ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ಸಿಟ್ರಸ್ ತುಕ್ಕು ಮಿಟೆ

Phyllocoptruta oleivora

ಹುಳು

5 mins to read

ಸಂಕ್ಷಿಪ್ತವಾಗಿ

  • ಈ ಕೀಟವನ್ನು ಕಿತ್ತಳೆ ಹಣ್ಣಿನಲ್ಲಿ ತುಕ್ಕು ಮಿಟೆಯೆಂದೂ ನಿಂಬೆಹಣ್ಣಿನಲ್ಲಿ ಬೆಳ್ಳಿ ಮಿಟೆ ಎಂದೂ ಕರೆಯಲಾಗುತ್ತದೆ.
  • ಅವು 1.3ಸೆಂಮೀ ಅಥವಾ ಅದಕ್ಕಿಂತ ದೊಡ್ಡದಾದ ಹಣ್ಣುಗಳ ಹೊರಗೊಡ್ಡಿದ ಭಾಗಗಳನ್ನು ತಿನ್ನುತ್ತವೆ.
  • ಹಣ್ಣಿನ ಸಿಪ್ಪೆಯು ಬೆಳ್ಳಿ, ಕೆಂಪು ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತದೆ.
  • ವಸಂತ ಋತುವಿನ ಅಂತ್ಯದಿಂದ ಬೇಸಿಗೆಯ ಕೊನೆಯಲ್ಲಿ ಹಾನಿ ಸಂಭವಿಸುತ್ತದೆ.
  • ಇದರ ಪರಿಣಾಮವಾಗಿ, ತಾಜಾ ಹಣ್ಣಿನ ಮಾರುಕಟ್ಟೆಯಲ್ಲಿ ಗ್ರೇಡ್ ಮತ್ತು ರಸದ ಗುಣಮಟ್ಟ ಕಡಿಮೆಯಾಗುತ್ತದೆ.
  • ತೀವ್ರತರವಾದ ಪ್ರಕರಣಗಳಲ್ಲಿ ಇಳುವರಿ ಕಡಿಮೆಯಾಗುತ್ತದೆ.


ಸಿಟ್ರಸ್ (ನಿಂಬೆ, ಕಿತ್ತಳೆ ಹಾಗು ಇತರ ನಿಂಬೆ ಜಾತಿ ಬೆಳೆಗಳು)

ರೋಗಲಕ್ಷಣಗಳು

ಬೆಳೆಯ ವೈವಿಧ್ಯತೆ ಮತ್ತು ಹಣ್ಣಿನ ಪಕ್ವತೆಯ ಆಧಾರದ ಮೇಲೆ ಲಕ್ಷಣಗಳು ಬದಲಾಗುತ್ತವೆ. ಸಾಮಾನ್ಯವಾಗಿ, ಸಿಟ್ರಸ್ ತುಕ್ಕು ಮಿಟೆಗಳ ಇರುವಿಕೆಯನ್ನು ಪಕ್ವವಾದ ಕಿತ್ತಳೆ ಹಣ್ಣುಗಳು, ಎಲೆಗಳು ಮತ್ತು ಕೊಂಬೆಗಳ ಚರ್ಮದ ಮೇಲೆ ಕಂಚಿನ ಬಣ್ಣ ಕಂಡುಬರುವುದರಿಂದ ಗುರುತಿಸಬಹುದು. ಹಸಿರು ಕಾಂಡಗಳು, ಎಲೆಗಳು ಮತ್ತು ಹಣ್ಣುಗಳ ಮೇಲೆ ಕೀಟ ತಿಂದುಬಿಟ್ಟಿರುವುದರಿಂದಾದ ಹಾನಿಯನ್ನು ಗಮನಿಸಬಹುದು. ಮಿಟೆಗಳು ಎಲೆಗಳ ಎರಡೂ ಬದಿಯಲ್ಲಿ ಮತ್ತು ಹಣ್ಣಿನ ಚರ್ಮದ ಮೇಲೆ ವಾಸಿಸುತ್ತವೆ ಮತ್ತು ಲಾಲಾರಸವನ್ನು ಚುಚ್ಚುತ್ತವೆ, ಇದರಿಂದಾಗಿ ಎಪಿಡರ್ಮಲ್ ಚರ್ಮದ ಕೋಶಗಳು ವಿಭಜನೆಯಾಗುತ್ತವೆ. ಮೇಲಿನ ಹೊರಪೊರೆ ಅದರ ಹೊಳಪು ಸ್ವಭಾವವನ್ನು ಕಳೆದುಕೊಳ್ಳುತ್ತದೆ, ಮತ್ತು ಮಂದ ಮತ್ತು ಕಂಚಿನಂತೆ ಆಗುತ್ತದೆ ಅಥವಾ ರಸ್ಸೆಟಿಂಗ್ ಆದ ಪ್ರದೇಶಗಳಲ್ಲಿ ಹಳದಿ ತೇಪೆಗಳನ್ನು ತೋರಿಸುತ್ತದೆ. ಆರಂಭದಲ್ಲಿ, ಕೆಳಗಿನ ಎಲೆಯ ಭಾಗಗಳು ಮಸುಕಾದ ತೇಪೆಗಳಂತೆ ಮತ್ತು ನಂತರ ನೆಕ್ರೋಟಿಕ್ ಕಲೆಗಳಾಗಿ ಗೋಚರಿಸುತ್ತವೆ. ಕೀಟದ ಆಹಾರ ಚಟುವಟಿಕೆಯು ತೊಗಟೆಯ ಕೋಶಗಳನ್ನು ನಾಶಪಡಿಸುತ್ತದೆ ಮತ್ತು ನಿಂಬೆಹಣ್ಣಿನ ಸಿಪ್ಪೆಯ ಮೇಲೆ ಬೆಳ್ಳಿ ಬಣ್ಣವಾಗುತ್ತದೆ, ಪಕ್ವ ಕಿತ್ತಳೆಯ ಮೇಲೆ ತುಕ್ಕು ಕಂದು ಮತ್ತು ಹಸಿರು ಕಿತ್ತಳೆ ಮೇಲೆ ಕಪ್ಪು ಆಗುತ್ತದೆ. ಋತುವಿನ ಆರಂಭದಲ್ಲಿ ತುಕ್ಕು ಮಿಟೆಯಿಂದ ಗಾಯವಾದಾಗ ಇದನ್ನು "ರಸ್ಸೆಟಿಂಗ್" ಮತ್ತು ಪಕ್ವ ಹಣ್ಣುಗಳು ಗಾಯಗೊಂಡಾಗ "ಬ್ರಾನ್ಜಿಂಗ್" ಎಂದು ಕರೆಯಲಾಗುತ್ತದೆ. ಗಾಯಗೊಂಡ ಭಾಗವು ನಯವಾಗಿ ಗಾಢ ಕಂದು ಬಣ್ಣದ್ದಾಗಿರುತ್ತದೆ ಮತ್ತು ಮರದಲ್ಲಿಯೇ ಹೆಚ್ಚು ಸಮಯದವರೆಗೆ ಬಿಟ್ಟರೆ ಕಲೆಗಳು ಹೆಚ್ಚು ತೀವ್ರವಾಗುತ್ತವೆ. ಹಣ್ಣಿನ ಪಕ್ವತೆಗೆ ಮುಂಚಿತವಾಗಿ ಗಾಯಗೊಂಡರೆ ಸೋಂಕಿಗೊಳಗಾದ ಹಣ್ಣು ಚಿಕ್ಕದಾಗಿ ಕಾಣುತ್ತದೆ. ಭಾರೀ ಸೋಂಕು ಎಳೆಯ ಮರಗಳಲ್ಲಿ ತೀವ್ರ ಹಾನಿಯನ್ನುಂಟುಮಾಡುತ್ತದೆ. ವಸಂತಕಾಲದ ಆರಂಭದಲ್ಲಿ ಸಿಟ್ರಸ್ ತುಕ್ಕು ಮಿಟೆ ಹಣ್ಣನ್ನು ತಿಂದರೆ, ಬೇಸಿಗೆಯಲ್ಲಿ ಸಿಪ್ಪೆಯ ವಿನ್ಯಾಸ ಒರಟಾಗಿ ಬಣ್ಣ ತಿಳಿಯಾಗುತ್ತದೆ. ಇದನ್ನು ಶಾರ್ಕ್ ಸ್ಕಿನ್ ಎಂದು ಕರೆಯಲಾಗುತ್ತದೆ.

Recommendations

ಜೈವಿಕ ನಿಯಂತ್ರಣ

ತುಕ್ಕು ಮಿಟೆಗಳ ಮೇಲೆ ದಾಳಿ ಮಾಡಲು ಪರಭಕ್ಷಕ ಮಿಟೆಗಳಾದ ಯೂಸಿಯಸ್ ಸಿಟ್ರಿಫೋಲಿಯಸ್, ಪ್ರೋನೆಮಾಟಸ್ ಅನ್ಬಿಕ್ವಿಟಸ್, ಮತ್ತು ಆಂಬ್ಲಿಸಿಯಸ್ ಪ್ರಭೇದಗಳು ಮತ್ತು ಪರಾವಲಂಬಿ ಶಿಲೀಂಧ್ರವಾದ, ಹಿರ್ಸುಟೆಲ್ಲಾ ಥಾಂಪ್ಸೋನಿಗಳ ಬಳಕೆಯು ಸಿಟ್ರಸ್ ಮಿಟೆಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಎಣ್ಣೆಯನ್ನು ಆಧರಿಸಿದ ಎಲೆಗಳ ಸಿಂಪಡಣೆಗಳು (4 ಲೀಟರ್ ನೀರಿನೊಂದಿಗೆ 3 ಚಮಚ ಅಡುಗೆ ಎಣ್ಣೆ ಮತ್ತು ಅರ್ಧ ಚಮಚ ಡಿಟರ್ಜೆಂಟ್ ಸೋಪ್) ಅಥವಾ ಸೋಪ್ ದ್ರಾವಣ ಸಿಂಪಡಣೆ (4 ಲೀಟರ್ ನೀರಿನೊಂದಿಗೆ 2 ಚಮಚ ಸೋಪ್/ವಾಶಿಂಗ್ ಲಿಕ್ವಿಡ್) ಮಿಟೆ ಮುತ್ತಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ತಾಪಮಾನವು 35 °C ಮೀರಿದಾಗ ತೈಲ ಸಿಂಪಡೆಯನ್ನು ಮಾಡಬೇಡಿ. ಎಲೆಗಳ ಕೆಳಭಾಗಕ್ಕೆ ಸಿಂಪಡಿಸಿ ಮತ್ತು ಅಗತ್ಯವಿದ್ದರೆ 3 ರಿಂದ 4 ವಾರಗಳ ನಂತರ ಮತ್ತೆ ಸಿಂಪಡಿಸಿ.

ರಾಸಾಯನಿಕ ನಿಯಂತ್ರಣ

ಲಭ್ಯವಿದ್ದರೆ ತಡೆಗಟ್ಟುವ ಕ್ರಮಗಳು ಮತ್ತು ಜೈವಿಕ ಚಿಕಿತ್ಸೆಗಳೊಂದಿಗೆ ಸಂಯೋಜಿತ ವಿಧಾನವನ್ನು ಯಾವಾಗಲೂ ಪರಿಗಣಿಸಿ. 30% ಕ್ಕಿಂತ ಹೆಚ್ಚು ಮರಗಳು ಮುತ್ತಿಕೊಂಡಿರುವಾಗ ಕ್ರಮ ತೆಗೆದುಕೊಳ್ಳಿ. ನಿಮ್ಮ ರಾಸಾಯನಿಕ ಚಿಕಿತ್ಸೆಯನ್ನು ಎಚ್ಚರಿಕೆಯಿಂದ ಆಯ್ದುಕೊಳ್ಳಿ ಏಕೆಂದರೆ ಅದು ಪ್ರಯೋಜನಕಾರಿ ಕೀಟಗಳ ಮೇಲೂ ಪರಿಣಾಮ ಬೀರಬಹುದು. ಪ್ರತಿರೋಧದ ಬೆಳವಣಿಗೆಯನ್ನು ಕಡಿಮೆ ಮಾಡಲು ಎಲ್ಲಾ ಮಿಟೆನಾಶಕಗಳನ್ನು (ಮೈಟಿಸೈಡ್) ವರ್ಷಕ್ಕೊಮ್ಮೆ ಮಾತ್ರ ಬಳಸಬೇಕು. ಕೀಟನಾಶಕಗಳಾದ ಸ್ಪಿರೋಡಿಕ್ಲೋಫೆನ್, ಡಿಫ್ಲುಬೆನ್ಜುರಾನ್, ಅಬಾಮೆಕ್ಟಿನ್, ಅಸೆಕ್ವಿನೋಸಿಲ್, ಸ್ಪಿರೊಟೆಟ್ರಾಮಾಟ್, ಮೈಕ್ರೊನೈಸ್ಡ್ ಅಥವಾ ವೆಟ್ಟಬಲ್ ಸಲ್ಫರ್, ಫೆನ್‌ಪಿರೋಕ್ಸಿಮೇಟ್ ಮತ್ತು ಕ್ಲೋರ್‌ಪಿರಿಫೊಸ್‌ಗಳನ್ನು ಮಿಟೆ ಗೂಡನ್ನು ತೊಡೆದುಹಾಕಲು ಬಳಸಬಹುದು.

ಅದಕ್ಕೆ ಏನು ಕಾರಣ

ಪ್ರೌಢ ತುಕ್ಕು ಮಿಟೆಯ ಆಹಾರ ಚಟುವಟಿಕೆಗಳಿಂದ ಹಾನಿ ಉಂಟಾಗುತ್ತದೆ. ಇದನ್ನು ಪ್ರಕೃತಿಯಲ್ಲಿ ಸೂಕ್ಷ್ಮದರ್ಶಕ ಎಂದು ನಿರೂಪಿಸಲಾಗಿದೆ ಮತ್ತು ಇದು ಬರಿಗಣ್ಣಿಗೆ ಕಾಣಿಸುವುದಿಲ್ಲ. ಹಣ್ಣು ಅಥವಾ ಎಲೆಗಳ ಮೇಲ್ಮೈಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವಾಗ ಮಾತ್ರ ಇದು ಸ್ಪಷ್ಟವಾಗಿ ಕಾಣುತ್ತದೆ. ಇದು ಪುಡಿ ಧೂಳಿನ ನೋಟವನ್ನು ನೀಡುತ್ತದೆ. ಬಿಳಿ, ಗೋಳಾಕಾರದ ಮೊಟ್ಟೆಗಳನ್ನು ಎಲೆಗಳು ಅಥವಾ ಹಣ್ಣುಗಳ ಮೇಲೆ ಸಣ್ಣ ಗುಂಪುಗಳಾಗಿ ಇಡಲಾಗುತ್ತದೆ. ಮೊಟ್ಟೆಯು ಪ್ರೌಢ ಮಿಟೆ ಆಗಿ ಬದಲಾಗುವ ಮೊದಲು ಎರಡು ಸಕ್ರಿಯ ಮರಿಹುಳು ಹಂತಗಳಿರುತ್ತವೆ. ಆರು ದಿನಗಳು ಮತ್ತು 30°C ನಲ್ಲಿ ಮಿಟೆಗಳ ಒಂದು ಪೀಳಿಗೆಯು ಪೂರ್ಣಗೊಳ್ಳಬಹುದು. ಹೆಣ್ಣು ಜೀವಿತಾವಧಿಯಲ್ಲಿ 30 ಮೊಟ್ಟೆಗಳನ್ನು ಇಟ್ಟು ನಾಲ್ಕರಿಂದ ಆರು ವಾರಗಳವರೆಗೆ ಬದುಕುತ್ತವೆ. ಹಣ್ಣಿನ ತೋಟದಲ್ಲಿ ತುಕ್ಕು ಮಿಟೆ ಮುತ್ತಿಕೊಳ್ಳುವಿಕೆಯ ಮೊದಲ ಚಿಹ್ನೆಯೆಂದರೆ ಪ್ರತ್ಯೇಕವಾದ ಕಲೆಯಾಗಿರುವ ಹಣ್ಣು. ನಿರ್ದಿಷ್ಟ ಋತುವಿನಲ್ಲಿ ಇದನ್ನು ಗಮನಿಸಿದಾಗ, ಮುಂದಿನ ಋತುವಿನಲ್ಲಿ ಇದನ್ನು ಗಂಭೀರವಾದ ತುಕ್ಕು ಮಿಟೆ ಎಚ್ಚರಿಕೆ ಎಂದು ಪರಿಗಣಿಸಬೇಕು. ಈ ಕೀಟವು ಆರ್ದ್ರ ಪರಿಸ್ಥಿತಿಗಳಿಗೆ ಆದ್ಯತೆ ನೀಡುತ್ತದೆ ಮತ್ತು ಉಷ್ಣವಲಯದ ಮತ್ತು ಉಪೋಷ್ಣವಲಯದ ಹವಾಮಾನದಲ್ಲಿ ಇದು ತುಂಬಾ ಸಾಮಾನ್ಯವಾಗಿರುತ್ತದೆ. ಮಿಟೆಗಳು ಗಾಳಿಯ ಮೂಲಕ ಮರದಿಂದ ಮರಕ್ಕೆ ಹರಡಬಹುದು.


ಮುಂಜಾಗ್ರತಾ ಕ್ರಮಗಳು

  • ಲಭ್ಯವಿದ್ದರೆ ರೋಗಸಹಿಷ್ಣು ಪ್ರಭೇದಗಳನ್ನು ಆಯ್ಕೆಮಾಡಿ.
  • ಮುತ್ತಿಕೊಳ್ಳುವಿಕೆಯ ಲಕ್ಷಣಗಳಿಗಾಗಿ ಹಣ್ಣಿನ ತೋಟವನ್ನು ಕೈಮಸೂರದೊಂದಿಗೆ ಪರಿಶೀಲಿಸಿ.
  • ಇತರ ಕೀಟಗಳು ಮತ್ತು ಪಕ್ಷಿಗಳಂತಹ ಪರಭಕ್ಷಕ ಪ್ರಭೇದಗಳಿಗೆ ಸೂಕ್ತವಾದ ಪರಿಸ್ಥಿತಿಗಳನ್ನು ಕಾಪಾಡಿಕೊಳ್ಳಿ.
  • ಸಮರುವಿಕೆಯನ್ನು ಮಾಡುವ ಮೂಲಕ ಮರಗಳೊಳಗೆ ಉತ್ತಮ ಗಾಳಿಯ ಪ್ರಸರಣವನ್ನು ಕಾಪಾಡಿಕೊಳ್ಳಿ.
  • ಹಣ್ಣಿನ ತೋಟದಲ್ಲಿ ಕಳೆಯನ್ನು ಬೇರು ಸಮೇತ ಕಿತ್ತುಹಾಕುವ ಮೂಲಕ ಅವುಗಳ ಸಂಖ್ಯೆಯನ್ನು ನಿಯಂತ್ರಿಸಿ.

ಪ್ಲಾಂಟಿಕ್ಸ್ ಡೌನ್‌ಲೋಡ್ ಮಾಡಿಕೊಳ್ಳಿ