ಇತರೆ

ಮೆಕ್ಕೆ ಜೋಳದ ಕಾಂಡ ಕೊರೆಯುವ ಹುಳು

Elasmopalpus lignosellus

ಕೀಟ

5 mins to read

ಸಂಕ್ಷಿಪ್ತವಾಗಿ

  • ಮರಿಹುಳುಗಳು ಸುಳಿಗಳು, ಜೊಂಡುಗಳು ಮತ್ತು ಕಾಂಡಗಳ ತಳದಲ್ಲಿ ಕೊರೆಯುತ್ತವೆ.
  • ಅವು ಕಾಂಡಗಳ ಒಳಗಿನ ಅಂಗಾಂಶಗಳನ್ನು ತಿನ್ನುತ್ತವೆ, ಇದರಿಂದ ಅವು ಒಳಹೊಕ್ಕ ತೂತುಗಳ ಸುತ್ತಲೂ ಹೇರಳವಾದ ಲಾರ್ವಾ ಹಿಕ್ಕೆ ಕಂಡುಬರುತ್ತದೆ (ಸತ್ತ ಹೃದಯ ಎಂದು ಕರೆಯಲ್ಪಡುವ ಲಕ್ಷಣ).
  • ಸಸ್ಯಗಳು ಸಾಮಾನ್ಯವಾಗಿ ವಿರೂಪವಾಗಿರುತ್ತವೆ, ಮತ್ತು ಕೆಲವು ತೆನೆಗಳೊಂದಿಗೆ ಕುಂಠಿತ ಬೆಳವಣಿಗೆಯನ್ನು ತೋರಿಸುತ್ತವೆ.
  • ಇತರ ರೋಗಲಕ್ಷಣಗಳೆಂದರೆ ಸಸ್ಯಗಳು ಬಾಡುವುದು ಮತ್ತು ಒಣಗುವುದು, ಕೆಲವೊಮ್ಮೆ ಸಸ್ಯ ನೆಲಕ್ಕೆ ಬಾಗುತ್ತದೆ ಅಥವಾ ಸತ್ತು ಹೋಗುತ್ತದೆ.

ಇವುಗಳಲ್ಲಿ ಸಹ ಕಾಣಬಹುದು


ಇತರೆ

ರೋಗಲಕ್ಷಣಗಳು

ಎಲೆಸ್ಮೋಪಾಲ್ಪಾಸ್ ಲಿಗ್ನೋಸೆಲ್ಲಸ್ ನ ಮರಿಹುಳುಗಳು ಮೆಕ್ಕೆ ಜೋಳದ ಎಲೆಗಳನ್ನು ತಿನ್ನುತ್ತವೆ ಆದರೆ ಅವು ಸುಳಿಗಳು ಮತ್ತು ಕಾಂಡಗಳ ತಳದೊಳಗೆ ಕೊರೆದುಕೊಂಡು ಹೋದಾಗ ಸಾಮಾನ್ಯವಾಗಿ ಹೆಚ್ಚು ಹಾನಿಯುಂಟಾಗುತ್ತದೆ, ಸಾಮಾನ್ಯವಾಗಿ ತಡವಾದ ಮೊಳಕೆ ಹಂತದಲ್ಲಿ. ಅವು ಕಾಂಡಗಳ ಒಳಗಿನ ಅಂಗಾಂಶಗಳನ್ನು ತಿನ್ನುತ್ತವೆ, ಇದರಿಂದ ಅವು ಒಳಹೊಕ್ಕ ತೂತುಗಳ ಸುತ್ತಲೂ ಹೇರಳವಾದ ಲಾರ್ವಾ ಹಿಕ್ಕೆ ಕಂಡುಬರುತ್ತದೆ. ರೋಗಲಕ್ಷಣಗಳ ಈ ಗುಂಪನ್ನು ಸಾಮಾನ್ಯವಾಗಿ ಸತ್ತ ಹೃದಯ ಎಂದು ಕರೆಯಲಾಗುತ್ತದೆ. ಸಸ್ಯಗಳು ಸಾಮಾನ್ಯವಾಗಿ ವಿರೂಪವಾಗಿರುತ್ತವೆ ಮತ್ತು ಕೆಲವು ತೆನೆಗಳೊಂದಿಗೆ ಕುಂಠಿತ ಬೆಳವಣಿಗೆಯನ್ನು ತೋರಿಸುತ್ತವೆ. ನೀರು ಮತ್ತು ಪೌಷ್ಠಿಕಾಂಶದ ಸಾಗಣೆಗೆ ಅಡ್ಡಿಯುಂಟಾಗುವುದರಿಂದ ಸಸ್ಯಗಳು ಬಾಡುತ್ತವೆ ಮತ್ತು ಒಣಗುತ್ತವೆ, ಕೆಲವೊಮ್ಮೆ ಸಸ್ಯ ನೆಲಕ್ಕೆ ಬಾಗುತ್ತದೆ ಅಥವಾ ಸತ್ತು ಹೋಗುತ್ತದೆ. ಉಷ್ಣತೆಯುಳ್ಳ, ಒಣ ಸ್ಥಿತಿಗತಿಗಳಿಗೆ ಜೋಳದ ಕಾಂಡ ಕೊರೆಯುವ ಹುಳುಗಳು ಹೊಂದಿಕೊಂಡಿರುತ್ತವೆ ಮತ್ತು ಅಸಾಮಾನ್ಯವಾದ ಬೆಚ್ಚಗಿನ, ಒಣ ಹವಾಮಾನದ ನಂತರ ಹೆಚ್ಚು ಹಾನಿಯುಂಟುಮಾಡುತ್ತವೆ.

Recommendations

ಜೈವಿಕ ನಿಯಂತ್ರಣ

ಅನೇಕ ಪರಭಕ್ಷಕ ಶತ್ರುಗಳು ಇವೆ, ಆದರೆ ಕಾಂಡಗಳು ಮತ್ತು ಸುಳಿಗಳ ಒಳಗೆ ಲಾರ್ವ ದ ಉತ್ತಮ ಸಂರಕ್ಷಿತ ಆವಾಸಸ್ಥಾನ ಇರುವುದರಿಂದ ಅವುಗಳ ಪರಿಣಾಮಕಾರಿ ನಿಯಂತ್ರಣ ಕಷ್ಟವಾಗುತ್ತದೆ. ಕೆಲವು ಸಂದರ್ಭಗಳಲ್ಲಿ, ಪ್ಯಾರಾಸಿಟಾಯಿಡ್ ಬ್ರಕೊನಿಡ್ ಕಣಜಗಳಾದ ಒರ್ಗಿಲಸ್ ಎಲ್ಸ್ಮಮೋಪಾಲ್ಪಿ ಮತ್ತು ಚೆಲೋನಸ್ ಎಲಾಸ್ಮಾಪಾಲ್ಪಿಗಳು ಸಂಖ್ಯೆಯ ಚಟುವಟಿಕೆಯನ್ನು ಬದಲಾಯಿಸಬಹುದು. ನ್ಯೂಕ್ಲಿಯರ್ ಪಾಲಿಹೆಡ್ರೋಸಿಸ್ ವೈರಸ್ (NPV), ಶಿಲೀಂಧ್ರಗಳಾದ ಆಸ್ಪರ್ಜಿಲ್ಲಸ್ ಫ್ಲಾವಸ್ ಮತ್ತು ಬ್ಯೂವರ್ರಿಯಾ ಬಾಸ್ಸಿನಾ ಅಥವಾ ಬ್ಯಾಕ್ಟೀರಿಯಮ್ ಬ್ಯಾಸಿಲಸ್ ತುರಿಂಗಿಯೆನ್ಸಿಸ್ ಅನ್ನು ಆಧರಿಸಿದ ಜೈವಿಕ-ಕೀಟನಾಶಕಗಳು ಸೋಂಕನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ.

ರಾಸಾಯನಿಕ ನಿಯಂತ್ರಣ

ಕಾಳುಗಳು ಅಥವಾ ದ್ರವ ರೂಪದ ಸೂತ್ರಗಳನ್ನು ಬಳಸಿ ಲಾರ್ವಾವನ್ನು ನೇಗಿಲ ಸಾಲುಗಳಲ್ಲಿ ಕೊಲ್ಲಬಹುದು. ತೈಯೋಡಿಕಾರ್ ಮತ್ತು ಫ್ಯುರಟಿಯೋಕಾರ್ಬ್ ಹೊಂದಿರುವ ಉತ್ಪನ್ನಗಳ ಚಿಕಿತ್ಸೆಗಳು ಮೆಕ್ಕೆ ಜೋಳದಲ್ಲಿ ಹೆಚ್ಚು ಪರಿಣಾಮಕಾರಿಯಾಗಿರುವವು. ಕ್ಲೊರ್ಪಿರಿಫೋಸ್ ಮತ್ತು ಟಿಯೋಡಿಕಾಬ್ ಗಳನ್ನು ಎಲೆಗಳ ಮೇಲೆ ಸಿಂಪಡಿಸುವುದು ಸಹ ಸೋಂಕನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಅದಕ್ಕೆ ಏನು ಕಾರಣ

ಪ್ರಾದೇಶಿಕ ಮತ್ತು ಪರಿಸರ ಅಂಶಗಳ ಆಧಾರದ ಮೇಲೆ ಪತಂಗಗಳು ಬಣ್ಣದಲ್ಲಿ ಬದಲಾಗುತ್ತವೆ. ಗಂಡು ಕೀಡೆಗಳ ಮುಂದಿನ ರೆಕ್ಕೆಗಳು ಕಂದು-ಹಳದಿ ಬಣ್ಣದಲ್ಲಿದ್ದು ಅದರ ಮೇಲೆ ಚದುರಿದ ಕಪ್ಪು ಬಣ್ಣದ ಚುಕ್ಕೆಗಳಿರುತ್ತವೆ ಮತ್ತು ಅವುಗಳು ಅಂಚುಗಳ ಬಳಿ ಅತೀವವಾಗಿ ಒಂದಕ್ಕೊಂದು ಸೇರಿಕೊಂಡಿರುತ್ತವೆ, ಅಲ್ಲಿ ಓಂದು ಅಗಲವಾದ ಗಾಢ ಕಂದು ಬಣ್ಣದ ಪಟ್ಟೆ ಕಂಡುಬರುತ್ತದೆ. ಹೆಣ್ಣು ಕೀಡೆಗಳ ಮುಂಭಾಗದ ರೆಕ್ಕೆಗಳು ಕೆಂಪು ಅಥವಾ ಕೆನ್ನೇರಳೆಯ ಪೊರೆಗಳೊಂದಿಗೆ, ಇದ್ದಿಲು ಕಪ್ಪು ಬಣ್ಣದಲ್ಲಿರುತ್ತವೆ. ಎರಡೂ ಲಿಂಗಗಳ ಹಿಂಬದಿಯ ರೆಕ್ಕೆಗಳು ಬೆಳ್ಳಿ ಬಣ್ಣದ ಛಾಯೆಯೊಂದಿಗೆ ಪಾರದರ್ಶಕವಾಗಿರುತ್ತವೆ. ಹೆಣ್ಣುಗಳು ಒಣ ಮೇಲ್ಮಣ್ಣಿನ ಕೆಳಗೆ ಅಥವಾ ಕಾಂಡಗಳ ತಳದಲ್ಲಿ ಹಸಿರು ಮೊಟ್ಟೆಗಳನ್ನು ಇಡುತ್ತವೆ. ಲಾರ್ವಾಗಳು ತೆಳುವಾದ ಮತ್ತು ಕೂದಲುಳ್ಳ ದೇಹವನ್ನು ಹೊಂದಿದ್ದು, ಅದರ ಸುತ್ತ ನೇರಳೆ ಮತ್ತು ಬಿಳಿಯ ಪಟ್ಟೆಗಳು ಪರ್ಯಾಯ ಮಾದರಿಯಲ್ಲಿರುತ್ತವೆ. ಅವುಗಳನ್ನು ಅಲುಗಾಡಿಸಿದರೆ ರಭಸದಿಂದ ಅತ್ತಿಂದಿತ್ತ ಚಲಿಸುತ್ತವೆ. ಅವು ಮೇಲ್ಮಣ್ಣಿನ ಕೆಳಗೆ ರೇಷಿಮೆ ಜಾಲದಿಂದ ಮಾಡಿದ ಟ್ಯೂಬ್ಗಳು ಅಥವಾ ಸುರಂಗಗಳಲ್ಲಿ ವಾಸಿಸುತ್ತವೆ ಮತ್ತು ಬೇರುಗಳು ಹಾಗು ಸಸ್ಯ ಅಂಗಾಂಶಗಳನ್ನು ತಿನ್ನಲು ಹೊರಬರುತ್ತವೆ. ಒಣ ಹವಾಮಾನವಿರುವ ವರ್ಷಗಳು ಅಥವಾ ಚೆನ್ನಾಗಿ ಬರಿದುಹೋದ ಮರಳು ಮಣ್ಣು ಕೀಟಕ್ಕೆ ವಿಶೇಷವಾಗಿ ಅನುಕೂಲಕರವಾಗಿರುತ್ತದೆ. ಹೊಲದ ಸಾಮರ್ಥ್ಯದಲ್ಲಿ 80% ರಷ್ಟು ನೀರಾವರಿ ಮಾಡುವುದರಿಂದ ಅವುಗಳ ಸಂಖ್ಯೆಯನ್ನು ನಿಯಂತ್ರಿಸಲು ಸಹಾಯವಾಗುತ್ತದೆ.


ಮುಂಜಾಗ್ರತಾ ಕ್ರಮಗಳು

  • ಕೀಟದ ಸಂಖ್ಯೆ ಹೆಚ್ಚಾಗುವುದನ್ನು ತಪ್ಪಿಸಲು ಋತುವಿಗಿಂತ ಬೇಗನೆ ನೆಡಿ.
  • ನಿಯಮಿತವಾಗಿ ನೀರಾವರಿ ಮಾಡುವ ಮೂಲಕ ಮಣ್ಣಿನ ಆರ್ದ್ರತೆಯನ್ನು ಸ್ಥಿರವಾಗಿ ಇರಿಸಿ.
  • ಪತಂಗಗಳನ್ನು ಹಿಡಿಯಲು ಬೆಳಕು ಅಥವಾ ಫೆರೋಮೋನ್ ಬಲೆಗಳನ್ನು ಬಳಸಿ.
  • ಗದ್ದೆ ಮತ್ತು ಅದರ ಸುತ್ತಲೂ ಇರುವ ಕಳೆಗಳು ಮತ್ತು ಪರ್ಯಾಯ ರೋಗಕ್ಕೆ ಆಶ್ರಯ ನೀಡುವ ಗಿಡಗಳನ್ನು ತೆಗೆದುಹಾಕಿ.
  • ಮಣ್ಣಿನಲ್ಲಿರುವ ಲಾರ್ವಾಗಳ ಜೀವನ ಚಕ್ರವನ್ನು ಮುರಿಯಲು ಬಿತ್ತನೆ ಮಾಡುವ ಮೊದಲು ಆಳವಾಗಿ ಉಳುಮೆ ಮಾಡಿ.
  • ಲಾರ್ವಾಗಳು ಸಸಿಗಳ ಮೇಲೆ ದಾಳಿ ಮಾಡದೆ ಇರಲು ಅವುಗಳನ್ನು ಆಕರ್ಷಿಸಲು ಮತ್ತು ಅವುಗಳಿಗೆ ಆಹಾರವನ್ನು ನೀಡಲು ಭೂಮಿಯಲ್ಲಿ ಸಾವಯವ ಅವಶೇಷಗಳನ್ನು ಬಿಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ