ಹತ್ತಿ

ಹತ್ತಿ ಜೀರುಂಡೆ (ಬೋಲ್ ವೀವೆಲ್)

Anthonomus grandis

ಕೀಟ

5 mins to read

ಸಂಕ್ಷಿಪ್ತವಾಗಿ

  • ಮೊಗ್ಗಿನಲ್ಲಿ ಸಣ್ಣ ತೂತುಗಳು ಬಿದ್ದು ಮೊಗ್ಗು ಕಂದು ಬಣ್ಣಕ್ಕೆ ತಿರುಗಿ ಉದುರುತ್ತದೆ.
  • ಹೂವು ಹಳದಿ ಬಣ್ಣಕ್ಕೆ ತಿರುಗಿ ಅಕಾಲಿಕವಾಗಿ ಉದುರುತ್ತದೆ.
  • ಬೀಜದ ಬೆಳವಣಿಗೆ ಕುಂಠಿತವಾಗುತ್ತದೆ ಅಥವಾ ಬೀಜ ಕೊಳೆಯುತ್ತದೆ.

ಇವುಗಳಲ್ಲಿ ಸಹ ಕಾಣಬಹುದು

1 ಬೆಳೆಗಳು

ಹತ್ತಿ

ರೋಗಲಕ್ಷಣಗಳು

ಪ್ರೌಢ ಕೀಟಗಳು ಬೆಳೆಯುತ್ತಿರುವ ಹೂವು ಅಥವಾ ಹಣ್ಣಿನ ರಚನೆಗಳನ್ನು ಆಹಾರ ಮಾಡಿಕೊಳ್ಳುತ್ತವೆ. ಕೆಲವೊಮ್ಮೆ ಎಲೆತೊಟ್ಟುಗಳನ್ನು ಅಥವಾ ಚಿಗುರನ್ನು ಕೂಡ ತಿನ್ನುತ್ತದೆ. ದಾಳಿಯ ಆರಂಭಿಕ ಹಂತದಲ್ಲಿ ಮೊಗ್ಗಿನ ಬದಿಯಲ್ಲಿ ಕೀಟ ತಿಂದದ್ದರಿಂದಾದ ಚಿಕ್ಕ ತೂತುಗಳಿಂದ ಅಥವಾ ಮೊಟ್ಟೆಯಿಟ್ಟ ಸ್ಥಳದಲ್ಲಿನ ಉಬ್ಬಿದ ಭಾಗಗಳಿಂದ ರೋಗವನ್ನು ಗುರುತಿಸಬಹುದು. ಮೊಗ್ಗುಗಳಿಗಾದ ಹಾನಿಯಿಂದ ಅವು ಬಣ್ಣಗೆಡುತ್ತವೆ ಹಾಗೂ ಹೂಗಳು ಅಥವಾ ಸಣ್ಣ ಕಾಯಿಗಳು ಅಕಾಲಿಕವಾಗಿ ಉದುರುತ್ತವೆ. ದೊಡ್ಡದಾದ, ತೂತು ಬಿದ್ದ ಕಾಯಿಗಳು ಸಾಮಾನ್ಯವಾಗಿ ಗಿಡದಲ್ಲಿಯೇ ಉಳಿಯುತ್ತವೆ. ಇವು ಒಡೆಯುವುದಿಲ್ಲ. ಅಥವಾ, ಅವನ್ನು ಅವಕಾಶಕ್ಕೆ ಹೊಂಚುತ್ತಿರುವ ರೋಗಕಾರಕ ಕೀಟಗಳು ಆಕ್ರಮಿಸಬಹುದು. ಇದರಿಂದ ಹತ್ತಿ ಕೊಳೆಯುತ್ತದೆ. ಗಿಡದ ಬೆಳವಣಿಗೆಯ ಸಮಯದಲ್ಲಿ ಎಲೆ ತೊಟ್ಟುಗಳನ್ನು ತಿನ್ನುವ ಪ್ರೌಢ ಕೀಟಗಳು ಎಲೆಗಳು ಬಾಡಿ ಸೊರಗುವುದಕ್ಕೆ ಕಾರಣವಾಗುತ್ತವೆ. ಈ ಎಲೆಗಳು ಬಾಡಿದರೂ ಕಾಂಡಗಳಿಗೆ ಜೋತುಕೊಂಡಿರುತ್ತವೆ ಈ ಲಕ್ಷಣವನ್ನು ಸಾಮಾನ್ಯವಾಗಿ "ಕಪ್ಪು ಬಾವುಟ" (ಬ್ಲಾಕ್ ಫ್ಲಾಗ್) ಎಂದು ಕರೆಯಲಾಗುತ್ತದೆ.

Recommendations

ಜೈವಿಕ ನಿಯಂತ್ರಣ

ಕಾಟ್ಟೊಲಾಕಸ್ ಗ್ರ್ಯಾಂಡಿಸ್ಸಿನಂತಹ ಪರಾವಲಂಬಿ ಕಣಜಗಳನ್ನು ಈ ಕೀಟದ ನಿಯಂತ್ರಣಕ್ಕೆ ಬಿಡಬಹುದು ಅಥವಾ ಇವು ಈಗಾಗಲೇ ತೋಟದಲ್ಲಿದ್ದರೆ ಅವುಗಳ ಬೆಳವಣಿಗೆಯನ್ನು ಉತ್ತೇಜಿಸಬಹುದು. ಇದಲ್ಲದೆ, ಬಯೋವೆರಿಯಾ ಬಾಸ್ಸಿಯಾನ, ಬ್ಯಾಕ್ಟೀರಿಯಮ್ ಬಾಸಿಲಸ್ ತುರಿಂಜಿಯೆನ್ಸಿಸ್ ಅಥವಾ ಚಿಲೊ ಇರ್ವೈಡೆಸೆಂಟ್ ವೈರಸ್ (ಸಿಐವಿ) ಅನ್ನು ಆಧರಿಸಿದ ಸಾವಯವ ಕೀಟನಾಶಕಗಳನ್ನು ಬಳಸಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಕೃತಕವಾಗಿ ತಯಾರಿಸಿದ ಪೈರೆಥ್ರಾಯ್ಡ್ ಕೀಟನಾಶಕಗಳು ಮತ್ತು ಡೆಲ್ಟಾಮೆಥ್ರೈನ್ ಮತ್ತು ಫಿಪನಿಲ್ಲಿನಂತಹ ಪದಾರ್ಥಗಳನ್ನು ಈ ಕೀಟಗಳ ನಿಯಂತ್ರಣಕ್ಕೆ ಬಳಸಬಹುದು. ತೇವಾಂಶ ಹೆಚ್ಚಿರುವ ಪರಿಸ್ಥಿತಿಯಲ್ಲಿ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿದೆ. ಫೆರೋಮೋನ್ ಬಲೆಗಳನ್ನು ಕೀಟದ ಮೇಲ್ವಿಚಾರಣೆ ಮತ್ತು ನಿಯಂತ್ರಣಕ್ಕಾಗಿ ಬಳಸಬಹುದು (ಕೀಟನಾಶಕ ಅಥವಾ ಸಾವಯವ-ಏಜೆಂಟ್ ಜೊತೆಯಲ್ಲಿ ಸೇರಿಸಿ ಬಳಸಬಹುದು)

ಅದಕ್ಕೆ ಏನು ಕಾರಣ

ಆಂತೊನಾಮಸ್ ಗ್ರಾಂಡಿಸ್ಸ್ ಎಂಬ ಬೋಲ್ ವೀವೆಲ್ ನ ಪ್ರೌಢ ಮತ್ತು ಮರಿ ಕೀಟಗಳೆರಡೂ ಹಾನಿ ಮಾಡುತ್ತವೆ. ಪ್ರೌಢ ಜೀರುಂಡೆಯು ಸುಮಾರು 6 ಮಿಮೀ ಉದ್ದ ಇರುತ್ತದೆ. ಅದು ಉದ್ದವಾದ ತೆಳ್ಳಗಿನ ಮೂಗಿನ ಭಾಗವನ್ನು ಹೊಂದಿದೆ. ಇದು ಬೇರೆ ಬೇರೆ ಬಣ್ಣದಲ್ಲಿರುತ್ತದೆ; ಗಾಢ ಕಂದು ಮಿಶ್ರಿತ ಕೆಂಪು ಬಣ್ಣ ಅಥವಾ ಸಂಪೂರ್ಣ ಕಂದು ಅಥವಾ ಕಪ್ಪು ಬಣ್ಣದ್ದಾಗಿರುತ್ತದೆ. ಹತ್ತಿಯ ತೋಟಗಳಲ್ಲಿ ಅಥವಾ ತೋಟದ ಸಮೀಪವಿರುವ ಬರಿದಾದ ಪ್ರದೇಶಗಳಲ್ಲಿ ಅವುಗಳು ಚಳಿಗಾಲವನ್ನು ಕಳೆಯುತ್ತವೆ. ಕುಂಠಿತ ಬೆಳವಣಿಗೆಯ ಈ ಅವಧಿಯ ನಂತರ, ವಸಂತಕಾಲದ ಆರಂಭದಿಂದ ನಡುಬೇಸಗೆಯ ಅವಧಿಯಲ್ಲಿ ಹೊರ ಬಂದು ಹತ್ತಿ ತೋಟವನ್ನು ಪ್ರವೇಶಿಸುತ್ತವೆ. ಹತ್ತಿ ಕಾಯಿ ಬೆಳೆಯುವ ವಸಂತ ಋತುವಿನ ಸಮಯದಲ್ಲಿ ಇವುಗಳ ಸಂಖ್ಯೆ ಅತಿ ಹೆಚ್ಚಿರುತ್ತದೆ. ಹೆಣ್ಣು ಕೀಟವು ಬೆಳೆಯುತ್ತಿರುವ ಕಾಯಿಗಳಲ್ಲಿ ಅದು ಮೊಟ್ಟೆಗಳನ್ನು ಇಡುತ್ತದೆ. ಸಾಮಾನ್ಯವಾಗಿ ಪ್ರತಿ ಹೂವಿನಲ್ಲೂ ಒಂದು ಮೊಟ್ಟೆಯನ್ನಿಡುತ್ತದೆ. ಕೆನೆ ಬಿಳಿ ಬಣ್ಣದ, C ಆಕಾರದ ಲಾರ್ವಾಗಳಿಗೆ ಕಾಲುಗಳಿರುವುದಿಲ್ಲ. ಇವು ಸುಮಾರು 10 ದಿನಗಳವರೆಗೆ ಹೂವು ಅಥವಾ ಕಾಯಿಯನ್ನು ತಿಂದುಕೊಂಡಿದ್ದು, ಬಳಿಕ ಪ್ಯೂಪಾ ಹಂತಕ್ಕೆ ಬೆಳೆಯುತ್ತವೆ. ಬೇಸಗೆಯಲ್ಲಿ ಮೊಟ್ಟೆಯಿಂದ ಪ್ರೌಢ ಕೀಟ ಹೊರ ಬರಲು ಮೂರು ವಾರ ಬೇಕು. ಈ ಕೀಟವು ಪ್ರತಿ ವರ್ಷ 8 ರಿಂದ 10 ಪೀಳಿಗೆಯವರೆಗೆ ತಲುಪಬಹುದು.


ಮುಂಜಾಗ್ರತಾ ಕ್ರಮಗಳು

  • ರೋಗಪೀಡಿತ ಬೆಳೆಯ ಬೇರ್ಪಡಿಕೆಗೆ ಸಂಬಂಧಿಸಿದಂತೆ ನಿಮ್ಮ ದೇಶದ ನಿಬಂಧನೆಗಳನ್ನು ಪರಿಶೀಲಿಸಿ.
  • ತಡವಾಗಿ ಬಿತ್ತನೆ ಮಾಡುವುದರಿಂದ ಕೀಟಗಳ ಸಂಖ್ಯೆ ಅತಿಯಿರುವ ಸಮಯವನ್ನು ತಪ್ಪಿಸಬಹುದು.
  • ನಿಮ್ಮ ಪ್ರದೇಶದಲ್ಲಿ ಲಭ್ಯವಿದ್ದರೆ ನಿರೋಧಕ ಪ್ರಭೇದಗಳನ್ನು ಅಥವಾ ರೋಗ ತಡೆದುಕೊಳ್ಳುವ ಶಕ್ತಿಯಿರುವ ಪ್ರಭೇದಗಳನ್ನು ಬಳಸಿ (ಮಾರುಕಟ್ಟೆಯಲ್ಲಿ ಹಲವು ಪ್ರಭೇದಗಳು ಲಭ್ಯ ಇವೆ).
  • ನಿಯಮಿತವಾಗಿ ತೋಟದ ಮೇಲ್ವಿಚಾರಣೆ ಮಾಡಿ, ಕೀಟದ ಇರುವಿಕೆಯ ಕುರುಹನ್ನು ಪರಿಶೀಲಿಸಿ.
  • ರಸಗೊಬ್ಬರದ ಅತಿಯಾದ ಬಳಕೆ ಮತ್ತು ಅತಿಯಾದ ನೀರಾವರಿ ತಪ್ಪಿಸಿ.
  • ಪೂರ್ತಿ ಬೆಳೆಯದ ಹಂತದಲ್ಲಿ ಕೀಟಗಳು ಶಾಖ ಮತ್ತು ಒಣ ವಾತಾವರಣಕ್ಕೆ ಬೇಗನೆ ಪ್ರತಿಕ್ರಿಯಿಸುತ್ತವೆ.
  • ಆದ್ದರಿಂದ, ಸಸ್ಯದ ಉಳಿಕೆಗಳನ್ನು ತೋಟದಿಂದ ತೆಗೆದುಹಾಕಿ ಉಳಿದಿರುವ ಲಾರ್ವಾ ಅಥವಾ ಪ್ಯುಪೆಯನ್ನು (ಪೊರೆಹುಳು) ಪ್ರತಿಕೂಲ ವಾತಾವರಣಕ್ಕೆ ಒಡ್ಡಿ.
  • ಕೊಯ್ಲಿನ ಬಳಿಕ ಗಿಡದ ಉಳಿಕೆಯನ್ನು ಉಳಬೇಡಿ, ಬದಲಿಗೆ ತೋಟದಿಂದ ಉಳಿಕೆಯನ್ನು ತೆಗೆದುಹಾಕಿ.
  • ಜಮೀನು ಅಥವಾ ಗದ್ದೆಗಳ ನಡುವೆ ಸೋಂಕು ತಗುಲಿರಬಹುದಾದ ವಸ್ತುಗಳನ್ನು ಸಾಗಿಸಬೇಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ