ಸೇಬು

ಕೋಡ್ಲಿಂಗ್ ಚಿಟ್ಟೆ (ಸೇಬು ಕೀಟ)

Cydia pomonella

ಕೀಟ

5 mins to read

ಸಂಕ್ಷಿಪ್ತವಾಗಿ

  • ಹಣ್ಣಿನ ಮೇಲೆ ಕೊರೆತದ ತೂತುಗಳು, ಸಾಮಾನ್ಯವಾಗಿ ಕೆಂಪು ಉಂಗುರ ಮತ್ತು ಮರಿಹುಳುಗಳ ಹಿಕ್ಕೆಯಿಂದ ಸುತ್ತುವರಿಯಲ್ಪಟ್ಟಿರುತ್ತವೆ.
  • ಹಣ್ಣಿನ ಒಳಗೆ ಸುರಂಗ ಮತ್ತು ಕೊಳೆತ.
  • ಕ೦ಬಳಿಹುಳುವನ್ನು ಕೆಲವೊಮ್ಮೆ ಮಧ್ಯಭಾಗದಲ್ಲಿ ಕಾಣಬಹುದು.
  • ಅಕಾಲಿಕವಾಗಿ ಹಣ್ಣಾಗುವುದು ಮತ್ತು ಹಣ್ಣುಗಳು ಉದುರುವುದು.

ಇವುಗಳಲ್ಲಿ ಸಹ ಕಾಣಬಹುದು

6 ಬೆಳೆಗಳು
ಬಾದಾಮಿ
ಸೇಬು
ಜಲ್ದರು ಹಣ್ಣು
ಮೆಕ್ಕೆ ಜೋಳ
ಇನ್ನಷ್ಟು

ಸೇಬು

ರೋಗಲಕ್ಷಣಗಳು

ಹಣ್ಣುಗಳನ್ನು ಲಾರ್ವಗಳು ತಿನ್ನುವುದರಿಂದ ಹಾನಿ ಉಂಟಾಗುತ್ತದೆ. ಆಳವಿಲ್ಲದ ಪ್ರವೇಶ ಬಿಂದುಗಳು ಹಣ್ಣಿನ ಮೇಲ್ಮೈಯಲ್ಲಿ ಗೋಚರಿಸುತ್ತವೆ ಮತ್ತು ಮುಚ್ಚಿಹೋಗಿರುವ ಪ್ರವೇಶ ದ್ವಾರಗಳಿಗೆ ಅನುಗುಣವಾಗಿರುತ್ತವೆ. ಅಲ್ಲಿ ಲಾರ್ವಾಗಳು ಸತ್ತಿರುತ್ತವೆ ಅಥವಾ ಆ ಜಾಗ ಬಿಟ್ಟು ಬೇರೆಡೆಗೆ ಹೋಗಿರುತ್ತವೆ. ಲಾರ್ವಾ ಯಶಸ್ವಿಯಾಗಿ ಒಳ ಪ್ರವೇಶಿಸಿದಲ್ಲಿ, ಲಾರ್ವಾಗಳು ಹಣ್ಣಿನೊಳಗೆ ತೂರಿಕೊಳ್ಳುತ್ತವೆ ಮತ್ತು ಮೂಲಕ್ಕೆ(ಮಧ್ಯಭಾಗಕ್ಕೆ) ತಲುಪಿ ಬೀಜಗಳನ್ನು ತಿನ್ನುತ್ತವೆ. ಪ್ರವೇಶ ರಂಧ್ರಗಳು ಕೆಂಪು ಉಂಗುರದಿಂದ ಆವೃತವಾಗಿರುತ್ತವೆ ಮತ್ತು ಕೆಂಪು-ಕಂದು ಬಣ್ಣದ, ಪುಡಿಪುಡಿಯಾದ ಲಾರ್ವಾ ಹಿಕ್ಕೆಗಳಿಂದ (ಫ್ರಾಸ್) ಮುಚ್ಚಿರುತ್ತವೆ. ಹಣ್ಣನ್ನು ಕತ್ತರಿಸಿದಾಗ, ಸಣ್ಣ ಬಿಳಿ ಕ್ಯಾಟರ್ಪಿಲ್ಲರ್ ಕೆಲವೊಮ್ಮೆ ಮಧ್ಯಭಾಗದ ಬಳಿ ಕಂಡುಬರುತ್ತದೆ. ಹಾನಿಗೊಳಗಾದ ಹಣ್ಣುಗಳು ಹಣ್ಣಾಗಿ ಬೇಗನೆ ಬೀಳುತ್ತವೆ ಅಥವಾ ಸುಲಭವಾಗಿ ಮಾರಾಟವಾಗುವುದಿಲ್ಲ. ಅನಿಯಂತ್ರಿತವಾಗಿ ಬಿಟ್ಟರೆ, ಲಾರ್ವಾಗಳು ಗಣನೀಯ ಹಾನಿಯನ್ನುಂಟುಮಾಡುತ್ತವೆ. ಸಾಮಾನ್ಯವಾಗಿ ವೈವಿಧ್ಯತೆ ಮತ್ತು ಸ್ಥಳವನ್ನು ಅವಲಂಬಿಸಿ 20 ರಿಂದ 90% ದಷ್ಟು ಹಣ್ಣುಗಳನ್ನು ಅವು ಮುತ್ತಿಕೊಳ್ಳಬಹುದು. ಸಂಗ್ರಹಿಸಿದ ಹಣ್ಣುಗಳಲ್ಲಿ ಆಳವಾದ ಸೋಂಕು ತೀವ್ರವಾದ ಸಮಸ್ಯೆಯಾಗಿರಬಹುದು. ಏಕೆಂದರೆ ಅವುಗಳು ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳಿಂದ ಆವೃತವಾಗಿ ಕೊಳೆಯಲು ಕಾರಣವಾಗುತ್ತವೆ. ತಡವಾಗಿ ಪಕ್ವವಾಗುವ ಪ್ರಭೇದಗಳು ಆರಂಭಿಕ ಪ್ರಭೇದಗಳಿಗಿಂತ ತೀವ್ರ ಹಾನಿಯನ್ನು ಅನುಭವಿಸುವ ಸಾಧ್ಯತೆ ಹೆಚ್ಚಿರುತ್ತದೆ.

Recommendations

ಜೈವಿಕ ನಿಯಂತ್ರಣ

ಪತಂಗಗಳು ಅಥವಾ ಹಣ್ಣಿನ ಕುಟುಕುಗಳನ್ನು ಮೊದಲು ಗಮನಿಸಿದಾಗ, ಕೋಡ್ಲಿಂಗ್ ಚಿಟ್ಟೆ ಗ್ರ್ಯಾನ್ಯುಲೋಸಿಸ್ ವೈರಸ್ (CYD-X) ಅನ್ನು ವಾರಕ್ಕೊಮ್ಮೆ ಹಾಕಬಹುದು. ವೈರಸ್ ಪತಂಗದ ಲಾರ್ವಾಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಮತ್ತು 1% ಎಣ್ಣೆಯ ಜೊತೆ ಬೆರೆಸಿ ಸಿಂಪಡಿಸುವ ಮೂಲಕವೇ ಬಳಸಬೇಕು. ಕೀಟ ನಿಯಂತ್ರಣಕ್ಕಾಗಿ ಸ್ಪಿನೋಸಾಡ್‌ನಂತಹ ಕೀಟನಾಶಕಗಳನ್ನು ಸಹ ಶಿಫಾರಸು ಮಾಡಲಾಗುತ್ತದೆ. ಆದಾಗ್ಯೂ ಇದು ಇತರ ಅಜೈವಿಕ ಪರಿಹಾರಗಳಿಗಿಂತ ಕಡಿಮೆ ಪರಿಣಾಮಕಾರಿಯಾಗಿದೆ. ಈ ಕೀಟದ ಇನ್ನೂ ಅಪಕ್ವವಾದ ಹಂತಗಳನ್ನು ಭೇದಿಸಿ ನಾಶಪಡಿಸುವ ಪ್ರಯೋಜನಕಾರಿ ನೆಮಟೋಡ್‌ಗಳು ವಾಣಿಜ್ಯಿಕವಾಗಿ ಲಭ್ಯವಿದೆ. ಈ ಕೀಟವನ್ನು ತಡೆಯಲು ತೇವಗೊಳಿಸಬಹುದಾದ ಕಾಯೋಲಿನ್ ಜೇಡಿಮಣ್ಣನ್ನು ಸಹ ಬಳಸಬಹುದು ಮತ್ತು ಹಾನಿಯನ್ನು 50-60% ರಷ್ಟು ಕಡಿಮೆ ಮಾಡಬಹುದು.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದಲ್ಲಿ ಜೈವಿಕ ಚಿಕಿತ್ಸೆಗಳ ಜೊತೆಗೆ ತಡೆಗಟ್ಟುವ ಕ್ರಮಗಳಿರುವ ಸಮಗ್ರ ವಿಧಾನವನ್ನು ಯಾವಾಗಲೂ ಪರಿಗಣಿಸಿ. ಕೀಟನಾಶಕಗಳ ಸಿಂಪಡಿಸುವಿಕೆಯನ್ನು ಫೆರೋಮೋನ್ ಬಲೆಗಳೊಂದಿಗೆ ಸಂಯೋಜಿಸಿ. ಪತಂಗಗಳು ಅಥವಾ ಹಣ್ಣಿನ ಕುಟುಕುಗಳನ್ನು ಮೊದಲು ಗಮನಿಸಿದಾಗಿಂದ ಹಿಡಿದು, ಕೋಡ್ಲಿಂಗ್ ಚಿಟ್ಟೆ ಗ್ರ್ಯಾನ್ಯುಲೋಸಿಸ್ ವೈರಸ್ (CYD-X) ಅನ್ನು ವಾರಕ್ಕೊಮ್ಮೆ ಹಾಕಬಹುದು. ವೈರಸ್ ಪತಂಗದ ಲಾರ್ವಾಗಳ ಮೇಲೆ ಮಾತ್ರ ಪರಿಣಾಮ ಬೀರುತ್ತದೆ ಮತ್ತು 1% ಎಣ್ಣೆಯ ಜೊತೆ ಬೆರೆಸಿ ಸಿಂಪಡಿಸುವ ಮೂಲಕವೇ ಬಳಸಬೇಕು. ಕೀಟ ನಿಯಂತ್ರಣಕ್ಕಾಗಿ ಸ್ಪಿನೋಸಾಡ್‌ನಂತಹ ಕೀಟನಾಶಕಗಳನ್ನು ಸಹ ಶಿಫಾರಸು ಮಾಡಲಾಗುತ್ತದೆ. ಆದಾಗ್ಯೂ ಸ್ಪೈನೋಸಾಡ್ ಅಷ್ಟು ಹಾನಿಕಾರಕವಲ್ಲದ ವಿಷವಾಗಿದೆ.

ಅದಕ್ಕೆ ಏನು ಕಾರಣ

ರೋಗಲಕ್ಷಣಗಳು ಸಿಡಿಯಾ ಪೊಮೊನೆಲ್ಲಾದ ಲಾರ್ವಾಗಳಿಂದ ಉಂಟಾಗುತ್ತವೆ. ಪ್ರೌಡಾವಸ್ಥೆಯಲ್ಲಿ ಸೂರ್ಯಾಸ್ತದ ಕೆಲವು ಗಂಟೆಗಳ ಮೊದಲು ಮತ್ತು ನಂತರ ಮಾತ್ರ ಸಕ್ರಿಯವಾಗಿರುತ್ತವೆ ಮತ್ತು ಸೂರ್ಯಾಸ್ತದ ತಾಪಮಾನವು 16 °C ಗಿಂತ ಹೆಚ್ಚಾದಾಗ ಅವು ಸಂಗಾತಿಯಾಗುತ್ತವೆ. ಮೊದಲ ತಲೆಮಾರಿನ ಪತಂಗಗಳು ವಸಂತಕಾಲದಲ್ಲಿ ಅಥವಾ ಬೇಸಿಗೆಯ ಆರಂಭದಲ್ಲಿ, ಹೂಬಿಡುವ ಮೊದಲು ಹೊರಬರುತ್ತವೆ. ಅವು ಹಾರಲು ಪ್ರಾರಂಭಿಸಿದ ಒಂದು ಅಥವಾ ಎರಡು ವಾರಗಳ ನಂತರ, ಸಾಮಾನ್ಯವಾಗಿ ಪ್ರತಿ ಹಣ್ಣಿಗೆ ಒಂದರಂತೆ ಪತಂಗಗಳು ಹಣ್ಣುಗಳ ಮೇಲೆ ಮೊಟ್ಟೆಗಳನ್ನು ಇಡುತ್ತವೆ. ಈ ಮೊಟ್ಟೆಗಳಿಂದ ಸಣ್ಣ ಲಾರ್ವಾಗಳು ಹೊರಬಂದು ಹಣ್ಣುಗಳ ಮೇಲ್ಮೈಯಲ್ಲಿ ರಂಧ್ರವನ್ನು ಕೊರೆಯಲು ಅಗಿಯುತ್ತವೆ. ಕ೦ಬಳಿಹುಳು ಸಂಪೂರ್ಣವಾಗಿ ಅಭಿವೃದ್ಧಿ ಹೊಂದಲು ಮೂರರಿಂದ ಐದು ವಾರಗಳನ್ನು ತೆಗೆದುಕೊಳ್ಳುತ್ತದೆ. ಪ್ರೌಢ ಲಾರ್ವಾಗಳು ಹಣ್ಣುಗಳನ್ನು ಬಿಟ್ಟು ಮರೆಯಾಗಲು ಸ್ಥಳವನ್ನು ಹುಡುಕಿಕೊಳ್ಳುತ್ತವೆ. ಉದಾ. ಕಾಂಡದ ಬಿರುಕುಗಳಲ್ಲಿ. ಎರಡನೇ ಪೀಳಿಗೆಯು ಬೇಸಿಗೆಯ ಕೊನೆಯಲ್ಲಿ ಅಥವಾ ಶರತ್ಕಾಲದ ಆರಂಭದಲ್ಲಿ ಮೊಟ್ಟೆಯೊಡೆಯುತ್ತದೆ. ಈ ಪೀಳಿಗೆಯು ಹೈಬರ್ನೇಟ್(ಕೋಶಾವಸ್ಥೆಗಾಗಿ) ಮಾಡಲು ಆಶ್ರಯವನ್ನು ಹುಡುಕುವವರೆಗೂ, ಮಾಗಿದ ಹಣ್ಣುಗಳನ್ನು ಹಾನಿಗೊಳಿಸುತ್ತದೆ.


ಮುಂಜಾಗ್ರತಾ ಕ್ರಮಗಳು

  • ಬೇಗ-ಪಕ್ವವಾಗುವ ಪ್ರಭೇದಗಳನ್ನು ಆರಿಸಿ.
  • ಹೂಬಿಡುವ 6-8 ವಾರಗಳ ನಂತರ ಸೋಂಕಿನ ಗುರುತುಗಳಿಗಾಗಿ ನಿಯಮಿತವಾಗಿ ಸಸ್ಯಗಳು ಮತ್ತು ಹಣ್ಣುಗಳನ್ನು ಪರೀಕ್ಷಿಸಿ.
  • ಪತಂಗಗಳನ್ನು ಮೇಲ್ವಿಚಾರಣೆ ಮಾಡಲು ಮತ್ತು ನಾಶಮಾಡಲು ಫೆರೋಮೋನ್ ಬಲೆಗಳನ್ನು ಸ್ಥಾಪಿಸಿ.
  • ಹೂಬಿಟ್ಟ ಸುಮಾರು 4 ರಿಂದ 6 ವಾರಗಳ ನಂತರ ಹಣ್ಣಿನ ಚೀಲಗಳನ್ನು ಹಣ್ಣುಗಳನ್ನು ರಕ್ಷಿಸಲು ಬಳಸಬಹುದು.
  • ತೊಗಟೆಯಿಂದ ಲಾರ್ವಾಗಳನ್ನು ಗಟ್ಟಿಯಾದ ಬ್ರಷ್ ಅಥವಾ ವಿಶೇಷ ತೊಗಟೆ ಉಜ್ಜುಗದಿಂದ ಬ್ರಷ್ ಮಾಡಿ ತೆಗೆಯಿರಿ.
  • ಮರದ ಅವಶೇಷಗಳು ಮತ್ತು ಸೋಂಕಿತ ಹಣ್ಣುಗಳನ್ನು ಸಾಧ್ಯವಾದಷ್ಟು ಬೇಗ ತೆಗೆದುಹಾಕಿ ಮತ್ತು ಅವನ್ನು ತೋಟದಿಂದ ದೂರದಲ್ಲಿ ಆಳವಾಗಿ ಹೂಳುವ ಅಥವಾ ಸುಡುವ ಮೂಲಕ ನಾಶಪಡಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ