ಸೋಯಾಬೀನ್

ಸೋಯಾ ಬೀನ್ ಕೊಂಡಿಹುಳು

Chrysodeixis includens

ಕೀಟ

5 mins to read

ಸಂಕ್ಷಿಪ್ತವಾಗಿ

  • ಇಂಗ್ಲಿಷಿನಲ್ಲಿ ‘ವಿಂಡೋ ಪೇನ್ಸ್’ ಎಂದು ಕರೆಯಲಾಗುವ, ಎಲೆಯನ್ನು ಹುಳಗಳು ತಿಂದ ಸ್ಥಳದಲ್ಲಿ ಕಿಟಕಿಯಂತಹ ನಮೂನೆಯೇ ಇದರ ವಿಶಿಷ್ಟ ಲಕ್ಷಣ.
  • ನಂತರದ ಹಂತದಲ್ಲಿ ಎಲೆಯ ಅಂಚುಗಳಿಂದ ಹಾನಿ ಶುರುವಾಗುತ್ತದೆ.
  • ಇದರಿಂದ ಅನಿಯಮಿತ ರಂಧ್ರಗಳು ಉಂಟಾಗುತ್ತವೆ ಮತ್ತು ಅಂಚುಗಳು ಸುರುಳಿಯಾಕಾರಕ್ಕೆ ತಿರುಗುತ್ತವೆ.

ಇವುಗಳಲ್ಲಿ ಸಹ ಕಾಣಬಹುದು


ಸೋಯಾಬೀನ್

ರೋಗಲಕ್ಷಣಗಳು

ಗಿಡದ ಭಾಗಗಳನ್ನು ಹುಳು (Caterpillar) ತಿಂದು ಹಾನಿಗೊಳಿಸುತ್ತದೆ. ಎಳೆಯ ಲಾರ್ವಾ ಮೊದಲು ಎಲೆಯ ಕೆಳಭಾಗವನ್ನು ತಿಂದು ಮೇಲ್ಭಾಗವನ್ನು ಉಳಿಸುತ್ತದೆ. ಇದರಿಂದ ಇದು ಕಿಟಕಿಯಂತೆ ಕಾಣುವ ನಮೂನೆಯನ್ನು ಮೂಡಿಸುತ್ತದೆ. ಇದನ್ನು ಇಂಗ್ಲಿಷಿನಲ್ಲಿ “ಫೀಡಿಂಗ್ ವಿಂಡೋ” ಎಂದು ಕರೆಯುತ್ತಾರೆ. ಬೆಳೆದ ಮರಿಗಳು ಅಂಚುಗಳಿಂದ ಪ್ರಾರಂಭಿಸಿ ಇಡೀ ಎಲೆಯನ್ನು ತಿನ್ನುತ್ತವೆ ಮತ್ತು ದೊಡ್ಡ ಪಾರ್ಶ್ವದ ಸಿರೆಗಳನ್ನು ಹಾಗೆಯೇ ಬಿಡುತ್ತವೆ. ಇದರಿಂದ ಅನಿಯಮಿತ ರಂಧ್ರಗಳು ಉಂಟಾಗುತ್ತವೆ ಮತ್ತು ಅಂಚುಗಳು ಸುರುಳಿಯಾಕಾರಕ್ಕೆ ತಿರುಗುತ್ತವೆ. ಅಸಾಮಾನ್ಯ ವಿಪರ್ಣನ ಮಾದರಿಗಳು, ಸಸ್ಯದ ಕೆಳಗಿನ ಭಾಗದಿಂದ ತಿಂದುಬಿಟ್ಟಿರುವ ಹಾನಿ, ಕ್ಯಾನೋಪಿಯ ಒಳಗೆ ಹಾನಿಗಳು ಉಂಟಾಗುತ್ತದೆ, ಮತ್ತು ಇದು ಮೇಲಕ್ಕೆ ಮತ್ತು ಹೊರಕ್ಕೆ ಹರಡುತ್ತದೆ. ಹೂವು ಅಥವಾ ಬೀಜಕೋಶವನ್ನು ತಿನ್ನುವುದು ಬಹಳ ಅಪರೂಪ. ಹೆಚ್ಚು ಕೀಟಗಳು ಮುತ್ತಿದರೆ ಎಲೆಗಳೆಲ್ಲ ಉದುರಿ ಹೋಗುತ್ತವೆ, ಆಗ ಮರಿಗಳು ಸಾಮಾನ್ಯವಾಗಿ ಸೋಯಾ ಬೀನ್ ಬೀಜಗಳನ್ನು ತಿನ್ನಲು ಪ್ರಾರಂಭಿಸುತ್ತವೆ.

Recommendations

ಜೈವಿಕ ನಿಯಂತ್ರಣ

ಸೋಯಾ ಬೀನ್ ಕೊಂಡಿಹುಳುವಿನ ಲಾರ್ವಾಗಳನ್ನು ತಿನ್ನುವ ನೈಸರ್ಗಿಕ ವೈರಿಗಳಾದ ಪ್ಯಾರಾಸಿಟಾಯ್ಡ್ ಕಣಜಗಳಾವುವೆಂದರೆ: ಕೊಪಿಡೋಸೊಮಾ ಟ್ರುನ್ಕಟೆಲ್ಲಮ್, ಕ್ಯಾಂಪೊಲೆಟಿಸ್ ಸೊನೊರೆನ್ಸಿಸ್, ಕ್ಯಾಸಿನಾರಿಯಾ ಪ್ಲಸಿಯಾ, ಮೆಸೊಕರಸ್ ಡಿಸ್ಕ್ಟೆರ್ಗಸ್ ಮತ್ತು ಮೈಕ್ರೋಚಾರ್ಪ್ಸ್ ಬಿಮಾಕ್ಯುಲೇಟಾ, ಕೋಟಿಯ ಗ್ರೆನೆಡೆನ್ಸಿಸ್ ಮತ್ತು ಪ್ಯಾರಾಸಿಟಾಯ್ಡ್ ನೊಣಗಳಾದ ವೊರಿಯಾ ರುರಲಿಸ್, ಪಟೆಲ್ಲೋವಾ ಸಿಮಿಲಿಸ್, ಮತ್ತು ಯುಫೊರೊಸೆರಾ ಮತ್ತು ಲೆಸ್ಪೆಸಿಯಾ ಕೆಲವು ಜಾತಿಗಳು. ಬಾಕುಲೋವೈರಸ್ ಅಥವಾ ಬ್ಯಾಸಿಲಸ್ ಥುರಿಂಜಿಯೆನ್ಸಿಸ್ ಮೇಲೆ ಆಧಾರಿತವಾದ ಉತ್ಪನ್ನಗಳನ್ನು ಸೋಯಾಬೀನ್ ಕೊಂಡಿಹುಳುಗಳನ್ನು ನಿಯಂತ್ರಿಸಲು ಬಳಸಲಾಗುತ್ತದೆ.

ರಾಸಾಯನಿಕ ನಿಯಂತ್ರಣ

ಯಾವಾಗಲೂ ಜೈವಿಕ ಚಿಕಿತ್ಸೆಗಳು ಲಭ್ಯವಿದ್ದರೆ ಅದರ ಜೊತೆ ನಿರೋಧಕ ಕ್ರಮಗಳನ್ನು ಒಟ್ಟುಗೂಡಿಸಿ ಸಮಗ್ರವಾದ ಮಾರ್ಗವನ್ನು ಪರಿಗಣಿಸಿ. ಸೋಯಾಬೀನ್ ಕೊಂಡಿಹುಳು ಮಾತ್ರವೊಂದೇ ಬೆಳೆಗೆ ಅಪಾಯದಂತೆ ತೋರುವುದಿಲ್ಲ. ನಿರ್ವಹಣಾ ನಿರ್ಧಾರವನ್ನು ತೆಗೆದುಕೊಳ್ಳುವಾಗ ಇತರ ಸಂಭವನೀಯ ವಿಪರ್ಣನವುಂಟುಮಾಡುವ ಕೀಟಗಳಿಂದ ಉಂಟಾಗುವ ಹಾನಿಯನ್ನು ಗಣನೆಗೆ ತೆಗೆದುಕೊಳ್ಳಿ. ವಿಪರ್ಣನವು ಹೂವು ಅರಳುವ ಮುನ್ನ 40% ನಷ್ಟಿದ್ದಾಗ, ಹೂವು ಅರಳುವಾಗ ಮತ್ತು ಬೀಜಕೋಶಗಳು ತುಂಬುವಾಗ 20% ನಷ್ಟಿದ್ದಾಗ, ಅಥವಾ ಬೀಜಕೋಶಗಳು ತುಂಬುವುದರಿಂದ ಹಿಡಿದು ಕೊಯ್ಲಿನವರೆಗೆ 35% ನಷ್ಟಿದ್ದಾಗ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ. ಮೆಥೊಕ್ಸಿಎಫೆನಜೈಡ್ ಅಥವಾ ಸ್ಪಿನೆಟರಾಮ್ಗಳನ್ನು ಹೊಂದಿರುವ ಉತ್ಪನ್ನಗಳನ್ನು ಬಳಸಬಹುದಾಗಿದೆ. ಪೈರೆಥ್ರಾಯ್ಡ್ಗಳ ಕುಟುಂಬದ ಕೀಟನಾಶಕಗಳನ್ನು ಬಳಸಬೇಡಿ ಏಕೆಂದರೆ ಈ ಉತ್ಪನ್ನಗಳಿಗೆ ಪ್ರತಿರೋಧವನ್ನು ವಿವರಿಸಲಾಗಿದೆ.

ಅದಕ್ಕೆ ಏನು ಕಾರಣ

ಸೋಯಾ ಬೀನ್ ಕೊಂಡಿಹುಳುವಾದ ಸೂಡೊಪ್ಲುಸಿಯಾ ಇಲೆಡೆನ್ಸ್ ನ ಲಾರ್ವಾಗಳಿಂದ ಈ ಹಾನಿ ಉಂಟಾಗುತ್ತದೆ. ಪ್ರೌಢ ಪತಂಗಗಳು ಗಾಢ ಕಂದು ಬಣ್ಣದ್ದಾಗಿರುತ್ತವೆ, ಅವುಗಳ ಮುಂದಿನ ರೆಕ್ಕೆಗಳ ಮೇಲೆ ಕಂದು ಬಣ್ಣದ ಮಚ್ಚೆಗಳಿದ್ದು ರೆಕ್ಕೆಗಳಿಗೆ ಕಂಚು ಅಥವಾ ಚಿನ್ನದ ಬಣ್ಣದ ಹೊಳಪಿರುತ್ತದೆ. ಅವುಗಳ ಮಧ್ಯಭಾಗದಲ್ಲಿ ಎರಡು ಎದ್ದುಕಾಣುವ ಬೆಳ್ಳಿ ಬಣ್ಣದ ಗುರುತುಗಳು ಕಾಣುತ್ತವೆ. ಹೆಣ್ಣು ಪತಂಗಗಳು ಕ್ಯಾನೋಪಿಯ ಒಳಗಿರುವ ಮತ್ತು ಸಸ್ಯದ ಕೆಳ ಭಾಗದಲ್ಲಿರುವ ಎಲೆಗಳ ತಳದಲ್ಲಿ ಮೊಟ್ಟೆಗಳನ್ನು ಇಡುತ್ತವೆ. ಮರಿಹುಳುಗಳು ಹಸಿರು ಬಣ್ಣದಲ್ಲಿದ್ದು ಅವುಗಳ ಪಾರ್ಶ್ವದ ಮತ್ತು ಬೆನ್ನಿನ ಉದ್ದಕ್ಕೂ ಬಿಳಿ ಬಣ್ಣದ ಪಟ್ಟೆಗಳಿರುತ್ತವೆ. ಅವುಗಳಿಗೆ ಮೂರು ಜೋಡಿಯ ವಿಶೇಷ ಕಾಲುಗಳಿದ್ದು ಅದು ಅವುಗಳ ದೇಹದಲ್ಲಿ ಅಸಮಾನವಾಗಿ ಹರಡಿರುತ್ತದೆ (ದೇಹದ ಮಧ್ಯಭಾಗದಲ್ಲಿ 2, ಬಾಲದ ಬಳಿ ಒಂದು). ಈ ವ್ಯವಸ್ಥೆಯ ಕಾರಣದಿಂದ ಮರಿಹುಳುಗಳು ಚಲಿಸುವಾಗ ತಮ್ಮ ಬೆನ್ನನ್ನು ಗೂನು ಮಾಡಿಕೊಳ್ಳುತ್ತವೆ, ಈ ಕಾರಣದಿಂದಲೇ ಅವುಗಳಿಗೆ 'ಲೂಪರ್ (ಕೊಂಡಿಹುಳು)' ಎಂದು ಹೆಸರು ಬಂದಿದೆ. ಪ್ಯೂಪಾಗಳು (ಪೊರೆಹುಳು) ಎಲೆಗಳ ಕೆಳಭಾಗದಲ್ಲಿ ಒಂದು ಸಡಿಲವಾದ ಗೂಡನ್ನು ನೇಯ್ದುಕೊಳ್ಳುತ್ತವೆ.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ಸಹಿಷ್ಣು ಅಥವಾ ನಿರೋಧಕ ಪ್ರಭೇದಗಳನ್ನು ಬಳಸಿ.
  • ತೀವ್ರವಾದ ಹಾನಿಯನ್ನು ತಪ್ಪಿಸಲು ಬೇಗ ಪಕ್ವವಾಗುವ ಪ್ರಭೇದಗಳನ್ನು ಬೇಗನೆ ನೆಡಿ.
  • ಕೀಟಗಳ ಚಿಹ್ನೆಗಳಿಗಾಗಿ, ಮುಖ್ಯವಾಗಿ ಕೆಳ ಮೇಲಾವರಣದಲ್ಲಿ ಹೊಲವನ್ನು ಮೇಲ್ವಿಚಾರಣೆ ಮಾಡಿ.
  • ಲಾರ್ವಾ ಅಥವಾ ಪೀಡಿತ ಸಸ್ಯಗಳನ್ನು ತೆಗೆದುಹಾಕಿ ನಾಶ ಮಾಡಿ.
  • ಋತುವಿನಲ್ಲಿ ಸಸ್ಯಗಳನ್ನು ಆರೋಗ್ಯಕರವಾಗಿ ಮತ್ತು ಸ್ವಚ್ಛವಾಗಿ ಇರಿಸಿ.
  • ಪ್ರಯೋಜನಕಾರಿಯಾದ ಕೀಟಗಳ ಸಂಖ್ಯೆಯ ಮೇಲೆ ಪ್ರಭಾವವಾಗದಿರಲು ಕೀಟನಾಶಕಗಳ ಬಳಕೆಯನ್ನು ನಿಯಂತ್ರಿಸಿ.
  • ಲಾರ್ವಾಗಳನ್ನು ತಿನ್ನುವ ಪಕ್ಷಿಗಳು ಬಂದು ಕೂರಲು ತೆರೆದ ಜಾಗವನ್ನು ನಿರ್ಮಿಸಿ.
  • ಪತಂಗಗಳನ್ನು ನಿಯಂತ್ರಿಸಲು ಮತ್ತು ಹಿಡಿಯಲು ಬಲೆಗಳನ್ನು ಬಳಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ