ಹತ್ತಿ

ಕಂದು ಸ್ಟಿಂಕ್ ಬಗ್

Euschistus servus

ಕೀಟ

5 mins to read

ಸಂಕ್ಷಿಪ್ತವಾಗಿ

  • ಬೀಜಕೋಶಗಳ ಮೇಲ್ಮೈ ಬಣ್ಣಗೆಟ್ಟು ಮಬ್ಬಾಗುತ್ತವೆ.
  • ಬೀಜಗಳು ಮುರುಟಿಕೊಂಡು ಎಳೆಯ ಬೀಜಕೋಶಗಳು ಉದುರಬಹುದು.
  • ಬೀಜಕೋಶಗಳ ಒಳಗಿನ ಗೋಡೆಗಳಲ್ಲಿ ಸಣ್ಣ ಗಡ್ಡೆಗಳು ಬೆಳೆಯುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಹತ್ತಿ

ರೋಗಲಕ್ಷಣಗಳು

ಕೀಟಗಳು ಹತ್ತಿಯ ಮೊಗ್ಗು (Square) ಹಾಗೂ ಹತ್ತಿಯ ನಾರು ಮತ್ತು ಬೀಜಗಳನ್ನು ಹೊಂದಿರುವ ಬೀಜಕೋಶವನ್ನು ತಿಂದು ಬದುಕುತ್ತವೆ. ಅವು ಮುಖ್ಯವಾಗಿ ಬೆಳೆದ ಬೀಜಕೋಶಗಳ ಮೇಲೆ ದಾಳಿ ಮಾಡುತ್ತವೆ, ನಂತರ ಅವುಗಳ ಮೇಲ್ಮೈ ಬಣ್ಣಗೆಟ್ಟು ಮಬ್ಬಾಗುತ್ತವೆ. ದಾಳಿಗೊಳಗಾದ ಬೀಜಕೋಶಗಳೊಳಗಿನ ಬೀಜಗಳು ಮುರುಟಿಕೊಂಡು ಆ ಬೀಜಕೋಶಗಳು ಅರಳುವುದಿಲ್ಲ. ಹೊಸ ಬೀಜಕೋಶಗಳು ಹಾನಿಗೊಳಗಾದರೆ, ಅವುಗಳು ಉದುರಬಹುದು. ಹೊರಗೆ ಗಾಯಗಳು ಕಾಣುವ ಕಡೆಯೆಲ್ಲ ಒಳಗಿನಿಂದ ಗಡ್ಡೆ ಬೆಳೆದಿರುತ್ತದೆ, ನಿರ್ದಿಷ್ಟವಾಗಿ ಹೇಳುವುದಾದರೆ ಕೀಟವು ಭೇದಿಸಿದ ಸ್ಥಳದಲ್ಲಿ ಹೀಗಾಗುತ್ತದೆ. ಕೀಟವು ಬೀಜವನ್ನು ತಿಂದರೆ ಇಳುವರಿ ಕಡಿಮೆಯಾಗುತ್ತದೆ. ಕೀಟವು ತಿಂದ ಕಡೆ ಹತ್ತಿಯ ಬಣ್ಣವೂ ಕೆಡುವುದರಿಂದ ಬೆಳೆಯ ಗುಣಮಟ್ಟದ ದೃಷ್ಟಿಯಿಂದ ಇದು ನಷ್ಟವೇ. ಅಲ್ಲದೆ ಅವಕಾಶಕ್ಕೆ ಹೊಂಚುವ ಬೀಜಕೋಶ ಕೊಳೆಯುವಂತೆ ಮಾಡುವ ಕೆಲವು ಜೀವಿಗಳಿಗೆ ಸ್ಟಿಂಕ್ ಬಗ್ ಕೀಟಗಳು ದಾರಿ ಮಾಡಿಕೊಡುತ್ತವೆ.

Recommendations

ಜೈವಿಕ ನಿಯಂತ್ರಣ

ಪರಾವಲಂಬಿ ಟ್ಯಾಕಿನಿಡ್ ನುಸಿಗಳು ಮತ್ತು ಕಣಜಗಳು ಸ್ಟಿಂಕ್ ಬಗ್ ಕೀಟದ ಮೊಟ್ಟೆಗಳ ಮೇಲೆ ತಮ್ಮ ಮೊಟ್ಟೆಗಳನ್ನಿಟ್ಟು, ಬಳಿಕ ಅವುಗಳ ಮರಿಹುಳಗಳು ಸ್ಟಿಂಕ್ ಬಗ್ಗಿನ ಲಾರ್ವಾವನ್ನು ತಿನ್ನುತ್ತವೆ. ಹಕ್ಕಿಗಳು ಮತ್ತು ಜೇಡಗಳು ಕೂಡ ಕೀಟ ದಾಳಿಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಯೂಕಲಿಪ್ಟಸ್ ಯೂರೋಗ್ರಾಂಡಿಸ್ಸಿನ (ನೀಲಗಿರಿಯ ಒಂದು ಕಸಿ ಜಾತಿ) ಎಣ್ಣೆ ಪ್ರೌಢ ಕೀಟ ಮತ್ತು ಇನ್ನೂ ಬಲಿಯದ ಕೀಟ - ಎರಡಕ್ಕೂ ವಿಷಕಾರಿಯಾಗಿದೆ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಬೀಜಗಳನ್ನು ಪೈರೆಥ್ರಾಯ್ಡ್ಸ್ ಗುಂಪಿನ ಕೀಟನಾಶಕಗಳಿಂದ ಸಂಸ್ಕರಿಸುವುದರಿಂದ ಸೋಂಕನ್ನು ಹಿಡಿತದಲ್ಲಿಡಬಹುದು ಹಾಗೂ ಸಸಿಗಳಿಗೆ ಹಾನಿಯಾಗುವುದನ್ನು ತಪ್ಪಿಸಬಹುದು. ಡೈಕ್ರೊಟೋಫೋಸ್ ಮತ್ತು ಬೈಫೆಂಥ್ರಿನ್ಗಳನ್ನು ಆಧರಿಸಿದ ಕೀಟನಾಶಕಗಳನ್ನು ಎಲೆಗಳಿಗೆ ಸಿಂಪಡಿಸುವುದರಿಂದ ಕೀಟಗಳ ಸಂಖ್ಯೆಯನ್ನು ಹಿಡಿತದಲ್ಲಿಡಬಹುದು.

ಅದಕ್ಕೆ ಏನು ಕಾರಣ

ಕಾಲುವೆಯ ದಡಗಳಲ್ಲಿ, ಬೇಲಿ ಸಾಲುಗಳಲ್ಲಿ, ಸತ್ತ ಕಳೆಗಳು, ಹುಲ್ಲು ಅಥವಾ ಆ ರೀತಿಯ ಹೆಚ್ಚು ಎತ್ತರಕ್ಕೆ ಬೆಳೆಯದ ಗಿಡಗಳಲ್ಲಿ, ಕಲ್ಲುಗಳು ಮತ್ತು ಮರಗಳ ತೊಗಟೆಯಂತಹ ಸಂರಕ್ಷಿತ ಪ್ರದೇಶಗಳಲ್ಲಿ ಪ್ರೌಢ ಕೀಟಗಳು ಚಳಿಗಾಲವನ್ನು ಕಳೆಯುತ್ತವೆ. ವಸಂತಕಾಲದ ಆರಂಭದ ಬೆಚ್ಚಗಿನ ದಿನಗಳಲ್ಲಿ ತಾಪಮಾನವು 21°C ಗಿಂತ ಹೆಚ್ಚಾಗುವಾಗ ಅವು ಮತ್ತೆ ಸಕ್ರಿಯವಾಗುತ್ತವೆ. ಸಾಮಾನ್ಯವಾಗಿ ಮೊದಲ ಪೀಳಿಗೆಯ ಕೀಟಗಳು ಕಾಡು ಬೆಳೆಗಳಲ್ಲಿ ಆಶ್ರಯ ಪಡೆಯುತ್ತವೆ. ಆದರೆ ಎರಡನೆಯ ಪೀಳಿಗೆಯು ಸಾಮಾನ್ಯವಾಗಿ ಕೃಷಿ ಬೆಳೆಗಳ ಮೇಲೆ ಬೆಳೆಯುತ್ತದೆ. ಪ್ರತಿ ಹೆಣ್ಣು ಕೀಟವು 100 ದಿನಗಳ ಅವಧಿಯಲ್ಲಿ 18 ಮೊಟ್ಟೆ ಪುಂಜಗಳನ್ನಿಡುತ್ತದೆ. ಪ್ರತಿ ಪುಂಜದಲ್ಲೂ ಸರಾಸರಿ 60 ಮೊಟ್ಟೆಗಳಿರುತ್ತವೆ. ಪ್ರೌಢ ಕೀಟವು ಹಾರಾಡುವುದರಲ್ಲಿ ಬಹಳ ಸಮರ್ಥವಿದ್ದು ಕಳೆ ಮತ್ತು ಇತರ ಪರ್ಯಾಯ ಆಶ್ರಯದಾತ ಗಿಡಗಳ ನಡುವೆ ಸುಲಭವಾಗಿ ಚಲಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಕೀಟಗಳ ಸಂಖ್ಯೆ ಅಧಿಕವಿರುವ ಸಮಯವನ್ನು ತಪ್ಪಿಸಲು ಬೇಗನೆ ನೆಡಿ.
  • ನಿಯಮಿತವಾಗಿ ಕೀಟಗಳ ಇರುವಿಕೆಗಾಗಿ ಮೇಲ್ವಿಚಾರಣೆ ಮಾಡಿ.
  • ತೋಟದಲ್ಲಿ ಕಳೆ ಬೆಳೆಯಲು ಬಿಡಬೇಡಿ.
  • ತೋಟಗಳ ನಡುವೆ ತಡೆಗೋಡೆ ಇದ್ದರೆ ಕೀಟಗಳು ವಲಸೆ ಬರುವುದನ್ನು ತಪ್ಪಿಸಬಹುದು.
  • ಕೊಯ್ಲಿನ ಬಳಿಕ ಗಿಡದ ಉಳಿಕೆಗಳನ್ನು ತೋಟದಿಂದ ತೆಗೆದುಹಾಕಿ.
  • ನೆಲವನ್ನು ಉಳದೆಯೇ ಬಿಡುವುದರಿಂದ ಹಾಗೂ ಗಿಡದ ಸುತ್ತ ಹಸಿ ಎಲೆಗಳನ್ನು ಹಾಗೆಯೇ ಬಿಡುವುದರಿಂದ ಸೋಂಕು ತಗುಲುವ ಸಾಧ್ಯತೆ ಹೆಚ್ಚು.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ