ಇತರೆ

ಚುಕ್ಕೆ ಕಾಯಿಕೊರಕ

Chilo partellus

ಕೀಟ

5 mins to read

ಸಂಕ್ಷಿಪ್ತವಾಗಿ

  • ಹೆಣೆದುಕೊಂಡಂತಿರುವ ಅಥವಾ ಬಲೆಯಾಗಿರುವ ಹೂವುಗಳು ಮತ್ತು ಕಾಯಿಗಳು.
  • ಕಾಂಡಗಳ ಬಾಡುವಿಕೆ.
  • ಕಾಯಿಗಳಲ್ಲಿನ ಬೀಜಗಳು ಸಂಪೂರ್ಣವಾಗಿ ಅಥವಾ ಭಾಗಶಃ ಕಡಿದು ಹಾಕಿದಂತಿರುತ್ತವೆ.
  • ಮೊಗ್ಗುಗಳು, ಹೂವುಗಳು ಅಥವಾ ಕಾಯಿಗಳ ಮೇಲೆ ತೂತುಗಳಾಗಿರುತ್ತವೆ.
  • ಪತಂಗದ ಗಾಢವಾದ ಮುಂದಿನ ರೆಕ್ಕೆಗಳ ಮೇಲೆ ಬಿಳಿಯ ಅಡ್ಡಪಟ್ಟೆಗಳು ಇರುತ್ತವೆ.
  • ಹಿಂದಿನ ಬಿಳಿ ರೆಕ್ಕೆಗಳು ಗಾಢವಾದ ಅಂಚುಗಳನ್ನು ಹೊಂದಿರುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ರೋಗಲಕ್ಷಣಗಳು ಮೊಗ್ಗು, ಹೂವು ಮ್ತು ಬೀಜಕೋಶಗಳ ಮೇಲೆ ಕಂಡುಬರುತ್ತವೆ. ಹೂ ಬಿಡುವ ಹಂತದಲ್ಲಿ ಲಾರ್ವಾಗಳ ಹಿಕ್ಕೆಯ ಕಾರಣದಿಂದಾಗಿ ಎಲೆಗಳು, ಹೂವುಗಳು ಮತ್ತು ಬೀಜಕೋಶಗಳು ಹೆಣೆದುಕೊಂಡಿರುತ್ತವೆ, ಬಲೆಯಂತಾಗಿರುತ್ತವೆ. ಹೊಸ ಚಿಗುರುಗಳು ಮತ್ಅತು ಮೊಗ್ಗುಗಳು ಒಣಗಿದಂತಿರುತ್ತವೆ. ಬೀಜಗಳನ್ನು ತಲುಪಲು ಕೊರೆದ ರಂಧ್ರಗಳು ಬೀಜಕೋಶಗಳ ಮೇಲೆ ಇರುತ್ತವೆ. ಎಲೆಗಳ ತೊಟ್ಟುಗಳನ್ನು ಕೊರೆಯುವ ಮೂಲಕ ಚುಕ್ಕೆ ಕಾಯಿ ಕೊರಕ ಸಸ್ಯಗಳು ಬಾಡುವಂತೆ ಮಾಡುತ್ತದೆ.

Recommendations

ಜೈವಿಕ ನಿಯಂತ್ರಣ

ಚುಕ್ಕೆಕಾಯಿಕೊರಕವನ್ನು ಅವುಗಳ ಸ್ವಾಭಾವಿಕ ಶತ್ರುಗಳ ಮೂಲಕ ಬಹುತೇಕ ನಿಯಂತ್ರಸಬಹುದು. ಪ್ಯಾರಾಸಿಟಾಯ್ಡ್ ನೊಣಗಳು(ಟೆಚಿನಿಡೆ) ಮತ್ತು ಕಣಜಗಳು (ಬ್ರೋಕಾನಿಡೆ ಮತ್ತು ಇಚ್ನಿಯೋಮಾನಿಡೆ) ಕೀಟಗಳ ಸಂಖ್ಯೆಯನ್ನು ನಿಯಂತ್ರಿಸಬಲ್ಲವು. ಪರಭಕ್ಷಕಗಳು ( ಲೇಸ್ ವಿಂಗ್, ಲೇಡಿಬರ್ಡ್ ಜೀರುಂಡೆ, ಜೇಡ, ಕೆಂಪು ಇರುವೆ, ಡ್ರ್ಯಾಗನ್ ಫ್ಲೈ, ರಾಬರ್ ಫ್ಲೈ, ರೆಡುವೈಡ್ ಬಗ್, ಮತ್ತು ಪ್ರೇಯಿಂಗ್ ಮಾಂಟಿಸ್) ಹೊಂದಾಣಿಕೆಯಲ್ಲಿ ಎಂ. ವಿತ್ರಾಟಾ ಮುತ್ತಿಗೆಯನ್ನು 98ಶೇ ಕಡಿಮೆ ಮಾಡಬಲ್ಲವು. ಅಝಾಡಿರಕ್ಚಿನ್ ಮತ್ತು ಬಾಸಿಲಸ್ ತುರಿಂಜಿಯೆನ್ಸಿಸ್ ಅನ್ನು ಹೊಂದಿರುವ ಬೇವಿನ ಎಣ್ಣೆ ಆಧರಿತ ಇಸಿಯನ್ನು ಜೈವಿಕ ಕೀಟನಾಶಕವಾಗಿ ಎಲೆ ಸಿಂಪಡಕವಾಗಿ ಬಳಸಬಹುದು. ಇವುಗಳನ್ನು ಹೂಬಿಡುವ ಹಂತದಿಂದ ಕೊಯ್ಲಿನವರೆಗೆ ಬಳಸಬೇಕು. ಬೇವಿನ ಎಣ್ಣೆ ಅಥವಾ ಬಿಟಿ ಫಾರ್ಮುಲೇಶನ್ ಗಳನ್ನು ಬೆಳೆ ಋುತುವಿನ ಮೊದಲಿಗೆ ಒಮ್ಮೆ ಮಾತ್ರ ಅಥವಾ ಮುತ್ತಿಗೆ ಗಮನಕ್ಕೆ ಬಂದ ತಕ್ಷಣ ಬಳಸುವಂತೆ ಶಿಫಾರಸ್ಸು ಮಾಡಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ನಿಯಂತ್ರಣ ಕ್ರಮಗಳ ಜೊತೆ ಜೈವಿಕ ಕ್ರಮಗಳಿರುವ ಸಮಗ್ರ ವಿಧಾನ ಲಭ್ಯವಿದ್ದರೆ ಅದನ್ನು ಮೊದಲು ಪರಿಗಣಿಸಿ. ಒಂದು ಚದರ ಮೀಟರ್ ಗೆ 3 ಲಾರ್ವೆ ಎಂಬ ಆರ್ಥಿಕ ಮಿತಿಯನ್ನು ದಾಟಿದಾಗ ವ್ಯವಸ್ಥಿತ ಅಥವಾ ಸಂಪರ್ಕ ಕೀಟನಾಶಕಗಳನ್ನು ನೀವು ಬಳಸಬಹುದು. ಲಾಭಕಾರಕ ಕೀಟಗಳ ಸಂಖ್ಯೆಯನ್ನು ಕಡಿಮೆ ಮಾಡದಂತೆ ರಾಸಾಯನಿಕ ನಿಯಂತ್ರಕ ಎಜೆಂಟ್ ಗಳನ್ನು ಎಚ್ಚರಿಕೆಯಿಂದ ಆರಿಸಿ. ಮುತ್ತಿಗೆ ಆರಂಭವಾದಾಗ ವ್ಯವಸ್ಥಿತ ಅಥವಾ ಸಂಪರ್ಕ ಕೀಟನಾಶಕಗಳಾದ ಅಜಡಿರಾಚ್ಟಿನ್(1500 ಪಿಪಿಎಂ)@ 5ಮಿಲೀ/ಲೀ ಅನ್ನು ಪರಿಗಣಿಸಿ. ಕ್ಲೋರಂಟ್ರಾನಿಲಿಪ್ರೋಲ್ 18.5 ಇಸಿ(0.3 ಮಿಲೀ/ಲೀ), ಕ್ಲೋರೋಪಿರಿಫೋಸ್ 20ಇಸಿ (2ಎಂಎಲ್/ಲೀ), ಪ್ರೋಫೆನೋಫೋಸ್ 50ಇಸಿ(2ಎಂ ಎಲ್/ಲೀ) ಸ್ಪಿನೊಸಾಡ್ 45ಎಸ್ ಸಿ(0.3ಮಿಲೀ/ಲೀ), ಎಮಾಮೆಕ್ಚಿನ್ ಬೆನ್ಝೋಯೇಟ್+ಲಾಂಬ್ಡಾ-ಸೈಹಲೋತ್ರಿನ್ 5ಇಸಿ ಅಥವಾ ಫ್ಲುಬೆಂಡಿಯಾಮೈಡ್ 39.35 ಎಸ್ ಸಿ(0.2 ಮಿಲೀ/ಲೀ) ಗಳನ್ನು ಆಧರಿಸಿದ ಕೀಟನಾಶಕಗಳನ್ನು ಕೀಟ ನಿಯಂತ್ರಣಕ್ಕೆ ಬಳಸಬಹುದು.

ಅದಕ್ಕೆ ಏನು ಕಾರಣ

ಚುಕ್ಕೆ ಕಾಯಿಕೊರಕದ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ವಯಸ್ಕ ಪತಂಗದ ಮುಂದಿನ ರೆಕ್ಕೆಯು ಕಪ್ಪು ಬಣ್ಣದಲ್ಲಿದ್ದು ಅದರ ಮೇಲೆ ಬಿಳಿ ಮಚ್ಚೆಗಳು ಇರುತ್ತವೆ. ಹಿಂಬದಿ ರೆಕ್ಕೆಗಳು ಬಿಳಿಯ ಬಣ್ಣದಲ್ಲಿದ್ದು ಅಂಚಿನುದ್ದಕ್ಕೂ ಕಪ್ಪು ಗೆರೆಯಿರುತ್ತದೆ. ಹೆಣ್ಣು ಕೀಟವು ಎಲೆ, ಮೊಗ್ಗು ಮತ್ತು ಹೂವುಗಳ ಮೇಲೆ ಸಣ್ಣ ಗುಂಪಿನಲ್ಲಿ ಮೊಟ್ಟೆಗಳನ್ನು ಇಡುತ್ತದೆ. ಲಾರ್ವಾ ಹಸಿರು ಮಿಶ್ರಿತ ಬಿಳಿ ಬಣ್ಣದಲ್ಲಿದ್ದು, ಕಪ್ಪು ಚುಕ್ಕೆಗಳು ಇರುತ್ತವೆ. ದೇಹದ ಸಣ್ಣ ಗಂಟುಗಳ ಮೇಲೆ ಕೂದಲುಗಳು ಇರುತ್ತವೆ. ಹುಳಗಳು ಮಣ್ಣಿನಲ್ಲಿ ಅಥವಾ ಎಲೆಯ ಬಲೆಯಲ್ಲಿ ಪ್ಯೂಪಾ ಹಂತಕ್ಕೆ ಬೆಳೆಯುತ್ತವೆ. ಲಾರ್ವಾಗಳು ನಿಶಾಚರಿಗಳಾಗಿದ್ದು ಕಾಂಡಗಳು, ಪುಷ್ಪಮಂಜರಿ, ಹೂಗಳು, ಬೀಜಕೋಶಗಳ ಮೇಲೆ ಧಾಳಿ ಮಾಡುತ್ತವೆ. ಬೇಳೆಗಳು, ಅವರೆ ಕಾಳು, ಮೆಣಸಿನಕಾಯಿ, ಶೇಂಗಾ, ತಂಬಾಕು, ಹತ್ತಿ, ಸೋಯಾಬೀನ್, ಸಾಸಿವೆ, ಕಬ್ಬು, ಹರಳೆಕಾಯಿ, ದಾಸವಾಳ ಸೇರಿದಂತೆ ಹಲವಾರು ಆಶ್ರಯದಾತ ಸಸ್ಯಗಳ ಮೇಲೆ ಧಾಳಿ ಮಾಡುತ್ತವೆ. ಎಲೆಗಳನ್ನು ಸುರುಳಿ ಮಾಡಿ, ಬಲೆಯಂತೆ ಹಣೆದ ಬಳಿಕ ಎಂ.ವಿತ್ರಾಟ ಒಳಭಾಗವನ್ನು ತಿನ್ನುವುದನ್ನು ಮಂದುವರಿಸುತ್ತದೆ. ಮುತ್ತಿಗೆಯು ಸಸಿ ಹಂತದಿಂದ ಆರಂಭವಾಗಿ ಬೀಜಕೋಶದ ಹಂತದವರೆಗೂ ನೆಯಬಹುದು. ಇದಕ್ಕೆ ಸೂಕ್ತ ತಾಪಮಾನವೆಂದರೆ 20-28 ° C. ಕಾಯಿಕೊರಕದಿಂದ ಆಗುವ ಬೆಳೆ ಹಾನಿ 20-50 ಶೇ ಇರುತ್ತದೆ.


ಮುಂಜಾಗ್ರತಾ ಕ್ರಮಗಳು

  • ಐಸಿಪಿಎಲ್-87119 ತೊಗರಿಬೇಳೆಯಂತಹ ಲಭ್ಯವಿರುವ ನಿರೋಧಕ ಪ್ರಭೇದಗಳನ್ನು ಆರಿಸಿ.
  • ಕೀಟಗಳ ಚಿಹ್ನೆಗಳಿಗಾಗಿ ಹೊಲಗಳನ್ನು ಮೇಲ್ವಿಚಾರಣೆ ಮಾಡಿ (ಮೊಟ್ಟೆಯ ರಾಶಿ, ಮರಿಹುಳುಗಳು, ಯಾವುದಾದರೋ ಹಾನಿ).
  • ಮುತ್ತಿಗೆಗೆ ಒಳಗಾಗಿರುವ ಹೂವುಗಳು, ಬೀಜಕೋಶಗಳು ಅಥವಾ ಸಸ್ಯದ ಭಾಗಗಳನ್ನು ಕೈಯಿಂದ ತೆಗೆದುಹಾಕಿ.
  • ಸಾರಜನಕ ಗೊಬ್ಬರದ ಸೂಕ್ತ ಮಟ್ಟವನ್ನು ಕಾಪಾಡಿಕೊಳ್ಳಿ.
  • ಹೊಲ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಉತ್ತಮ ಕಳೆ ತೆಗೆಯುವ ಕಾರ್ಯಕ್ರಮವನ್ನು ಅನುಸರಿಸಿ.
  • ಹೊಲದ ಒಳಚರಂಡಿಯನ್ನು ಉತ್ತಮಗೊಳಿಸಿ, ಏಕೆಂದರೆ ನೀರು ನಿಲ್ಲುವುದು ಸೋಂಕಿನ ಸಾಧ್ಯತೆಯನ್ನು ಹೆಚ್ಚಿಸುತ್ತದೆ.
  • ಪತಂಗಗಳನ್ನು ನಿಯಂತ್ರಿಸಲು ಅಥವಾ ಗುಂಪಾಗಿ ಹಿಡಿಯಲು ಬಿತ್ತನೆಯ 15 ದಿನಗಳ ನಂತರ ಬೆಳಕಿನ ಬಲೆಗಳನ್ನು ಬಳಸಿ.
  • ಲಾರ್ವಾಗಳನ್ನು ತಿನ್ನುವ ಪಕ್ಷಿಗಳಿಗೆ ಅಡ್ಡಗಂಬಿಗಳು ಮತ್ತು ತೆರೆದ ಸ್ಥಳವನ್ನು ಒಂದು ಹೆಕ್ಟೆರಿಗೆ 15ರಂತೆ ನಿರ್ಮಿಸಿ.
  • ಸುಗ್ಗಿಯ ನಂತರ ಸಸ್ಯದ ಉಳಿಕೆಗಳು ಅಥವಾ ತಾವಾಗೇ ಬೆಳೆದ ಸಸ್ಯಗಳನ್ನು ತೆಗೆದುಹಾಕಿ.
  • ಭತ್ತ, ಹುಲ್ಲುಜೋಳ, ಸಿರಿಧಾನ್ಯ ಅಥವಾ ಮೆಕ್ಕೆ ಜೋಳದಂತಹ ರೋಗಕ್ಕೆ ಒಳಗಾಗದ ಆಶ್ರಯದಾತ ಬೆಳೆಗಳೊಂದಿಗೆ ಬೆಳೆ ಸರದಿಯನ್ನು ಅನುಸರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ