುರುಗಳು ಮತ್ತು ಹೂವುಗಳಿಗೆ ವ್ಯಾಪಕ ಹಾನಿ ಉಂಟುಮಾಡಬಹುದು. ಇವುಗಳಲ್ಲಿ ಕೆಲವು ಎಲೆಗಳು ರೇಷ್ಮೆಯ ಎಳೆಗಳಿಂದ ಒಂದಕ್ಕೊಂದು ಹೆಣೆದುಕೊಂಡು ಬಲೆಯಂತಹ ಆಕಾರ ಉಂಟು ಮಾಡುತ್ತವೆ. ಆಹಾರಕ್ಕಾಗಿ ಲಾರ್ವಾಗಳು ಇದನ್ನು ಬಳಸಿಕೊಂಡು ಇತರೆ ಎಲೆಗಳನ್ನು ತಿನ್ನಲು ಹೋಗುತ್ತವೆ. ಭಾರೀ ಸೋಂಕು ಉಂಟಾದಾಗ, ಎಲೆಯ ಕೆಳಭಾಗವು ವಿಶಿಷ್ಟವಾದ ಬೆಳ್ಳಿಯ ಬಣ್ಣವನ್ನು ಪಡೆದುಕೊಳ್ಳುತ್ತದೆ ಮತ್ತು ತೊಟ್ಟು ಕೆಂಪು ಬಣ್ಣವನ್ನು ಪಡೆಯುತ್ತದೆ. ಹಾನಿಗೊಳಗಾದ ಚಿಗುರಿನ ತುದಿಗಳು ಮೇಲಿನಿಂದ ಒಣಗುತ್ತಾ ಬರುತ್ತವೆ ಮತ್ತು ಸಾಯುತ್ತವೆ. ಸೋಂಕು ವಿಪರೀತವಾಗಿದ್ದ ಸಂದರ್ಭಗಳಲ್ಲಿ ಎಲೆಗಳು ಉದುರುತ್ತವೆ. ಗೊಂಚಲುಗಳೂ ಸಹ ಆಕ್ರಮಣಕ್ಕೆ ಒಳಗಾಗಬಹುದು. ಇದರಿಂದಾಗಿ ದೊಡ್ಡ ಸಂಖ್ಯೆಯಲ್ಲಿ ಹಣ್ಣುಗಳು ಒಂದಕ್ಕೊಂದು ರೇಷ್ಮೆಯ ಎಳೆಗಳಿಂದ ಪೋಣಿಸಿದಂತಾಗುತ್ತವೆ. ಮರಿಹುಳುಗಳಿಗೆ ಅಡ್ಡಿಯಾದಲ್ಲಿ - ಉದಾಹರಣೆಗೆ ಎಲೆಗೂಡುಗಳು ತೆರೆದುಕೊಳ್ಳುವ ಮೂಲಕ - ಅವು ಮುಂದೆ ಜಾರಿ, ನೆಲಕ್ಕೆ ಸ್ರವಿಸುವ ಎಳೆಯನ್ನು ಬಿಟ್ಟು ಜೋತಾಡುತ್ತವೆ.

Recommendations

ಜೈವಿಕ ನಿಯಂತ್ರಣ

ಎಸ್ ಪಿಲ್ಲೆರಿಯಾನಾದ ನೈಸರ್ಗಿಕ ಪರಭಕ್ಷಕಗಳ ಉದ್ದನೆಯ ಪಟ್ಟಿಯಲ್ಲಿ ಪರಾವಲಂಬಿ ಕಣಜಗಳು, ನೊಣಗಳು, ಲೇಡಿಬಗ್ ಮತ್ತು ಕೆಲವು ಪಕ್ಷಿಗಳು ಸೇರಿವೆ. ವಿಶಾಲ-ರೋಹಿತ ಕೀಟನಾಶಕಗಳನ್ನು ಬಳಸಿ ಈ ಜಾತಿಗಳ ಜೀವನ ಚಕ್ರವನ್ನು ಹಾಳುಮಾಡಬೇಡಿ. ಸ್ಪಿನೋಸಾಡ್ ಹೊಂದಿರುವ ಸಾವಯವ ಔಷಧಗಳನ್ನು ಶಿಫಾರಸು ಮಾಡಲಾಗಿದೆ. ಬೆವೆರಿಯಾ ಬಾಸ್ಸಿಯಾನಾ ಎಂಬ ಶಿಲೀಂಧ್ರವನ್ನು ಒಳಗೊಂಡಿರುವ ದ್ರಾವಣಗಳಿಂದ ಕೂಡ ಮರಿಹುಳುಗಳನ್ನು ನಿಯಂತ್ರಿಸಬಹುದು.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳೊಂದಿಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ಮಾರ್ಗ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಕ್ಲೋರೋಪಿರಿಫೊಸ್, ಎಮಾಮೆಕ್ಟಿನ್, ಫ್ಲುಫೆನೋಕ್ಸುರಾನ್, ಇಂಡೊಕ್ಸಕಾರ್ಬ್ ಅಥವಾ ಮೆಟೊಕ್ಸಿಫೆನೊಸಿಡ್ ನ ಸಕ್ರಿಯ ವಸ್ತುಗಳನ್ನು ಒಳಗೊಂಡಿರುವ ಉತ್ಪನ್ನಗಳನ್ನು ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಲು ಸಕಾಲಿಕವಾಗಿ ಸಿಂಪಡಿಸಬಹುದಾಗಿದೆ.

ಅದಕ್ಕೆ ಏನು ಕಾರಣ

ಲಾಂಗ್ ಪೇಲಡ್ ಟಾರ್ಟ್ರಿಕ್ಸ್ ಜಾತಿಗೆ ಸೇರಿದ ಕೀಟವಾದ ಸ್ಪಾರ್ಗನೋಥಿಸ್ ಪಿಲ್ಲೆರಿಯಾನದ ಮರಿಹುಳುಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ. ವಯಸ್ಕ ಪತಂಗಗಳು 3 ಕೆಂಪು ಕಂದು ಬಣ್ಣದ ಅಡ್ಡ ಪಟ್ಟಿಗಳೊಂದಿಗೆ ಹುಲ್ಲು ಹಳದಿ ಬಣ್ಣದ ಮುಂದಿನ ರೆಕ್ಕೆಗಳನ್ನು ಹೊಂದಿರುತ್ತವೆ. ಜೊತೆಗೆ ಸಮಾನವಾಗಿ ಬೂದು ಬಣ್ಣದ, ಸಣ್ಣ ಅಂಚಿರುವ ಹಿಂದಿನ ರೆಕ್ಕೆಗಳನ್ನು ಹೊಂದಿರುತ್ತವೆ. ಇದು ವರ್ಷಕ್ಕೆ ಒಂದೇ ಪೀಳಿಗೆಯನ್ನು ಉತ್ಪಾದಿಸುತ್ತದೆ ಮತ್ತು ದ್ರಾಕ್ಷಿಯನ್ನು ತಿನ್ನುವ ಇತರ ಪತಂಗಗಳಿಗೆ ಹೋಲಿಸಿದರೆ ಕಡಿಮೆ ತಾಪಮಾನವನ್ನು ಇಷ್ಟಪಡುತ್ತವೆ. ಮುಸ್ಸಂಜೆಯ ಸಮಯದಲ್ಲಿ ಬಳ್ಳಿಗಳ ಮೇಲಿನ ಭಾಗದಲ್ಲಿ ಹೆಣ್ಣು ಹುಳುಗಳು ಒಂಟಿ ಮೊಟ್ಟೆಗಳನ್ನು ಇಡುತ್ತವೆ. ಮರಿಹುಳುಗಳು ಬೂದು, ಹಸಿರು ಅಥವಾ ಕೆಂಪು ಬಣ್ಣದ್ದಾಗಿರುತ್ತವೆ, ಸುಮಾರು 20-30 ಮಿಮೀ ಉದ್ದ ಮತ್ತು ಕೂದಲಿನೊಂದಿಗೆ ಮುಚ್ಚಿದ ದೇಹ ಇರುತ್ತದೆ. ದ್ರಾಕ್ಷಿಬಳ್ಳಿಯ ತೊಗಟೆಯಲ್ಲಿ ಸಣ್ಣ-ರೇಷ್ಮೆಯ ಕೋಶಗಳಲ್ಲಿ, ಬಳ್ಳಿಯ ಚಪ್ಪರದಲ್ಲಿ ಅಥವಾ ಪರ್ಯಾಯ ಆಶ್ರಯದಾತ ಸಸ್ಯಗಳ ಎಲೆಗಳಡಿಯಲ್ಲಿ ಇವು ಚಳಿಗಾಲವನ್ನು ಕಳೆಯುತ್ತವೆ. ವಸಂತ ಋತುವಿನಲ್ಲಿ ಮೊಟ್ಟೆ ಒಡೆದು ಹೊರಬಂದ ನಂತರ, ಅವು ರೇಷ್ಮೆ ಎಳೆಗಳನ್ನು ಒಟ್ಟಿಗೆ ಸೇರಿಸಿ ಹೊಲೆದ ಎಲೆಗಳಲ್ಲಿ ಕೋಶಾವಸ್ಥೆಗೆ ಹೋಗುವ ಮೊದಲು 40-55 ದಿನಗಳವರೆಗೆ ಬಳ್ಳಿಯನ್ನು ತಿನ್ನುತ್ತವೆ. 2-3 ವಾರಗಳ ನಂತರ ಸಾಮಾನ್ಯವಾಗಿ ಮಧ್ಯ ಬೇಸಿಗೆಯಲ್ಲಿ, ಪತಂಗ ಹೊರಬರುತ್ತದೆ. ಎಸ್. ಪಿಲ್ಲೆರಿಯಾನಾ ಸುಮಾರು 100 ವಿವಿಧ ಆಶ್ರಯದಾತ ಗಿಡಗಳ ಮೇಲೆ ಆಕ್ರಮಣ ಮಾಡಬಹುದು. ಉದಾ. ಬ್ಲಾಕ್ಬೆರ್ರಿ, ಚೆಸ್ಟ್ನಟ್, ಸ್ಟೋನ್ ಫ್ರೂಟ್ ಜಾತಿಗಳು, ಕ್ವಿನ್ಸ್ ಮತ್ತು ಬ್ಲ್ಯಾಕ್ ಎಲ್ಡರ್.


ಮುಂಜಾಗ್ರತಾ ಕ್ರಮಗಳು

  • ವಸಂತಕಾಲದ ಆರಂಭದಿಂದಲೇ ಎಸ್.
  • ಪಿಲ್ಲೇರಿಯಾನದ ರೋಗಲಕ್ಷಣಗಳಿಗಾಗಿ ತೋಟವನ್ನು ಪರಿಶೀಲಿಸಿ.
  • ನೈಸರ್ಗಿಕ ಪರಭಕ್ಷಕಗಳನ್ನು ಬೆಂಬಲಿಸಲು ಮಕರಂದ ಉತ್ಪಾದಿಸುವ ಹೂ ಗಿಡಗಳನ್ನು ಬೆಳೆಸುವುದು, ಕಳೆ ನಿಯಂತ್ರಿಸುವುದು, ಚಪ್ಪರ ಬಳಕೆ, ತೋಟದ ಸುತ್ತಲಿನ ಕಾಡುಗಳನ್ನು ತೆರವು ಮಾಡುವುದು, ಒಣ ತೊಗಟೆ ಇರುವ ಕಾಂಡ ಮತ್ತು ಗೆಲ್ಲುಗಳ ತೆರವು ಸೇರಿದಂತೆ ಅನೇಕ ಕೃಷಿ ಕ್ರಮಗಳನ್ನು ಕೈಗೊಳ್ಳಿ.
  • ಫೆರೋಮೋನ್ ಬಲೆಗಳನ್ನು ಕೀಟಗಳ ಸಂಖ್ಯೆಗಳನ್ನು ನಿಯಂತ್ರಿಸಲು ಮತ್ತು ಪುನರುತ್ಪತ್ತಿ ಕ್ರಮಗಳನ್ನು ಅಡ್ಡಿಪಡಿಸಲು ಬಳಸಬಹುದಾಗಿದೆ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ