ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ಫ್ಲಾಟಿಡ್ ಪ್ಲಾಂಟ್ ಹಾಪರ್

Metcalfa pruinosa

ಕೀಟ

5 mins to read

ಸಂಕ್ಷಿಪ್ತವಾಗಿ

  • ಎಲೆಗಳು, ಶಾಖೆಗಳು ಮತ್ತು ಹಣ್ಣುಗಳ ಕೆಳಭಾಗದಲ್ಲಿ ಬಿಳಿ, ಉಣ್ಣೆಯಂಥ ಮತ್ತು ಮೇಣದಂಥ ವಸ್ತುಗಳು ಕಂಡುಬರುತ್ತವೆ.
  • ಪ್ರೌಢ ಹುಳುಗಳು ಸಾಮಾನ್ಯವಾಗಿ ಗುಂಪಾಗಿ ತಿನ್ನುತ್ತಿರುವುದನ್ನು ಕಾಣಬಹುದು.
  • ಅವು ಸಿಹಿ ಅಂಟಿನ ರೂಪದಲ್ಲಿ ಹೆಚ್ಚುವರಿ ಸಕ್ಕರೆಯನ್ನು ಹೊರಹಾಕುತ್ತವೆ, ಇದರಿಂದ ಮಸಿ ಬೂಷ್ಟು ಬೆಳೆಯುತ್ತದೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಈ ಪ್ಲಾಂಟ್ ಹಾಪರ್ ನ ಉಪಸ್ಥಿತಿಯನ್ನು ಅನೇಕ ವೇಳೆ ಬಿಳಿ, ಉಣ್ಣೆ ಮತ್ತು ಮೇಣದಂಥ ವಸ್ತುವನ್ನು ಎಲೆಗಳ ಕೆಳಭಾಗದಲ್ಲಿ, ಹಾಗೆಯೇ ಶಾಖೆಗಳು ಮತ್ತು ಹಣ್ಣುಗಳಲ್ಲಿ ಕಾಣುವ ಮೂಲಕ ಕಂಡುಹಿಡಿಯಬಹುದು. ಮರಿಹುಳುಗಳು ಉತ್ಪತ್ತಿ ಮಾಡುವ ಈ ವಸ್ತುಗಳು, ಕೆಲವೊಮ್ಮೆ ಮೀಲಿಬಗ್ ಗಳು ಅಥವಾ ಕಾಟನಿ ಕುಶನ್ ಸ್ಕೇಲ್ ಸೋಂಕಿನಿಂದ ಕಂಡುಬರುವ ವಸ್ತುಗಳಂತೆಯೇ ಕಾಣಬಹುದು (ಮತ್ತು ಅವುಗಳು ಹೆಚ್ಚು ಹಾನಿಕಾರಕ ಕೀಟಗಳಾಗಿವೆ). ಸಂದೇಹ ಉಂಟಾದರೆ, ಆ ಕೀಟಗಳಂತಲ್ಲದೆ, ಪ್ಲಾಂಟ್ ಹಾಪರ್ ಗಳನ್ನು ಅಲ್ಲಾಡಿಸಿದಾಗ ಅವು ಜಿಗಿಯುತ್ತವೆ ಎಂಬುದನ್ನು ತಿಳಿದುಕೊಳ್ಳಿ. ಪ್ರೌಢ ಹುಳುಗಳು ಮತ್ತು ಮರಿಹುಳುಗಳ ಬಾಯಿಯ ಭಾಗಗಳು ಸಸ್ಯ ಅಂಗಾಂಶಗಳನ್ನು ಚುಚ್ಚಲು ಮತ್ತು ರಸವನ್ನು ಹೀರಲು ಸಹಾಯ ಮಾಡುತ್ತವೆ. ಪ್ರೌಢ ಹುಳುಗಳು ಸಾಮಾನ್ಯವಾಗಿ ಗುಂಪಾಗಿ ತಿನ್ನುತ್ತಿರುವುದನ್ನು ಕಾಣಬಹುದು. ಅವು ಸಿಹಿ ಅಂಟಿನ ರೂಪದಲ್ಲಿ ಹೆಚ್ಚುವರಿ ಸಕ್ಕರೆಯನ್ನು ಹೊರಹಾಕುತ್ತವೆ, ಇದರಿಂದ ಮಸಿ ಬೂಷ್ಟು ಬೆಳೆಯುತ್ತದೆ. ಈ ಕೀಟಗಳ ಸಂಖ್ಯೆಯು ಅಧಿಕವಾದರೆ ಅದು ಹೊಸ ಚಿಗುರುಗಳ ಬೆಳವಣಿಗೆಯನ್ನು ನೇರವಾಗಿ ಅಥವಾ ಅವಕಾಶವಾದಿ ಶಿಲೀಂಧ್ರಗಳ ಬೆಳವಣಿಗೆಯ ಮೂಲಕ ಕುಂಠಿತಗೊಳಿಸುತ್ತದೆ ಮತ್ತು ಮರಗಳನ್ನು ದುರ್ಬಲಗೊಳಿಸುತ್ತದೆ . ಇತರ ಸೂಕ್ಷ್ಮ ಸಸ್ಯ ಹೋಸ್ಟ್ ಗಳಲ್ಲಿ, ರೋಗಲಕ್ಷಣಗಳು ಹೆಚ್ಚು ಕ್ರೂರವಾಗಿರಬಹುದು, ಅದರಲ್ಲಿ ಎಲೆಗಳ ಕ್ಲೋರೋಸಿಸ್ ಮತ್ತು ನೆಕ್ರೋಸಿಸ್, ಚಿಗುರುಗಳ ತುದಿ ಸೊರಗುವುದು ಮತ್ತು ಬೀಜಗಳು ವಿರೂಪಗೊಳ್ಳುವುದು ಮತ್ತು ಕಳೆಗುಂದುವುದು ಒಳಗೊಂಡಿವೆ.

Recommendations

ಜೈವಿಕ ನಿಯಂತ್ರಣ

ಡ್ರೈನಿಡ್ ಕುಟುಂಬದ ಒಂದು ಪರಾವಲಂಬಿ ಕಣಜವಾದ ಸೈಲೊಡಿರಿನಸ್ ಟೈಫಲೋಸಿಬೆ, ಮೆಟ್ಕ್ಫಾಫಾ ಪ್ರುನೋನೋಸಾದ ಮರಿಹುಳುಗಳ ಮೇಲೆ ಅದರ ಮೊಟ್ಟೆಗಳನ್ನು ಇಡುತ್ತವೆ ಮತ್ತು ಅವುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಸೋಪ್ ದ್ರಾವಣಗಳು ಕೀಟದ ಯುವ ಮರಿಹುಳು ಹಂತಗಳನ್ನು ಎಲೆಗಳ ಮೇಲಿಂದ ಜಾರುವಂತೆ ಮಾಡಿ ನೆಲಕ್ಕೆ ಬೀಳಿಸುತ್ತವೆ. ಇದಲ್ಲದೆ, ಎಲೆಗಳ ಮೇಲಿರುವ ಸಿಹಿ ಅಂಟನ್ನು ತೊಳೆಯುವುದು ಸೂಕ್ತವಾದ ಪರಿಹಾರವಾಗಿದೆ, ಇಲ್ಲದಿದ್ದರೆ ಅದು ನಂತರ ಕಂದುಬಣ್ಣದ ಮಸಿ ಬೂಷ್ಟಿನ ಮೂಲಕ ವಸಾಹತುವಾಗುತ್ತದೆ. ಆದಾಗ್ಯೂ, ಕೀಟನಾಶಕ ಚಿಕಿತ್ಸೆಗಳು ಇಲ್ಲದಿದ್ದರೆ ಕೀಟಗಳು ಹಿಂತಿರುಗುತ್ತವೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಪ್ರೌಢ ಹುಳುಗಳು ಓಡಾಡುವುದರಿಂದ ಅವುಗಳ ರಾಸಾಯನಿಕ ನಿಯಂತ್ರಣವು ಕಷ್ಟ. ಇವುಗಳ ಅಧಿಕ ಸಂಖ್ಯೆಯನ್ನು ನಿಯಂತ್ರಿಸುವ ಒಂದು ವಿಧಾನವೆಂದರೆ ಮರಿಹುಳುಗಳನ್ನು ನಿಯಂತ್ರಿಸಲು ಕೀಟನಾಶಕಗಳನ್ನು ಸಕಾಲಿಕವಾಗಿ ಸಿಂಪಡಿಸುವುದು. ಮಸಿ ಬೂಷ್ಟಿನ ನಿಯಂತ್ರಣವು ಹೆಚ್ಚು ಪ್ರಯೋಜನಕಾರಿಯಾಗಿದೆ ಎಕೆಂದರೆ ಇದೊಂದು ಅತ್ಯಂತ ಹಾನಿಕಾರಕ ಅಂಶವಾಗಿದೆ. ಎಲ್ಲಿ ಅಧಿಕೃತವಾಗಿದೆಯೋ ಅಲ್ಲಿ, ಡೆಲ್ಟಾಮೆಥ್ರೈನ್, ಪೈರೆಥ್ರಾಯ್ಡ್ಸ್ ಅಥವಾ ಡೈಮಥೋಯೇಟ್ ಇರುವ ದ್ರಾವಣಗಳನ್ನು ಹೊಲದ ಅಂಚಿನಲ್ಲಿ ಎಲೆಗಳು ಅಥವಾ ಹಣ್ಣಿನ ಮೇಲೆ ಸಿಂಪಡಿಸುವುದರಿಂದ ಕೀಟಗಳ ಉತ್ತಮ ನಿಯಂತ್ರಣವನ್ನು ಪಡೆಯಬಹುದು.

ಅದಕ್ಕೆ ಏನು ಕಾರಣ

ಮೆಟ್ಕಾಲ್ಫಾ ಪ್ರುಯಿನೋಸಾ ಎಂಬ ಪ್ಲಾಂಟ್ ಹಾಪರ್ ನ ಪ್ರೌಢ ಹುಳುಗಳು ಮತ್ತು ಮರಿಹುಳುಗಳಿಂದ ಈ ರೋಗಲಕ್ಷಣಗಳು ಉಂಟಾಗುತ್ತವೆ, ಅವುಗಳಿಗೆ ವಿಶಾಲವಾದ ಹೋಸ್ಟ್ ಮರಗಳಿರುತ್ತವೆ ಮತ್ತು ಅವುಗಳಲ್ಲಿ ಸಿಟ್ರಸ್ ಮುಖ್ಯವಾದುದು. ಇದು ಹೊಂದಿಕೊಳ್ಳಬಲ್ಲ ಕೀಟವಾಗಿದ್ದು, ಬಹುರೀತಿಯ ಪರಿಸರದಲ್ಲಿ ಬೆಳೆಯಬಲ್ಲದು. ಅವು ಹಾರುವ ಮೂಲಕ ಸ್ವಲ್ಪ ದೂರದವರೆಗೆ ಹರಡಬಲ್ಲವು ಮತ್ತು ಬೆಳಕಿಗೆ ಆಕರ್ಷಿತವಾಗುತ್ತವೆ. ತಪ್ಪಾದ ಹೊಲದ ಅಭ್ಯಾಸಗಳು ಮತ್ತು ಮನುಷ್ಯರ ಮಧ್ಯಪ್ರವೇಶವು ಅವು ದೂರದ ಜಾಗಗಳಿಗೆ ಹರಡುವುದರಲ್ಲಿ ನಿರ್ಣಾಯಕ ಅಂಶವಾಗಿದೆ. ಪ್ರೌಢ ಹುಳುಗಳ ದೇಹ ಕಂದು ಅಥವಾ ಬೂದು ಬಣ್ಣದ್ದಾಗಿದ್ದು ಅವುಗಳಿಗೆ ವಿಶಿಷ್ಟವಾದ, ಪ್ರಕಾಶಮಾನವಾದ ಕಿತ್ತಳೆ ಬಣ್ಣದ ಕಣ್ಣುಗಳಿರುತ್ತವೆ ಮತ್ತು ಅವುಗಳ ಮುಂದಿನ ರೆಕ್ಕೆಗಳು ತ್ರಿಕೋನಾಕಾರದಲ್ಲಿದ್ದು ಅದರ ಮೇಲೆ ಬಿಳಿ ಕಲೆಗಳು ಹರಡಿರುತ್ತವೆ. ಅವುಗಳನ್ನು ಮೊದಲು ನೋಡಿದಾಗ ಪತಂಗಗಳಂತೆಯೇ ಕಾಣಬಹುದು. ಪ್ರೌಢ ಹುಳುಗಳು ಮತ್ತು ಮರಿಹುಳುಗಳ ದೇಹದ ಮೇಲೆ ಹೇರಳವಾದ ನೀಲಿ- ಬಿಳಿ ಬಣ್ಣದ ಮೇಣವಿರುತ್ತದೆ, ಅದು ನಂತರ ದಟ್ಟವಾದ ಬಿಳಿ ಬಣ್ಣದ ಕೂದಲು ರೂಪವನ್ನು ತೆಗೆದುಕೊಳ್ಳಬಹುದು. ಹೆಣ್ಣು ಹುಳುಗಳು ಶರತ್ಕಾಲದಲ್ಲಿ ಸುಮಾರು 100 ಮೊಟ್ಟೆಗಳನ್ನು ಇಡುತ್ತವೆ, ಸಾಮಾನ್ಯವಾಗಿ ಕೊಂಬೆಗಳ ತೊಗಟೆಯಲ್ಲಿ ಮೊದಲಿಂದಲೇ ಇರುವ ಗಾಯಗಳ ಮೇಲೆ ಅಥವಾ ಮೃದುವಾದ ತೊಗಟೆಯಲ್ಲಿರುವ ಕುಳಿಗಳ ಮೇಲೆ ಇಡುತ್ತವೆ. ವಸಂತಕಾಲದಲ್ಲಿ ಪರಿಸ್ಥಿತಿಗಳು ಅನುಕೂಲಕರವಾದಾಗ ಅವು ಮೊಟ್ಟೆಯೊಡೆಯುತ್ತವೆ ಮತ್ತು ಮರಿಹುಳುಗಳು ಸಸ್ಯದ ಅಂಗಾಂಶಗಳನ್ನು ತಿನ್ನಲು ಪ್ರಾರಂಭಿಸುತ್ತವೆ. ಸಾಮಾನ್ಯವಾಗಿ ಅವುಗಳಿಂದಾಗುವ ಹಾನಿ ಕಡಿಮೆಯಿರುತ್ತದೆ ಆದರೆ ಹಿಂದೆ ಗಾಯಗೊಂಡ ಮರಗಳಲ್ಲಿ, ಉದಾಹರಣೆಗೆ ಸೆಡೆಯ ಮೂಲಕ, ಇದೊಂದು ದೊಡ್ಡ ಸಮಸ್ಯೆ ಆಗಬಹುದು.


ಮುಂಜಾಗ್ರತಾ ಕ್ರಮಗಳು

  • ಈ ಪ್ರಭೇದಗಳನ್ನು ಕೆಲವು ದೇಶಗಳಲ್ಲಿ ಸಂಪರ್ಕತಡೆ ನಿಯಂತ್ರಣಕ್ಕೆ ಒಳಪಡಿಸಲಾಗಿರುತ್ತದೆ.
  • ಪ್ರೌಢ ಹುಳುಗಳನ್ನು ಆಕರ್ಷಿಸಲು ಮತ್ತು ಅವುಗಳ ಸಂಖ್ಯೆಗಳನ್ನು ಕಡಿಮೆ ಮಾಡಲು ಬೆಳಕಿನ ಬಲೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ