ಕಡಲೆ ಕಾಳು & ಬೇಳೆ

ಕಾಯಿ ಕೊರಕ

Helicoverpa armigera

ಕೀಟ

5 mins to read

ಸಂಕ್ಷಿಪ್ತವಾಗಿ

  • ಹೂವುಗಳು ಮತ್ತು ಕಾಯಿಗಳ ಮೇಲೆ ಕೀಟ ತಿಂದಿರುವುದರಿಂದ ಹಾನಿ.
  • ಕಾಯಿಗಳ ಮೇಲೆ ದುಂಡಗಿನ ರಂಧ್ರಗಳು.
  • ಎಲೆ ಉದುರುವುದಕ್ಕೆ ಕಾರಣವಾಗಬಹುದು.

ಇವುಗಳಲ್ಲಿ ಸಹ ಕಾಣಬಹುದು


ಕಡಲೆ ಕಾಳು & ಬೇಳೆ

ರೋಗಲಕ್ಷಣಗಳು

ಗಿಡದ ಎಲ್ಲಾ ಭಾಗಗಳನ್ನು ಲಾರ್ವಾಗಳು ತಿನ್ನುತ್ತವೆ. ಆದರೆ ಹೂವು ಮತ್ತು ಕಾಯಿಗಳಿಗೆ ಆದ್ಯತೆ. ಕಾಯಿಗಳಲ್ಲಿ ಕೀಟ ತಿಂದಿರುವ ಕಪ್ಪು ತೂತುಗಳು ಗೋಚರಿಸುತ್ತವೆ. ಕಾಯಿಯನ್ನು ತಿನ್ನುತ್ತಾ ಕೆಲವೊಮ್ಮೆ ಲಾರ್ವಾಗಳು ಕಾಯಿಗಳಿಂದ ನೇತಾಡುವುದನ್ನು ಕಾಣಬಹುದು. ಹೂವು ಅಥವಾ ಕಾಯಿಗಳು ಲಭ್ಯವಿಲ್ಲದಿದ್ದರೆ, ಲಾರ್ವಾಗಳು ಎಲೆ ಮತ್ತು ಚಿಗುರುಗಳನ್ನು ಸಹ ತಿನ್ನುತ್ತವೆ. ಸೋಂಕು ತೀವ್ರವಾಗಿದ್ದರೆ ಎಲೆ ಉದುರಿ ಹೋಗಬಹುದು.

Recommendations

ಜೈವಿಕ ನಿಯಂತ್ರಣ

ಈ ವಿಧಾನವು ಬೆಳೆಯ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ. ನಿಮ್ಮ ತೋಟದಲ್ಲಿ ಮತ್ತು ಅದರ ಸುತ್ತಲೂ ಕಾಯಿಕೊರಕದ ಪರಾವಲಂಬಿ ಕೀಟಗಳನ್ನು ಅಥವಾ ಕಾಯಿಕೊರಕವನ್ನು ಆಕ್ರಮಣ ಮಾಡುವ ಪ್ರಯೋಜನಕಾರಿ ಕೀಟಗಳ ಸಂಖ್ಯೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ. ಟ್ರೈಕೊಗ್ರಾಮಾ ಕಣಜಗಳು, ಮೈಕ್ರೊಪ್ಲೈಟಿಸ್, ಹೆಟಿರೊಪೆಲ್ಮಾ, ನೆಟೆಲಿಯ ಜಾತಿಯ ಕೀಟಗಳು, ಬಿಗ್ ಐಯ್ಡ್ ಬಗ್ ನಂತಹ ಪರಭಕ್ಷಕ ಕೀಟಗಳು, ಗ್ಲಾಸಿ ಶೀಲ್ಡ್ ಬಗ್ ಮತ್ತು ಸ್ಪೈನ್ಡ್ ಪ್ರೆಡೇಟರಿ ಶೀಲ್ಡ್ ಬಗ್ ಮುಂತಾದ ಕೀಟಗಳು ಕಾಯಿಕೊರಕದ ದಾಳಿಯನ್ನು ಮಿತಿಯಲ್ಲಿರಿಸುತ್ತವೆ. ಇರುವೆಗಳು ಮತ್ತು ಜೇಡಗಳು ಲಾರ್ವಾವನ್ನು ಆಕ್ರಮಿಸುತ್ತವೆ. NPV (ನ್ಯೂಕ್ಲಿಯೊಪೊಲಿಹೆಡ್ರೊವೈರಸ್), ಮೆಟಾರ್ಜಿಯಾಮ್ ಅನಿಸೊಪ್ಲಿಯಾ, ಬ್ಯುವೆರಿಯಾ ಬಾಸ್ಸಿನಾ ಮತ್ತು ಬ್ಯಾಸಿಲಸ್ ಥುರಿಂಜಿಯೆನ್ಸಿಸ್ಗಳನ್ನು ಆಧರಿಸಿದ ಜೈವಿಕ-ಕೀಟನಾಶಕಗಳನ್ನು ಸಹ ಬಳಸಬಹುದು. ಕೀಟವನ್ನು ನಿಯಂತ್ರಿಸಲು ಎಲೆಗಳ ಮೇಲೆ ಬೇವಿನ ಸಾರ ಮತ್ತು ಮೆಣಸಿನಕಾಯಿ ಅಥವಾ ಬೆಳ್ಳುಳ್ಳಿ ಸಾರಗಳಂತಹ ಗಿಡಗಳಿಂದ ತಯಾರಿಸಿದ ಉತ್ಪನ್ನಗಳನ್ನು ಸಿಂಪಡಿಸಬಹುದಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ರಾಸಾಯನಿಕ ವಿಧಾನದ ಅವಶ್ಯಕತೆಯನ್ನು ಕಂಡುಹಿಡಿಯಲು ಕೀಟಗಳ ದಾಳಿಯ ಮಟ್ಟವನ್ನು ಮೇಲ್ವಿಚಾರಣೆ ಮಾಡಿ. ಆರ್ಥಿಕ ಮಿತಿ ಮಟ್ಟವನ್ನು ಪ್ರತಿ ರಾತ್ರಿಗೆ 8 ಪತಂಗಗಳಿಗೆ ನಿಗದಿಪಡಿಸಲಾಗಿದೆ-ಮುಂದಿನ ಮೂರು ರಾತ್ರಿಗಳಲ್ಲಿ ಎಕರೆಗೆ 4 ಬಲೆಗಳು. ಈ ಕೀಟವು ಪೈರೆತ್ರಾಯ್ಡ್ ಆಧಾರಿತ ಕೀಟನಾಶಕಗಳಿಗೆ ಸ್ವಲ್ಪ ಮಟ್ಟಿಗೆ ಪ್ರತಿರೋಧ ಬೆಳೆಸಿಕೊಂಡಿದೆ.

ಅದಕ್ಕೆ ಏನು ಕಾರಣ

ಪ್ರೌಢ ಕೀಟಗಳು 1.5 ಸೆ.ಮೀ. ಉದ್ದವಿದ್ದು, 4 ಸೆಂ.ಮೀ. ಅಗಲದ ರೆಕ್ಕೆಗಳನ್ನು ಹೊಂದಿರುತ್ತವೆ. ದೇಹವು ಬೂದು ಮಿಶ್ರಿತ ಕಂದು ಬಣ್ಣದಲ್ಲಿದ್ದು ದೇಹದ ಮೇಲ್ಭಾಗದಲ್ಲಿ ರೋಮಗಳಿರುತ್ತವೆ. ತಿಳಿಗಂದು ಬಣ್ಣದ ಮುಂದಿನ ರೆಕ್ಕೆಗಳ ಅಂಚಿನಲ್ಲಿ ಅಲ್ಲಲ್ಲಿ ಕಪ್ಪು ಚುಕ್ಕೆಗಳಿರುವ ಗಾಢ ಕಂದು ಬಣ್ಣದ ಪಟ್ಟೆ ಇರುತ್ತದೆ. ಹಿಂದಿನ ರೆಕ್ಕೆಗಳು ಬೆಳ್ಳಗಿರುತ್ತವೆ. ರೆಕ್ಕೆಗಳ ಅಂಚು ಹಳದಿ ಬಣ್ಣದಲ್ಲಿರುತ್ತದೆ. ರೆಕ್ಕೆಯಲ್ಲಿ ಅಗಲವಾದ ಕಪ್ಪು ಪಟ್ಟೆಯಿದ್ದು, ಅಂಚಿನ ಬಳಿ ಬಿಳಿಚಿಕೊಂಡಿರುತ್ತದೆ. ಹೆಣ್ಣು ಕೀಟವು ಹೂಬಿಟ್ಟಿರುವ ಗಿಡಗಳ ಮೇಲೆ ಅಥವಾ ಇನ್ನೇನು ಹೂ ಬಿಡಲಿರುವ ಗಿಡಗಳ ಮೇಲೆ ಹಳದಿ ಮಿಶ್ರಿತ ಬಿಳಿಯ ಬಣ್ಣದ ಮೊಟ್ಟೆಗಳನ್ನಿಡುತ್ತದೆ. ಲಾರ್ವಾದ ಲಕ್ಷಣಗಳು ಬೆಳವಣಿಗೆಯ ಹಂತಕ್ಕನುಗುಣವಾಗಿ ಬೇರೆಬೇರೆಯಾಗಿದ್ದರೂ, ಎಲ್ಲ ಹಂತದಲ್ಲೂ ಅವುಗಳ ಹೊಟ್ಟೆಯ ಭಾಗ ಬಿಳಿಚಿಕೊಂಡಿರುತ್ತದೆ. ಅವು ಬೆಳೆದಂತೆ, ಅವುಗಳ ದೇಹದಲ್ಲಿ ಚಿಕ್ಕ ಕಪ್ಪು ಚುಕ್ಕೆಗಳು ಕಾಣಿಸಿಕೊಳ್ಳುತ್ತವೆ ಹಾಗೂ ಹೊಳೆಯುವ ಬಿಳಿ ಬಣ್ಣದ ಅಥವಾ ಹಳದಿ ಬಣ್ಣದ ಪಟ್ಟೆಗಳು ಮಗ್ಗಲಿನುದ್ದಕ್ಕೂ ಬೆಳೆಯುತ್ತವೆ. ಜೀವನಚಕ್ರದ ಹಂತಗಳ ಅವಧಿಯು ವಾತವರಣದ ಜೊತೆ ಬಿಗಿಯಾಗಿ ಬೆಸೆದುಕೊಂಡಿದೆ, ವಿಶೇಷವಾಗಿ ತಾಪಮಾನ ಮತ್ತು ಆಹಾರ ದೊರೆಯುವುದರ ಮೇಲೆ ಬಹಳ ಅವಲಂಬಿಸಿದೆ.


ಮುಂಜಾಗ್ರತಾ ಕ್ರಮಗಳು

  • ಸಹಿಷ್ಣು ಪ್ರಭೇದವನ್ನು ಆರಿಸಿಕೊಳ್ಳಿ.(ಉದಾ : Co-6 ಅಥವಾ Co-7).
  • ಬಿತ್ತನೆಯ ಸಮಯದಲ್ಲಿ ಗಿಡಗಳ ನಡುವೆ ಕನಿಷ್ಟ ಅಂತರವನ್ನು ಇರಿಸಿ.
  • ಗಡಿ ಬೆಳೆಗಳಾದ ತೊಗರಿ, ಅಲಸಂದೆ ಅಥವಾ ಬೆಳೆಗಳನ್ನು ನೆಡುವುದರ ಮೂಲಕ ಪ್ರಯೋಜನಕಾರಿ ಕೀಟಗಳ ಸಂಖ್ಯೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.
  • ಕೀಟವನ್ನು ಆಕರ್ಷಿಸಲು ನಿಮ್ಮ ಹೊಲದ ಸುತ್ತಲೂ ಬಲೆ ಬೆಳೆಗಳನ್ನು (ಕ್ಯಾಸ್ಟರ್ ಅಥವಾ ಕ್ರೈಸಾಂಥೆಮಮ್ ಮಾರಿಗೋಲ್ಡ್) ಬೆಳೆಸಿ.
  • ಎಕರೆಗೆ 10 / ಪಕ್ಷಿ ನಿಲುಗಂಬಿಗಳನ್ನು ಸ್ಥಾಪಿಸಿ.
  • ನಿಮ್ಮ ಸಸ್ಯಗಳನ್ನು ಆಗಾಗ್ಗೆ ಮೇಲ್ವಿಚಾರಣೆ ಮಾಡಿ ಮತ್ತು ಲಾರ್ವಾಗಳ ಉಪಸ್ಥಿತಿಯನ್ನು ಪರಿಶೀಲಿಸಿ.
  • ಬೆಳಕಿನ ಬಲೆಗಳನ್ನು ಬಳಸಿ (1/5 ಎಕರೆ) ಮತ್ತು ಸಂಜೆ ಸಮಯದಲ್ಲಿ ಗಮನಿಸಿ.
  • ಪ್ಯಾರಾ-ಫೆರೋಮೋನ್ ಬಲೆಗಳನ್ನು ಬಳಸಿ (5/1 ಎಕರೆ).
  • ಉತ್ತಮ ಫಲವತ್ತತೆ ಕಾಪಾಡಿಕೊಳ್ಳಿ ಹಾಗೂ ದೊಡ್ಡ ಪ್ರಮುಖ ಗಿಡಗಳನ್ನು ಬೆಳೆಯಲು ಪ್ರಯತ್ನಿಸಿ.
  • ಲಾಭದಾಯಕ ಕೀಟಗಳ ಸಂಖ್ಯೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸಿ.
  • ಅತಿಯಾದ ನೀರಾವರಿಯಿಂದ ಕೀಟಗಳಿಗೆ ಅನುಕೂಲವಾಗುವುದರಿಂದ ನೀರಾವರಿ ಮಿತಿಯಲ್ಲಿರಲಿ.
  • ಪರಭಕ್ಷಕಗಳಿಗೆ ಲಾರ್ವಾವನ್ನು ಒಡ್ಡಲು ಕೊಯ್ಲು ಮಾಡಿದ ನಂತರ ನೆಲವನ್ನು ಕನಿಷ್ಠ 10 ಸೆಂ ಮೀ ಅಳಕ್ಕೆ ಉಳುಮೆ ಮಾಡಿ.
  • ಕೀಟಗಳ ಸಂಖ್ಯೆ ಹೆಚ್ಚುವುದನ್ನು ತಡೆಯಲು ಅವುಗಳಿಗೆ ಆಶ್ರಯ ಕೊಡದ ಗಿಡಗಳೊಂದಿಗೆ ಸರದಿ ಬೆಳೆ ಮಾಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ