ಇತರೆ

ಎಲೆಕೋಸು ಪತಂಗ ( ಕ್ಯಾಬೇಜ್ ಮಾತ್)

Mamestra brassicae

ಕೀಟ

5 mins to read

ಸಂಕ್ಷಿಪ್ತವಾಗಿ

  • ಅಸ್ಥಿಪಂಜರದಂತೆ ಕಾಣುವ ಎಲೆಗಳು.
  • ಕೊರೆತದ ರಂಧ್ರದ ಸುತ್ತಲೂ ಮತ್ತು ಅದು ಸುರಂಗದಂತೆ ಕೊರೆದ ಜಾಡಿನ ಉದ್ದಕ್ಕೂ ಹುಳದ ಹಿಕ್ಕೆಗಳು.

ಇವುಗಳಲ್ಲಿ ಸಹ ಕಾಣಬಹುದು

9 ಬೆಳೆಗಳು
ಹುರುಳಿ
ಎಲೆಕೋಸು
ಬೆಳ್ಳುಳ್ಳಿ
ಈರುಳ್ಳಿ
ಇನ್ನಷ್ಟು

ಇತರೆ

ರೋಗಲಕ್ಷಣಗಳು

ಎಲೆಕೋಸು ಪತಂಗದ ಮರಿಹುಳುಗಳು ಎಲೆಗಳನ್ನು ತಿಂದು, ಎಲೆಕೋಸಿನ ಗೆಡ್ಡೆಯ ಮೇಲೆ ಸುರಂಗಗಳನ್ನು ಕೊರೆಯುತ್ತವೆ. ಹುಳಗಳು ಮೃದುವಾದ ಭಾಗವನ್ನು ಅಗಿದು ಒರಟು ನಾಳಗಳನ್ನು ಹಾಗೆಯೇ ಬಿಡುವುದರಿಂದ, ಎಲೆಗಳು ಸಾಮಾನ್ಯವಾಗಿ ಅಸ್ಥಿಪಂಜರದಂತಾಗುತ್ತವೆ. ಮೊದಲ ತಲೆಮಾರಿಗೆ ಭಿನ್ನವಾಗಿ( ವಸಂತದಿಂದ ಬೇಸಗೆ ಮೊದಲ ಭಾಗ) ಹೆಚ್ಚು ದೃಢವಾದ ಎರಡನೆಯ ತಲೆಮಾರಿನ ಹುಳಗಳು( ಬೇಸಗೆಯ ಕೊನೆಯ ಭಾಗದಿಂದ ಅಕ್ಟೋಬರ್) ಗಟ್ಟಿಯಾದ ಅಂಗಾಂಶಗಳನ್ನೂ ಅಗಿಯಬಹುದು. ಎರಡನೆಯ ತಲೆಮಾರಿನ ಹುಳಗಳು ಎಲೆಗಳನ್ನು ಮಾತ್ರವಲ್ಲದೆ ಎಲೆಕೋಸಿನ ಗೆಡ್ಡೆಯ ಒಳಗಿನ ಭಾಗದಲ್ಲೂ ಸುರಂಗಗಳನ್ನು ಕೊರೆಯಬಹುದು. ರಂಧ್ರಗಳ ಸುತ್ತಲೂ ಮತ್ತು ಸುರಂಗಗಳ ಉದ್ದಕ್ಕೂ ಹುಳಗಳ ಹಿಕ್ಕೆಯನ್ನು ಕಾಣಬಹುದು. ಇದರಿಂದಾಗಿ ಎಲೆಕೋಸು ಪತಂಗದ ಹುಳವು ಬೆಳೆಗಳಿಗೆ ಹಾನಿಕಾರಕವಾಗಿದೆ.

Recommendations

ಜೈವಿಕ ನಿಯಂತ್ರಣ

ಟ್ರೈಕೊಗ್ರಾಮಾ ಜಾತಿಗಳ ಪರಾವಲಂಬಿ ಕಣಜಗಳನ್ನು ಪತಂಗದ ಮೊಟ್ಟೆಗಳನ್ನು ನಾಶಪಡಿಸಲು ಬಳಸಬಹುದು. ಕೆಲವು ಪರಭಕ್ಷಕ ಜೀರುಂಡೆಗಳು, ಹಳದಿ ಜಾಕೆಟ್ ಗಳು, ಹಸಿರು ಲೇಸ್-ವಿಂಗ್, ಜೇಡಗಳು ಮತ್ತು ಹಕ್ಕಿಗಳು ಮರಿಹುಳುಗಳನ್ನು (ಲಾರ್ವಾ) ತಿನ್ನುತ್ತವೆ. ನೈಸರ್ಗಿಕವಾಗಿ ಉಂಟಾಗುವ ಬ್ಯಾಕ್ಟೀರಿಯಂ ಬ್ಯಾಸಿಲಸ್ ತುರಿಂಜಿಯೆನ್ಸಿಸ್ ಮತ್ತು ಕೆಲವು ವೈರಸ್ಸುಗಳಿಂದ ತಯಾರಿಸಿದ ಉತ್ಪನ್ನಗಳು ಮರಿಹುಳುಗಳನ್ನು ಕೊಲ್ಲುತ್ತವೆ ಹಾಗೂ ಮೇಲಿನ ಮತ್ತು ಕೆಳಗಿನ ಎಲೆಯ ಹೊರಮೈಗಳ ಮೇಲೆ ಸಂಪೂರ್ಣವಾಗಿ ಸಿಂಪಡಿಸಿದಾಗ ಇದು ಬಹಳ ಪರಿಣಾಮಕಾರಿಯಾಗಿದೆ. ಈ ಕೀಟನಾಶಕಗಳು ಪರಿಸರದಲ್ಲಿ ಉಳಿದುಕೊಳ್ಳುವುದಿಲ್ಲ. ರೋಗಕಾರಕ ನೆಮಟೋಡ್ ಜಾತಿಯ ಹುಳಗಳು ಮರಿಹುಳುಗಳ ವಿರುದ್ಧವೂ ಕೆಲಸ ಮಾಡಬಹುದು. ಇವನ್ನು ಎಲೆಗಳು ಒದ್ದೆಯಿರುವಾಗ ಬಳಸಬೇಕು, ಉದಾಹರಣೆಗೆ ತಂಪು ಮಂದ ಹವಾಮಾನದಲ್ಲಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ, ಸಾವಯವ ಚಿಕಿತ್ಸೆಗಳೊಂದಿಗೆ ನಿರ್ಬಂಧಕ ಮಾರ್ಗಗಳನ್ನು ಸೇರಿಸಿ ಸಮಗ್ರ ವಿಧಾನವನ್ನು ಮೊದಲು ಪರಿಗಣಿಸಿ. ಪೈರೆಥ್ರಮ್, ಲ್ಯಾಂಬಾ-ಸೈಹಲೋಥ್ರಿನ್ ಅಥವಾ ಡೆಲ್ಟಾಮೆಥ್ರೈನ್ಗಳನ್ನು ಆಧರಿಸಿರುವ ಉತ್ಪನ್ನಗಳನ್ನು ಈ ಪತಂಗದ ಮರಿಹುಳುಗಳ ವಿರುದ್ಧ ಬಳಸಬಹುದು. ಪೈರೆಥ್ರಮ್ ನ ಸಾರವನ್ನು ಹಲವು ಬಾರಿ ಹಚ್ಚಬಹುದು ಹಾಗೂ ಕೊಯ್ಲಿನ ಹಿಂದಿನ ದಿನದವರೆಗೂ ಉಪಯೋಗಿಸಬಹುದು. ಲ್ಯಾಂಬಾ-ಸೈಹಲೋಥರಿನ್ ಮತ್ತು ಡೆಲ್ಟಾಮೆಥ್ರಿನ್ ಅನ್ನು ಗರಿಷ್ಠ 2 ಸಲ ಬಳಸುವ ಶಿಫಾರಸು ಮಾಡಲಾಗಿದೆ ಹಾಗೂ ಕೊಯ್ಲಿಗೆ ಒಂದು ವಾರವಿರುವಾಗ ಉಪಯೋಗಿಸುವುದನ್ನು ನಿಲ್ಲಿಸಬೇಕು.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಮುಖ್ಯವಾಗಿ ಎಲೆಕೋಸು ಪತಂಗದ (ಮಾಮೆಸ್ಟ್ರಾ ಬ್ರಾಸ್ಸಿಸಿ) ಮರಿಹುಳುವಿನಿಂದ (caterpillar) ಉಂಟಾಗುತ್ತವೆ. ಪ್ರೌಢ ಲಾರ್ವಾ ಮಣ್ಣಿನೊಳಗೆ ಹೊಕ್ಕು ಪ್ಯೂಪಾ ಹಂತಕ್ಕೆ ಬೆಳೆಯುತ್ತದೆ. ಪ್ರೌಢ ಪತಂಗದ ಮುಂದಿನ ರೆಕ್ಕೆಗಳು ಕಂದು ಬಣ್ಣದಲ್ಲಿರುತ್ತವೆ. ರೆಕ್ಕೆಗಳಲ್ಲಿ ಅಲ್ಲಲ್ಲಿ ಕಪ್ಪು ಅಥವಾ ಕಂದು ಬಣ್ಣದ ಉಬ್ಬುತಗ್ಗುಗಳೂ, ಅವುಗಳ ನಡುವೆ ಕೊಂಚ ತಿಳಿಯಾದ ಪ್ರದೇಶಗಳೂ ಇರುತ್ತವೆ. ಹಿಂದಿನ ರೆಕ್ಕೆಗಳು ತಿಳಿಬೂದು ಬಣ್ಣದಲ್ಲಿರುತ್ತವೆ. ಹೊರಬಂದ ಕೆಲವು ವಾರಗಳ ನಂತರ, ಹೆಣ್ಣು ಪತಂಗವು ಬಿಳಿ ಗೋಳಾಕಾರದ ಮೊಟ್ಟೆಗಳನ್ನು ಎಲೆಗಳ ಮೇಲ್ಮೈಯಲ್ಲಿ ಇಡುತ್ತದೆ. ಮೊಟ್ಟೆಯಿಂದ ಹೊರಬಂದ ನಂತರ, ಮರಿಹುಳುಗಳು ಎಲೆಯ ಅಂಗಾಂಶಗಳನ್ನು ತಿನ್ನಲಾರಂಭಿಸುತ್ತವೆ. ಎಲೆಗಳಲ್ಲಿ ಮತ್ತು ಕೊನೆಯಲ್ಲಿ ಎಲೆಕೋಸಿನ ಗೆಡ್ಡೆಯಲ್ಲಿ ಸುರಂಗಗಳನ್ನು ಕೊರೆಯುತ್ತವೆ. ಅವುಗಳು ಹಳದಿ ಮಿಶ್ರಿತ ಹಸಿರು ಅಥವಾ ಕಂದು ಮಿಶ್ರಿತ ಹಸಿರು ಬಣ್ಣದ್ದಾಗಿರುತ್ತವೆ. ಅವುಗಳ ದೇಹದಲ್ಲಿ ಸ್ಪಷ್ಟ ಕೂದಲು ಇರುವುದಿಲ್ಲ. ಎಲೆಕೋಸು ಪತಂಗಗಳು ವರ್ಷಕ್ಕೆ ಎರಡು ತಲೆಮಾರುಗಳನ್ನು ಉತ್ಪತ್ತಿ ಮಾಡುತ್ತವೆ. ವಸಂತ ಋತುವಿನ ಅಂತ್ಯದಲ್ಲಿ, ಮೊದಲ ತಲೆಮಾರಿನ ಹುಳಗಳು ಮಣ್ಣಿನಿಂದ ಹೊರಬರುತ್ತವೆ. ಮತ್ತು ಇವುಗಳನ್ನು ಸಸ್ಯಗಳ ಮೇಲೆ ಕಾಣಬಹುದು. ಬೇಸಿಗೆಯ ಕೊನೆಯಲ್ಲಿ, ಎರಡನೇ ಪೀಳಿಗೆಯು ಕಾಣಿಸಿಕೊಳ್ಳುತ್ತದೆ.


ಮುಂಜಾಗ್ರತಾ ಕ್ರಮಗಳು

  • ನಿರೋಧಕ ಪ್ರಭೇದಗಳು ಲಭ್ಯವಿದ್ದರೆ ಹೆಚ್ಚು ಬಳಸಿ.
  • ರೋಗದ ಚಿಹ್ನೆಗಳಿಗಾಗಿ ನಿಯಮಿತವಾಗಿ ತೋಟದ ಮೇಲ್ವಿಚಾರಣೆ ಮಾಡಿ.
  • ಬಿಳಿ ಗೋಳಾಕಾರದ ಚಿಟ್ಟೆ ಮೊಟ್ಟೆಗಳು ಮತ್ತು ಹುಳುಗಳು ಕಂಡಲ್ಲಿ ಆರಿಸಿ ತೆಗೆಯಿರಿ.
  • ಹೆಣ್ಣು ಪತಂಗವು ಮೊಟ್ಟೆಗಳನ್ನು ಇಡದಂತೆ ತಡೆಯುವ ಸೂಕ್ಷ್ಮ ಬಲೆಯ ಅಡಿಯಲ್ಲಿ ಬ್ರಾಸಿಕಾ ಜಾತಿಯ ಬೆಳೆಗಳನ್ನು ಬೆಳೆಯಿರಿ.
  • ತೆನೆಯ ಆರಂಭಿಕ ಬೆಳವಣಿಗೆಯ ಸಮಯದಲ್ಲಿ ಹುಳಗಳ ಸಂಖ್ಯೆ ಅಧಿಕವಾಗುವುದನ್ನು ತಪ್ಪಿಸಲು ಗಿಡಗಳನ್ನು ಋತುವಿಗಿಂತ ಮುಂಚೆಯೇ ನೆಡಿ.
  • ಈ ಹುಳ/ಪತಂಗಕ್ಕೆ ಆಶ್ರಯ ಕೊಡದ ಸಸಿಗಳನ್ನು ಸರದಿ ಬೆಳೆಯಾಗಿ ಬೆಳೆಸಿ.
  • ಕೀಟನಾಶಕಗಳ ನಿಯಂತ್ರಿತ ಬಳಕೆಯ ಮೂಲಕ ನೈಸರ್ಗಿಕ ಶತ್ರುಗಳು ಸಾಕಷ್ಟು ಸಂಖ್ಯೆಯಲ್ಲಿರುವಂತೆ ನೋಡಿಕೊಳ್ಳಬಹುದು.
  • ಪತಂಗಗಳನ್ನು ಆಕರ್ಷಿಸಿ ಹಿಡಿಯಲು ಫೆರಮೋನ್ ಬಲೆಗಳನ್ನು ಬಳಸಿ.
  • ಎಲೆಕೋಸು ಬೆಳೆಯುವ ಸ್ಥಳದ ಬಳಿ ಈ ಹುಳದ ಬಾಧೆಗೆ ಒಳಗಾಗುವ ಬೆಳೆಯನ್ನು ಬೆಳೆಯಬೇಡಿ.
  • ಹುಳಗಳಿಗೆ ಆಶ್ರಯ ನೀಡುವ ಕಳೆಗಳನ್ನು ತೆಗೆದುಹಾಕಿ.
  • ಕೊಯ್ಲಿನ ನಂತರ ನೆಲವನ್ನು ಉತ್ತು ಕೋಶವನ್ನು ನೈಸರ್ಗಿಕ ಶತ್ರುಗಳಿಗೆ ಹಾಗೂ ತಣ್ಣನೆಯ ವಾತಾವರಣಕ್ಕೆ ಒಡ್ಡಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ