ಇತರೆ

ಸೆಮಿಲೂಪರ್ (ಕೊಂಡಿಹುಳು)

Autographa nigrisigna

ಕೀಟ

5 mins to read

ಸಂಕ್ಷಿಪ್ತವಾಗಿ

  • ಚಿಗುರೆಲೆಗಳು ಮತ್ತು ಬೀಜಕೋಶಗಳ ಮೇಲೆ ಹಾನಿ ಉಂಟುಮಾಡುತ್ತದೆ.
  • ಎಲೆಗಳ ಮೇಲೆ ಗುಂಡಿ ಬಿದ್ದಂತಹ ನೋಟ.
  • ಹಸಿರು ಲಾರ್ವಾಗಳ ಗೋಚರ.
  • ಎಲೆಗಳ ಮೇಲೆ ಬೂದು ಬಣ್ಣದ ಗುರುತುಗಳಿರುವ ಚಿಟ್ಟೆಗಳು.


ಇತರೆ

ರೋಗಲಕ್ಷಣಗಳು

ಕೊಂಡಿಹುಳು ಚಿಗುರೆಲೆಗಳು ಮತ್ತು ಬೀಜಕೋಶಗಳನ್ನು ತಿನ್ನುತ್ತವೆ. ಎಳೆಯ ಲಾರ್ವಾಗಳು ಚಿಗುರೆಲೆಗಳನ್ನು ಕೆರೆದು ತಿನ್ನುತ್ತವೆ, ಆದರೆ ಸ್ವಲ್ಪ ಬೆಳೆದವುಗಳು ಮೊಗ್ಗುಗಳು, ಹೂಗಳು, ಬೀಜಕೋಶಗಳನ್ನು ಚೂರು ಚೂರು ಮಾಡಿ ತಿಂದುಹಾಕುತ್ತವೆ, ಕಾಯಿಯ ತಳದ ಭಾಗದಲ್ಲಿ ಪುಷ್ಪಮಂಜರಿಯನ್ನು ಮಾತ್ರ ಉಳಿಸುತ್ತವೆ. ಮೊಗ್ಗುಗಳನ್ನು ತಿನ್ನುವಾಗ, ಬೀಜಕೋಶಗಳ ಗೋಡೆಗೆ ಹಾನಿಯಾಗುತ್ತದೆ. ಎಲೆಗಳು ತೂತು ತೂತಾಗಿ ಗೋಚರಿಸುತ್ತವೆ ಮತ್ತು ಭಾರೀ ಮುತ್ತಿಕೊಳ್ಳುವಿಕೆಯ ಸಮಯದಲ್ಲಿ, ಎಲೆಗಳು ಅಸ್ಥಿಪಂಜರದಾಗಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ಸಸ್ಯಗಳು ಸಂಪೂರ್ಣವಾಗಿ ಉದುರಬಹುದು. ಸಾಮಾನ್ಯವಾಗಿ, ಈ ರೋಗಲಕ್ಷಣಗಳನ್ನು ಪಕ್ಷಿ ಹಾನಿಯೊಂದಿಗೆ ಗೊಂದಲಪಟ್ಟುಕೊಳ್ಳುವ ಸಾಧ್ಯತೆಯಿದೆ.

Recommendations

ಜೈವಿಕ ನಿಯಂತ್ರಣ

ಕೀಟನಾಶಕಗಳ ಬಳಕೆಯನ್ನು ತಪ್ಪಿಸುವ ಮೂಲಕ ಪರಭಕ್ಷಕ ಜಾತಿಗಳಾದ ಜೇಡಗಳು, ಲೇಸ್‌ವಿಂಗ್ಸ್, ಇರುವೆಗಳು ಮತ್ತು ಇತರ ನೈಸರ್ಗಿಕ ಶತ್ರುಗಳನ್ನು ಉತ್ತೇಜಿಸಿ. ಟ್ರೈಕೊಗ್ರಾಮಾ ಚಿಲೋನಿಸ್ ಅನ್ನು ಸಾಪ್ತಾಹಿಕ ಮಧ್ಯಂತರದಲ್ಲಿ ನಾಲ್ಕು ವಾರಗಳವರೆಗೆ ಹೆಕ್ಟೇರಿಗೆ 1.5 ಲಕ್ಷದಷ್ಟು ಬಿಡುಗಡೆ ಮಾಡಿ. ಎನ್‌ಪಿವಿ (ನ್ಯೂಕ್ಲಿಯೊಪೊಲಿಹೆಡ್ರೊವೈರಸ್), ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಅಥವಾ ಬ್ಯೂವೇರಿಯಾ ಬಾಸ್ಸಿಯಾನಾ ಆಧಾರಿತ ಜೈವಿಕ ಕೀಟನಾಶಕಗಳು ಸಹ ಸೆಮಿಲೂಪರ್‌ಗಳನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಕೀಟವನ್ನು ನಿಯಂತ್ರಿಸಲು ಸಸ್ಯವರ್ಗದ ಉತ್ಪನ್ನಗಳಾದ ಬೇವಿನ ಸಾರ ಮತ್ತು ಮೆಣಸಿನಕಾಯಿ ಅಥವಾ ಬೆಳ್ಳುಳ್ಳಿ ಸಾರವನ್ನು ಎಲೆಗಳ ಮೇಲೆ ಸಿಂಪಡಿಸಬಹುದು. ಹೂಬಿಡುವ ಹಂತದಿಂದ ಪ್ರಾರಂಭವಾಗಿ 10-15 ದಿನಗಳ ಮಧ್ಯಂತರದಲ್ಲಿ ಎನ್‌ಪಿವಿ 250 ಎಲ್‌ಇ / ಹೆಕ್ಟೇರ್ ಅನ್ನು ಟೀಪೋಲ್ 0.1% ಮತ್ತು ಬೆಲ್ಲವನ್ನು 0.5% ನೊಂದಿಗೆ ಸೇರಿಸಿ ಮೂರು ಬಾರಿ ಬಳಸಿ. ಬೇವಿನ ಎಣ್ಣೆ ಅಥವಾ ಪುಂಗಮ್ ಎಣ್ಣೆ 80 ಇಸಿ @ 2 ಮಿಲಿ / ಲೀ ಅನ್ನು ಬಳಸಿ.

ರಾಸಾಯನಿಕ ನಿಯಂತ್ರಣ

ಜೈವಿಕ ಚಿಕಿತ್ಸೆಗಳೊಂದಿಗೆ ಮುಂಜಾಗ್ರತಾ ಕ್ರಮಗಳನ್ನು ಒಟ್ಟುಗೂಡಿಸಿ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಪ್ರತಿ 10 ಸಸ್ಯಗಳಿಗೆ 2 ಕ್ಕೂ ಹೆಚ್ಚು ಲಾರ್ವಾಗಳು ಕಂಡುಬಂದರೆ, ನಿಯಂತ್ರಣ ಕ್ರಮಗಳನ್ನು ಪ್ರಾರಂಭಿಸಬೇಕು. ಕೊಂಡಿಹುಳುಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕ್ಲೋರ್ಪಿರಿಫೋಸ್ ಮತ್ತು ಕ್ವಿನಾಲ್ಫೋಸ್ ಅನ್ನು ಸೂಚಿಸಲಾಗಿದೆ.

ಅದಕ್ಕೆ ಏನು ಕಾರಣ

ಆಟೋಗ್ರಾಫಾ ನಿಗ್ರಿಸಿಗ್ನಾದ ಲಾರ್ವಾಗಳಿಂದ ಹಾನಿ ಉಂಟಾಗುತ್ತದೆ. ಕೊಂಡಿಹುಳುವಿನ ಚಿಟ್ಟೆಯ ಮುಂದಿನ ರೆಕ್ಕೆಗಳ ಮೇಲೆ ಗುರುತುಗಳಿರುತ್ತವೆ. ಎಲೆಗಳ ಮೇಲೆ 40 ಮೊಟ್ಟೆಗಳ ಗುಂಪುಗಳಾಗಿ ಮೊಟ್ಟೆಗಳನ್ನು ಹಾಕಲಾಗುತ್ತದೆ ಮತ್ತು ಲಾರ್ವಾಗಳು ಮತ್ತು ಕೊಂಡಿಹುಳುಗಳು ಹಸಿರು ಬಣ್ಣದಲ್ಲಿರುತ್ತವೆ. ಒಂದು ತಲೆಮಾರು ಬೆಳವಣಿಗೆಯಾಗಲು 4 ವಾರಗಳನ್ನು ತೆಗೆದುಕೊಳ್ಳುತ್ತದೆ. ಮೊಟ್ಟೆಯ ಅವಧಿಯು ಸುಮಾರು 3-6 ದಿನಗಳನ್ನು ತೆಗೆದುಕೊಳ್ಳುತ್ತದೆ ಮತ್ತು ಲಾರ್ವಾ ಅವಧಿಯು 8-30 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ, ಆದರೆ ಕೋಶಾವಸ್ಥೆಯ ಅವಧಿಯು 5-10 ದಿನಗಳನ್ನು ತೆಗೆದುಕೊಳ್ಳುತ್ತದೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಪ್ರಬೇಧವನ್ನು ಆಯ್ದುಕೊಳ್ಳಿ.
  • ಸಸ್ಯಗಳ ಮಧ್ಯೆ ಹತ್ತಿರದ ಅಂತರ ಮತ್ತು ತಡವಾಗಿ ನೆಡುವುದನ್ನು ತಪ್ಪಿಸಿ.
  • ಉತ್ತಮ ಫಲವತ್ತತೆ ಮತ್ತು ನೀರಾವರಿ ಯೋಜನೆಯೊಂದಿಗೆ ದೊಡ್ಡ ಮತ್ತು ಪ್ರಮುಖ ಸಸ್ಯಗಳನ್ನು ಬೆಳೆಸಲು ಪ್ರಯತ್ನಿಸಿ.
  • ಸಾಪ್ತಾಹಿಕ ಮಧ್ಯಂತರದಲ್ಲಿ ನಿಮ್ಮ ಸಸ್ಯಗಳನ್ನು ಮೇಲ್ವಿಚಾರಣೆ ಮಾಡಿ ಮತ್ತು ಲಾರ್ವಾಗಳ ಉಪಸ್ಥಿತಿಯನ್ನು ಪರಿಶೀಲಿಸಿ.
  • ಚಿಟ್ಟೆಯ ಸಂಖ್ಯೆಯನ್ನು ಪರೀಕ್ಷಿಸಲು ಮತ್ತು ಕೊಲ್ಲಲು ಬೆಳಕು ಮತ್ತು ಫೆರೋಮೋನ್ ಬಲೆಗಳನ್ನು ಅಳವಡಿಸಬಹುದು.
  • ಪ್ರತಿ 2 ಹೆಕ್ಟೇರುಗಳಿಗೆ ಒಂದು ಬೆಳಕಿನ ಬಲೆಯನ್ನು ಅಳವಡಿಸಬೇಕು ಆದರೆ ಫೆರೋಮೋನ್ ಬಲೆಗಳನ್ನು ಹೆಕ್ಟೇರಿಗೆ 5 ಬಲೆಗಳಂತೆ 50 ಮೀ ದೂರದಲ್ಲಿ ಅಳವಡಿಸಬೇಕು.
  • ಪರಭಕ್ಷಕ ಪಕ್ಷಿಗಳಿಗೆ ಹೆಕ್ಟೇರಿಗೆ 50 ರಂತೆ ನೀವು ಪಕ್ಷಿಗಳು ಕೂರುವುದಕ್ಕ್ರ್ ಅಡ್ಡಗಂಬಿಗಳನ್ನು ಸಹ ಸ್ಥಾಪಿಸಬಹುದು.
  • ಜೈವಿಕ ಅಡ್ಡಗಂಬಿಗಳ ರೂಪದಲ್ಲಿ ಎತ್ತರದ ಹುಲ್ಲುಜೋಳವನ್ನು ಹೋಲಿಕೆ ಬೆಳೆಯಾಗಿ ಬೆಳೆಯಿರಿ.
  • ಲಾರ್ವಾಗಳು ಮತ್ತು ಪ್ರೌಢ ಕೀಟಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಸಂಗ್ರಹಿಸಿ ನಾಶಮಾಡಿ.
  • ಕೀಟವನ್ನು ಪರಭಕ್ಷಕಗಳಿಗೆ ಒಡ್ಡಲು ಸುಗ್ಗಿಯ ನಂತರ ನಿಮ್ಮ ಹೊಲವನ್ನು ಉಳುಮೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ